ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸ್ಯಾಟ್​ಲೈಟ್​ ಟೌನ್​ ರಿಂಗ್​ ರೋಡ್ ಅಸ್ತ್ರ: ಏನಿದರ ವಿಶೇಷತೆ ಇಲ್ಲಿದೆ ಓದಿ ​​

ಭಾರತ್​ ಮಾಲಾ ಪರಿಯೋಜನಾ ಅಡಿಯಲ್ಲಿ ಸ್ಯಾಟ್​ಲೈಟ್​ ಟೌನ್​ ರಿಂಗ್​ ರೋಡ್​ ನಿರ್ಮಾಣವಾಗುತ್ತಿದೆ. 288 ಕಿಮೀ ಉದ್ದದ ರಸ್ತೆ ಇದಾಗಿದ್ದು, ಕರ್ನಾಟಕದಲ್ಲಿ 243 ಕಿಮೀ ಮತ್ತು ತಮಿಳುನಾಡಿನಲ್ಲಿ 45 ಕಿಮೀ ಹಾದು ಹೋಗುತ್ತದೆ. ಈ ಸ್ಯಾಆಟ್​ಲೈಟ್​ ಟೌನ್​ ರಿಂಗ್​ ರೋಡ್​​​ಗೆ 2022ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದರು.

ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸ್ಯಾಟ್​ಲೈಟ್​ ಟೌನ್​ ರಿಂಗ್​ ರೋಡ್ ಅಸ್ತ್ರ: ಏನಿದರ ವಿಶೇಷತೆ ಇಲ್ಲಿದೆ ಓದಿ ​​
ಬೆಂಗಳೂರು ಸ್ಯಾಟಲೈಟ್​ ಟೌನ್​ ರಿಂಗ್​ ರೋಡ್
Follow us
|

Updated on: Mar 12, 2024 | 8:31 AM

ಬೆಂಗಳೂರು (Bengaluru) ನಗರ ಸಂಚಾರ ದಟ್ಟಣೆಗೆ ದೇಶದಲ್ಲಿ ಹೆಸರುವಾಸಿಯಾಗಿದೆ. ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಾಕಷ್ಟು ಹರಸಾಹಸ ಮಾಡಲಾಗುತ್ತಿದೆ. ನಗರದ ಒಳಗೆ ಪ್ರವೇಶಿಸುವ ವಾಹನಗಳ ಸಂಖ್ಯೆ ಹೆಚ್ಚುತ್ತಲಿದೆ. ಇದರಿಂದ ಉದ್ಯಾನವನ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಸ್ಯಾಟಲೈಟ್​ ಟೌನ್​ ರಿಂಗ್​ ರೋಡ್​ (STRR​)ನ ಎರಡು ಮಾರ್ಗಗಳನ್ನು ನಿರ್ಮಿಸಲಾಗಿದೆ. ದಾಬಸ್​​ಪೇಟೆ-ದೊಡ್ಡಬಳ್ಳಾಪುರ ಬೈಪಾಸ್ (Dabaspet-Doddaballapur Bypass)​ ವಿಭಾಗ NH-648 (42 ಕಿಮೀ) (1,438 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ) ಮತ್ತು ದೊಡ್ಡಬಳ್ಳಾಪುರ ಬೈಪಾಸ್​-ಹೊಸಕೋಟೆ (Doddaballapur Bypass-Hosakote) NH-648 (37.6 ಕಿಮೀ) (1,317 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ) ಈ ಎರಡು ರಸ್ತೆಗಳು ಬೆಂಗಳೂರು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಭಾರತ್​ ಮಾಲಾ ಪರಿಯೋಜನಾ ಅಡಿಯಲ್ಲಿ ಸ್ಯಾಟ್​ಲೈಟ್​ ಟೌನ್​ ರಿಂಗ್​ ರೋಡ್​ ನಿರ್ಮಾಣವಾಗುತ್ತಿದೆ. 288 ಕಿಮೀ ಉದ್ದದ ರಸ್ತೆ ಇದಾಗಿದ್ದು, ಕರ್ನಾಟಕದಲ್ಲಿ 243 ಕಿಮೀ ಮತ್ತು ತಮಿಳುನಾಡಿನಲ್ಲಿ 45 ಕಿಮೀ ಹಾದು ಹೋಗುತ್ತದೆ. ಈ ಸ್ಯಾಆಟ್​ಲೈಟ್​ ಟೌನ್​ ರಿಂಗ್​ ರೋಡ್​​​ಗೆ 2022ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದರು. 17 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗುತ್ತಿದ್ದು, 2025ರ ಡಿಸೆಂಬರ್​ನಲ್ಲಿ​ ಕಾಮಗಾರಿ ಪೂರ್ಣಗೊಳ್ಳಲಿದೆ.

