Kolar News: ನಕಲಿ ವೈದ್ಯರುಗಳ ಮೇಲೆ ಅಧಿಕಾರಿಗಳ ತಂಡ ದಾಳಿ: 3 ಕ್ಲಿನಿಕ್ ಸೀಜ್
ಸಂಬಂಧಿಸಿದ ದಾಖಲಾತಿಗಳನ್ನು ತೋರಿಸದ ಹಿನ್ನೆಲೆ ನಕಲಿ ವೈದ್ಯರುಗಳ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, 3 ನಕಲಿ ಕ್ಲಿನಿಕ್ಗಳನ್ನು ಸೀಜ್ ಮಾಡಿದ್ದಾರೆ.
ಕೋಲಾರ,ಜುಲೈ 17: ನಕಲಿ ವೈದ್ಯರುಗಳ (fake doctors) ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, 3 ನಕಲಿ ಕ್ಲಿನಿಕ್ಗಳನ್ನು ಸೀಜ್ ಮಾಡಿದ್ದಾರೆ. ಕೋಲಾರ ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಇಂದು ದಾಳಿ ಮಾಡಿದ್ದು, ಚಿಟ್ನಹಳ್ಳಿ, ಶೆಟ್ಟಿಮಾದಮಂಗಲ, ಮದನಹಳ್ಳಿ ಕ್ರಾಸ್ ಬಳಿಯ ಗೋಕುಲ್ ಕ್ಲಿನಿಕ್, ವೆಂಕಟೇಶ್ವರ ಕ್ಲಿನಿಕ್, ಆನಂದ್ ಕ್ಲಿನಿಕ್ ಜಪ್ತಿ ಮಾಡಿದ್ದಾರೆ. ಸಂಬಂಧಿಸಿದ ದಾಖಲಾತಿಗಳನ್ನು ತೋರಿಸದ ಹಿನ್ನೆಲೆ ದಾಳಿ ಮಾಡಿ ಸೀಜ್ ಮಾಡಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
1 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಉಪ ಖಜಾನೆ ಸಹಾಯಕ ಅಧಿಕಾರಿ, FDA
ಹಾವೇರಿ: ಪಶು ಚಿಕಿತ್ಸಾಲಯದ ಬಿಲ್ ಪಾಸ್ ಮಾಡಲು 1 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಹಾಯಕ ಖಜನಾಧಿಕಾರಿ ಮತ್ತು ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: KSRTC: ಕೆಎಸ್ಆರ್ಟಿಸಿ ಹಳೆಯ ಬಸ್ಗಳಿಗೆ ಮರುಜೀವ; ಹೊಚ್ಚಹೊಸದಾಗಿ ರಸ್ತೆಗಿಳಿಯಲಿವೆ 500 ಬಸ್ಗಳು!
ರಟ್ಟೀಹಳ್ಳಿ ಉಪ ಖಜಾನೆ ಸಹಾಯಕ ಅಧಿಕಾರಿ ಬಸವರಾಜ ಕಡೇಮನಿ, ಪ್ರಥಮ ದರ್ಜೆ ಸಹಾಯಕ ಯಲ್ಲಪ್ಪ ಅಮ್ಮಿನಬಾವಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.
ನಕಲಿ ಕಂಪನಿ ಹೆಸರಲ್ಲಿ ಗುಟ್ಕಾ ತಯಾರಿಕೆ
ಕಲಬುರಗಿ: ನಗರದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ, ಅನಧಿಕೃತವಾಗಿ ಗುಟ್ಕಾ ತಯಾರಿಕೆ ಮಾಡುತ್ತಿರುವದು ಪತ್ತೆಯಾಗಿತ್ತು. ದಾಲ್ ಮಿಲ್ ನೊಳಗೆ, ಮಾಣಿಕಚಂದ ಅನ್ನೋ ನಕಲಿ ಕಂಪನಿ ಹೆಸರಲ್ಲಿ ದುಷ್ಕರ್ಮಿಗಳು ನಕಲಿ ಗುಟ್ಕಾ ತಯಾರಿಕೆ ಮಾಡಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಬ್ ಅರ್ಬನ್ ಠಾಣೆ ಪೊಲೀಸರು ದಾಳಿ ಮಾಡಿ, 20 ಲಕ್ಷಕ್ಕೂ ಅಧಿಕ ಮೌಲ್ಯದ ಗುಟ್ಕಾ ತಯಾರಿಕೆ ವಸ್ತುಗಳನ್ನು ಜಪ್ತಿ ಮಾಡಿದ್ದರು.
ಇದನ್ನೂ ಓದಿ: ಸೇವಾ ನ್ಯೂನ್ಯತೆ ಎಸಗಿದ ಬಿಲ್ಡರ್‌ಗೆ ಧಾರವಾಡ ಜಿಲ್ಲಾ ಗ್ರಾಹಕರ ನ್ಯಾಯಾಲಯದಿಂದ ದಂಡ
ಗುಟ್ಕಾ ತಯಾರಿಕೆಗೆ ಉತ್ತರಪ್ರದೇಶ, ಬಿಹಾರ್ದಿಂದ ಇಪ್ಪತ್ತು ಕಾರ್ಮಿಕರನ್ನು ಕರೆದುಕೊಂಡು ಬಂದಿದ್ದು, ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಗುಟ್ಕಾ ತಯಾರ ಮಾಡಿ ಮಾರಾಟ ಮಾಡಲು ಅವಕಾಶವಿಲ್ಲಾ. ಆದರೆ ದುಷ್ಕರ್ಮಿಗಳು ಕಲಬುರಗಿ ನಗರದಲ್ಲಿ ಬಂದ್ ಬಿದ್ದಿರೋ ದಾಲ್ ಮಿಲ್ ನೊಳಗೆ ಅನಧಿಕೃತ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಮಾಲೀಕರನ್ನು ಪತ್ತೆ ಮಾಡಿ, ಅವರ ವಿರುದ್ದ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ರಾಜದ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:13 pm, Mon, 17 July 23