Weekly Horoscope ವಾರ ಭವಿಷ್ಯ: ಮೇಷದಿಂದ ಮೀನ ವರೆಗಿನ ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ
ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.
ವಾರ ಭವಿಷ್ಯ: ತಾ.22-11-2021 ರಿಂದ ತಾ.28-11-2021 ರ ವರೆಗೆ.
ಮೇಷ ರಾಶಿ: ಗುರುಬಲ ಪ್ರಾರಂಭವಾಗಿದೆ. ವಿದ್ಯಾರ್ಥಿಗಳು ಬಿಂದಾಸ್ ಆಗಿರಬಹುದು. ವಿವಾಹಿತರಿಗೆ ಸಣ್ಣಪುಟ್ಟ ಸಮಸ್ಯೆ ಎದುರಾಗಬಹುದು. ಹಣಕಾಸು ಸ್ಥಿತಿ ಉತ್ತಮ. ಹೆಚ್ಚೆಚ್ಚು ಅಧ್ಯಯನದಲ್ಲಿ ತೊಡಗಿಸಿ. ಜಗತ್ತನ್ನು ನಿಮ್ಮ ಮೂಗಿನ ನೇರದಿಂದ ನೋಡುವುದನ್ನು ತುಸು ಬದಲಿಸಿಕೊಳ್ಳಿ. ವಾಸ್ತವ ಅರಿತರೆ ಬದುಕು ಚೆನ್ನಾಗಿರುತ್ತೆ. ಶುಭ ಸಂಖ್ಯೆ: 9 ಶುಭ ಬಣ್ಣ: ಕೆಂಪು
ವೃಷಭ ರಾಶಿ: ವೃತ್ತಿ ಜೀವನದಲ್ಲಿ ಅಡೆತಡೆಗಳು. ತಾಯಿಗಾಗಿ ಹಣ ಖರ್ಚು ಮಾಡಬೇಕಾಗಬಹುದು. ಬರಬೇಕಾದ ಹಣ ಕೈ ಸೇರುವಾಗ ವಿಳಂಬವಾಗುತ್ತದೆ. ಖುಷಿಗಿಂತ ಬೇಸರ ಹೆಚ್ಚಿರಬಹುದು. ಸಂಗಾತಿಯ ಬಗ್ಗೆ ಪಾಸಿಟಿವ್ ಯೋಚನೆ ಬೆಳೆಸಿಕೊಳ್ಳಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ಧ್ಯಾನ ಮಾಡಿ, ಮನಃಶಾಂತಿ ಸಿಗುತ್ತೆ. ಶುಭ ಸಂಖ್ಯೆ: 6 ಶುಭ ಬಣ್ಣ: ಗುಲಾಬಿ
ಮಿಥುನ ರಾಶಿ: ಗುರು ಬಲವಿದೆ. ಸ್ನೇಹಿತರಿಗೆ ಸಹಾಯ ಮಾಡುವಿರಿ. ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ನಿಮ್ಮ ಚಿಂತನಾ ಕ್ರಮಗಳು ಬದಲಾಗಲಿವೆ. ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಹೆಚ್ಚಾಗಿ ಅದರ ಫಲವಾಗಿ ಸ್ವಾಭಿಮಾನ ಹೆಚ್ಚಲಿದೆ. ಯಾರಿಗೂ ಹೆದರುವುದು ಬೇಡ. ಆತ್ಮವಿಶ್ವಾಸ ಮೂಡಲಿದೆ. ಶುಭ ಸಂಖ್ಯೆ: 5 ಶುಭ ಬಣ್ಣ: ಹಸಿರು
