ನ್ಯಾಯ ಸಿಗದ ಹಿನ್ನೆಲೆ ಪರಿಸರ ಪ್ರೇಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಾಚಾರಿ ನೇಣಿಗೆ ಶರಣು

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಾಚಾರಿ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದರು. ಅದರಂತೆಯೇ ನ್ಯಾಯ ಸಿಗದ ಹಿನ್ನೆಲೆ ಇಂದು ನೇಣಿಗೆ ಶರಣಾಗಿದ್ದಾರೆ.

ನ್ಯಾಯ ಸಿಗದ ಹಿನ್ನೆಲೆ ಪರಿಸರ ಪ್ರೇಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಾಚಾರಿ ನೇಣಿಗೆ ಶರಣು
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಾಚಾರಿ
Follow us
TV9 Web
| Updated By: ಆಯೇಷಾ ಬಾನು

Updated on:Sep 20, 2022 | 11:09 AM

ದಾವಣಗೆರೆ: ಜನರಿಗೆ ಪಡಿತರ ವಿತರಣೆಯಲ್ಲಿ ಗೋಲ್ ಮಾಲ್ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ನ್ಯಾಯ ಸಿಗದ ಹಿನ್ನೆಲೆ ಪರಿಸರ ಪ್ರೇಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಾಚಾರಿ(68) ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ‌ ಮಿಡ್ಲಕಟ್ಟೆ ಗ್ರಾಮದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜನರಿಗೆ ಅಕ್ಕಿ ವಿತರಿಸದೇ ನ್ಯಾಯಬೆಲೆ ಅಂಗಡಿವನಿಂದ ವಂಚನೆ ಆಗುತ್ತಿದ್ದು ಅಂಗಡಿ ಮಾಲೀಕನ ಜೊತೆ ವೀರಾಚಾರಿ ಹೋರಾಟಕ್ಕೆ ಮುಂದಾಗಿದ್ದರು. ಈ ವೇಳೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದರು. ಅದರಂತೆಯೇ ನ್ಯಾಯ ಸಿಗದ ಹಿನ್ನೆಲೆ ಇಂದು ನೇಣಿಗೆ ಶರಣಾಗಿದ್ದಾರೆ.

ರಸ್ತೆ ಬಂದ್ ಡಿಸಿ ಸ್ಥಳಕ್ಕೆ ಬರುವಂತೆ ಆಗ್ರಹ

ವೀರಾಚಾರಿ ಸಾವಿನ ಹಿನ್ನೆಲೆ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮದ ರಸ್ತೆ ಬಂದ್ ಮಾಡಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವಂತೆ ಆಗ್ರಹಿಸಿದ್ದಾರೆ. ಸದ್ಯ ಸ್ಥಳಕ್ಕೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಆಗಮಿಸಿದ್ದಾರೆ.

ವೀರಾಚಾರಿ ಯಾವುದೇ ಸಭೆ ಸಮಾರಂಭ ಇರಲಿ ನಾಲ್ಕು ಸಸಿಗಳನ್ನ ಹಿಡಿದುಕೊಂಡು ಹಾಜರಾಗುತ್ತಿದ್ದರು. ಬೆಳಗಾದ್ರೆ ಪರಿಸರ ಜಾಗೃತಿ. ಸಾವಿರಾರು ಮರಗಳನ್ನ ಮಕ್ಕಳಂತೆ ಬೆಳಿಸಿದ್ದ ಆ ಅಪರೂಪದ ವ್ಯಕ್ತಿ. ಇದೇ ಕಾರಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು ಸರ್ಕಾರ. ಇಂತಹ ಅಪರೂಪದ ವ್ಯಕ್ತಿ ಹಗಲು ರಾತ್ರಿ ಶ್ರಮ ಪಟ್ಟು ಬೆಳಸಿದ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಇದಕ್ಕೆ ಇಡಿ ಜಿಲ್ಲೆಯೇ ಬೆಚ್ಚಿ ಬಿದ್ದಿದೆ.

