AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿಯಲ್ಲಿ ಪಾಳು ಬಿದ್ದ ₹4 ಕೋಟಿ ಹಾಸ್ಟೆಲ್‌! ವಿದ್ಯಾರ್ಥಿಗಳ ಬಳಕೆಗೆ ಸಿಗದ ವಸತಿ ನಿಲಯ

Ballari News: ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಬಾಲಕರ ಹಾಸ್ಟೆಲ್‌ 2023ರಲ್ಲಿ ಉದ್ಘಾಟನೆಯಾದರೂ ಇದುವರೆಗೆ ವಿದ್ಯಾರ್ಥಿಗಳ ಬಳಕೆಗೆ ಸಿಕ್ಕಿಲ್ಲ. ಕಟ್ಟಡ ಪಾಳು ಬೀಳುತ್ತಿದ್ದು, 12 ಲಕ್ಷ ರೂ. ಮೌಲ್ಯದ ವಿದ್ಯುತ್ ಉಪಕರಣಗಳ ಕಳ್ಳತನವೂ ನಡೆದಿದೆ. ಕಟ್ಟಡವನ್ನು ಮತ್ತಷ್ಟು ಹಾಳಾಗಲು ಬಿಡದೆ, ವಿದ್ಯಾರ್ಥಿಗಳಿಗೆ ಒದಗಿಸಿಕೊಡುವಂತೆ ಆಗ್ರಹ ವಗಯಕ್ತವಾಗಿದೆ.

ಬಳ್ಳಾರಿಯಲ್ಲಿ ಪಾಳು ಬಿದ್ದ ₹4 ಕೋಟಿ ಹಾಸ್ಟೆಲ್‌! ವಿದ್ಯಾರ್ಥಿಗಳ ಬಳಕೆಗೆ ಸಿಗದ ವಸತಿ ನಿಲಯ
ಬಳ್ಳಾರಿಯಲ್ಲಿ ಪಾಳು ಬಿದ್ದ ₹4 ಕೋಟಿ ಹಾಸ್ಟೆಲ್‌! ವಿದ್ಯಾರ್ಥಿಗಳ ಬಳಕೆಗೆ ಸಿಗದ ವಸತಿ ನಿಲಯImage Credit source: tv9
ವಿನಾಯಕ ಬಡಿಗೇರ್​
| Edited By: |

Updated on: Aug 10, 2026 | 1:03 PM

Share

ಮುಖ್ಯಾಂಶಗಳು

  • ₹4 ಕೋಟಿ ಹಾಸ್ಟೆಲ್‌ ಬಳಕೆಗೆ ಸಿಗಲೇ ಇಲ್ಲ
  • ಎರಡು ವರ್ಷಗಳಿಂದ ಕಟ್ಟಡ ಪಾಳುಬಿದ್ದ ಸ್ಥಿತಿ
  • ₹12 ಲಕ್ಷ ವಿದ್ಯುತ್ ಉಪಕರಣಗಳ ಕಳ್ಳತನ

ಬಳ್ಳಾರಿ. ಆಗಸ್ಟ್ 10: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ, ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ವಿದ್ಯಾರ್ಥಿಗಳ ಬಳಕೆಗೆ ನೀಡದ ವಸತಿ ನಿಲಯವೊಂದು ಇದೀಗ ಪಾಳು ಬಿದ್ದಿದೆ. ಬಳ್ಳಾರಿಯ (Ballari) ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2023ರಲ್ಲಿ ಉದ್ಘಾಟನೆಯಾದ ಬಾಲಕರ ವಸತಿ ನಿಲಯವನ್ನು ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸಿಸಲು ಅನುಕೂಲವಾಗುವ ಸಾಮರ್ಥ್ಯ ಹೊಂದಿರುವ ಈ ಹಾಸ್ಟೆಲ್‌ ಅನ್ನು ಇದುವರೆಗೆ ವಿದ್ಯಾರ್ಥಿಗಳ ಬಳಕೆಗೆ ನೀಡಿಲ್ಲ ಎನ್ನಲಾಗಿದೆ.

