ಜನ್ಮ ನೀಡಿದ ತಂದೆಯಿಂದಲೇ ಹೆಣ್ಣು ಮಗು ಹತ್ಯೆ ಆರೋಪ; ಅಪ್ಪ ಮತ್ತು ಚಿಕ್ಕಪ್ಪನನ್ನು ರಸ್ತೆಗೆ ಎಳೆದು ಥಳಿಸಿದ ಸ್ಥಳೀಯರು

ದಾವಣಗೆರೆ ಜಿಲ್ಲೆಯ ಭಾಷಾ ನಗರದ ಅಖ್ತರ್ ರಜಾ ವೃತ್ತದ ಬಳಿ ಇರುವ ಮನೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಮನ್ಸೂರ್ ಎಂಬಾತ ತನ್ನ ಮಗುವನ್ನು ಹತ್ಯೆ ಮಾಡಿದ್ದಾನೆ. ಈ ಘಟನೆ ನಡೆದು ಮೂರು ತಿಂಗಳ ಬಳಿಕ ವಿಷಯ ಬೆಳಕಿಗೆ ಬಂದಿದೆ. ಸ್ಥಳೀಯರು ಸೇರಿ ತಂದೆ ಮನ್ಸೂರ್ ಹಾಗೂ ಮಗುವಿನ ಚಿಕ್ಕಪ್ಪ ಮೈನುದ್ದೀನ್ ಅವರನ್ನು ರಸ್ತೆಗೆ ಎಳೆದು ತಂದು ಥಳಿಸಿದ್ದಾರೆ.

ಜನ್ಮ ನೀಡಿದ ತಂದೆಯಿಂದಲೇ ಹೆಣ್ಣು ಮಗು ಹತ್ಯೆ ಆರೋಪ; ಅಪ್ಪ ಮತ್ತು ಚಿಕ್ಕಪ್ಪನನ್ನು ರಸ್ತೆಗೆ ಎಳೆದು ಥಳಿಸಿದ ಸ್ಥಳೀಯರು
ಮನ್ಸೂರ್
Follow us
TV9 Web
| Updated By: preethi shettigar

Updated on: Dec 20, 2021 | 2:25 PM

ದಾವಣಗೆರೆ: ತಾಯಿ, ತಂಗಿ, ಹೆಂಡತಿ ಹೀಗೆ ಹೆಣ್ಣಿನಲ್ಲಿ ದೇವತೆಯನ್ನು ಕಾಣುವ ಭೂಮಿ ಇದು. ಇಂತಹ ಭೂಮಿಯಲ್ಲಿ ಹೆಣ್ಣು ಶಿಶು ಹತ್ಯೆ ಇಂದು ನಿನ್ನೆಯದಲ್ಲ. ಗಂಡು ವಂಶೋದ್ಧಾರಕ ಎನ್ನುತ್ತಾರೆ. ಅದೇ ಹೆಣ್ಣು ಹುಟ್ಟಿದರೆ ಭಾರ ಎಂದುಕೊಳ್ಳುತ್ತಾರೆ. ಹೆಣ್ಣು ಮಾಡೆಲಿಂಗ್​ ಕ್ಷೇತ್ರದಿಂದ ಹಿಡಿದು ಪೈಲಟ್​ ಆಗುವವರೆಗೆ ಎಲ್ಲಾ ಕ್ಷೇತ್ರದಲ್ಲಿ ದಾಪುಗಾಲಿಟ್ಟರೂ ಈ ಮನಸ್ಥಿತಿ ಇನ್ನು ಬದಲಾಗಿಲ್ಲ. ಇಂತಹ ಮನಸ್ಥಿತಿಗೆ ಇನ್ನೊಂದು ಸಾಕ್ಷಿ ಎಂಬಂತೆ ದಾವಣಗೆರೆಯಲ್ಲಿ ತಂದೆಯೇ ಮಗುವನ್ನು ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ತನಗೆ ಮತ್ತೆ ಹೆಣ್ಣು ಮಗು ಹುಟ್ಟಿದೆ ಎಂದು ಹೆಣ್ಣು ಹಸುಗೂಸನ್ನು ತನ್ನ ತಮ್ಮನ ಜತೆಗೂಡಿ ಕಟ್ಟಡದ ಮೇಲಿಂದ ಕೆಳಗೆ ಹಾಕಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ದಾವಣಗೆರೆ ಜಿಲ್ಲೆಯ ಭಾಷಾ ನಗರದ ಅಖ್ತರ್ ರಜಾ ವೃತ್ತದ ಬಳಿ ಇರುವ ಮನೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಮನ್ಸೂರ್ ಎಂಬಾತ ತನ್ನ ಮಗುವನ್ನು ಹತ್ಯೆ ಮಾಡಿದ್ದಾನೆ. ಈ ಘಟನೆ ನಡೆದು ಮೂರು ತಿಂಗಳ ಬಳಿಕ ವಿಷಯ ಬೆಳಕಿಗೆ ಬಂದಿದೆ. ಸ್ಥಳೀಯರು ಸೇರಿ ತಂದೆ ಮನ್ಸೂರ್ ಹಾಗೂ ಮಗುವಿನ ಚಿಕ್ಕಪ್ಪ ಮೈನುದ್ದೀನ್ ಅವರನ್ನು ರಸ್ತೆಗೆ ಎಳೆದು ತಂದು ಥಳಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಆದರೆ ಮಗುವನ್ನು ಕೊಂದ ಕಾರಣಕ್ಕೆ ಹಲ್ಲೆ ಮಾಡಿ ಸಮಾಜದ ಮುಖಂಡರಿಗೆ ಒಪ್ಪಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ಮಗುವಿನ ತಂದೆ ಮನ್ಸೂರ್ ಹಾಗೂ ಚಿಕ್ಕಪ್ಪ ಮೈನುದ್ದೀನ್ ಅವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಇಲ್ಲಿನ ಆಜಾದ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಅವರು ಮಗುವಿನ ಹತ್ಯೆ ಮಾಡಿರುವ ಬಗ್ಗೆ ಇನ್ನೂ ತನಿಖೆ ನಡೆಯಬೇಕಿದೆ. ಒಟ್ಟಾರೆ ತನಿಖೆಯ ನಂತವಷ್ಟೇ ನಿಜಾಂಶ ಬಯಲಾಗಬೇಕಿದೆ.

