ಬರಗೂರು ಸಮಿತಿ ಎಡವಟ್ಟು; ಸೂರ್ಯ ಚಂದ್ರ ದೇವರು ಅಲ್ಲ ಎಂದ ಕವಿ ಸಿದ್ದಲಿಂಗಯ್ಯ ಅವರು ರಚಿಸಿದ “ಭೂಮಿ” ಪದ್ಯ ತೆಗೆದು ಹಾಕಲು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಆದೇಶ
ದೇವರ ಆತ್ಮ ಕಂಡವರಿಲ್ಲ, ಶಾಸ್ತ್ರ ಪುರಾಣ ಸುಳ್ಳಿನ ಕಂತೆ. ಅರಮನೆ, ಗುರುಮನೆ ಮೋಸದ ಜಾಲ, ಮುಗಿಲು ಶೋಷಣೆ ಮಾಡುವ ಕಾಲ. ಸೂರ್ಯ ಚಂದ್ರರು ದೇವರಲ್ಲ ಎಂಬ ಪದ್ಯದ ವಾಕ್ಯಗಳನ್ನ ಬರಗೂರು ಸಮಿತಿ ಉಳಿಸಿಕೊಂಡಿತ್ತು. ಈ ವಾಕ್ಯಗಳು ಮಠಗಳ ಬಗ್ಗೆ ತಪ್ಪು ಭಾವನೆ ಮೂಡಿಸುತ್ತಿವೆ. ಈ ಹಿನ್ನಲೆಯಲ್ಲಿ ಪದ್ಯ ವಾಪಸ್ ಪಡೆಯಲು ಸಚಿವ ಬಿ.ಸಿ. ನಾಗೇಶ್ ಆದೇಶ ಮಾಡಿದ್ದಾರೆ.

ಬೆಂಗಳೂರು: ಪಠ್ಯ ಪರಿಷ್ಕರಣೆ ವಿರೋಧಿಸಿ ಹಳೆಯ ಪಠ್ಯ ಪುಸ್ತಕಗಳನ್ನೇ ಮುಂದುವರೆಸಬೇಕು, ವಿವಾದದ ಜವಾಬ್ದಾರಿ ಹೊತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ರಾಜೀನಾಮೆ ನೀಡಬೇಕು ಎಂದು ನಿನ್ನೆ ಕಾಂಗ್ರೆಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಇನ್ನೂ ಮುಗಿಯದ ಗೊಂದಲವಾಗಿದೆ.
ವಿವಾದದ ಬಳಿಕವೂ ಮತ್ತೆ ಪಠ್ಯ ಸರಿಪಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಬರಗೂರು ರಾಮಚಂದ್ರಪ್ಪ ಸಮಿತಿಯ ತಪ್ಪು ಸರಿಪಡಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು ಜನರ ನಂಬಿಕೆ ಧಾರ್ಮಿಕ ಭಾವನೆಗಳಿಗೆ ಕುಂದು ತರುವ ಪದ್ಯ ವಾಪಸ್ ಪಡೆಯಲು ಸಚಿವ ನಾಗೇಶ್ ಆದೇಶಿಸಿದ್ದಾರೆ. ಮಠಗಳ ಮೇಲಿನ ನಂಬಿಕೆ ಒಡೆಯಲು ಬರಗೂರು ಸಮಿತಿ ಮುಂದಾಗಿತ್ತು ಎಂಬ ಆರೋಪ ಕೇಳಿ ಬಂದಿದ್ದು ಸಾರ್ವಜನಿಕ ಆಕ್ಷೇಪಣೆ ಹಿನ್ನೆಲೆಯಲ್ಲಿ ಪದ್ಯ ವಾಪಸ್ ಪಡೆಯಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ನಾಲ್ಕನೇ ತರಗತಿ ಪರಿಸರ ಅಧ್ಯಯನದ ನಲಿಕಲಿ ವಿಭಾಗದಲ್ಲಿ ಕವಿ ಸಿದ್ದಲಿಂಗಯ್ಯ ಅವರು ರಚಿಸಿದ “ಭೂಮಿ” ಎಂಬ ಪದ್ಯವನ್ನು ತೆಗೆಯಲು ತಿಳಿಸಲಾಗಿದೆ. ರೋಹಿತ್ ಚಕ್ರತೀರ್ಥ ಸಮಿತಿ ನಲಿಕಲಿ ಪಠ್ಯ ಪರಿಷ್ಕರಣೆ ಮಾಡಿರಲಿಲ್ಲ. ಆದರೆ ನಲಿಕಲಿ ಪಠ್ಯದಲ್ಲಿ ಧಾರ್ಮಿಕ ನಂಬಿಕೆ ಹಾಗೂ ವಿವಾದಾತ್ಮಕ ಅಂಶಗಳಿವೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಬರಗೂರು ಸಮಿತಿಯ ಪಠ್ಯ ವಾಪಸ್ ಪಡೆಯಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದನ್ನೂ ಓದಿ: Nervous System: ನರಮಂಡಲದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಸೂರ್ಯ ಚಂದ್ರರನ್ನ ದೇವರಲ್ಲ ಎಂದಿದ್ದ ವಿವಾದಿತ ಅಂಶ ಇದ್ದರೂ ಪರಿಷ್ಕರಣೆ ಮಾಡದೇ ಬರಗೂರು ರಾಮಚಂದ್ರಪ್ಪ ಸಮಿತಿ ಪದ್ಯ ಅಳವಡಿಸಿತ್ತು. ಮಠಗಳು ಮೋಸದ ಜಾಲ ಎಂಬ ವಾಕ್ಯವನ್ನ ಬರಗೂರು ರಾಮಚಂದ್ರಪ್ಪ ಸಮಿತಿ ಮುಂದುವರಿಸಿತ್ತು. ದೇವರ ಆತ್ಮ ಕಂಡವರಿಲ್ಲ, ಶಾಸ್ತ್ರ ಪುರಾಣ ಸುಳ್ಳಿನ ಕಂತೆ. ಅರಮನೆ, ಗುರುಮನೆ ಮೋಸದ ಜಾಲ, ಮುಗಿಲು ಶೋಷಣೆ ಮಾಡುವ ಕಾಲ. ಸೂರ್ಯ ಚಂದ್ರರು ದೇವರಲ್ಲ ಎಂಬ ಪದ್ಯದ ವಾಕ್ಯಗಳನ್ನ ಬರಗೂರು ಸಮಿತಿ ಉಳಿಸಿಕೊಂಡಿತ್ತು. ಈ ವಾಕ್ಯಗಳು ಮಠಗಳ ಬಗ್ಗೆ ತಪ್ಪು ಭಾವನೆ ಮೂಡಿಸುತ್ತಿವೆ. ಸೂರ್ಯ ಚಂದ್ರ ದೇವರು ಅಲ್ಲ ಎಂಬುದು ವೈಜ್ಞಾನಿಕ ಸತ್ಯ ಆದರೂ ಧರ್ಮಾತೀತವಾಗಿ ದೇವರೆಂದೇ ಪೂಜಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪದ್ಯ ವಾಪಸ್ ಪಡೆಯಲು ಸಚಿವ ಬಿ.ಸಿ. ನಾಗೇಶ್ ಆದೇಶ ಮಾಡಿದ್ದು ಬರಗೂರು ಸಮಿತಿ ಎಡವಟ್ಟು ಸರಿಪಡಿಸಲು ಮುಂದಾಗಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:19 am, Fri, 10 June 22




