ಹೆಣ್ಣೂರಿನಲ್ಲಿ ಬಾಲಕನ ಕಿಡ್ನಾಪ್ ಪ್ರಕರಣ; ಅಪಹರಣಕ್ಕೆ ಸಹಾಯ ಮಾಡಿದ್ದ ಮಹಿಳೆ ಅರೆಸ್ಟ್
ಮಂಗೀತಾ ಆರೋಪಿ ದುರ್ಗಾದೇವಿಗೆ 10 ಲಕ್ಷ ರೂ. ಕೊಡುತ್ತೇನೆ ಬಾಲಕನನ್ನ ಸುರಕ್ಷಿತವಾಗಿ ಇರಿಸುವಂತೆ ಹೇಳಿದ್ದಳು. ಅದರಂತೆ ದುರ್ಗಾದೇವಿ ಜಿಗಣಿಯಲ್ಲಿದ್ದ ಸಂಬಂಧಿ ಗೌರವ್ ಸಿಂಗ್ ಬಳಿ ಬಾಲಕನನ್ನ ಬಿಟ್ಟಿದ್ದಳು.

ಬೆಂಗಳೂರು: ಹೆಣ್ಣೂರಿನಲ್ಲಿ ನಡೆದ ಬಾಲಕನ ಕಿಡ್ನಾಪ್ (Kidnap) ಪ್ರಕರಣಕ್ಕೆ ಸಂಬಂಧಿಸಿ ಬಾಲಕನ ಅಪಹರಣಕ್ಕೆ ಸಹಾಯ ಮಾಡಿದ್ದ ಮಹಿಳೆ ದುರ್ಗಾದೇವಿಯನ್ನು ಅರೆಸ್ಟ್ ಮಾಡಲಾಗಿದೆ. ಬಿಹಾರ (Bihar) ಮೂಲದ ಮಂಗೀತಾ, ದುರ್ಗಾ ಇಬ್ಬರು ಸೇರಿ ಹೊರಮಾವಿನ ಬಳಿ ಧಮ್ಮದೀಪ್ ಎಂಬ ಬಾಲಕನನ್ನು ಕಿಡ್ನಾಪ್ ಮಾಡಿದ್ದರು. ಮಂಗೀತಾ ಆರೋಪಿ ದುರ್ಗಾದೇವಿಗೆ 10 ಲಕ್ಷ ರೂ. ಕೊಡುತ್ತೇನೆ ಬಾಲಕನನ್ನ ಸುರಕ್ಷಿತವಾಗಿ ಇರಿಸುವಂತೆ ಹೇಳಿದ್ದಳು. ಅದರಂತೆ ದುರ್ಗಾದೇವಿ ಜಿಗಣಿಯಲ್ಲಿದ್ದ ಸಂಬಂಧಿ ಗೌರವ್ ಸಿಂಗ್ ಬಳಿ ಬಾಲಕನನ್ನ ಬಿಟ್ಟಿದ್ದಳು.
ದುರ್ಗಾದೇವಿ ಗೌರವ್ ಸಿಂಗ್ಗೂ ಹಣ ನೀಡೋದಾಗಿ ದುರ್ಗಾದೇವಿ ಹೇಳಿದ್ದಳು. ಇದೀಗ ಪ್ರಕರಣ ಸಂಬಂಧ ಮಂಗಿತಾ, ಗೌರವ್ ಸಿಂಗ್ ಹಾಗೂ ದುರ್ಗಾದೇವಿಯನ್ನ ಬಂಧಿಸಲಾಗಿದೆ.
