ನಾನು ಪ್ರಧಾನಿಯಾಗಿದ್ದಾಗ ಒಂದೇ ಒಂದು ಮತಾಂತರ ಆಗಿತ್ತಾ: ಮತಾಂತರ ಕಾಯ್ದೆಗೆ ದೇವೇಗೌಡ ತೀವ್ರ ವಿರೋಧ

ಅಧಿಕಾರ ನಡೆಸುವವರು ಎಲ್ಲರ ವಿಶ್ವಾಸ ಗಳಿಸಬೇಕು. ಅಂಥದ್ದರಲ್ಲಿ ಮತಾಂತರ ನಿಷೇಧ ವಿಧೇಯಕ ಯಾರಿಗೆ ಬೇಕಾಗಿದೆ ಎಂದು ಜೆಡಿಎಸ್ ನಾಯಕ ಎಚ್​.ಡಿ.ದೇವೇಗೌಡ ಹೇಳಿದರು.

ನಾನು ಪ್ರಧಾನಿಯಾಗಿದ್ದಾಗ ಒಂದೇ ಒಂದು ಮತಾಂತರ ಆಗಿತ್ತಾ: ಮತಾಂತರ ಕಾಯ್ದೆಗೆ ದೇವೇಗೌಡ ತೀವ್ರ ವಿರೋಧ
ಎಚ್​.ಡಿ.ದೇವೇಗೌಡ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 29, 2021 | 4:30 PM

ಹಾಸನ: ಅಧಿಕಾರ ನಡೆಸುವವರು ಎಲ್ಲರ ವಿಶ್ವಾಸ ಗಳಿಸಬೇಕು. ಅಂಥದ್ದರಲ್ಲಿ ಮತಾಂತರ ನಿಷೇಧ ವಿಧೇಯಕ ಯಾರಿಗೆ ಬೇಕಾಗಿದೆ. ನಾನು 10 ತಿಂಗಳು ಪ್ರಧಾನ ಮಂತ್ರಿಯಾಗಿದ್ದೆ. ಈ ಅವಧಿಯಲ್ಲಿ ಒಂದೇ ಒಂದು ಮತಾಂತರ ನಡೆಯಿತಾ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್​.ಡಿ.ದೇವೇಗೌಡ ಹೇಳಿದರು. ಹೊಳೆನರಸಿಪುರ ತಾಲ್ಲೂಕಿನ ತಮ್ಮ ಸ್ವಗ್ರಾಮದ ಹರದನಹಳ್ಳಿಯಲ್ಲಿ ಮನೆದೇವರ ಪುನರ್​ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ವಿಧಾನಸಭೆಯಲ್ಲಿ ಮತಾಂತರ ನಿಷೇಧ ಬಿಲ್ ಅಂಗೀಕಾರ ವಿಚಾರದ ಬಗ್ಗೆ ಪ್ರಸ್ತಾಪಿಸಿ, ಈ ವಿಧೇಯಕ ಅಗತ್ಯವಿರಲಿಲ್ಲ ಎಂದರು.

ಮತಾಂತರ ಕಾಯ್ದೆಯು ಸಿದ್ಧವಾಗಿದ್ದು ಸಿದ್ದರಾಮಯ್ಯ ಕಾಲದಲ್ಲಿ ಎಂದು ಹೇಳುತ್ತಿದ್ದಾರೆ. ವಿಧೇಯಕವನ್ನು ಎಚ್.ಡಿ.ಕುಮಾರಸ್ವಾಮಿ ಪ್ರಬಲವಾಗಿ ವಿರೋಧಿಸಿದ್ದಾರೆ. ನನ್ನ ಅವಧಿಯಲ್ಲಿ ಕಾಶ್ಮೀರದಲ್ಲೂ ಯಾರೂ ಹೊಡೆದಾಡಲಿಲ್ಲ. ಹಿಂದೂ-ಮುಸ್ಲಿಮ್ ಗಲಾಟೆ ಆಗಲಿಲ್ಲ. ಜಮ್ಮು-ಕಾಶ್ಮೀರದ ಕಣಿವೆಯಲ್ಲೇ ನಾನು 4 ದಿನ ಉಳಿದಿದ್ದೆ. ಅಧಿಕಾರ ನಡೆಸುವವರು ಎಲ್ಲರ ವಿಶ್ವಾಸ ಗಳಿಸಬೇಕು. ಸಾಮ್ರಾಟ ಅಶೋಕನ ಕಾಲದಲ್ಲೇ ಬೌದ್ಧಧರ್ಮಕ್ಕೆ ಹೋಗಿದ್ದರು ಎಂದು ನೆನಪಿಸಿಕೊಂಡರು.

