AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithya Bhavishya: ಈ ರಾಶಿಯವರು ಸಮಸ್ಯೆಗೆ ವೇಗದಲ್ಲಿ ಸ್ಪಂದಿಸಿ ಎಡವಟ್ಟು ಮಾಡಿಕೊಳ್ಳುವಿರಿ-ಎಚ್ಚರ

ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಜನರು ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ.  ಇಂದಿನ (ಫೆಬ್ರವರಿ​​​​ 17) ಭವಿಷ್ಯ ಹೇಗಿದೆ ಎಂಬುದು ಇಲ್ಲಿದೆ. 

Nithya Bhavishya: ಈ ರಾಶಿಯವರು ಸಮಸ್ಯೆಗೆ ವೇಗದಲ್ಲಿ ಸ್ಪಂದಿಸಿ ಎಡವಟ್ಟು ಮಾಡಿಕೊಳ್ಳುವಿರಿ-ಎಚ್ಚರ
ರಾಶಿ ಭವಿಷ್ಯ
TV9 Web
| Edited By: |

Updated on: Feb 17, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ರೋಹಿಣೀ, ಯೋಗ: ಐಂದ್ರ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 57 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 36 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:52 ರಿಂದ 11:19ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:14 ರಿಂದ 03:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:57 ರಿಂದ 08:25ರ ವರೆಗೆ.

ಸಿಂಹ ರಾಶಿ : ಇಂದು ನೋವನ್ನು ಮನದಲ್ಲಿಯೇ ಇಟ್ಟುಕೊಂಡು ಸಂಕಟಪಡುವಿರಿ. ನೌಕರರಿಗೆ ಉದ್ಯೋಗದಲ್ಲಿ ಇರಬೇಕಾದ ಪ್ರಾಮಾಣಿಕತೆ ಕಡಿಮೆಯಾಗುವುದು. ಸತ್ಯವನ್ನು ಹೇಳುವ ತೀರ್ಮಾನವನ್ನು ಮಾಡುವಿರಿ. ಅನಾರೋಗ್ಯದಿಂದ ಕುಗ್ಗುವಿರಿ. ನಿಮ್ಮ ಮಾತುಗಳು ನೀವು ಗಳಿಸಿದ ವಿದ್ಯೆಯನ್ನು ತಿಳಿಸುವುದು. ಕೆಲವು ಘಟನೆಗಳು ನಿಮ್ಮನ್ನು ಕಾಡಬಹುದು. ಇಂದು ನಿಮಗೆ ದಾನದಲ್ಲಿ ಮನಸ್ಸಾಗುವುದು. ಹಳೆಯ ಮಿತ್ರನ ಭೇಟಿಯಾಗಿದ್ದು ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ಮೇಲೆ‌ ನಂಬಿಕೆಯು ಕಡಿಮೆಯಾದೀತು. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ. ಕಛೇರಿಯಲ್ಲಿ ಒತ್ತಡದ ಕಾರ್ಯವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿರುವುದು. ಆರ್ಥಿಕತೆಯ ಬಗ್ಗೆ ಸರಿಯಾದ ಮಾಹಿತಿ ಸಿಗದೇ ಹೂಡಿಕೆ ಕಷ್ಟವಾದೀತು.

ಕನ್ಯಾ ರಾಶಿ : ಅತಿಯಾದ ಲೋಭದಿಂದ ನಿಮ್ಮದನ್ನೂ ನೀವು ಕಳೆದುಕೊಳ್ಳುವಿರಿ. ಕಾರ್ಯದ‌ ದಕ್ಷತೆಗೆ ಮೆಚ್ಚಗೆ ಸಿಗಬಹುದು. ವಾಹನವನ್ನು ಖರೀದಿಸುವ ಮನಸ್ಸಾಗುವುದು. ಸಮಸ್ಯೆಗೆ ವೇಗದಲ್ಲಿ ಸ್ಪಂದಿಸಿ ಎಡವಟ್ಟು ಮಾಡಿಕೊಳ್ಳುವಿರಿ. ‌ಸಾವಧಾನದಿಂದ‌ ಚಿಂತಿಸುವ ಅವಶ್ಯಕತೆ ಇರಲಿದೆ. ಎಲ್ಲದಕ್ಕೂ ತಂದೆ ತಾಯಿಗಳನ್ನು ದೂರುತ್ತ ಇರುವುದು ಬೇಡ. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಬೆನ್ನಿನ‌ ನೋವಿನಿಂದ ಸಂಕಟಪಡುವಿರಿ. ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು. ಅನಪೇಕ್ಷಿತ ಮಾತನ್ನು ಕಡಿಮೆ ಮಾಡುವುದು ಉಚಿತ. ಯಾವುದೋ ಆಲೋಚನೆಯಲ್ಲಿ ನೀವು ಮುಳುಗಿ ಕಾರ್ಯವನ್ನು ಅಸ್ತವ್ಯಸ್ತ ಮಾಡಿಕೊಳ್ಳುವಿರಿ. ರಹಸ್ಯವನ್ನು ಗೊತ್ತಾಗದಂತೆ ಹೇಳುವಿರಿ. ಅನಪೇಕ್ಷಿಯ ಮಾತನ್ನು ಆಡುವುದು ಬೇಡ.