ಇನ್ನು ಈ ಸ್ಯಾಟ್​ಲೈಟ್​ ಟೌನ್​ ರಿಂಗ್​ ರೋಡ್​​ ದಾಬಾಸ್​ಪೇಟೆ ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಸರ್ಜಾಪುರ, ಅತ್ತಿಬೆಲೆ, ಅನೇಕಲ್​, ತಟ್ಟೆಕೆರೆ, ಕನಕಪುರ, ಮಾಗಡಿ, ರಾಮನಗರ ಪಟ್ಟಣಗಳು ಈ ಯೋಜನೆ ಅಡಿಯಲ್ಲಿ ಬರುತ್ತವೆ. ಈ ರಸ್ತೆಯು ಬೆಂಗಳೂರಿನ ಉತ್ತರ ಭಾಗವನ್ನು ಪೂರ್ವ ಭಾಗದೊಂದಿಗೆ ಸಂಪರ್ಕಿಸುತ್ತದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹೆದ್ದಾರಿ ಯೋಜನೆಗೆ ಕೇಂದ್ರದಿಂದ 2,675 ಕೋಟಿ ರೂ. ಮಂಜೂರು

ಬೆಂಗಳೂರು ಸಂಚಾರ ದಟ್ಟಣೆಗೆ ರಾಮಬಾಣ

ಸ್ಯಾಟ್​ಲೈಟ್​ ಟೌನ್​ ರಿಂಗ್​ ರೋಡ್​​ ಪೂರ್ಣಗೊಂಡರೆ ತುಮಕುರು ರಸ್ತೆ ಮಾರ್ಗವಾಗಿ ನೇರವಾಗಿ ಬೆಂಗಳೂರು ನಗರವನ್ನು ಪ್ರವೇಶಿಸದೆ ತಮಿಳುನಾಡು ಗಡಿಯನ್ನು ಪ್ರವೇಶಿಸಬಹುದಾಗಿದೆ. ದೊಬ್ಬಾಸ್​​ಪೇಟೆ-ದೊಡ್ಡಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಬೈಪಾಸ್​-ಹೊಸಕೋಟೆ ಒಟ್ಟು 80 ಕಿಮೀ ಉದ್ದದ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡರೆ, ತುಮಕೂರು ರಸ್ತೆ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವ, ಆಂಧ್ರಪ್ರದೇಶ, ತಮಿಳುನಾಡು ಅಥವಾ ಕೆಐಎ ಕಾರ್ಗೋ ಟರ್ಮಿನಲ್​ಗಳ ಕಡೆಗೆ ಚಲಿಸುವ ಭಾರಿ ವಾಹನಗಳು ನಗರವನ್ನು ಪ್ರವೇಶಿಸುವುದಿಲ್ಲ. ಬದಲಿಗೆ ಈ ಮಾರ್ಗದ ಮೂಲಕ ನೇರವಾಗಿ ದೇವನಹಳ್ಳಿ ಮತ್ತು ಹೊಸಕೋಟೆ ಕಡೆಗೆ ಹೋಗುತ್ತವೆ. ಇದರಿಂದ ಬೆಂಗಳೂರು ನಗರದಲ್ಲಿನ ಸಂಚಾರ ದಟ್ಟಣೆ ಬಹತೇಕ ಕಡಿಮೆಯಾಗಲಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಯೋಜನಾ ನಿರ್ದೇಶಕ ಕೆ.ಬಿ.ಜಯಕುಮಾರ ಮಾತನಾಡಿ, ಸ್ಯಾಟ್​ಲೈಟ್​ ಟೌನ್​ ರಿಂಗ್​ ರೋಡ್​​ನಿಂದ ಸಾಕಷ್ಟು ಅನುಕೂಲವಾಗಲಿದೆ. ನಾವು ನಿರ್ಮಾಣದ ಗುಣಮಟ್ಟದ ಬಗ್ಗೆ ವಾಹನ ಚಾಲಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದರು.