ಕಳೆದ ನಾಲ್ಕು ದಶಕಗಳಿಂದ ಸಾವಿರಾರು ಮರಗಳನ್ನ ಬೆಳೆಸಿದ್ದಾರೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹ ಪರಿಸರ ಪ್ರೇಮಿ ವೀರಾಚಾರಿ ಅವರು ಇಂದು ತಾವು ಬೆಳೆಸಿದ ಮರಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ. ಇದು ನಡೆದಿದ್ದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಿಡ್ಲಕಟ್ಟೆ ಗ್ರಾಮದಲ್ಲಿ. ವೀರಾಚಾರಿ ಅವರ ಸ್ವಗ್ರಾಮ ಮಿಡ್ಲಕಟ್ಟೆ. ಜೀವನ ನಿರ್ವಹಣೆಗೊಂಡು ಗೂಡ್ಸ್ ಆಟೋ ಮಾಡಿಕೊಂಡಿದ್ದು ಅದರಲ್ಲಿಯೇ ಹತ್ತಾರು ಜಾತಿಯ ಸಸಿಗಳನ್ನ ಇಟ್ಟುಕೊಂಡು ತನ್ನ ಜೀವನ ನಿರ್ವಹಣೆ ಜೊತೆ ಪರಿಹಾರ ಕೆಲ್ಸ ಮಾಡುತ್ತಿದ್ದರು. ಹೀಗಾಗಿ ಇಂದು ಇಡಿ ಮಿಡ್ಲಕಟ್ಟೆ ಗ್ರಾಮದಲ್ಲಿ ಬಿಗುವಿನ ವಾತಾರವಣ. ವೀರಾಚಾರಿ ಸಾವಿನಿಂದ ರೊಚ್ಚಿಗೆದ್ದ ಜನ ರಸ್ತೆ ಬಂದ್ ಮಾಡಿದ್ದರು. ವೀರಾಚಾರ ಆತ್ಮಹತ್ಯೆ ಮಾಡಿಕೊಳ್ಳಲು ಇಲ್ಲಿನ ನ್ಯಾಯ ಬೆಲೆ ಅಂಗಡಿಯಗ್ರಾಮಸ್ಥರು ಆತನ ಮನೆಗೆ ನುಗ್ಗಲು ಯತ್ನಿಸಿದರು. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.

ವೀರಾಚಾರಿ ಅಭಿಮಾನಿಗಳು ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು. ಹೀಗೆ ನೇಣಿಗೆ ಶರಣಾಗಲು ಕಾರಣ ಗ್ರಾಮದಲ್ಲಿ ರೇಷನ್ ನೀಡುವ ನ್ಯಾಯ ಬೆಲೆ ಅಂಗಡಿ. ನ್ಯಾಯ ಬೆಲೆ ಅಂಗಡಿಯಲ್ಲಿ ಅವ್ಯವಹಾರ ನಡೆಯುತ್ತಿದೆ. ಜನರಿಗೆ ಸರಿಯಾಗಿ ಅಕ್ಕಿ ನೀಡುತ್ತಿಲ್ಲ. ಎಲ್ಲ ಗೋಲ್ ಮಾಲ್ ಮಾಡಲಾಗುತ್ತಿದೆ. ಇದೇ ವಿಚಾರ ಇಟ್ಟುಕೊಂಡು ಹತ್ತಾರು ಕಡೆ ದೂರು ನೀಡುತ್ತಿದ್ದ. ವೀರಾಚಾರಿಯ ಕೂಗಾಟಕ್ಕೆ ಅಧಿಕಾರಿಗಳು ನಕ್ಕು ಸುಮ್ಮನಾಗುತ್ತಿದ್ದರು. ಅವರು ಸೂಕ್ತ ಕ್ರಮ ಕೈಗೊಂಡಿದ್ದರೇ ಇಂದು ವೀರಾಚಾರಿ ಸಾವನ್ನಪ್ಪುತ್ತಿರಲಿಲ್ಲ. ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ. ನ್ಯಾಯ ಸಿಗದಿದ್ದರೇ ನೇಣಿಗೆ ಶರಣಾಗುತ್ತೇನೆ ಎಂದು ಹೇಳುತ್ತಲೇ ಇದ್ದರು ವೀರಾಚಾರಿ. ಆ ಆಡಿಯೋ ಈಗ ವೈರಲ್ ಆಗುತ್ತಿದೆ. ವೀರಾಚಾರಿ ಹೋರಾಟಕ್ಕೆ ನ್ಯಾಯಸಿಗಲ್ಲ. ಅಂದುಕೊಂಡಂತೆ ನೇಣಿಗೆ ಶರಣಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವೀರಾಚಾರ ಸಂಬಂಧಿಕರು ಕನಿಷ್ಟು ಮೂರು ಸಾವಿರಕ್ಕೂ ಹೆಚ್ಚು ಮರಗಳನ್ನ ನಾಲ್ಕು ದಶಕಗಳಿಂದ ಮಕ್ಕಳಂತೆ ಬೆಳೆಸಿದ ವೀರಾಚಾರದಲ್ಲಿ ಗ್ರಾಮದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಲೇ ಇದ್ದರು. ಗಿಡ ಮರಗಳನ್ನ ಬೆಳಸಿ ಜನ ಆರೋಗ್ಯದ ಬಗ್ಗೆ ಗಮನ ಹರಿಸಿದ್ದ ವೀರಾಚಾರಿ ಕಣ್ಣು ಮುಂದೇ ನಡೆಯುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟ ಮಾಡಿ ಸೋತು ಸಾವನ್ನಪ್ಪಿದ್ದು ದುರಂತವೇ ಸರಿ.

ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:12 am, Tue, 20 September 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?