ಹಾಸ್ಟೆಲ್‌ ಸೌಲಭ್ಯ ದೊರೆಯದ ಕಾರಣ ವಿದ್ಯಾರ್ಥಿಗಳು ಪಿಜಿ ಹಾಗೂ ಬಾಡಿಗೆ ಕೊಠಡಿಗಳಲ್ಲಿ ವಾಸಿಸುವ ಪರಿಸ್ಥಿತಿ ಎದುರಾಗಿದೆ. ಸರ್ಕಾರದ ಅನುದಾನದಲ್ಲಿ ಕಟ್ಟಡ ನಿರ್ಮಾಣವಾಗಿದ್ದರೂ, ಬಳಕೆಗೆ ನೀಡದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಬಳಕೆಗೆ ಮುನ್ನವೇ ಕಟ್ಟಡಕ್ಕೆ ಹಾನಿ

ವಿದ್ಯಾರ್ಥಿಗಳ ಬಳಕೆಗೆ ನೀಡದೆ ಇರುವುದರಿಂದ ಹಾಸ್ಟೆಲ್‌ ಕಟ್ಟಡದ ಹಲವು ಭಾಗಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಜನರ ಓಡಾಟ ಮತ್ತು ನಿರ್ವಹಣೆಯ ಕೊರತೆಯಿಂದ ಕಟ್ಟಡದ ಸ್ಥಿತಿಯೂ ಹದಗೆಡುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಇದರ ನಡುವೆ ಹಾಸ್ಟೆಲ್‌ನಲ್ಲಿ ಅಂದಾಜು 12 ಲಕ್ಷ ರೂ. ಮೌಲ್ಯದ ವಿದ್ಯುತ್ ಉಪಕರಣಗಳು ಕಳ್ಳತನವಾಗಿರುವುದು ಕೂಡ ಬೆಳಕಿಗೆ ಬಂದಿದೆ. ಬಳಕೆಯಿಲ್ಲದೆ ಪಾಳು ಬಿದ್ದಿರುವ ಕಟ್ಟಡದ ಭದ್ರತೆ ಹಾಗೂ ನಿರ್ವಹಣೆ ಕುರಿತು ಇದೀಗ ಪ್ರಶ್ನೆಗಳು ಎದ್ದಿವೆ.

ಇದನ್ನೂ ಓದಿ: ಕೈಕೊಟ್ಟ ಮಳೆ: ಬಳ್ಳಾರಿ, ವಿಜಯನಗರದಿಂದ ಬರೋಬ್ಬರಿ 13,000 ಮಂದಿ ಗುಳೆ?