ಕಟಕ ರಾಶಿ: ದೃಢ ನಿರ್ಧಾರ ಪಡೆಯುವಿರಿ. ಮಾಡುವ ಕೆಲಸದಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಟ-ನಟಿಯರಿಗೆ ಒತ್ತಡದಿಂದ ಮುಕ್ತಿ ಸಿಕ್ಕಲಿದೆ. ಮೊಣಕೈ ನೋವಿಗೆ ತಾತ್ಕಾಲಿಕ ಪರಿಹಾರ. ಹಿರಿಯ ವ್ಯಕ್ತಿಗಳ ಸಲಹೆಯಿಂದ ಕಾರ್ಯ ಸಿದ್ಧಿ. ಅತಿಯಾದ ಆತ್ಮವಿಶ್ವಾಸ ಬೇಡ. ಪ್ರೀತಿ-ಪ್ರೇಮದಿಂದ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. ಶುಭ ಸಂಖ್ಯೆ: 2 ಶುಭ ಬಣ್ಣ: ಬಿಳಿ
ಸಿಂಹ ರಾಶಿ: ಗುರು ಬಲವಿದೆ. ನಿಮಗೀಗ ಶುಭವಿದೆ. ಹಿಂಜರಿಕೆ ಬೇಡ, ನಾಳೆ ಮಾಡಬೇಕೆನ್ನುವ ಕೆಲಸವನ್ನು ಇಂದೇ ಮಾಡಿ. ಭವಿಷ್ಯದ ಬಗ್ಗೆ ಹೆಚ್ಚು ಯೋಚನೆ ಬೇಡ. ಸದಾ ಇತರರ ಬಗ್ಗೆಯೇ ಯೋಚಿಸುತ್ತಿರಬೇಡಿ. ಅವರ ಸ್ವಂತ ನಡೆಗೆ ಅಡ್ಡಿ ಬರಬೇಡಿ. ನಿಮಗಾಗಿ ಸ್ವಲ್ಪ ಟೈಮ್ ಕೊಡಿ. ಹ್ಯಾಪಿಯಾಗಿರಿ. ಇತರರನ್ನೂ ಖುಷಿಯಿಂದಿರಲು ಬಿಡಿ. ಶುಭ ಸಂಖ್ಯೆ: 1 ಶುಭ ಬಣ್ಣ: ಕೆಂಪು
ಕನ್ಯಾ ರಾಶಿ: ನಿಮ್ಮ ಸೃಜನಶೀಲತೆ ಹೊರ ಜಗತ್ತಿಗೆ ತೆರೆದುಕೊಳ್ಳುವ ಸಮಯ. ಅದನ್ನು ಬಳಸಿಕೊಳ್ಳಿ. ಸೋಮಾರಿತನ ಬಿಟ್ಟು ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತನ್ನಿ. ಖುಷಿ ಹೆಚ್ಚಲಿದೆ. ಆರೋಗ್ಯದ ಬಗೆಗೂ ಚಿಂತೆ ಬೇಡ. ಖರ್ಚು ಮಾಡುವುದರಲ್ಲಿ ಹಿಡಿತವಿರಲಿ. ಶುಭ ಸಂಖ್ಯೆ: 5 ಶುಭ ಬಣ್ಣ: ಬೂದು
ತುಲಾ ರಾಶಿ: ಗುರು ಬಲ ಪ್ರಾರಂಭ. ಆತ್ಮೀಯರ ಭೇಟಿ ಮಾಡಲಿದ್ದೀರಿ. ಇದರಿಂದ ಮನಸ್ಸಿಗೆ ಸಂತೋಷ ಸಿಗುವುದರ ಜೊತೆಗೆ ಹೊಸದೊಂದು ವಿಚಾರವನ್ನು ತಿಳಿದುಕೊಳ್ಳುವಿರಿ. ವ್ಯಾಪಾರದಲ್ಲಿ ಲಾಭ ಕಾಣಲಿದ್ದೀರಿ. ದೈನಂದಿನ ಕೆಲಸ ಕಾರ್ಯಗಳಲ್ಲಿ ಆಸಕ್ತಿಯಿಂದ ತೊಡಗಿಕೊಂಡು ಯಶಸ್ಸು ಕಾಣಲಿದ್ದೀರಿ. ಶುಭ ಸಂಖ್ಯೆ: 3 ಶುಭ ಬಣ್ಣ: ಗುಲಾಬಿ
