AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ ಏರಿಕೆ ಚರ್ಚೆ ಬೆನ್ನಲ್ಲೇ ಹಾಲಿನ ಕ್ವಾಲಿಟಿ ಚೆಕ್​​ಗೆ ಮುಂದಾದ FSSAI: ರಾಜ್ಯಾದ್ಯಂತ ಹಾಲಿನ ಉತ್ಪನ್ನಗಳ ಸ್ಯಾಂಪಲ್ ಸಂಗ್ರಹ

ಕರ್ನಾಟಕದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಎಫ್​​​ಎಸ್​​ಎಸ್​ಎಐ ಮುಂದಾಗಿದೆ. ನಂದಿನಿ ಹಾಲಿನ ದರ ಏರಿಕೆ ಚರ್ಚೆಯ ನಡುವೆ, ರಾಜ್ಯಾದ್ಯಂತ ಪನ್ನೀರ್, ಹಾಲಿನ ಪುಡಿ ಸೇರಿದಂತೆ ಎಲ್ಲ ಡೈರಿ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಂದೇ ವೇಳೆ ಮಾನದಂಡ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

ದರ ಏರಿಕೆ ಚರ್ಚೆ ಬೆನ್ನಲ್ಲೇ ಹಾಲಿನ ಕ್ವಾಲಿಟಿ ಚೆಕ್​​ಗೆ ಮುಂದಾದ FSSAI: ರಾಜ್ಯಾದ್ಯಂತ ಹಾಲಿನ ಉತ್ಪನ್ನಗಳ ಸ್ಯಾಂಪಲ್ ಸಂಗ್ರಹ
ಹಾಲು Image Credit source: tv9 kannada
ವಿನಯ್​ ಕಾಶಪ್ಪನವರ್​
| Edited By: |

Updated on: Sep 26, 2026 | 3:16 PM

Share

ಬೆಂಗಳೂರು, ಸೆಪ್ಟೆಂಬರ್​​ 26: ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ಆದ ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ಸಜ್ಜಾಗಿದೆ. ಪ್ರತೀ ಲೀಟರ್‌ಗೆ ಬರೋಬ್ಬರಿ 10 ರೂ ಏರಿಕೆಗೆ ಒಕ್ಕೂಟ ಆಗ್ರಹಿಸಿದೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆ ಬೆನ್ನಲ್ಲೇ ಇತ್ತ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್​​​ಎಸ್​​ಎಸ್​ಎಐ) ಹಾಲಿನ ಕ್ವಾಲಿಟಿ ಚೆಕ್​ಗೆ ಮುಂದಾಗಿದೆ.

ಹಾಲಿನ ಗುಣಮಟ್ಟದ ಮೇಲೂ ಎಫ್​​​ಎಸ್​​ಎಸ್​ಎಐ ಇಲಾಖೆ ಕಣ್ಣು

ಹಾಲಿನ ದರ ಏರಿಕೆ ಚರ್ಚೆ ನಡುವೆಯೇ ಗುಣಮಟ್ಟದ ಮೇಲೂ ಎಫ್​​​ಎಸ್​​ಎಸ್​ಎಐ ಇಲಾಖೆ ಕಣ್ಣಿಟ್ಟಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟ, ಸಂಯೋಜನೆ, ಲೇಬಲಿಂಗ್ ಸೇರಿದಂತೆ ಅಗತ್ಯ ಮಾನದಂಡಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಬೆಂಗಳೂರು ಸೇರಿ ರಾಜ್ಯಾದ್ಯಂತ ಹಾಲಿನ ಉತ್ಪನ್ನಗಳ ಸ್ಯಾಂಪಲ್ ಸಂಗ್ರಹ

ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಹಾಲು ಹಾಗೂ ಹಾಲಿನ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಇಲಾಖೆ ಮುಂದಾಗಿದ್ದು,  ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಾಲಿನ ಉತ್ಪನ್ನಗಳ ಸ್ಯಾಂಪಲ್ ಸಂಗ್ರಹಿಸಲಾಗಿದೆ.  ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹಾಲಿನ ಉತ್ಪನ್ನಗಳಾದ ಹಾಲಿನ ಪೌಡರ್, ಪನ್ನೀರ್ ಸೇರಿದಂತೆ ವಿವಿಧ ಉತ್ಪನ್ನಗಳ ಮಾದರಿ ಸಂಗ್ರಹಿಸಿ ಲ್ಯಾಬ್ ಟೆಸ್ಟ್‌ಗೆ ಕಳುಹಿಸಲು ಸಿದ್ಧತೆ ನಡೆದಿದೆ.

ಇದನ್ನೂ ಓದಿ: ಕರ್ನಾಟಕದ ಜನತೆಗೆ ಮತ್ತೊಂದು ದರ ಏರಿಕೆ ಬರೆ: ನಂದಿನಿ ಹಾಲಿನ ದರ ಹೆಚ್ಚಳ ಬಹುತೇಕ ಖಚಿತ

ಆಹಾರ ಸುರಕ್ಷತಾ ಅಧಿಕಾರಿಗಳು ಸಂಗ್ರಹಿಸಿರುವ ಮಾದರಿಯನ್ನು ಪ್ರಯೋಗಾಲಯದಲ್ಲಿ ಗುಣಮಟ್ಟ ಹಾಗೂ ಆಹಾರ ಸುರಕ್ಷತಾ ಮಾನದಂಡಗಳ ಪಾಲನೆ ಬಗ್ಗೆ ಪರಿಶೀಲನೆ ನಡೆಯಲಿದೆ. ಇನ್ನು ಅಂಗನವಾಡಿಗಳಿಗೆ ಸರಬರಾಜು ಆಗುವ ಪೌಡರ್, ಪನ್ನೀರ್ ಗುಣಮಟ್ಟದ ಮೇಲೂ ನಿಗಾ ಇಡಲಾಗುತ್ತಿದೆ. ಹಾಲಿನಿಂದಲೇ ತಯಾರಾದ ಪನ್ನೀರಾ ಅಥವಾ ಹಾಲಿನ ಅಂಶವಿಲ್ಲದ ಪದಾರ್ಥ ಬಳಸಿ ತಯಾರಿಸಲಾಗಿದೆಯೇ ಎಂಬುವುದರ ಕುರಿತು FSSAI ಪರೀಕ್ಷೆ ನಡೆಸುತ್ತಿದೆ. ಒಂದೇ ವೇಳೆ ಲ್ಯಾಬ್ ವರದಿಯಲ್ಲಿ ಮಾನದಂಡ ಉಲ್ಲಂಘನೆ ಕಂಡು ಬಂದರೆ ಕ್ರಮಕೈಗೊಳ್ಳಲಾಗುತ್ತದೆ.

ರಾಜ್ಯದಾದ್ಯಂತ ಹಾಲಿನ ಡೇರಿ ತಪಾಸಣೆಗೆ ಮುಂದಾದ ಆಹಾರ ಸುರಕ್ಷತಾ ಇಲಾಖೆ

ಇನ್ನು ರಾಜ್ಯದಾದ್ಯಂತ ಹಾಲಿನ ಡೇರಿ ತಪಾಸಣೆಗೆ ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ. ಹಾಲಿನ ಗುಣಮಟ್ಟ ಪರಿಶೀಲನೆಗೆ ರಾಜ್ಯದಲ್ಲಿ 23 ವಿಶೇಷ ತಂಡಗಳ ರಚನೆ ಮಾಡಲಾಗಿದೆ. ಡೇರಿಗಳು, ಹಾಲು ಸಂಗ್ರಹ ಕೇಂದ್ರಗಳು ಹಾಗೂ ಹಾಲಿನ ಉತ್ಪನ್ನಗಳ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

LIVE TV

ಹಾಲಿನಲ್ಲಿ ಕಲಬೆರಕೆ ಹಾಗೂ ಗುಣಮಟ್ಟದ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆ ಇಲಾಖೆ ಅಲರ್ಟ್ ಆಗಿದೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುತ್ತಿರುವ ಹಾಲಿನ ಮೇಲೂ ತೀವ್ರ ನಿಗಾ ಇಡಲಾಗಿದೆ. ಆ ಮೂಲಕ ಜನರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಹಾಲು ಸಿಗುವಂತೆ ಆಹಾರ ಸುರಕ್ಷತಾ ಇಲಾಖೆ ಕ್ರಮಕ್ಕೆ ಮುಂದಾಗಿದೆ.

ಇದನ್ನೂ ಓದಿ: ಹಾಲು, ನಂದಿನಿ ಉತ್ಪನ್ನಗಳ ದರ ಏರಿಕೆಯ ಸುಳಿವು ನೀಡಿದ ಬಮುಲ್​ ಅಧ್ಯಕ್ಷ ಡಿ.ಕೆ.ಸುರೇಶ್

ಇನ್ನು ಹಾಲು, ಪನ್ನೀರ್, ಹಾಲಿನ ಪೌಡರ್ ಸೇರಿದಂತೆ ಉತ್ಪನ್ನಗಳ ಮಾದರಿ ಸಂಗ್ರಹಿಸಿ ಲ್ಯಾಬ್ ಪರೀಕ್ಷೆ ಮಾಡಲಾಗುವುದು. ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More