ತುಲಾ ರಾಶಿ : ನಿಮ್ಮ ಬಂಧುಗಳಿಗೆ ನಿಮ್ಮ‌ ಮೇಲೆ‌ ಪ್ರೀತಿ ಹೆಚ್ಚಾದೀತು. ನಿಮ್ಮ ಕೆಲಸಕ್ಕೆ ತಂದೆಯಿಂದ ಆಕ್ಷೇಪ ಬರಬಹುದು. ಎಲ್ಲವನ್ನೂ ತಿಳಿದಿದ್ದೇನೆ ಎಂಬ ಮನೋಭಾವು ಎದ್ದು ತೋರುವುದು. ಹೂಡಿಕೆಯಲ್ಲಿ ವಿಶ್ವಾಸವು ಹೆಚ್ಚಾಗಲಿದೆ. ಸಣ್ಣ ವ್ಯಾಪಾರದಲ್ಲಿ ಅಲ್ಪ ಆದಾಯಕ್ಕೆ ಸಂತೋಷಪಡಬೇಕಾದೀತು. ಸಾಲ ಕೊಟ್ಟವರು ನಿಮ್ಮನ್ನು ಕೇಳುವುದು ಹಿಂಸೆಯಾದೀತು. ಕೆಲಸದ ಸುಲಭ ಮಾರ್ಗವು ನಿಮಗೆ ಸೂಚಿಸದೇ ಇರಬಹುದು. ಮಕ್ಕಳ ವಿವಾಹವನ್ನು ನಿಶ್ಚಯಿಸಿ ನಿಶ್ಚಿಂತರಾಗುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ನಿಮಗೆ ಆಗದು. ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಸರಿಯಾಗಿ ಬಳಸಿಕೊಳ್ಳಿ. ಬೇಡದ ಕಡೆಗೆ ನಿಮ್ಮ‌ ಮನಸ್ಸನ್ನು ಹರಿದುಬಿಡುವಿರಿ. ಬಂಧುಗಳು ನಿಮ್ಮ‌ ಬಗ್ಗೆ ಸಲ್ಲದ ಅಭಿಪ್ರಾಯವನ್ನು ಹೇಳಿಯಾರು. ಯಾರ ಮೇಲೂ ಪಕ್ಷಪಾತ ಮಡುವುದು ಬೇಡ. ದ್ವಂದ್ವವು ನಿಮ್ಮ ನೆಮ್ಮದಿಯ ಮನಸ್ಸನ್ನು ಹಾಳುಮಾಡೀತು.

ವೃಶ್ಚಿಕ ರಾಶಿ : ಸಣ್ಣದಾಗಿ ಆರಂಭವಾದ ಮಾತುಕತೆ ಕೊನಯಲ್ಲಿ ಕಲಹವಾಗಿ ಮುಕ್ತಾಯವಾದೀತು.‌ ಕೆಲವರ ಜೊತೆ ಮೊಂಡುತನವನ್ನು ತೋರಿಸುವಿರಿ. ಈಗಾಗಲೇ ಮಾಡಿರುವ ಹೂಡಿಕೆಯಲ್ಲಿ ಅಲ್ಪ ಪ್ರಮಾಣದ ಲಾಭದಿಂದ ಖುಷಿಯಾಗುವುದು. ನಿಮ್ಮ ಕಾರ್ಯದಲ್ಲಿ ಅನುಭವದ ಕೊರತೆ ಕಾಣಿಸಲಿದ್ದು, ಮಾರ್ಗದರ್ಶನದ ಅವಶ್ಯಕತೆ ಇರಲಿದೆ. ತಾಯಿಯ ಆರೋಗ್ಯಕ್ಕಾಗಿ ಹೆಚ್ಚು ಓಡಾಟ ಮಾಡಬೇಕಾದೀತು. ಹಿತಶತ್ರುಗಳ ವಂಚನೆಯಾಗಿರುವುದು ಸಮಯ ಸರಿದಂತೆ ಗೊತ್ತಾಗುತ್ತದೆ. ಸಂಬಂಧದಲ್ಲಿ ಸಕಾರಾತ್ಮಕ ಮಾತುಗಳು ಅಗತ್ಯ. ನೌಕರರು ನಿಮ್ಮ‌ಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗಿಯಾಗುವರು. ನಿಮ್ಮ ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ. ಮಕ್ಕಳ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ನೀವು ಜೊತೆಗಿದ್ದರೆ ಮಿತ್ರರು ಎಂತಹ ಕೆಲಸವನ್ನು ಮಾಡಲೂ ಹಿಂಜರಿಯರು.