ದೇಗುಲದ ಆಡಳಿತಾಧಿಕಾರಿಯಿಂದ ಮತ್ತೊಂದು ಯಡವಟ್ಟು ಆದೇಶ: ಮಲೆ ಮಾದಪ್ಪ ಭಕ್ತರಿಗೆ ಶಾಕ್
Male Mahadeshwara Area Development Authority: ಕೊರೊನಾ ಕಾರಣದಿಂದ ಮಾದಪ್ಪನ ಬೆಟ್ಟದಲ್ಲಿ ಮುಡಿ ಸೇವೆ ಸೇರಿದಂತೆ ಎಲ್ಲಾ ಸೇವೆಗಳು ಸ್ಥಗಿತಗೊಂಡಿದ್ದವು. ಭಕ್ತರಿಗೆ ಕೇವಲ ಮಾದಪ್ಪನ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಅನಧಿಕೃತವಾಗಿ ಮುಡಿ ತೆಗೆಯುತ್ತಿದ್ದವರಿಗೆ ಪ್ರಾಧಿಕಾರ ನೋಟಿಸ್ ನೀಡಿತ್ತು. ಇದರಿಂದ ಮುಡಿ ತೆಗೆಯುವುದನ್ನ ಸಂಪೂರ್ಣವಾಗಿ ನಿಲ್ಲಿಸಲಾಗಿದೆ.
ಚಾಮರಾಜನಗರ: ಯಾಕೋ ದೇವಸ್ಥಾನಗಳಿಗೂ, ಅಧಿಕಾರಿ ವರ್ಗಕ್ಕೂ ವಿವಾದದ ನಂಟು ಸಧ್ಯಕ್ಕೆ ಬಿಡುವಹಾಗೆ ಕಾಣುತ್ತಿಲ್ಲ. ಮುಜರಾಯಿ ಇಲಾಖೆಯಿಂದ ಬೇರ್ಪಟ್ಟು, ಸ್ವತಂತ್ರ ಪ್ರಾಧಿಕಾರ ಅಧೀನದಲ್ಲಿರುವ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದಿಂದ ಯಡವಟ್ಟು ನಡೆದಿದೆ. ಕರ್ನಾಟಕದ ದಕ್ಷಿಣ ತುದಿ ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮುಖ್ಯ ಶ್ರದ್ಧಾ ಭಕ್ತಿ ಕೇಂದ್ರ ಮಹದೇಶ್ವರ ಬೆಟ್ಟದ ದೇವಸ್ಥಾನದ ಮಲೆ ಮಹದೇಶ್ವರ ಸ್ವಾಮಿ ಭಕ್ತರಿಗೆ ಕಲ್ಚರಲ್ ಶಾಕ್ ನೀಡಿದ್ದಾರೆ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ.
ಮುಡಿ ಮಾಡಿಸಿಕೊಂಡು ಬರುವ ಭಕ್ತರಿಗೆ ಮಲೆ ಮಹದೇಶ್ವರ ಸ್ವಾಮಿ ದರ್ಶನಕ್ಕೆ ಅವಕಾಶ ಇಲ್ಲ! ಚಾಮರಾಜನಗರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ಮುಡಿ ಮಾಡಿಸಿಕೊಂಡು ಬರುವ ಭಕ್ತರಿಗೆ ಮಲೆ ಮಹದೇಶ್ವರ ಸ್ವಾಮಿ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಲೆಮಹದೇಶ್ವರ ಬೆಟ್ಟದ ಕಾರ್ಯದರ್ಶಿ ಜಯವಿಭವ ಸ್ವಾಮಿ ಆಜ್ಞೆ ಜಾರಿಗೆ ತಂದಿದ್ದಾರೆ. ಮುಡಿ ಮಾಡಿಸಿ ಕೊಂಡು ಬರುವ ಭಕ್ತರಿಗೆ ಮಾದಪ್ಪನ ದರ್ಶನ ಇಲ್ಲಾ ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಿಂದ ಅವೈಜ್ಞಾನಿಕ ಆದೇಶ ಪಾಸ್ ಮಾಡಿದ್ದಾರೆ.
ಕೊರೊನಾ ಕಾರಣದಿಂದ ಮಾದಪ್ಪನ ಬೆಟ್ಟದಲ್ಲಿ ಮುಡಿ ಸೇವೆ ಸೇರಿದಂತೆ ಎಲ್ಲಾ ಸೇವೆಗಳು ಸ್ಥಗಿತಗೊಂಡಿದ್ದವು. ಭಕ್ತರಿಗೆ ಕೇವಲ ಮಾದಪ್ಪನ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಭಕ್ತಾಧಿಗಳ ಒತ್ತಾಯಕ್ಕೆ ಹೆಚ್ಚು ಶುಲ್ಕ ಪಡೆದು ಕದ್ದು ಮುಚ್ಚಿ ಮುಡಿ ಸೇವೆ ಜಾರಿಯಲ್ಲಿತ್ತು. ಅನಧಿಕೃತವಾಗಿ ಮುಡಿ ತೆಗೆಯುತ್ತಿದ್ದವರಿಗೆ ಪ್ರಾಧಿಕಾರ ನೋಟಿಸ್ ನೀಡಿತ್ತು. ಇದರಿಂದ ಮುಡಿ ತೆಗೆಯುವುದನ್ನ ಸಂಪೂರ್ಣವಾಗಿ ನಿಲ್ಲಿಸಲಾಗಿದೆ.
ಆದರೆ ಪ್ರಾಧಿಕಾರದ ಹೊರ ಆವರಣ ಹಾಗೂ ಮಲೆಮಹದೇಶ್ವರ ಬೆಟ್ಟಕ್ಕೆ ಬರುವಾಗಲೇ ಬೇರೆ ಕಡೆಗಳಿಂದ ಮುಡಿ ಮಾಡಿಸಿಕೊಂಡು ಭಕ್ತರು ಮಲೆ ಮಹದೇಶ್ವರ ಸ್ವಾಮಿ ದರ್ಶನಕ್ಕೆ ಬರುತ್ತಿದ್ದಾರೆ. ಹೀಗೆ ಮುಡಿ ಮಾಡಿಸಿಕೊಂಡ ಬರುವ ಯಾರೇ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಒಳ ಆವರಣದಲ್ಲಿ ಇದೀಗ ಪ್ರವೇಶ ನಿಷೇಧಿಸಲಾಗಿದೆ. ಈ ಅವೈಜ್ಞಾನಿಕ ಆದೇಶಕ್ಕೆ ಭಕ್ತರು ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Also Read:
Temple Hundi | ದೇವಾಲಯದ ಹುಂಡಿ ಎಣಿಕೆ: ಒಂದೇ ತಿಂಗಳಲ್ಲಿ ಕೋಟ್ಯಾಧೀಶ್ವರನಾದ ನಂಜುಂಡೇಶ್ವರ, ಮಲೆ ಮಹದೇಶ್ವರ Also Read: ಜೂಜು ಅಡ್ಡೆಯಾಗಿರುವ ಮಲೆ ಮಹದೇಶ್ವರ ಬೆಟ್ಟ! ಅಕ್ರಮಕ್ಕೆ ಪೊಲೀಸರೇ ಸಾಥ್ ಕೊಟ್ಟಿರುವ ಶಂಕೆ
(no entry for pilgrims at Male Mahadeshwara Betta who got tonsure says Male Mahadeshwara Area Development Authority Secretary)
Published On - 10:47 am, Wed, 22 September 21