ನನಗೂ ಹೆಣ್ಣು ಮಕ್ಕಳಿದ್ದಾರೆ. ನಾನು ಮಣಿಪಾಲ ಆಸ್ಪತ್ರೆಯಲ್ಲಿ ನಾಲ್ಕು ಲಕ್ಷ ರೂಪಾಯಿ ವೆಚ್ಚ ಮಾಡಿ ಚಿಕಿತ್ಸೆ ಕೊಡಿಸಿರುವೆ. ಮಗುವಿಗೆ ಮದುಳಿಗೆ ತೊಂದರೆ ಆಗಿತ್ತು. ಅದು ಸಹೋದರ ಪತ್ನಿಯ ಮನೆಯಲ್ಲಿ ಆದ ಘಟನೆ. ಆದರೆ ನಾವು ಈಗ ಮಗು ಹತ್ಯೆ ಮಾಡಿದ್ದೇವೆ ಎಂಬ ಆರೋಪ ಮಾಡಲಾಗುತ್ತಿದೆ. ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ.‌ ನನ್ನ ಸಹೋದರ ಸಾವು ಬದುಕಿನೊಂದಿಗೆ ಆಸ್ಪತ್ರೆ ಸೇರಿದ್ದಾನೆ. ಉದ್ದೇಶ ಪೂರ್ವಕವಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಮಗುವಿನ ಚಿಕ್ಕಪ್ಪ ಮೈನುದ್ದೀನ್ ಹೇಳಿದ್ದಾರೆ.

ಇದನ್ನೂ ಓದಿ:

ಪಾಲಿಕೆ ಆಯುಕ್ತ, ಅಧಿಕಾರಿಗಳು ಎಂದು ಹೇಳಿದರೂ ಹಲ್ಲೆ ಮಾಡಿದ ರೌಡಿಶೀಟರ್ ಮತ್ತವನ ಸಹಚರರು! ಕಾರಣವೇನು?

ಉಪ್ಪಿನಂಗಡಿ: ಇಬ್ಬರು ಯುವಕರ ಮೇಲೆ ತಲವಾರಿನಿಂದ ಹಲ್ಲೆ ಪ್ರಕರಣ, ಹಲ್ಲೆಕೋರರ ಬಂಧನ ಖಂಡಿಸಿ ಠಾಣೆಗೆ ಮುತ್ತಿಗೆ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?