ಮಂಡ್ಯದಲ್ಲಿ ಬಿಜೆಪಿಗೆ 450 ಮತಗಳಿದ್ದವು. ಅದರಲ್ಲಿ ಅಧಿಕೃತ ಅಭ್ಯರ್ಥಿಗೆ 50 ಮತಗಳು ಬಂದಿವೆ. ಹಾಗಿದ್ದರೆ ಉಳಿದ ಮತಗಳು ಯಾರಿಗೆ ಹೋದವು ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಬಿಜೆಪಿ ಕಾಂಗ್ರೆಸ್ ಒಳ ಒಪ್ಪಂದ ಆಗಿದೆ ಎಂದು ಟೀಕಿಸಿದರು. ಬಿಜೆಪಿ ಮತಗಳು ಕಾಂಗ್ರೆಸ್​ಗೆ ಹೋದವೋ ಅಥವಾ ಬೇರೆಡೆಗೆ ಹೋದವೊ ಗೊತ್ತಿಲ್ಲ ಎಂದರು.

ಮೇಕೆದಾಟು ವಿಚಾರದಲ್ಲಿ ನಾನು ಒಂದಿಷ್ಟು ಅಳಿಲು ಸೇವೆ ಮಾಡಿದ್ದೀನಿ. ಮೇಕೆದಾಟು ಸಮಸ್ಯೆ ಅವರಿಂದ ಬಗೆಹರಿದು ಅದರಿಂದ ಅನುಕೂಲ ಆದರೆ ಆಗಲಿ. ಹಾಸನಕ್ಕೆ ಬಂದವರು ಏನು ಭಾಷಣ ಮಾಡಿದ್ದಾರೆಂದು ನಾನು ನೋಡಿದೆ. ಇಂಥವಕ್ಕೆಲ್ಲಾ ನಾನು ಪ್ರತಿಕ್ರಿಯೆ ಕೊಟ್ಟೆನಾ ಪರೋಕ್ಷವಾಗಿ ಕಾಂಗ್ರೆಸ್​ನ ಡಿ.ಕೆ.ಶಿವಕುಮಾರ್​ಗೆ ಟಾಂಗ್ ಕೊಟ್ಟರು. ನಾನು ಬಹಳ ಪಾದಯಾತ್ರೆಗಳನ್ನು ಮಾಡಿದ್ದೇನೆ. ರಾಜ್ಯದಲ್ಲಿ ಹಲವು ಸಮಸ್ಯೆಗಳಿವೆ. ಕೃಷ್ಣ, ಮಹಾದಾಯಿ ಸಮಸ್ಯೆಗಳು ಜೀವಂತವಾಗಿವೆ. ಕೇವಲ ಮೇಕೆದಾಟು ವಿಚಾರವೇ ಕಾಂಗ್ರೆಸ್​ಗೆ ಯಾಕೆ ಮುಖ್ಯ ಎಂದು ಪ್ರಶ್ನೆ ಮಾಡಿದರು.

ಇವತ್ತು ನಾನು ಮನೆದೇವರಾದ ದೇವೇಶ್ವರನ ಪುನರ್ ಪ್ರತಿಷ್ಠಾಪನೆ ಪೂಜೆಗೆ ಬಂದಿದ್ದೇನೆ. ದೇವರ ಪಾಣಿಪೀಠವನ್ನ ಹೊಸದಾಗಿ ಮಾಡಿಸಿದ್ದಾರೆ. ರೇವಣ್ಣ, ಭವಾನಿ ಅವರ ಜೊತೆ ಡಾ.ಸೂರಜ್ ಭಾಗಿಯಾಗಿದ್ದಾರೆ. ದೇವರಲ್ಲಿ ಸೂರಜ್ ಅವರು ಗಾಢವಾದ ನಂಬಿಕೆ ಹೊಂದಿದ್ದಾರೆ. ಜಿಲ್ಲೆಯ ಶಾಸಕರೆಲ್ಲರೂ ತೀರ್ಮಾನಿಸಿ ಸೂರಜ್ ಅವರನ್ನು ವಿಧಾನ ಪರಿಷತ್​ಗೆ ನಿಲ್ಲಿಸಿದ್ದರು. ಯಾರು ಏನೇ ವಿರೋಧ ಮಾಡಿದರೂ ಅವರು ಅತಿಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಪಾದಯಾತ್ರೆ ಮಾಡಿದ್ರೆ ನಾನು ಯಾಕೆ ಬೇಡ ಎನ್ನಲಿ. ನಾನು ಯಾರ ಬಗ್ಗೆ ಯೂ ಲಘುವಾಗಿ ಮಾತನಾಡಲ್ಲ. ಅದರಿಂದ ಸಮಸ್ಯೆ ಬಗೆಹರಿಯೊದಾದ್ರೆ ಮಾತನಾಡಲಿ. ಹಿಂದೆ ಕಾಂಗ್ರೆಸ್ ಅದಿಕಾರದಲ್ಲಿ ಇತ್ತು, ಕುಮಾರಸ್ವಾಮಿ ಸರ್ಕಾರದಲ್ಲಿ ಡಿಕೆಶಿ ಅವರೇ ನೀರಾವರಿ ಸಚಿವರಾಗಿದ್ದರು. ಆಗ ಬಹುಶಃ ನಮಗೇನಾದ್ರು ಕೀರ್ತಿ ಬರುತ್ತೆ ಅಂತಾ ಈ ಬಗ್ಗೆ ಯೋಚನೆ ಮಾಡಲಿಲ್ಲವೇ ಎಂದು ಪ್ರಶ್ನಿಸಿದರು.