ವಿದ್ಯಾರ್ಥಿಗಳ ವಸತಿ ಸಮಸ್ಯೆ ಪರಿಹರಿಸಲು ತಕ್ಷಣವೇ ಹಾಸ್ಟೆಲ್‌ ಅನ್ನು ಬಳಕೆಗೆ ಮುಕ್ತಗೊಳಿಸಬೇಕು. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಮತ್ತಷ್ಟು ಹಾಳಾಗಲು ಬಿಡದೆ, ಅಗತ್ಯ ದುರಸ್ತಿ ಹಾಗೂ ಮೂಲಸೌಕರ್ಯ ಕಲ್ಪಿಸಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿಗರೇ ಎಚ್ಚರ: ಮನೆಗೆ ಕನ್ನ ಹಾಕಲು ಎಂಟ್ರಿ ಕೊಟ್ಟಿದೆ ಚಡ್ಡಿ ಗ್ಯಾಂಗ್
ಬೆಂಗಳೂರಿಗರೇ ಎಚ್ಚರ: ಮನೆಗೆ ಕನ್ನ ಹಾಕಲು ಎಂಟ್ರಿ ಕೊಟ್ಟಿದೆ ಚಡ್ಡಿ ಗ್ಯಾಂಗ್
ರಾಧಿಕಾ ಪಂಡಿತ್ ಯಶ್ ಅವರ ಅತಿ ದೊಡ್ಡ ಶಕ್ತಿ; ನಯನತಾರಾ ಭಾವುಕ ಮಾತು
ರಾಧಿಕಾ ಪಂಡಿತ್ ಯಶ್ ಅವರ ಅತಿ ದೊಡ್ಡ ಶಕ್ತಿ; ನಯನತಾರಾ ಭಾವುಕ ಮಾತು
ಅಧಿವೇಶನಕ್ಕೂ ಮುನ್ನ ಖಾತೆ ಹಂಚಿಕೆಯಾಗದಿದ್ರೆ ಏನ್ಮಾಡ್ತಾರಂತೆ ಡಿಕೆಶಿ!
ಅಧಿವೇಶನಕ್ಕೂ ಮುನ್ನ ಖಾತೆ ಹಂಚಿಕೆಯಾಗದಿದ್ರೆ ಏನ್ಮಾಡ್ತಾರಂತೆ ಡಿಕೆಶಿ!
ರಸ್ತೆ ಗುಂಡಿಯಲ್ಲಿ 'ಕೆರೆ-ದಂಡೆ' ಆಟ
ರಸ್ತೆ ಗುಂಡಿಯಲ್ಲಿ 'ಕೆರೆ-ದಂಡೆ' ಆಟ
ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್ ಪಾದಯಾತ್ರೆ: ಎರಡನೇ ದಿನಕ್ಕೆ HDD ಸಾಥ್
ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್ ಪಾದಯಾತ್ರೆ: ಎರಡನೇ ದಿನಕ್ಕೆ HDD ಸಾಥ್
ಇಂದು ಪಾಪನಾಶಿನಿ ದ್ವಾದಶಿ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಪಾಪನಾಶಿನಿ ದ್ವಾದಶಿ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಗಲ್ಲ ಅಂದ್ರೆ ಹೋಗ್ತಾ ಇರು; ಅಮುಕು ಡುಮುಕುಗೆ ಗೆಟೌಟ್ ಎಂದ ವಿನಯ್ ಗೌಡ
ಆಗಲ್ಲ ಅಂದ್ರೆ ಹೋಗ್ತಾ ಇರು; ಅಮುಕು ಡುಮುಕುಗೆ ಗೆಟೌಟ್ ಎಂದ ವಿನಯ್ ಗೌಡ
ಕಾಂಗ್ರೆಸ್​​ಗೆ ಹತ್ತಿರವಾಗುತ್ತಿದ್ದಾರಾ ಬಿಜೆಪಿಯ ಪ್ರೀತಂಗೌಡ?
ಕಾಂಗ್ರೆಸ್​​ಗೆ ಹತ್ತಿರವಾಗುತ್ತಿದ್ದಾರಾ ಬಿಜೆಪಿಯ ಪ್ರೀತಂಗೌಡ?
ಪ್ರತಿಯೊಬ್ಬ ವಿದ್ಯಾರ್ಥಿಯ ಆಕಾಂಕ್ಷೆ ಆಲಿಸಲು ಅಧಿಕಾರಿಗಳಿಗೆ ಜೋಶಿ ಸೂಚನೆ
ಪ್ರತಿಯೊಬ್ಬ ವಿದ್ಯಾರ್ಥಿಯ ಆಕಾಂಕ್ಷೆ ಆಲಿಸಲು ಅಧಿಕಾರಿಗಳಿಗೆ ಜೋಶಿ ಸೂಚನೆ
ಶಾಸಕರ ಅಸಮಾಧಾನದ ನಡುವೆ ದೆಹಲಿಗೆ ಹಾರಿದ ಸಿಎಂ ಡಿ.ಕೆ ಶಿವಕುಮಾರ್
ಶಾಸಕರ ಅಸಮಾಧಾನದ ನಡುವೆ ದೆಹಲಿಗೆ ಹಾರಿದ ಸಿಎಂ ಡಿ.ಕೆ ಶಿವಕುಮಾರ್