AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ’: ಸ್ಟಿಂಗ್​​ ವಿಚಾರವಾಗಿ ರಾಹುಲ್​​ ಗಾಂಧಿ ಎದುರೇ ಬೇಸರ ಹೊರಹಾಕಿದ ಸಿದ್ದರಾಮಯ್ಯ

ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಿರುವ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ, ಅಧಿಕಾರದಿಂದ ಇಳಿದ ಬಳಿಕ ತಮ್ಮ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಬೇಸರ ಹೊರಹಾಕಿದ್ದು. ಸ್ಟಿಂಗ್​​ ವಿಚಾರ ಪ್ರಸ್ತಾಪಿಸಿ, ಇದೆಲ್ಲ ಕೆಲವರು ಸೃಷ್ಟಿಸಿದ ಬೆಳವಣಿಗೆ ಎಂದಿದ್ದಾರಂತೆ. ರಾಹುಲ್​​ ಗಾಂಧಿ ಭೇಟಿಗೂ ಮುನ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನೂ ಸಿದ್ದರಾಮಯ್ಯ ಭೇಟಿಯಾಗಿದ್ದರು.

'ನನ್ನ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ': ಸ್ಟಿಂಗ್​​ ವಿಚಾರವಾಗಿ ರಾಹುಲ್​​ ಗಾಂಧಿ ಎದುರೇ ಬೇಸರ ಹೊರಹಾಕಿದ ಸಿದ್ದರಾಮಯ್ಯ
ರಾಹುಲ್​​ ಗಾಂಧಿ ಭೇಟಿಯಾದ ಸಿದ್ದರಾಮಯ್ಯ
ಪ್ರಸನ್ನ ಗಾಂವ್ಕರ್​
| Edited By: |

Updated on:Nov 02, 2026 | 7:36 PM

Share

ನವದೆಹಲಿ, ನವೆಂಬರ್​​ 02: ದೆಹಲಿಯ ಟೆನ್​ ಜನ್​​ಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿಯನ್ನ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ತಮ್ಮ ವಿರುದ್ಧದ ಸ್ಟಿಂಗ್ ಪ್ರಕರಣ ಸೇರಿ ಹಲವು ಪ್ರಮುಖ ವಿಚಾರಗಳ ಬಗ್ಗೆ ರಾಹುಲ್ ಜತೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮಾಜಿ ಸಿಎಂ ಜೊತೆಗೆ ಸಚಿವ ಡಾ.ಯತೀಂದ್ರ ಹಾಗೂ ಪೊನ್ನಣ್ಣ ಉಪಸ್ಥಿತರಿದ್ದರು. ಮಾಜಿ ಸಿಎಂರ ಈ ನಡೆ ತೀವ್ರ ಕುತೂಹಲಕ್ಕೂ ಕಾರಣವಾಗಿದೆ.

ರಾಹುಲ್​​ ಗಾಂಧಿ ಜೊತೆ ಸುದೀರ್ಘ ಮಾತುಕತೆ

ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ ಸುಮಾರು 45 ನಿಮಿಷಗಳಿಗೂ ಹೆಚ್ಚು ಸುದೀರ್ಘ ಚರ್ಚೆ ನಡೆಸಿದ್ದು, ನೀವು ಹೇಳಿದ ಏಕೈಕ ಕಾರಣಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಬೇರೆಯವರ ಒತ್ತಡದಿಂದ ನಾನು ರಾಜೀನಾಮೆ ನೀಡಿಲ್ಲ. ಆದರೆ ನಾನು ಅಧಿಕಾರದಿಂದ ಇಳಿದ ಬಳಿಕ ನನ್ನ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಇದೆಲ್ಲ ಕೆಲವರು ಸೃಷ್ಟಿಸಿದ ಬೆಳವಣಿಗೆ ಎಂದು ಹೇಳುವ ಮೂಲಕ ಸ್ಟಿಂಗ್​​ ಪ್ರಕರಣದ ಬಗ್ಗೆ ರಾಹುಲ್​​ ಗಾಂಧಿ ಎದುರೇ ಸಿದ್ದರಾಮಯ್ಯ ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ.

