AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಫರ್ ಇದೆಯೆಂದು ಆನ್​ಲೈನ್​​ನಲ್ಲಿ ವಾಚ್ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದು ಆಲೂಗಡ್ಡೆ!

ಫೇಸ್​ಬುಕ್, ಇನ್​ಸ್ಟಾಗ್ರಾಂಗಳಲ್ಲಿ ಭರ್ಜರಿ ಆಫರ್​ಗಳ ಲಿಂಕ್ ಬಂತೆಂದು ಆರ್ಡರ್ ಮಾಡುವ ಮುನ್ನ ಇರಲಿ ಎಚ್ಚರ. ರಾಯಚೂರಿನಲ್ಲಿ ಆಂಧ್ರ ಮೂಲದ ವ್ಯಕ್ತಿಯೊಬ್ಬರು ಇಂಥ ಲಿಂಕ್ ಮೂಲಕ ವಾಚ್​ಗೆ ಆರ್ಡರ್ ಮಾಡಿದ್ದು, ಕೊರಿಯರ್ ಮೂಲಕ ಆಲೂಗಡ್ಡೆ ಬಂದಿದೆ! ಇದರಿಂದ ಬೇಸ್ತು ಬಿದ್ದ ಅವರೀಗ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

ಆಫರ್ ಇದೆಯೆಂದು ಆನ್​ಲೈನ್​​ನಲ್ಲಿ ವಾಚ್ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದು ಆಲೂಗಡ್ಡೆ!
ಆನ್​ಕೈನ್​ನಲ್ಲಿ ವಾಚ್ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದು ಆಲೂಗಡ್ಡೆ!
ಭೀಮೇಶ್​​ ಪೂಜಾರ್
| Edited By: |

Updated on: Jan 22, 2026 | 10:46 AM

Share

ರಾಯಚೂರು, ಜನವರಿ 22: ಸಾಮಾಜಿಕ ಜಾಲತಾಣಗಳಲ್ಲಿ ಶಾಪಿಂಗ್ (Online Shopping) ಮಾಡುವವರಿಗಿದು ಎಚ್ಚರಿಕೆಯ ಗಂಟೆ. ಫೇಸ್‌ಬುಕ್ (Facebook) ಹಾಗೂ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡ ಭರ್ಜರಿ ಆಫರ್ ನಂಬಿ ವಾಚ್ ಆರ್ಡರ್ ಮಾಡಿದ ವ್ಯಕ್ತಿಗೆ ಕೈಗೆ ಬಂದಿದ್ದು ಆಲೂಗಡ್ಡೆ ಪಾರ್ಸಲ್! ಈ ಅಚ್ಚರಿಯ ಘಟನೆ ರಾಯಚೂರು (Raichur) ಜಿಲ್ಲೆಯ ಯರಮರಸ್ ಬಳಿ ನಡೆದಿದೆ. ಆಂಧ್ರಪ್ರದೇಶ ಮೂಲದ ದಗ್ಗುಬಾಟಿ ಬಾಬು ಎಂಬವರು ಕೆಲಸಕ್ಕಾಗಿ ರಾಯಚೂರಿಗೆ ಬಂದಿದ್ದು, ಯರಮರಸ್ ಸಮೀಪದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಜನವರಿ 13ರಂದು ಸಾಮಾಜಿಕ ಜಾಲತಾಣದಲ್ಲಿ 5 ಸಾವಿರ ರೂ. ಬೆಲೆ ಬಾಳುವ ವಾಚ್ ಕೇವಲ 1,200 ರೂ.ಗೆ ಸಿಗುತ್ತದೆ ಎಂಬ ಜಾಹೀರಾತು ನೋಡಿ ಅವರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾರೆ.

ಕೆಲವು ದಿನಗಳ ಬಳಿಕ ಕೊರಿಯರ್ ಮೂಲಕ ಪಾರ್ಸಲ್ ಬಂದಿದ್ದು, ಕ್ಯಾಶ್ ಆನ್ ಡೆಲಿವರಿ ಮೂಲಕ ಹಣ ಪಾವತಿಸಿ ಬಾಬು ಪಾರ್ಸಲ್ ಪಡೆದಿದ್ದಾರೆ. ಬಾಕ್ಸ್ ಅನ್ನು ಅಲ್ಲಿಯೇ ತೆರೆದು ತೋರಿಸುವಂತೆ ಅವರು ಕೇಳಿಕೊಂಡಾಗ, ವಾಚ್ ಬದಲು ಹಳೆ ಬಟ್ಟೆಯಲ್ಲಿ ಸುತ್ತಿದ ಒಂದು ಆಲೂಗಡ್ಡೆ ಕಂಡು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಅರ್ಧಕ್ಕೆ ಕಾಲೇಜು ಬಿಟ್ಟು ತಾಯಿ ಜತೆ ಆನ್‌ಲೈನ್ ವಂಚನೆಗಿಳಿದ ಮೊಹಮ್ಮದ್ ಉಜೈಫ್

ಈ ಬಗ್ಗೆ ಖಾಸಗಿ ಕೊರಿಯರ್ ಕಂಪೆನಿಯೇ ವಂಚನೆ ಮಾಡಿದೆ ಎಂದು ಬಾಬು ಆರೋಪಿಸಿದರೂ, ಕೊರಿಯರ್ ಸಿಬ್ಬಂದಿ ಅದನ್ನು ನಿರಾಕರಿಸಿ ಪಾರ್ಸಲ್ ಬರುವ ಮೊದಲೇ ವಂಚನೆ ನಡೆದಿರಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ. ಇದೀಗ ಈ ಕುರಿತು ಗ್ರಾಹಕ ನ್ಯಾಯಾಲಯ ಹಾಗೂ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಾಬು ಮುಂದಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ?
ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ?
ಇಂದು ಈ ರಾಶಿಯವರು ಅಪರಿಚಿತರೊಂದಿಗೆ ವ್ಯವಹಾರಗಳಲ್ಲಿ ಜಾಗರೂಕರಾಗಿರಿ
ಇಂದು ಈ ರಾಶಿಯವರು ಅಪರಿಚಿತರೊಂದಿಗೆ ವ್ಯವಹಾರಗಳಲ್ಲಿ ಜಾಗರೂಕರಾಗಿರಿ
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ
ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