AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿನ ದರ ಹೆಚ್ಚಳ ಬೆನ್ನಲ್ಲೇ ಗ್ರಾಹಕರಿಗೆ ಶಾಕ್ ಕೊಟ್ಟ ಹೋಟೆಲ್​​ಗಳು: ಕಾಫಿ, ಟೀ-ತಿಂಡಿ ಬೆಲೆ ಏರಿಕೆ

ನಂದಿನಿ ಹಾಲಿನ ದರ ಲೀಟರ್‌ಗೆ 8 ರೂ ಏರಿಕೆ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಈ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳಲ್ಲಿ ಕಾಫಿ, ಟೀ ಸೇರಿದಂತೆ ಹಾಲಿನಿಂದ ತಯಾರಾಗುವ ಎಲ್ಲಾ ಆಹಾರ ಮತ್ತು ಪಾನೀಯಗಳ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ. ಆ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.

ಹಾಲಿನ ದರ ಹೆಚ್ಚಳ ಬೆನ್ನಲ್ಲೇ ಗ್ರಾಹಕರಿಗೆ ಶಾಕ್ ಕೊಟ್ಟ ಹೋಟೆಲ್​​ಗಳು: ಕಾಫಿ, ಟೀ-ತಿಂಡಿ ಬೆಲೆ ಏರಿಕೆ
ನಂದಿನಿ ಹಾಲಿನ ದರ ಹೆಚ್ಚಳ
ಕಿರಣ್​ ಸೂರ್ಯ
| Edited By: |

Updated on:Oct 29, 2026 | 5:57 PM

Share

ಮುಖ್ಯಾಂಶಗಳು

  • ನ.1ರಿಂದ ನಂದಿನಿ ಹಾಲಿನ ದರ ಪ್ರತಿ ಲೀಟರ್​ಗೆ 8 ರೂ. ಏರಿಕೆ
  • ದರ ಹೆಚ್ಚಳ ಅನಿವಾರ್ಯ ಎಂದ ಹೋಟೆಲ್​ ಅಸೋಸಿಯೇಷನ್
  • ಹೋಟೆಲ್​ಗಳಲ್ಲಿ ಟೀ ಮತ್ತು ಕಾಫಿ ದರ ಹೆಚ್ಚಳ

ಬೆಂಗಳೂರು, ಅಕ್ಟೋಬರ್​​ 29: ಇಂದು ನಡೆದ ಸಂಪುಟ ಸಭೆಯ ನಿರ್ಧಾರದಂತೆ ಪ್ರತಿ ಲೀಟರ್ ನಂದಿನಿ ಹಾಲಿಗೆ ಬರೋಬ್ಬರಿ 8 ರೂ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಆ ಮೂಲಕ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ಜನರಿಗೆ ಸರ್ಕಾರ ದೊಡ್ಡ ಶಾಕ್​ ನೀಡಿದೆ. ಈ ಬಗ್ಗೆ ಬೆಂಗಳೂರು ಹೋಟೆಲ್​​ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಫಿ, ಟೀ, ತಿಂಡಿ-ತಿನಿಸುಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ಈ ಕುರಿತಾಗಿ ಬೆಂಗಳೂರು ಹೋಟೆಲ್​​ ಮಾಲೀಕರ ಸಂಘದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದ್ದು, ‘ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿನ ಬೆಲೆಯನ್ನು ಪ್ರತಿ ಲೀಟಗೆರ್‌ಗೆ 8 ರೂ ಏಕಾಏಕಿ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನು ಕೇವಲ 2 ರಿಂದ 3 ರೂ.ಗಳಿಗೆ ಸೀಮಿತಗೊಳಿಸಿದಲ್ಲಿ ಹೋಟೆಲ್​ಗಳಲ್ಲಿ ಕಾಫಿ, ಟೀ ಅಥವಾ ತಿಂಡಿ-ತಿನಿಸುಗಳ ಬೆಲೆ ಏರಿಕೆ ಮಾಡುವ ಅಗತ್ಯವಿರುತ್ತಿರಲಿಲ್ಲ. ಈಗ ಮಾಡಲು ಹೊರಟಿರುವ ಅತೀಯಾದ ಬೆಲೆ ಏರಿಕೆಯ ಪರಿಣಾಮವಾಗಿ ಕಾಫಿ, ಟೀ ಸೇರಿದಂತೆ ಹಾಲಿನಿಂದ ತಯಾರಾಗುವ ಎಲ್ಲಾ ಆಹಾರ ಮತ್ತು ಪಾನೀಯಗಳ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಲಿದೆ.’