ದೊಡ್ಡಬಳ್ಳಾಪುರ ಬೈಪಾಸ್-ಹೊಸಕೋಟೆ ಟೋಲ್ ಸಂಗ್ರಹವು 2023ರ ನವೆಂಬರ್​ನಲ್ಲಿ ಪ್ರಾರಂಭವಾಗಿದೆ. ಮತ್ತು ಡೊಬ್ರಸ್‌ಪೇಟೆ-ದೊಡ್ಡಬಳ್ಳಾಪುರ ಟೋಲ್ ಸಂಗ್ರಹವು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ

ಕೋಲಾರ, ಹೊಸಕೋಟೆ, ಹೊಸೂರು ಮತ್ತು ಚಿತ್ತೂರು ಕಡೆಯಿಂದ ಬರುವ ಪ್ರಯಾಣಿಕರು ಈ ರಿಂಗ್​ ರೋಡ್​ ಮೂಲಕ ನೇರವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬಹದು ಎಂದು ತಿಳಿಸಿದರು. ಸ್ಯಾಟ್​ಲೈಟ್​ ಟೌನ್​ ರಿಂಗ್​ ರೋಡ್​​ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮತ್ತು ಎಲ್​ಇಡಿ ಸಂಚಾರ ಮಾಹಿತಿ ಪರದೆ, ಲೋಹದ ತಡೆಗೋಡಗಳ ನಿರ್ಮಾಣ ಮಾಡಲಾಗಿದೆ. ವೇಗದ ಮಿತಿ 100 ಕಿಮೀ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮಾರ್ಟಿನ್ ಟ್ರೇಲರ್ ಕೊನೆಯಲ್ಲಿ ಇಂಥ ಡೈಲಾಗ್ ಬೇಕಿತ್ತಾ? ಉತ್ತರ ನೀಡಿದ ಧ್ರುವ
ಮಾರ್ಟಿನ್ ಟ್ರೇಲರ್ ಕೊನೆಯಲ್ಲಿ ಇಂಥ ಡೈಲಾಗ್ ಬೇಕಿತ್ತಾ? ಉತ್ತರ ನೀಡಿದ ಧ್ರುವ
ಧ್ವಜ ಹಿಡಿದ ಕೈಯಲ್ಲೇ ಸಿದ್ದರಾಮಯ್ಯನ ಶೂ ಬಿಚ್ಚಿದ ಕಾಂಗ್ರೆಸ್ ಕಾರ್ಯಕರ್ತ
ಧ್ವಜ ಹಿಡಿದ ಕೈಯಲ್ಲೇ ಸಿದ್ದರಾಮಯ್ಯನ ಶೂ ಬಿಚ್ಚಿದ ಕಾಂಗ್ರೆಸ್ ಕಾರ್ಯಕರ್ತ
ಮಾರ್ಟಿನ್ ರಿಲೀಸ್ ಹೊಸ್ತಿಲಲ್ಲಿ ಚಿತ್ರತಂಡದ ಸುದ್ದಿಗೋಷ್ಠಿ; ಲೈವ್ ನೋಡಿ..
ಮಾರ್ಟಿನ್ ರಿಲೀಸ್ ಹೊಸ್ತಿಲಲ್ಲಿ ಚಿತ್ರತಂಡದ ಸುದ್ದಿಗೋಷ್ಠಿ; ಲೈವ್ ನೋಡಿ..
‘ನಾನೇ ಬಿಗ್ ಬಾಸ್’: ಶಾಕಿಂಗ್ ಹೇಳಿಕೆ ನೀಡಿ ಹೊರಗೆ ಬರಲು ಸಿದ್ಧವಾದ ಜಗದೀಶ್​
‘ನಾನೇ ಬಿಗ್ ಬಾಸ್’: ಶಾಕಿಂಗ್ ಹೇಳಿಕೆ ನೀಡಿ ಹೊರಗೆ ಬರಲು ಸಿದ್ಧವಾದ ಜಗದೀಶ್​
ಧಾರವಾಡ: ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಕೆ ಮಾಡಿ ಅಪಮಾನ
ಧಾರವಾಡ: ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಕೆ ಮಾಡಿ ಅಪಮಾನ
ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