ವೃಶ್ಚಿಕ ರಾಶಿ: ಅಪರಿಚಿತ ವ್ಯಕ್ತಿಗಳು ಈ ವಾರ ಭೇಟಿ ಮಾಡಲಿದ್ದೀರಿ. ಇವರಿಂದ ಆಧ್ಯಾತ್ಮದ ವಿಚಾರಗಳಲ್ಲಿ ಸಲಹೆ ಪಡೆದು ಅದರಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿದ್ದೀರಿ. ಮಕ್ಕಳ ವಿಷಯದಲ್ಲಿ ಎಚ್ಚರಿಕೆ ಇರಲಿ. ಕೆಲಸದಲ್ಲಿನ ಕಠಿಣ ಪರಿಶ್ರಮ ಈ ವಾರ ನಿಮ್ಮ ಕೈಹಿಡಿಯಲಿದೆ. ವಾರಾಂತ್ಯದಲ್ಲಿ ಬಂಧುಗಳ ಆಗಮನ. ಶುಭ ಸಂಖ್ಯೆ: 9 ಶುಭ ಬಣ್ಣ: ಕೇಸರಿ
ಧನುಸ್ಸು ರಾಶಿ: ಸಂಬಂಧಗಳಲ್ಲಿ ಹಣಕಾಸಿನ ವ್ಯವಹಾರ ಹೆಚ್ಚಾದರೆ ಒಡಕು ಮೂಡಲು ಕಾರಣವಾಗ ಬಹುದು. ಸಹಾಯವೂ ಎಷ್ಟು ಬೇಕೋ ಅಷ್ಟಿದ್ದರೆ ಒಳ್ಳೆಯದು. ಸಹೋದರರೆಲ್ಲರೂ ಮನೆಯಲ್ಲಿ ಒಟ್ಟಿಗೆ ಸೇರಿವುದರಿಂದ ಸಂಭ್ರಮ ನೆಲೆಸಲಿದೆ. ಶುಭ ಸಂಖ್ಯೆ: 7 ಶುಭ ಬಣ್ಣ: ಹಳದಿ
ಮಕರ ರಾಶಿ: ಅಗತ್ಯ ಎನಿಸಿದ ವಿಚಾರದ ಕಡೆ ಮಾತ್ರ ಗಮನ ಕೊಡಿ. ಅನಾವಶ್ಯಕವಾಗಿ ಯಾರ ವಿಷಯದಲ್ಲೂ ತಲೆಹಾಕಬೇಡಿ. ಇಬ್ಬರ ನಡುವೆ ಮೂರನೇಯವರು ಸಮಸ್ಯೆ ಸರಿ ಮಾಡಲು ಹೋದರೆ ನಿಷ್ಟೂರವಾಗುವುದು ಮೂರನೇಯವರೆಂದು ನೆನಪಿರಲಿ. ಶುಭ ಸಂಖ್ಯೆ: 5 ಶುಭ ಬಣ್ಣ: ಕಪ್ಪು
ಕುಂಭ ರಾಶಿ: ಪುಸ್ತಕ ಓದುವ ಹವ್ಯಾಸ ಇನ್ನೂ ಹೆಚ್ಚಾಗಲಿದೆ. ಪುಸ್ತಕಕ್ಕಿಂತ ಒಳ್ಳೆಯ ಸ್ನೇಹಿತ ಇನ್ನೊಬ್ಬನಿಲ್ಲ. ದುಃಖ ಹೆಚ್ಚಾದಾಗ, ಬೇಸರವಾದಾಗ ಪುಸ್ತಕ ಓದಿ. ಯಾಂತ್ರೀಕೃತ ಬದುಕಿನಿಂದ ಹೊರ ಬಂದು ವಾರಾಂತ್ಯದಲ್ಲಾದರೂ ಹಸಿರಿನ ಮಧ್ಯೆ ಸ್ವಲ್ಪ ಕಾಲಕಳೆಯಿರಿ. ಇದರಿಂದ ಶಾಂತತೆ, ಸಂತೋಷ ಸಿಗಲಿದೆ. ಶುಭ ಸಂಖ್ಯೆ: 8 ಶುಭ ಬಣ್ಣ: ನೀಲಿ
ಮೀನ ರಾಶಿ: ದೇವರ ಮೇಲೆ ನಂಬಿಕೆ ಹೆಚ್ಚಾಗಲಿದೆ. ಮನೆಯಲ್ಲಿನ ಅಶಾಂತತೆಯ ವಾತಾವರಣಕ್ಕೆ ತಾತ್ಕಾಲಿಕ ಮುಕ್ತಿ ಸಿಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಲಾಭ ಹೊಂದಿದರೂ ಅಷ್ಟೇ ಪ್ರಮಾಣದಲ್ಲಿ ಖರ್ಚೂ ಈ ವಾರ ಆಗಲಿದೆ. ಶುಭ ಸಂಖ್ಯೆ: 3 ಶುಭ ಬಣ್ಣ: ಬಿಳಿ
ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937
Published On - 7:26 am, Sun, 21 November 21