ಹಾವು ಕಡಿತದ ಜಾಗೃತಿಗೆ ತಯಾರಿಸಿರುವ ‘ವಾಟ್ಸಾಪ್ ಚಾಟ್ಬಾಟ್’ ಪಡೆದುಕೊಂಡ ಕರ್ನಾಟಕ; ಏನಿದರ ಉಪಯೋಗ, ಬಳಸುವುದು ಹೇಗೆ?

ದ ಲಯಾನಾ ಟ್ರಸ್ಟ್ನ ಸಹಯೋಗದೊಂದಿಗೆ ಹ್ಯೂಮೇನ್ ಸೊಸೈಟಿ ಇಂಟರ್ನ್ಯಾಶನಲ್/ಇಂಡಿಯಾ ಹಾವುಗಳ(Snakes) ಬಗ್ಗೆ ಅರಿತುಕೊಳ್ಳಲು ಹಾಗೂ ಹಾವು ಕಡಿತ ತಡೆಗಟ್ಟುವಿಕೆಯ ಬಗ್ಗೆ ನಾಗರಿಕರಿಗೆ ತಿಳುವಳಿಕೆ ನೀಡಲು ಕರ್ನಾಟಕದಲ್ಲಿ ಮೊದಲ-ಬಾರಿಗೆ ‘ವಾಟ್ಸಾಪ್ ಚಾಟ್ಬಾಟ್’(WhatsApp chatbot)​ನ್ನು ಪ್ರಾರಂಭಿಸಿದೆ. ಏನಿದರ ಉಪಯೋಗ, ಬಳಸುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ.

ಹಾವು ಕಡಿತದ ಜಾಗೃತಿಗೆ ತಯಾರಿಸಿರುವ ‘ವಾಟ್ಸಾಪ್ ಚಾಟ್ಬಾಟ್’ ಪಡೆದುಕೊಂಡ ಕರ್ನಾಟಕ; ಏನಿದರ ಉಪಯೋಗ, ಬಳಸುವುದು ಹೇಗೆ?
ಹಾವು ಕಡಿತದ ಜಾಗೃತಿಗೆ ತಯಾರಿಸಿರುವ ‘ವಾಟ್ಸಾಪ್ ಚಾಟ್ಬಾಟ್
Follow us
ಕಿರಣ್ ಹನುಮಂತ್​ ಮಾದಾರ್
|

Updated on:Jun 12, 2024 | 4:07 PM

ಮೈಸೂರು, ಜೂ.12: ರಾಜ್ಯದಲ್ಲಿ ಹಾವು ಕಡಿತದ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನಲೆ ಹಾವುಗಳ(Snakes) ಬಗ್ಗೆ ಅರಿತುಕೊಳ್ಳಲು ಹಾಗೂ ಹಾವು ಕಡಿತ ತಡೆಗಟ್ಟುವಿಕೆಯ ಬಗ್ಗೆ ನಾಗರಿಕರಿಗೆ ತಿಳುವಳಿಕೆ ನೀಡಲು ಕರ್ನಾಟಕದಲ್ಲಿ ಮೊದಲ-ಬಾರಿಗೆ ‘ವಾಟ್ಸಾಪ್ ಚಾಟ್ಬಾಟ್’(WhatsApp chatbot)​ನ್ನು ಪ್ರಾರಂಭಿಸಲಾಗಿದೆ. ದ ಲಯಾನಾ ಟ್ರಸ್ಟ್ನ ಸಹಯೋಗದೊಂದಿಗೆ ಹ್ಯೂಮೇನ್ ಸೊಸೈಟಿ ಇಂಟರ್ನ್ಯಾಶನಲ್/ಇಂಡಿಯಾ ಪ್ರಾರಂಭಿಸಿದ ಚಾಟ್ಬಾಟ್, ಸ್ಥಳೀಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡುಬರುವ ಹಾವು ಪ್ರಭೇದಗಳ ಬಗ್ಗೆ ಸುಲಭವಾಗಿ ಅವುಗಳ ಬಗ್ಗೆ ಅರಿತುಕೊಳ್ಳಬಹುದಾದ ಮಾಹಿತಿಯನ್ನು ಒದಗಿಸುತ್ತದೆ. ಜೊತೆಗೆ ಹಾವು ಕಡಿತದಿಂದ ಜೀವ ಉಳಿಸಿಕೊಳ್ಳಬಹುದಾದ ಪ್ರಥಮ ಚಿಕಿತ್ಸೆಯ ಬಗ್ಗೆ ಹಾಗೂ ಹಾವು ಕಡಿತದ ತಡೆಗಟ್ಟುವಿಕೆಯ ಬಗ್ಗೆ ಸಲಹೆಗಳ ಜೊತೆಗೆ ಹಾವುಗಳ ಬಗ್ಗೆ ಇರುವ ತಪ್ಪು ಮಾಹಿತಿ ಬಗ್ಗೆಯೂ ತಿಳಿಸುತ್ತದೆ.

