AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: 293 ವಾಣಿಜ್ಯ ಮಳಿಗೆಗಳಿಗೆ ಅಪ್ಪ ಅಮ್ಮ ಇಲ್ಲ; ಕೋಟ್ಯಂತರ ರೂ ನಷ್ಟ

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಪ್ರಾಧಿಕಾರದ 293 ವಾಣಿಜ್ಯ ಮಳಿಗೆಗಳ ಬಗ್ಗೆ ಒಂದೇ ಒಂದು ದಾಖಲೆಯೂ ಇಲ್ಲ ಎಂದು ಅಧ್ಯಕ್ಷ ಪ್ರಕಾಶ್ ತಪಶೆಟ್ಟಿಯವರೇ ಬಹಿರಂಗಪಡಿಸಿದ್ದಾರೆ. ದಾಖಲೆಗಳ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ 3 ಕೋಟಿಗೂ ಹೆಚ್ಚು ಬಾಡಿಗೆ ಬಾಕಿಯಿದೆ. ತಕ್ಷಣ ದಾಖಲೆ ಒದಗಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.

ಬಾಗಲಕೋಟೆ: 293 ವಾಣಿಜ್ಯ ಮಳಿಗೆಗಳಿಗೆ ಅಪ್ಪ ಅಮ್ಮ ಇಲ್ಲ; ಕೋಟ್ಯಂತರ ರೂ ನಷ್ಟ
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Oct 16, 2026 | 9:20 PM

Share

ಬಾಗಲಕೋಟೆ, ಅಕ್ಟೋಬರ್​​ 16: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಟಿಡಿಎ) ಅಂದಾ ದರ್ಬಾರ್ ನಡೆದಿದೆ. ಪ್ರಾಧಿಕಾರದ 293 ವಾಣಿಜ್ಯ ಮಳಿಗೆಗಳ ಬಗ್ಗೆ ಒಂದೇ ಒಂದು ದಾಖಲೆಯಿಲ್ಲ ಅಂತ ಸ್ವತಃ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿಯವರೇ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಧಿಕಾರಿಗಳ ಬೇಕಾಬಿಟ್ಟಿ ಕೆಲಸ, ಕರ್ತವ್ಯ ನಿರ್ಲಕ್ಷ್ಯದಿಂದ ಕೋಟ್ಯಂತರ ರೂ ಬಾಡಿಗೆ ಬಾಕಿ ಇದೆ ಎಂದು ಆರೋಪಿಸಿದ್ದಾರೆ.

ಬಿಟಿಡಿಎ ಕಚೇರಿಯಲ್ಲಿ ದಾಖಲೆಗಳೇ ಇಲ್ಲ 

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಂಪೂರ್ಣ ಅವ್ಯವಸ್ಥೆ ತಾಂಡವವಾಡುತ್ತಿದೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಒಟ್ಟು 293 ವಾಣಿಜ್ಯ ಮಳಿಗೆಗಳಿವೆ. ಆದರೆ ಈ ಮಳಿಗೆಗಳನ್ನು ಯಾರಿಗೆ ಬಾಡಿಗೆಗೆ ನೀಡಲಾಗಿದೆ? ಎಷ್ಟು ಹಣಕ್ಕೆ ನೀಡಲಾಗಿದೆ? ಎಷ್ಟು ವರ್ಷಕ್ಕೆ ನೀಡಲಾಗಿದೆ? ಎಷ್ಟು ಮಳಿಗೆ ಖಾಲಿ ಇವೆ? ಎಷ್ಟು ಬಾಡಿಗೆ ಬಾಕಿ ಇದೆ? ಈ ಯಾವುದರ ಬಗ್ಗೆಯೂ ಬಿಟಿಡಿಎ ಕಚೇರಿಯಲ್ಲಿ ದಾಖಲೆಗಳೇ ಇಲ್ಲ.

ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದ ಪ್ರಕಾಶ್ ತಪಶೆಟ್ಟಿ

ಅಚ್ಚರಿಯ ವಿಷಯ ಅಂದರೆ, ಕಂಪ್ಯೂಟರೈಸ್ಡ್ ದಾಖಲೆ ಅಲ್ಲ, ಹಾರ್ಡ್ ಕಾಪಿ ದಾಖಲೆ ಕೂಡ ಇಲ್ಲ. ಯಾವುದೇ ಬಾಡಿಗೆ ಕರಾರು ಪತ್ರಗಳೇ ಇಲ್ಲ. ಕನಿಷ್ಠ ಅಂದರೂ 3 ಕೋಟಿ ರೂ ಬಾಡಿಗೆ ಬಾಕಿ ಇದೆ ಎಂದು ಅಂದಾಜಿಸಲಾಗಿದೆ. ‘ನಾನು ಅಧಿಕಾರಿಗಳಿಗೆ ಅಕ್ಟೋಬರ್ 10 ರೊಳಗೆ ಎಲ್ಲಾ ದಾಖಲೆ ನೀಡಿ ಅಂತ ಹೇಳಿದ್ದೆ. ಇದುವರೆಗೂ ಕೊಟ್ಟಿಲ್ಲ. ಚೀಫ್ ಇಂಜಿನಿಯರ್, RO ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವಾರದೊಳಗೆ ದಾಖಲೆ ನೀಡದಿದ್ದರೆ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ’ ಎಂದು ಬಿಟಿಡಿಎ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ, ಬಾಗಲಕೋಟೆಯಲ್ಲಿ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ

ಬಾಗಲಕೋಟೆಯ ನವನಗರದಲ್ಲಿ ಹಲವಾರು ಮಳಿಗೆಗಳಿಂದ ಬಾಡಿಗೆ ನೀಡಲಾಗುತ್ತಿಲ್ಲ. ಇದರ ಹಿಂದೆ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಬಿಟಿಡಿಎ ಆರಂಭದಿಂದಲೂ ಬಾಡಿಗೆ ವಸೂಲಿ ಮಾಡದೆ ನಿರ್ಲಕ್ಷ್ಯ ಮಾಡಲಾಗಿದೆ. ಇನ್ನು ಹಲವಾರು ಮಳಿಗೆಗಳು ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿವೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

LIVE TV

ಬಿಟಿಡಿಎಗೆ ಕೋಟ್ಯಂತರ ರೂ ನಷ್ಟ

ಸ್ವತಃ ಪ್ರಾಧಿಕಾರದ ಅಧ್ಯಕ್ಷರೇ ತಮ್ಮದೇ ಪ್ರಾಧಿಕಾರದ ವಿರುದ್ಧ ಆರೋಪ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಬಿಟಿಡಿಎಗೆ ಕೋಟ್ಯಂತರ ರೂ ನಷ್ಟವಾಗುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಕೂಡಲೇ ವಾಣಿಜ್ಯ ಮಳಿಗೆಗಳ ಬಗ್ಗೆ ದಾಖಲೆ ನೀಡಬೇಕು. ವಾಣಿಜ್ಯ‌ ಮಳಿಗೆಗಳಿಂದ ಬಾಡಿಗೆ ವಸೂಲಿ ಮಾಡಬೇಕು. ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ಮಾಡುವುದಾಗಿ’ ಕರವೇ ಮುಖಂಡ ಬಸವರಾಜ ಧರ್ಮಂತಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಎಂಎಸ್​ಪಿ, ಎಫ್​ಆರ್​ಪಿ ಹೆಚ್ಚಳಕ್ಕೆ ಕಬ್ಬು ಬೆಳೆಗಾರರ ಪಟ್ಟು: ರಾಜ್ಯಾದ್ಯಂತ ಬೀದಿಗಿಳಿದ ರೈತರು, ಹೆದ್ದಾರಿ ತಡೆದು ಉಗ್ರ ಹೋರಾಟ

ಒಟ್ಟಾರೆ ಬಿಟಿಡಿಎ ಅಕ್ರಮದ ಮೂಲಕ ಮೇಲಿಂದ ಮೇಲೆ ಚರ್ಚೆಯಲ್ಲಿದೆ. ಇದೀಗ ವಾಣಿಜ್ಯ ಮಳಿಗೆಗಳ ಬಗ್ಗೆ ದಾಖಲೆ ಇಲ್ಲ ಎಂದು ಸ್ವತಃ ಅಧ್ಯಕ್ಷರು ಆರೋಪ ಮಾಡಿದ್ದು, ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಲಾಗಿದೆ. ಜೊತೆಗೆ ಎಲ್ಲಾ ಮಳಿಗೆಗಳ ಬಗ್ಗೆ ದಾಖಲಾತಿ ನೀಡಿ ನಿಯಮಾನುಸಾರ ಬಾಡಿಗೆ ವಸೂಲಿ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರವಿ ಹೆಚ್ ಮೂಕಿ, ಕಲಘಟಗಿ
ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More