ಮುಂದೆ ಪ್ರತಿ ತಿಂಗಳು ಎರಡು ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ನಾನೇ ಹೋಗುತ್ತೇನೆ. ಎಲ್ಲೆಲ್ಲಿ ಯಾವ ರೀತಿ ಸಂಘಟನೆ ಆಗಿದೆ ಎಂದು ನೋಡುತ್ತೇನೆ. ಏನಾದ್ರು ನ್ಯೂನತೆ ಇದ್ದರೆ ಸರಿ ಮಾಡುತ್ತೇನೆ. ಪ್ರಾದೇಶಿಕ ಪಕ್ಷದ ಬಗ್ಗೆ ಬಹಳ ಲಘುವಾಗಿ ಮಾತನಾಡುತ್ತಾರೆ. ಇವರನ್ನೆಲ್ಲಾ ನಾನು ನೋಡಿದ್ದೇನೆ, ಇವರೆಲ್ಲಾ ‌ಹಳಬರು. ನಮ್ಮ ಪಕ್ಷಕ್ಕೆ ಶೇ 20ರಷ್ಟು ಜನರು ಮತಗಳನ್ನು ಕೊಟ್ಟಿದ್ದಾರೆ. ಮುಂದಿನ 2023ರ ಮೇ ತಿಂಗಳಲ್ಲಿ ಚುನಾವಣೆ ಇದೆ. ಜನವರಿ 4ಕ್ಕೆ ಕಲಬುರ್ಗಿಗೆ ಪತ್ರಕರ್ತರ ಸಮ್ಮೇಳನದಲ್ಲಿ ಭಾಗಿಯಾಗಲೆಂದು ಹೋಗುತ್ತೇನೆ ಎಂದರು.

ಕುಮಾರಸ್ವಾಮಿ ಅವರು ಈ ವಾರ ಎಲ್ಲಾ ಶಾಸಕರು ಹಾಗೂ ನಾಯಕರ ಸಭೆ ನಡೆಸಿ, ಎಲ್ಲರಿಗೂ ಪಕ್ಷದ ಅಧಿಕಾರ ಹಂಚಿಕೆ ಮಾಡುತ್ತಾರೆ. ನಾವು ಯಾರ ಹೊಗಳಿಕೆ ಅಥವಾ ತೆಗಳಿಕೆಗೆ ಉತ್ತರ ಕೊಡುವುದಿಲ್ಲ. ಕಾಲ ಬಂದಾಗ ಉತ್ತರ ಕೊಡುತ್ತೇವೆ ಎಂದು ನುಡಿದರು.

ಹರದನಹಳ್ಳಿಯಲ್ಲಿ ಅಷ್ಟಬಂಧ ಬ್ರಹ್ಮ ಕುಂಬಾಭಿಷೇಕ ಹಾಗೂ ಪುನರ್ ಪ್ರತಿಷ್ಠಾಪನೆ ಪೂಜೆಯಲ್ಲಿ ದೇವೇಗೌಡರು ಪಾಲ್ಗೊಂಡಿದ್ದರು. ಪತ್ನಿ ಚನ್ನಮ್ಮ, ಪುತ್ರ ಎಚ್.ಡಿ.ರೇವಣ್ಣ, ಸೊಸೆ ಭವಾನಿ ರೇವಣ್ಣ, ಮೊಮ್ಮಗ ಸೂರಜ್ ರೇವಣ್ಣ ಪೂಜೆಯಲ್ಲಿ ಭಾಗಿಯಾಗಿದ್ದರು. ಮಂಗಳೂರಿನ 21 ಅರ್ಚಕರ ತಂಡದಿಂದ ವಿಶೇಷ ಪೂಜೆ ಹೋಮ ಹವನಗಳು ನಡೆದವು.

ಇದನ್ನೂ ಓದಿ: HD Deve Gowda: ಮನೆ ದೇವರು ದೇವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಕುಟುಂಬ ಇದನ್ನೂ ಓದಿ: ನಾನು ದೆಹಲಿಗೆ ಹೋದಾಗ ನನಗಾರೂ ಒನ್ ಗ್ಲಾಸ್ ಕಾಫಿ ಕೊಡಲಿಲ್ಲ: ಮಂಡ್ಯದಲ್ಲಿ ದೇವೇಗೌಡ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?