AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಗೆ ಆಗಮಿಸಿದ ದರ್ಶನ್​; ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರನ್ನ ಭೇಟಿ ಮಾಡಿ ಸಮಯ ಕಳೆದ್ರು ಡಿ ಬಾಸ್

ಹುಬ್ಬಳ್ಳಿಯಿಂದ ದಾವಣಗೆರೆಗೆ ಬಂದಿಳಿದ ದರ್ಶನ್ ಎಸ್​.ಎಸ್​​​.ಮಲ್ಲಿಕಾರ್ಜುನ ಮನೆಗೆ ಭೇಟಿ ನೀಡಿ ಅವರ ಜೊತೆ ಊಟ ಮಾಡಿ ಕೆಲ ಹೊತ್ತು ಹರಟೆ ಹೊಡೆದು ಸಮಯ ಕಳೆದು ರಿಲಾಕ್ಸ್ ಆಗಿದ್ದಾರೆ.

ದಾವಣಗೆರೆಗೆ ಆಗಮಿಸಿದ ದರ್ಶನ್​; ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರನ್ನ ಭೇಟಿ ಮಾಡಿ ಸಮಯ ಕಳೆದ್ರು ಡಿ ಬಾಸ್
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರನ್ನ ಭೇಟಿ ಮಾಡಿದ ನಟ ದರ್ಶನ್
ಆಯೇಷಾ ಬಾನು
| Updated By: Digi Tech Desk|

Updated on:Mar 02, 2021 | 9:19 AM

Share

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಗೆ ಡಿ ಬಾಸ್ ದರ್ಶನ್ ಭೇಟಿ ನೀಡಿದ್ದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿ ಅವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದಾರೆ. ಹೌದು ರಾಬಟ್ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದ ನಂತರ ದರ್ಶನ್ ಯೋಗೀಶ್‌ಗೌಡ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ವಿನಯ್ ಕುಲಕರ್ಣಿ ಅವರ ಮನೆಗೆ ಭೇಟಿ ನೀಡಿದ್ರು. ಈ ಭೇಟಿ ಬಳಿಕ ಡಿ ಬಾಸ್ ಮತ್ತೋರ್ವ ರಾಜಕಾರಣಿಯನ್ನು ಭೇಟಿ ಮಾಡಿದ್ದಾರೆ. ಹುಬ್ಬಳ್ಳಿಯಿಂದ ದಾವಣಗೆರೆಗೆ ಬಂದಿಳಿದ ದರ್ಶನ್ ಎಸ್​.ಎಸ್​​​.ಮಲ್ಲಿಕಾರ್ಜುನ ಮನೆಗೆ ಭೇಟಿ ನೀಡಿ ಅವರ ಜೊತೆ ಊಟ ಮಾಡಿ ಕೆಲ ಹೊತ್ತು ಹರಟೆ ಹೊಡೆದು ಸಮಯ ಕಳೆದು ರಿಲಾಕ್ಸ್ ಆಗಿದ್ದಾರೆ.

ಇನ್ನು ದರ್ಶನ್ ದಾವಣಗೆರೆಯ ಬಾಪೂಜಿ ಅತಿಥಿಗೃಹಕ್ಕೆ ಆಗಮಿಸಿ ಕೆಲವೊತ್ತು ಸಮಯ ಕೆಳೆದು ವಾಪಸ್ ಬೆಂಗಳೂರಿಗೆ ಮರಳಿದ್ದಾರೆ. ದರ್ಶನ್ ಜೊತೆ ವಿನೋದ್ ಪ್ರಭಾಕರ್ ಹಾಗೂ ಚಿಕ್ಕಣ್ಣ ಸೇರಿ ಹತ್ತಕ್ಕೂ ಹೆಚ್ಚು ಜನ ಚಿತ್ರರಂಗದ ಕಲಾವಿದರಿದ್ದರು. ಮಾಜಿ ಸಚಿವ ಎಸ್​ಎಸ್ ಮಲ್ಲಿಕಾರ್ಜುನ ಅವರಿಂದ ಆಗಮಿಸಿದ್ದ ನಟರಿಗೆ ಸನ್ಮಾನ ಮಾಡಲಾಗಿದೆ. ಯೋಗೀಶ್‌ಗೌಡ ಕೊಲೆ ಕೇಸ್‌ನಲ್ಲಿ ವಿನಯ್ ಕುಲಕರ್ಣಿ ಜೈಲುಪಾಲಾಗಿದ್ದು, ಚಿತ್ರ ನಟ ದರ್ಶನ್​ ಅವರು ನಗರದ ಶಿವಗಿರಿ ಬಡಾವಣೆಯಲ್ಲಿರುವ ಕುಲಕರ್ಣಿ ನಿವಾಸಕ್ಕೆ ಭಾನುವಾರ(ಫೆ.28) ತಡರಾತ್ರಿ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದರು.

ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶ್ ‌ಗೌಡ ಕೊಲೆ ಕೇಸ್‌ನಲ್ಲಿ ವಿನಯ್ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. ಡಿ ಬಾಸ್​ ದರ್ಶನ್​ ಭಾನುವಾರ ಬೆಳಗ್ಗೆಯೇ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಅದಕ್ಕಾಗಿ ಬೆಳಿಗ್ಗೆಯಿಂದ ಕುಲಕರ್ಣಿ ನಿವಾಸದ ಬಳಿ ಅಭಿಮಾನಿಗಳು ಕಾದು ಕುಳಿತಿದ್ದರು. ಆದ್ರೆ ತಡರಾತ್ರಿ ಭೇಟಿ ನೀಡಿದ ದರ್ಶನ್, ಕುಲಕರ್ಣಿ ಕುಟುಂಬದವರಿಗೆ ಧೈರ್ಯ ಹೇಳಿದರು.

Actor Darshan Meets Ex Minister SS Mallikarjuna

ನಟ ವಿನೋದ್ ಪ್ರಭಾಕರ್​ಗೆ ಸನ್ಮಾನ ಮಾಡಿದ ಮಾಜಿ ಸಚಿವ ಎಸ್​ಎಸ್ ಮಲ್ಲಿಕಾರ್ಜುನ

Actor Darshan Meets Ex Minister SS Mallikarjuna

ಇದನ್ನೂ ಓದಿ: ಯೋಗೀಶ್‌ಗೌಡ ಕೊಲೆ ಕೇಸ್‌ನಲ್ಲಿ ವಿನಯ್‌ಗೆ ಜೈಲು: ವಿನಯ್ ಕುಲಕರ್ಣಿ ನಿವಾಸಕ್ಕೆ ನಟ ದರ್ಶನ್ ಭೇಟಿ

‘ಯಜಮಾನ’ನಿಗೆ ಅಭಿಮಾನಿಯಿಂದ ವಿಶೇಷ ಉಡುಗೊರೆ​: ಪ್ರಾಣಿಪ್ರಿಯ D ಬಾಸ್​ಗೆ​ ಟಗರು ಗಿಫ್ಟ್ ಮಾಡಿದ ಫ್ಯಾನ್​!

Published On - 7:40 am, Tue, 2 March 21