ಕೆಲವೇ ಗಂಟೆಗಳಲ್ಲಿ ಮಗು ರಕ್ಷಣೆ: ಜೂನ್ 8ರ ಸಂಜೆ 11 ವರ್ಷದ ಮಗು ಹೆಣ್ಣೂರಿನಿಂದ ಕಿಡ್ನ್ಯಾಪ್ ಆಗಿತ್ತು. ಕಿಡ್ನಾಪ್ ಆಗಿದ್ದ ಮಗು ಹೊರಮಾವು ನಿವಾಸಿಯಾಗಿರುವ ಬಿಎಂಟಿಸಿ ಚಾಲಕ ಸುಭಾಷ್ ಎಂಬುವವರ ಪುತ್ರ. ಕಿಡ್ನಾಪ್ ಮಾಡಿದ್ದ ಆರೋಪಿಗಳು ಪೋಷಕರಿಗೆ ಕರೆ ಮಾಡಿ ಸುಮಾರು 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಪೋಷಕರು ಅದೇ ದಿನ ರಾತ್ರಿ 9 ಗಂಟೆ ಹೊತ್ತಿಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಕೆಲವೇ ಗಂಟೆಗಳಲ್ಲಿ ಮಗುವನ್ನು ರಕ್ಷಿಸಿದ್ದರು.
ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳ ಫೋನ್ ನಂಬರ್ನ ಹೆಣ್ಣೂರು ಠಾಣೆ ಪೊಲೀಸರು ತಕ್ಷಣ ಟ್ರೇಸ್ ಮಾಡಿದ್ದರು. ಈ ವೇಳೆ ಜಿಗಣಿ ಬಳಿ ಫಾರ್ಮ್ಹೌಸ್ನಲ್ಲಿ ಮಗು ಜತೆ ಆರೋಪಿಗಳು ಇದ್ದರು. ಸಿನಿಮೀಯ ರೀತಿ ಕಾಂಪೌಂಡ್ ಹಾರಿ ಒಳ ನುಗ್ಗಿ ಮಗುವನ್ನು ರಕ್ಷಣೆ ಮಾಡಿದ್ದು, ನೇಪಾಳ ಮೂಲದ ಆರೋಪಿಯನ್ನ ಬಂಧಿಸಲಾಗಿದೆ.
ಸಾಲ ತೀರಿಸಲು ಕಿಡ್ನಾಪ್ಗೆ ಇಳಿದಿದ್ದ ಮಹಿಳೆಯರು: ಮಾಡಿದ್ದ ಸಾಲ ತೀರಿಸಲು ಮಹಿಳೆಯರು ಕಿಡ್ನಾಪ್ಗೆ ಇಳಿದಿದ್ದರು. ಈ ಹಿಂದೆ ಮಂಗೀತಾ ಬಾಲಕ ತಾಯಿ ಅಶ್ವಿನಿ ಫೋನ್ ಪಡೆದಿದ್ದಳು. ಮಂಗೀತಾ ಸುಭಾಷ್ ಮತ್ತು ಅಶ್ವಿನಿ ಮನೆ ಪಕ್ಕದಲ್ಲೇ ಇದ್ದಾರೆ. ಕರೆ ಮಾಡಬೇಕೆಂದು ಫೋನ್ ಪಡೆದಿದ್ದಳು. ಆಗ ತನ್ನ ನಂಬರ್ಗೆ ಡಯಲ್ ಮಾಡಿಕೊಂಡು ನಂಬರ್ ಪಡೆದಿದ್ದಾಳೆ. ನಂತರ ದುರ್ಗಾ ಹಾಗೂ ಪ್ರಿಯಕರ ಗೌರವ್ ಎಂಬಾತನ ಜೊತೆ ಸೇರಿ ಕಿಡ್ನಾಪ್ ಪ್ಲಾನ್ ಮಾಡಿದ್ದಳು. ವಜೂನ್ 7 ರಂದು ಮುಖ್ಯ ರಸ್ತೆವರೆಗೂ ಬಾಲಕನ ಕಳಿಸಿದ್ದಳು. ಅಲ್ಲಿಂದ ಸ್ವಿಮ್ಮಿಂಗ್ ಪೂಲ್ಗೆ ಅಂತಾ ದುರ್ಗಾ ಕರೆದೊಯ್ದಿದ್ದಳು. ಬಾಲಕನನ್ನು ಕಿಡ್ನಾಪ್ ಮಾಡಿ ಜಿಗಣಿ ಬಳಿಯ ಜೆ.ಆರ್ ಫಾರ್ಮ್ ಬಳಿ ಬಿಟ್ಟು ಬಂದಿದ್ದಳು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:33 am, Fri, 10 June 22








