ರಾಯಚೂರು: ವಾಕಿಂಗ್ ಮಾಡುತ್ತಿದ್ದ ದಂಪತಿಗೆ ಕಾರು ಡಿಕ್ಕಿ; ಪತಿ ಸ್ಥಳದಲ್ಲೇ ಸಾವು, ಪತ್ನಿ ಸ್ಥಿತಿ ಗಂಭೀರ

ರಾಯಚೂರು: ವಾಕಿಂಗ್ ಮಾಡುತ್ತಿದ್ದ ದಂಪತಿಗೆ ಕಾರು ಡಿಕ್ಕಿ; ಪತಿ ಸ್ಥಳದಲ್ಲೇ ಸಾವು, ಪತ್ನಿ ಸ್ಥಿತಿ ಗಂಭೀರ
ರಾಯಚೂರು ಮಾರ್ಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ

ರಾಯಚೂರು ಮಾರ್ಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಎಸ್.ಎಸ್.ಪಾಟೀಲ್ ಪತ್ನಿ ಲೇಪಾಕ್ಷಮ್ಮ ಸ್ಥಿತಿ ಕೂಡ ಗಂಭೀರವಾಗಿದ್ದು, ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಚೂರು ಪಶ್ಚಿಮ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

TV9kannada Web Team

| Edited By: preethi shettigar

Jan 16, 2022 | 7:28 PM

ರಾಯಚೂರು: ವಾಕಿಂಗ್​ ಮಾಡುತ್ತಿದ್ದ ದಂಪತಿಗೆ (Couple) ಕಾರು ಡಿಕ್ಕಿ ಹೊಡೆದು ಪತಿ ( ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಬಳಿ ನಡೆದಿದೆ. ರಾಯಚೂರು ಕಂದಾಯ ಇಲಾಖೆ ನಿವೃತ್ತ ಸರ್ವೆಯರ್​ ಎಸ್.ಎಸ್.ಪಾಟೀಲ್(65) ಮೃತ ದುರ್ದೈವಿ. ಎಸ್. ಎಸ್. ಪಾಟೀಲ್ ಹಾಗೂ ಪತ್ನಿ ಸಂಜೆ ವಾಯುವಿಹಾರಕ್ಕೆ ಹೋಗಿದ್ದರು. ಈ ವೇಳೆ ರಾಯಚೂರು ಮಾರ್ಗವಾಗಿ ಬರುತ್ತಿದ್ದ ಕಾರು (Car) ಡಿಕ್ಕಿ ಹೊಡೆದಿದೆ. ಎಸ್.ಎಸ್.ಪಾಟೀಲ್ ಪತ್ನಿ ಲೇಪಾಕ್ಷಮ್ಮ ಸ್ಥಿತಿ ಕೂಡ ಗಂಭೀರವಾಗಿದ್ದು, ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಚೂರು ಪಶ್ಚಿಮ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು: ಆತ್ಮಹತ್ಯೆ ಮಾಡಿಕೊಂಡು ವರ್ಷದ ಬಳಿಕ ವ್ಯಕ್ತಿಯ ಶವ ಪತ್ತೆ ಆತ್ಮಹತ್ಯೆ ಮಾಡಿಕೊಂಡು ವರ್ಷದ ಬಳಿಕ ಶವ ಪತ್ತೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಪಟ್ಟಣದ ಟಿ.ಎಂ.ರಸ್ತೆಯ ಪಾಳುಬಿದ್ದ ಮನೆಯಲ್ಲಿ ನಡೆದಿದೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗುರುತು ಪತ್ತೆ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಮೃತದೇಹ ಇದೆ. ಮನೆ ದುರಸ್ಥಿ ಮಾಡಲು ಮಾಲೀಕ ಮನೆಗೆ ತೆರಳಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿಜಯಪುರ: ಸಾಲಬಾಧೆ ತಾಳಲಾರದೆ ನಿವೃತ್ತ ಯೋಧ ನೇಣಿಗೆ ಶರಣು

ಸಾಲಬಾಧೆ ತಾಳಲಾರದೆ ನಿವೃತ್ತ ಯೋಧ ನೇಣಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ನಡೆದಿದೆ. ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾರ್ಡರ್ ಸೆಕ್ಯೂರಿಟಿ ಫೋರ್ಸ್​ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ರೇವಣಸಿದ್ದ ಗಾಣಿಗೇರ ಮೃತ ದುರ್ದೈವಿ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಸ್ನೇಹಿತರ ರೂಂನಲ್ಲೇ ನೇಣುಹಾಕಿಕೊಂಡು ಯುವತಿ ಆತ್ಮಹತ್ಯೆ

ಸ್ನೇಹಿತರ ರೂಂನಲ್ಲೇ ನೇಣುಹಾಕಿಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ನಡೆದಿದೆ. ಶಿಲ್ಪಾ(22) ಮೃತ ದುರ್ದೈವಿ. ಸ್ನೇಹಿತರಾದ ಅಮಿತ್, ಉದಯ್, ಮುರುಳಿ, ಧೃತಿನ್, ಸ್ನೇಹಾ ಎಂಬುವವರ ಜೊತೆ ಯುವತಿ ಶಿಲ್ಪಾ ವಾಸವಿದ್ದರು. ಸ್ನೇಹಿತರ ವಿರುದ್ಧ ಶಿಲ್ಪಾ ಪೋಷಕರು ಸದ್ಯ ದೂರು ನೀಡಿದ್ದಾರೆ. ಸ್ನೇಹಿತರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ: ಗ್ಯಾಸ್ ​​ಗೀಸರ್​​ನಿಂದ ಅನಿಲ ಸೋರಿಕೆಯಾಗಿ ತಾಯಿ, ಮಗು ಸಾವು

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಸ್ನಾನ ಮಾಡುವಾಗ ಗ್ಯಾಸ್ ​​ಗೀಸರ್​​ನಿಂದ ಅನಿಲ ಸೋರಿಕೆಯಾಗಿ ತಾಯಿ, ಮಗು ಸಾವನ್ನಪ್ಪಿದ್ದಾರೆ. ಉಸಿರುಗಟ್ಟಿ ತಾಯಿ ಮಂಗಳಾ(35), ಗೌತಮಿ(7) ಸಾವನ್ನಪ್ಪಿದ್ದಾರೆ. ಪತಿ ನರಸಿಂಹಮೂರ್ತಿ ಕೆಲಸಕ್ಕೆ ತೆರಳಿದ್ದ ವೇಳೆ ಅವಘಡ ಸಂಭವಿಸಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಅಪಪ್ರಚಾರಕ್ಕೆ ಬೇಸತ್ತು ಮಕ್ಕಳ ಜತೆ ತಾಯಿ ಆತ್ಮಹತ್ಯೆ ಪ್ರಕರಣ; ಒಂದು ವರ್ಷದ ದೇವಿಕಾ ಶವ ಪತ್ತೆ ಅಪಪ್ರಚಾರಕ್ಕೆ ಬೇಸತ್ತು ಎರಡು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾ  ಕಾಲುವೆಯಲ್ಲಿ ತಾಯಿ ಮತ್ತು 7 ವರ್ಷದ ಹೆಣ್ಣು ಮಗು ಶವ ಪತ್ತೆ ಆಗಿತ್ತು. ಇಂದು ಒಂದು ವರ್ಷದ  ದೇವಿಕಾ ಶವ ಪತ್ತೆಯಾಗಿದೆ. ವೀಣಾ ಮಹಿಳೆಯಿಂದ 8 ಲಕ್ಷ ಪಡೆದು ವಾಪಾಸ್ ಕೊಡದೆ ಸತಾಯಿಸುತ್ತಿದ್ದ  ಸಂತೋಷ ಮತ್ತು ಆತನ ಪತ್ನಿ ಆಶಾ. ಹಣ ವಾಪಾಸ್ ಕೇಳಿದ್ದಕ್ಕೆ ಮಹಿಳೆಯ ವಿರುದ್ಧ ಅನೈತಿಕ ಸಂಬಂಧದ  ಅಪಪ್ರಚಾರ ಮಾಡಿದ್ದರು ಇದರಿಂದ ಬೇಸತ್ತ ಮಹಿಳೆ ಇಬ್ಬರು ಮಕ್ಕಳೊಂದಿಗೆ ಹಂಚಿನ ಸಿದ್ದಾಪುರ ಬಳಿಯ ಭದ್ರಾ ಕಾಲುವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Dharwad road accident: ಧಾರವಾಡ ಭೀಕರ ರಸ್ತೆ ಅಪಘಾತಕ್ಕೆ ಒಂದು ವರ್ಷ; ಇನ್ನೂ ಮುಗಿಯದ ರಸ್ತೆ ಅಗಲೀಕರಣ ಕಾಮಗಾರಿ

ಸಮನ್ವಿ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ;​ ಯಮಸ್ವರೂಪಿಯಾಗಿ ಬಂತು ಟಿಪ್ಪರ್​ ಲಾರಿ

Follow us on

Related Stories

Most Read Stories

Click on your DTH Provider to Add TV9 Kannada