‘ಈ ರಾಜಕೀಯ ಷಡ್ಯಂತ್ರ ನಡೆಸಿದ್ದು ಯಾರೆಂದು ಗೊತ್ತು’

ಮುಂದೆ ಚುನಾವಣೆಯಲ್ಲೂ ಸ್ಪರ್ಧಿಸಲ್ಲ ಎಂದು ಹೇಳಿದ್ದೇನೆ. ನಾನು ಮತ್ತೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೂ ಅಲ್ಲ. ಅದಾಗ್ಯೂ ಈ ರಾಜಕೀಯ ಷಡ್ಯಂತ್ರ ನಡೆಸಿದ್ದು ಯಾರು? ಆ ವಿಡಿಯೋ ಹಂಚಿಕೊಂಡವರು ಯಾರೆಂದು ನನಗೆ ಗೊತ್ತು. ಆ ವಿಡಿಯೋ ಮಾಡಿದ್ದು ಯಾರು, ಹಿಂದಿನ ಉದ್ದೇಶವೇನು? ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಹೆಸರಿಗೆ ಧಕ್ಕೆ ತರಲಾಗುತ್ತಿದೆ. ಇದರಿಂದ ನನಗೆ ತೀವ್ರ ಬೇಸರವಾಗಿದೆ. ನನ್ನ ಇಮೇಜ್​​ಗೆ ಧಕ್ಕೆ ಆದ್ರೆ ಚುನಾವಣಾ ಪ್ರಚಾರಕ್ಕೆ ಬರಲ್ಲ. ಹೀಗೆ ಮುಂದುವರಿದ್ರೆ ಪ್ರಚಾರದಿಂದಲೇ ದೂರ ಉಳಿಯುತ್ತೇನೆ ಎಂದವರು ತಿಳಿಸಿದ್ದಾರಂತೆ.

‘ಪರಿಷತ್​ನ 4 ಸ್ಥಾನ ಸೋಲಲು ಸ್ಟಿಂಗ್ ವಿಚಾರವೇ ಕಾರಣ’

ಅಲ್ಲದೆ, ಪರಿಷತ್​ನ 4 ಸ್ಥಾನ ಸೋಲಲು ಸ್ಟಿಂಗ್ ವಿಚಾರವೇ ಕಾರಣ. ವಿಡಿಯೋದಿಂದ ತನಗೆ ವೈಯಕ್ತಿಕವಾಗಿ ಮತ್ತು ಪಕ್ಷಕ್ಕೆ ತೀವ್ರ ಹಾನಿಯಾಗಿದೆ. ಈ ರೀತಿಯ ಮಾನ ಹಾನಿ ಸರಿಯಲ್ಲ. ವಿಡಿಯೋ ಹಿಂದಿರುವವರು ಮತ್ತು ಅವರ ಉದ್ದೇಶ ಗೊತ್ತಾಗಬೇಕು ಎಂದು ರಾಹುಲ್ ಗಾಂಧಿ ಬಳಿ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕೇಸ್: ಕೃಪಾ ಆಳ್ವಾ ಸೇರಿ ಮೂವರಿಗೆ ಬಿಗ್ ರಿಲೀಫ್

‘ಸ್ಟಿಂಗ್ ವಿಚಾರವಾಗಿ ಚರ್ಚೆ ಮಾಡಿಲ್ಲ’

