ಬಸ್​ ಮೇಲೆ ಮಾತ್ರ ಮಳೆಯಾಗುವುದಲ್ಲದೇ ಬಸ್​ ಒಳಗಡೆಗೂ ಮಳೆ; ಛತ್ರಿ ತೆರೆದು ಕುಳಿತುಕೊಂಡ ಪ್ರಯಾಣಿಕರು

ಬಸ್​ ಪೂರ್ಣ ಪ್ರಯಾಣಿಕರು ತುಂಬಿದ್ದು, ಈಕಡೆ ಕುಳಿತುಕೊಳ್ಳೋಕು ಆಗದೆ, ನಿಂತುಕೊಳ್ಳೋಕು ಆಗದೆ ಚಳಿಯಿಂದ ಒದ್ದಾಡುತ್ತಿದ್ದಾರೆ. ಪ್ರಯಾಣಿಕರ ಲಗೇಜ್ ಸಂಪೂರ್ಣ ನೀರುಪಾಲಾಗಿವೆ.

ಬಸ್​ ಮೇಲೆ ಮಾತ್ರ ಮಳೆಯಾಗುವುದಲ್ಲದೇ ಬಸ್​ ಒಳಗಡೆಗೂ ಮಳೆ; ಛತ್ರಿ ತೆರೆದು ಕುಳಿತುಕೊಂಡ ಪ್ರಯಾಣಿಕರು
ಬಸ್​ ಮೇಲೆ ಮಾತ್ರ ಮಳೆಯಾಗುವುದಲ್ಲದೇ ಬಸ್​ ಒಳಗಡೆಗೂ ಮಳೆ; ಛತ್ರಿ ತೆರೆದು ಕುಳಿತುಕೊಂಡ ಪ್ರಯಾಣಿಕರು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:May 08, 2022 | 10:27 PM

ಶಿವಮೊಗ್ಗ: ರಾಜ್ಯದ್ಯಂತ ಭಾರೀ ಗುಡುಗು, ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಬಸ್​ ಮೇಲೆ ಮಾತ್ರ ಮಳೆಯಾಗುವುದಲ್ಲದೇ ