ದೇವರ ವಿಗ್ರಹಗಳ ವಿರೂಪ ಗೊಳಿಸಿದ್ದ ಆರೋಪಿಗಳು ಸೆರೆ; ಇದು ಅನ್ಯಧರ್ಮದವರು ಮಾಡಿರುವ ಕೆಲಸವಲ್ಲ ಎಂದು ಸ್ಪಷ್ಟ ಪಡಿಸಿದ ಪೊಲೀಸ್ ವರಿಷ್ಠಾಧಿಕಾರಿ
ಈ ಐವರು ಪ್ರತಿನಿತ್ಯ ಕಲ್ಯಾಣಿಯಲ್ಲಿ ಈಜಲು ಬರುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಈಜಾಡಿ ಸಿಗರೇಟ್ ಸೇದುತ್ತಿದ್ದ ಸಂದರ್ಭದಲ್ಲಿ ಯುವಕರನ್ನು ವಿಗ್ರಹ ಕೆತ್ತನೆ ಮಾಡುತ್ತಿದ್ದ ಕೆಲಸಗಾರರು ಪ್ರಶ್ನೆ ಮಾಡಿದ್ದರು. ಅಲ್ಲದೆ ಕಲ್ಯಾಣಿಯಲ್ಲಿ ಈಜಾಡಬೇಡಿ ಎಂದಿದ್ದಕ್ಕೆ ಯುವಕರು ಕೋಪಗೊಂಡಿದ್ದರು.
ಹಾಸನ: ಅರಸೀಕೆರೆ ತಾಲೂಕಿನ, ಮಾಲೇಕಲ್ಲು ತಿರುಪತಿ ದೇವಸ್ಥಾನ ಬಳಿ ಹಿಂದೂ ದೇವರ ವಿಗ್ರಹಗಳ ವಿರೂಪ ಪ್ರಕರಣಕ್ಕೆ ಸಂಬಂಧಿಸಿ ವಿಗ್ರಹಗಳಿಗೆ ಹಾನಿಯುಂಟು ಮಾಡಿದ್ದ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಇಬ್ಬರು ಕಾನೂನಿನ ಜೊತೆ ಸಂಘರ್ಷಕ್ಕೆ ಒಳಗಾದ ಬಾಲಕರು ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಈ ಐವರು ಪ್ರತಿನಿತ್ಯ ಕಲ್ಯಾಣಿಯಲ್ಲಿ ಈಜಲು ಬರುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಈಜಾಡಿ ಸಿಗರೇಟ್ ಸೇದುತ್ತಿದ್ದ ಸಂದರ್ಭದಲ್ಲಿ ಯುವಕರನ್ನು ವಿಗ್ರಹ ಕೆತ್ತನೆ ಮಾಡುತ್ತಿದ್ದ ಕೆಲಸಗಾರರು ಪ್ರಶ್ನೆ ಮಾಡಿದ್ದರು. ಅಲ್ಲದೆ ಕಲ್ಯಾಣಿಯಲ್ಲಿ ಈಜಾಡಬೇಡಿ ಎಂದಿದ್ದಕ್ಕೆ ಯುವಕರು ಕೋಪಗೊಂಡಿದ್ದರು. ಇದೇ ದ್ವೇಷದಿಂದ ಕೆಲಸಗಾರರು ಊಟಕ್ಕೆ ಹೋಗಿದ್ದ ವೇಳೆ, ಯಾರೂ ಇಲ್ಲದ ಸಂದರ್ಭದಲ್ಲಿ ವಿಗ್ರಹಗಳನ್ನು ಹಾನಿ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇದು ಅನ್ಯಧರ್ಮದ ಕೋಮಿನವರು ಮಾಡಿರುವ ಕೆಲಸವಲ್ಲ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ಗೌಡ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸೌತ್ ಚಿತ್ರಗಳ ಎದುರು ಶೋ ಕಳೆದುಕೊಂಡ ‘ಸಾಮ್ರಾಟ್ ಪೃಥ್ವಿರಾಜ್’? ‘ವಿಕ್ರಮ್’, ‘ಮೇಜರ್’ ಮೇಲುಗೈ
ಜಿಹಾದಿ ಮನಸ್ಥಿತಿಯುಳ್ಳ ಮತಾಂಧರು ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್-ಭಜರಂಗದಳದ ಕಾರ್ಯಕರ್ತರು ಶನಿವಾರ ಅರಸೀಕೆರೆ ಬಂದ್ಗೆ ಕರೆ ಕೊಟ್ಟಿದ್ದರು. ಸದ್ಯ ಕೃತ್ಯದ ಸತ್ಯ ಬಯಲಾಗಿದೆ. ಕಿಡಿಗೇಡಿಗಳು ಒಟ್ಟು 13 ಮೂರ್ತಿ ಭಗ್ನಗೊಳಿಸಿದ್ದಾರೆ. ದೇಗುಲದ ಆವರಣದಲ್ಲಿ ಶ್ರೀನಿವಾಸ ಕಲ್ಯಾಣ ಶಿಲ್ಪ ರೂಪಕ ಮ್ಯೂಸಿಯಂಗಾಗಿ ಮೂರ್ತಿಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು.
ಘಟನೆ ಹಿನ್ನೆಲೆ ರಾಜ್ಯದಲ್ಲಿ ಇತ್ತೀಚಿಗೆ ಕೆಲ ದಿನಗಳಿಂದ ಧರ್ಮ ದಂಗಲ್ ಶುರುವಾಗಿದೆ. ಹಿಜಾಬ್ ನಿಂದ ಆರಂಭಗೊಂಡ ಹಿಂದೂ ಮುಸ್ಲಿಂ ನಡುವಿನ ವಿವಾದ ಹಲಾಲ್ ಕಟ್, ಜಟ್ಕಾ ಕಟ್. ಅಜಾನ್ ವಿವಾದ, ಮಸೀದಿ ವಿವಾದ ಹೀಗೆ ಹಲವು ಆಯಾಮಗಳಲ್ಲಿ ಚರ್ಚೆಯಾಗಿ ಇನ್ನೂ ಈ ವಿವಾದಗಳು ಹೊಸ ರೂಪದಲ್ಲಿ ಚರ್ಚೆ ನಡೆಯುತ್ತಲೇ ಇರುವಾಗ ಹಾಸನದಲ್ಲಿ ಹಿಂದೂ ದೇವರ ವಿಗ್ರಹಗಳನ್ನ ಕಿಡಿಗೇಡಿಗಳು ಹಾನಿಮಾಡಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮಾಲೆಕಲ್ಲು ತಿರುಪತಿ ರಾಝ್ಯದ ಬಡವರ ಪಾಲಿಗೆ ಚಿಕ್ಕ ತಿರುಪತಿ ಎಂದೇ ಹೆಸರಾಗಿರೋ ಪುಣ್ಯ ಕ್ಷೇತ್ರ, ತಿರುಪತಿಗೆ ಹೋಗಲು ಆಗದವರು ಈ ಚಿಕ್ಕತಿರುಪತಿಗೆ ಬಂದು ವೆಂಕಟರಮಣನ ದರ್ಶನ ಪಡೆದು ಪುನೀತರಾಗುತ್ತಾರೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ಶ್ರೀನಿವಾಸ ಕಲ್ಯಾಣದ ಸುಂದರ ರೂಪ ಮ್ಯೂಸಿಯಂ ಮಾಡಲು ಅರಸೀಕೆರೆಯ ಉದ್ಯಮಿ ಶ್ರೀದರ್ ಮೂರ್ತಿ ಎಂಬುವವರು ಒಂದೂವರೆ ಕೋಟಿ ವೆಚ್ಚದಲ್ಲಿ ಶ್ರೀನಿವಾಸ ಕಲ್ಯಾಣ ಶಿಲ್ಪ ರೂಪಕ ಎಂಬ ಮ್ಯೂಸಿಯಂ ನಿರ್ಮಾಣಕ್ಕೆ ಕೆಲಸ ಮಾಡಿಸುತ್ತಿದ್ದು ಕೆಲಸ ಅಂತಿಮ ಹಂತಕ್ಕೆ ಬಂದಿರುವಾಗ ಮೇ 30ರಂದು 3 ಗಂಟೆ 30 ನಿಮಿಷದ ಸಮಯದಲ್ಲಿ ಇಲ್ಲಿನ ಕಲ್ಯಾಣಿ ಬಳಿ ಈಜಾಡಲು ಬಂದಿದ್ದ ಕೆಲ ಕಿಡಿಗೇಡಿಗಳನ್ನ ಇಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಇಲ್ಲಿ ಕೆಲಸ ನಡೆಯುತ್ತಿದೆ ಯಾರೂ ಈಜಾಡದಂತೆ ಅಧಿಕಾರಿಗಳು ಹೇಳಿದ್ದಾರೆ ಎಂದು ವಾಪಸ್ ಕಳಿಸೋ ಯತ್ನ ಮಾಡಿದ್ದಾರೆ. ಈವೇಳೆ ಕೆಲಸಗಾರರು ಹಾಗೂ ಕಿಡಿಗೇಡಿಗಳ ನಡುವೆ ಮಾತಿನ ಚಕಮಕಿ ನಡೆದು, ತಮ್ಮನ್ನ ಈಜಾಡಲು ಬಿಟ್ಟಿಲ್ಲ ಎನ್ನೋ ಸಿಟ್ಟಿಗೆ ದುಷ್ಟರು ದೇವರ ಮೂರ್ತಿಗಳಿದ್ದ ಮ್ಯೂಸಿಯಂ ಒಳಗೆ ನುಗ್ಗಿ ಮೂರ್ತಿಗಳನ್ನ ಹಾನಿಮಾಡಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಸೀಕೆರೆ ತಹಶೀಲ್ದಾರ್ ವಿದ್ಯಾ ರಾಥೋಡ್ ರವರು ಈಜಾಡಲು ಬಿಟ್ಟಿಲ್ಲ ಎನ್ನೊ ಸಿಟ್ಟಿಗೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದು ವಿಗ್ರಹ ಹಾನಿಮಾಡಿದ ವೇಳೆ ಐವರು ಸ್ಥಳದಲ್ಲಿ ಇದ್ದರು ಎಂದು ಮಾಹಿತಿ ಇದೆ ಎಲ್ಲರ ವಿರುದ್ದ ಕೇಸ ದಾಖಲಿಸಲಾಗಿದೆ ಕೂಡಲೇ ಆರೋಪಿಗಳ ಬಂಧನವೂ ಆಗಲಿದೆ ಎಂದು ಮಾಹಿತಿ ನೀಡಿದ್ದರು. ಇದನ್ನೂ ಓದಿ: ಬೋಳ ಗ್ರಾಮ ಪಂಚಾಯತ್ ರಸ್ತೆಗೆ ಅಳವಡಿಸಿದ್ದ ನಾತುರಾಮ್ ಗೋಡ್ಸೆ ಹೆಸರಿನ ನಾಮಫಲಕ ತೆರವು
Published On - 2:47 pm, Mon, 6 June 22