ಇನ್ನು ರಾಹುಲ್ ಗಾಂಧಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಸ್ಟಿಂಗ್ ವಿಚಾರವಾಗಿ ಚರ್ಚೆ ಮಾಡಿಲ್ಲ. ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆ ಮಾಡಿದ್ದೇನೆ. ಪಕ್ಷದ ಬೆಳವಣಿಗೆಗಳು ಮತ್ತು ರಾಜಕೀಯ ವಿದ್ಯಮಾನಗಳು ಸೇರದಂತೆ ಪಕ್ಷ ಸಂಘಟನೆ ಬಗ್ಗೆ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಸ್ಟಿಂಗ್​​ ಪ್ರಕರಣವಿಚಾರವಾಗಿ ಬೆಂಗಳೂರು ನಗರ ಪೊಲೀಸ್​​ ಕಮಿಷನರ್​​ ಸೀಮಂತ್ ಕುಮಾರ್ ಹೇಳಿಕೆ ಬಗ್ಗೆ ಗೊತ್ತಿಲ್ಲ ಎಂದೂ ಅವರು ಇದೇ ವೇಳೆ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:17 pm, Mon, 2 November 26

Follow Us
ಪ್ರಸನ್ನ ಗಾಂವ್ಕರ್​
ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಕಣ್ಣೀರು ಹಾಕಿದ ಜಗದೀಶ್
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಕಣ್ಣೀರು ಹಾಕಿದ ಜಗದೀಶ್
ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ
ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ
ತನ್ನದೇ ಪಕ್ಷದ ಸಂಸದೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ; ವಿಡಿಯೋ ವೈರಲ್
ತನ್ನದೇ ಪಕ್ಷದ ಸಂಸದೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ; ವಿಡಿಯೋ ವೈರಲ್
ಮಗುವಿಗೆ ಜನ್ಮ ನೀಡಿದೆ ಎಂದ 70ರ ಅಜ್ಜಿ: ಬಯಲಾಯಿತು ಸತ್ಯ
ಮಗುವಿಗೆ ಜನ್ಮ ನೀಡಿದೆ ಎಂದ 70ರ ಅಜ್ಜಿ: ಬಯಲಾಯಿತು ಸತ್ಯ
ಬೆಣ್ಣೆ ಹಳ್ಳದ ನೀರನ್ನು ಕೆರೆಗೆ ತುಂಬಿಸಲು ಹೊಸ ತಂತ್ರಜಾನ ಯುವ ರೈತನ ಸಾಧನೆ
ಬೆಣ್ಣೆ ಹಳ್ಳದ ನೀರನ್ನು ಕೆರೆಗೆ ತುಂಬಿಸಲು ಹೊಸ ತಂತ್ರಜಾನ ಯುವ ರೈತನ ಸಾಧನೆ
ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ: ಪ್ರಮೋದಾದೇವಿ
ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ: ಪ್ರಮೋದಾದೇವಿ
ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಇದುವೇ ಕಾರಣ! ಸಚಿವ ಬೈರತಿ ಹೇಳಿದ್ದೇನು ನೋಡಿ
ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಇದುವೇ ಕಾರಣ! ಸಚಿವ ಬೈರತಿ ಹೇಳಿದ್ದೇನು ನೋಡಿ
ಬೆಂಗಳೂರಿನ ಜನರಿಗೆ ಬಿಗ್​​ ಶಾಕ್
ಬೆಂಗಳೂರಿನ ಜನರಿಗೆ ಬಿಗ್​​ ಶಾಕ್
ಲೆಟರ್ ಪಡೆಯಲು ಜಗದೀಶ್​ಗೆ ಮತ್ತೊಂದು ಅವಕಾಶ: ಶುರುವಾಯ್ತು ರೋಚಕ ಸವಾಲು
ಲೆಟರ್ ಪಡೆಯಲು ಜಗದೀಶ್​ಗೆ ಮತ್ತೊಂದು ಅವಕಾಶ: ಶುರುವಾಯ್ತು ರೋಚಕ ಸವಾಲು
ಹಾಸನಾಂಬೆ ಸನ್ನಿಧಿಯಲ್ಲಿ ಧರ್ಮದರ್ಶನ ಸಾಲು ಖಾಲಿ ಖಾಲಿ! ಯಾಕೆ ಗೊತ್ತಾ?
ಹಾಸನಾಂಬೆ ಸನ್ನಿಧಿಯಲ್ಲಿ ಧರ್ಮದರ್ಶನ ಸಾಲು ಖಾಲಿ ಖಾಲಿ! ಯಾಕೆ ಗೊತ್ತಾ?