ಇದನ್ನೂ ಓದಿ: ಕರ್ನಾಟಕದ ಜನತೆಗೆ ಬಿಗ್‌ ಶಾಕ್‌: ಹಾಲಿನ ದರ 8 ರೂ.ಹೆಚ್ಚಳಕ್ಕೆ ಸಂಪುಟ ತೀರ್ಮಾನ

‘ಇದಲ್ಲದೆ ಪೌಷ್ಠಿಕ ಆಹಾರವಾಗಿ ಉಪಯೋಗಿಸುವ ಜನಸಾಮಾನ್ಯರಿಗೆ, ಹಿರಿಯ ನಾಗರೀಕರಿಗೆ, ಗರ್ಭಿಣಿಯರಿಗೆ, ಮಕ್ಕಳಿಗೆ ಇದು ಬಹುದೊಡ್ಡ ಹೊಡೆತವಾಗಲಿದೆ. ನಮ್ಮ ಹೆಮ್ಮೆಯ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯನ್ನು ಸೀಮಿತಗೊಳಿಸಿ ಇನ್ನೂ ಹೆಚ್ಚು ಉಪಯೋಗಿಸಲು ಸರ್ಕಾರ ಪ್ರೋತ್ಸಾಹಿಸಬೇಕು.’

LIVE TV

ಜನಸಾಮಾನ್ಯರ ಬಗ್ಗೆ ಚಿಂತನ-ಮಂತನ ನಡೆಸುವುದು ಅಗತ್ಯ

‘ಸರ್ಕಾರ ಡೈರಿ ಉದ್ಯಮದ ಆಡಳಿತಾತ್ಮಕ ವೆಚ್ಚವನ್ನು ಹತೋಟಿಗೆ ತರುವುದರ ಜೊತೆಗೆ ರೈತರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಬೆಲೆ ಏರಿಕೆಯನ್ನು ಸೀಮಿತಗೊಳಿಸಬೇಕು. ಈ ರೀತಿಯ ದೊಡ್ಡ ಪ್ರಮಾಣದ ಬೆಲೆ ಏರಿಕೆ ಮಾಡುವಾಗ ಜನಸಾಮಾನ್ಯರ ಬಗ್ಗೆ ಚಿಂತನ-ಮಂತನ ನಡೆಸುವುದು ಕೂಡ ಅತ್ಯಗತ್ಯ.’

ಇದನ್ನೂ ಓದಿ: ರಾಜ್ಯದ ಹಾಲಿನ ಒಕ್ಕೂಟಗಳ ಪೈಕಿ ನಾಲ್ಕು ತಿಂಗಳಲ್ಲಿ ಬಮೂಲ್​ಗೆ ಅತಿ ಹೆಚ್ಚು ಲಾಭ! 5 ಒಕ್ಕೂಟಗಳಿಗೆ ತೀವ್ರ ನಷ್ಟ

‘ಹಾಲಿನ ದರ ಏರಿಕೆಯ ಜೊತೆಗೆ ಇತ್ತೀಚೆಗೆ ದಿನದಿಂದ ದಿನಕ್ಕೆ ಅಕ್ಕಿಯ ಬೆಲೆ ಹೆಚ್ಚಳವಾಗುತ್ತಿದೆ. ಇದು ನಿಯಂತ್ರಣಕ್ಕೆ ಬಾರದ ಕಾರಣ ಹೋಟೆಲ್​​ಗಳಲ್ಲಿ ಕಾಫಿ, ಟೀ, ತಿಂಡಿ-ತಿನಿಸುಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ’ ಎಂದು ಬೆಂಗಳೂರು ಹೋಟೆಲ್​​ ಮಾಲೀಕರ ಸಂಘ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:57 pm, Thu, 29 October 26

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More