ಉಪಯೋಗಿಸುವುದು ಹೇಗೆ?

ಸ್ವಯಂಚಾಲಿತವಾದ ಚಾಟ್ಬಾಟ್ ಅನ್ನು, QR ಕೋಡ್ ಮೂಲಕ ಅಥವಾ 91 9154190472 ಗೆ “ಹಾಯ್” ಸಂದೇಶ ಕಳುಹಿಸುವುದರ ಮೂಲಕ ಇಂಗ್ಲಿಷ್ ಅಥವಾ ಕನ್ನಡದಲ್ಲಿ ದೃಶ್ಯದ ಮೂಲಕ ವೀಕ್ಷಿಸಬಹುದು ಹಾಗೂ ಇದನ್ನುಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ‘ವಾಟ್ಸಪ್ ಚಾಟ್ಬಾಟ್’ ಮೂಲಕ, ಹಾವು ಕಡಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ, ಮೈಸೂರಿನಲ್ಲಿ ಈ ವರ್ಷ ಕನಿಷ್ಠ ಒಂದು ಲಕ್ಷ ಬಳಕೆದಾರರನ್ನು ತಲುಪುವ ಗುರಿಯನ್ನು ಎರಡೂ ಸಂಸ್ಥೆಗಳು ಹೊಂದಿವೆ.

ಇದನ್ನೂ ಓದಿ:ಹಾವು ಕಡಿತ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿಲ್ಲ ಸಾಕಾಗುವಷ್ಟು ಔಷಧಿ: ಸಾವನ್ನಪ್ಪುವವರ ಸಂಖ್ಯೆ ಏರಿಕೆ

ಭಾರತದಲ್ಲಿ ವರ್ಷಕ್ಕೆ ಹತ್ತು ಲಕ್ಷ ಹಾವು ಕಡಿತದ ಪ್ರಕರಣಗಳು

ಪ್ರಪಂಚದಲ್ಲಿನ ಇತರ ಎಲ್ಲಾ ದೇಶಗಳಿಗಿಂತ ಹೆಚ್ಚು ಹಾವು ಕಡಿತದ ಪ್ರಕರಣಗಳು ಭಾರತದಲ್ಲಿ ಬೆಳಕಿಗೆ ಬರುತ್ತದೆ. ಜೊತೆಗೆ ಜಗತ್ತಿನಾದ್ಯಂತ ಹಾವು ಕಚ್ಚಿ ಸಾಯುವ ಪ್ರಕರಣಗಳಲ್ಲಿಯೂ ಭಾರತ ಒಂದರಲ್ಲಿಯೇ ಸುಮಾರು 50% ಹಾವು ಕಡಿತದ ಸಾವುಗಳು ಕಂಡುಬರುತ್ತವೆ. ಭಾರತದಲ್ಲಿ ವರ್ಷಕ್ಕೆ ಹತ್ತು ಲಕ್ಷ ಹಾವು ಕಡಿತದ ಪ್ರಕರಣಗಳು ಬೆಳಕಿಗೆ ಬಂದಿದ್ದು, ವಾರ್ಷಿಕವಾಗಿ ಸುಮಾರು 58,000 ಮಾನವವರು ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದರೆ, ಕರ್ನಾಟಕವೊಂದರಲ್ಲೇ 2023 ರಲ್ಲಿ 6,500 ಹಾವು ಕಡಿತದ ಪ್ರಕರಣಗಳು ವರದಿಯಾಗಿವೆ.

ಹಾವುಗಳ ಬಗ್ಗೆ ಅರಿವು ನೀಡಲು ಈ ಆ್ಯಪ್​ ಸಹಾಯಕಾರಿ

ಇಷ್ಟೊಂದು ಸಾವುಗಳು ಹಾವುಗಳ ಬಗ್ಗೆ ಅರ್ಥಪೂರ್ಣ ಮಾಹಿತಿಯ ಕೊರತೆಯೂ ಸೇರಿದಂತೆ ಇನ್ನಿತರ ಕಾರಣಗಳಿಂದ ಆಗುತ್ತಿದೆ. ಇದರಿಂದ ಜನರು ಸಹಜವಾಗಿಯೇ ಅವುಗಳ ಬಗ್ಗೆ ಭಯವನ್ನು ಹೊಂದಿರುತ್ತಾರೆ. ಇದರಿಂದಾಗಿ ಸಾಮಾನ್ಯವಾಗಿ ಹಾವುಗಳು ಕಂಡಾಗ ಅವುಗಳನ್ನು ಕೊಲ್ಲುವ ಅಥವಾ ಹಿಡಿದು ಬೇರೆ ಕಡೆಗಳಿಗೆ ಸ್ಥಳಾಂತರಿಸುತ್ತಾರೆ. ಅಲ್ಲಿ ಅವು ಬದುಕುಳಿಯುವ ಸಾಧ್ಯತೆಯೂ ಕಡಿಮೆ ಇರುತ್ತದೆ. ಹಾವುಗಳು ಎದುರಾದಾಗ ತ್ವರಿತ ಮತ್ತು ತಿಳುವಳಿಕೆಯುಳ್ಳ ಕ್ರಮವನ್ನು ತೆಗೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿ, ಸ್ಥಳೀಯ ಸಮುದಾಯಗಳಿಗೆ ಈ ಹೊಸ ಆ್ಯಪ್ ಸಹಾಯ ಮಾಡುತ್ತದೆ.

ಇದನ್ನೂ ಓದಿ:ಘೋಷಿತ ಕಾಯಿಲೆಗಳ ಪಟ್ಟಿಗೆ ಹಾವು ಕಡಿತ ಸೇರ್ಪಡೆ: ಆರೋಗ್ಯ ಇಲಾಖೆ

ಈ ಕುರಿತು ಮಾತನಾಡಿದ ಹ್ಯೂಮೇನ್ ಸೊಸೈಟಿ ಇಂಟರ್ನ್ಯಾಶನಲ್/ಇಂಡಿಯಾದಲ್ಲಿ ಮಾನವ-ವನ್ಯಜೀವಿ ಸಹಬಾಳ್ವೆ ವ್ಯವಸ್ಥಾಪಕರಾದ ವಿನೋದ್ ಕೃಷ್ಣನ್, “ಹಾವು ಕಡಿತವು ಒಂದು ಸಾಮೂಹಿಕ ಸಮಸ್ಯೆಯಾಗಿದ್ದು, ಅದಕ್ಕಾಗಿ ಸಾಮೂಹಿಕ ಪರಿಹಾರದ ಅಗತ್ಯತೆ ಇರುತ್ತದೆ. ಮೈಸೂರು ಜಿಲ್ಲೆಯಲ್ಲಿ ನಮ್ಮ ಸಮೀಕ್ಷೆಯ ಪ್ರಕಾರ, ವಾಟ್ಸಪ್ ಹೆಚ್ಚು ಬಳಕೆಯಾಗುವ ಡಿಜಿಟಲ್ ಆ್ಯಪ್​​ಗಳಲ್ಲಿ ಒಂದಾಗಿದೆ. ಆದ್ದರಿಂದ ಜೀವಗಳನ್ನು ಉಳಿಸುವ ಮತ್ತು ಹಾವಿನ ಕಿರುಕುಳವನ್ನು ತಡೆಯುವ ಪ್ರಮುಖ ಮಾಹಿತಿಯೊಂದಿಗೆ ಅನೇಕ ಜನರನ್ನು ತಲುಪಲು ಇದು ಸುಲಭವಾದ ವೇದಿಕೆಯಾಗಿದೆ. ಹಾವಿನ ಕಚ್ಚುವಿಕೆಯು ಸಂಭವಿಸುವುದನ್ನು ತಡೆಯುವುದು ಮತ್ತು ಹಾವಿನ ಕಚ್ಚುವಿಕೆಯು ಒಮ್ಮೆ ಸಂಭವಿಸಿದಾಗ ಸರಿಯಾದ ಪ್ರಥಮ ಚಿಕಿತ್ಸೆಯನ್ನು ನೀಡುವುದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಎಂದರು.

ದ ಲಯಾನಾ ಟ್ರಸ್ಟ್ನ ಸಂಸ್ಥಾಪಕರಾದ ಜೆರಾರ್ಡ್ ಮಾರ್ಟಿನ್ ಮಾತನಾಡಿ, “ನಾವು ಸಾರ್ವಜನಿಕ ಸಂಪರ್ಕದ ಮಾರ್ಗಗಳಲ್ಲಿ ಪ್ರಗತಿ ಹೊಂದುತ್ತಿರುವಾಗ, ನಮ್ಮ ವಿಧಾನಗಳು ಕೂಡ ವಿಕಸನಗೊಳ್ಳಬೇಕು ಹಾಗೂ ಸಮಯಕ್ಕೆ ಅನುಗುಣವಾಗಿರಬೇಕು. ಸಮುದಾಯದೊಂದಿಗೆ ನಿರಂತರ ಸಂವಾದವನ್ನು ಹೊಂದಲು ಚಾಟ್ಬಾಟ್ ಒಂದು ಉತ್ತಮ ಮಾರ್ಗವಾಗಿದೆ ಹಾಗೂ ಸಮುದಾಯದ ಸದಸ್ಯರು ಹೆಚ್ಚು ಪ್ರವೇಶಿಸುತ್ತಿರುವ ಮಾಹಿತಿಯನ್ನು ಪಡೆದು ಮೌಲ್ಯಮಾಪನ ಮಾಡಿ ಭವಿಷ್ಯದಲ್ಲಿ ಹತ್ತಿರದ ಆಸ್ಪತ್ರೆ, ಆಂಬ್ಯುಲೆನ್ಸ್ ಸೇವೆಗಳು ಮತ್ತು ಮುಂತಾದ ಮಾಹಿತಿಯಂತಹ ಹೆಚ್ಚಿನ ಮಾಹಿತಿಯನ್ನು ಅದರಲ್ಲಿ ಸೇರಿಸಬಹುದು.

ಹೆಚ್​ಎಸ್​ಐ/ಇಂಡಿಯಾ ಮತ್ತು ದ ಲಯಾನ ಟ್ರಸ್ಟ್ ಅವರು 2018 ರಿಂದಲೂ ಮೈಸೂರು ಜಿಲ್ಲೆಯಲ್ಲಿ ಪರಿಸರ ಅಧ್ಯಯನಗಳು, ಸಾಮಾಜಿಕ ಸಮೀಕ್ಷೆಗಳು, ಸಮುದಾಯದ ಪ್ರಭಾವ, ನೀತಿ ಸುಧಾರಣೆ ಮತ್ತು ಸಾಂಸ್ಥಿಕ ಸಾಮರ್ಥ್ಯವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:04 pm, Wed, 12 June 24

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?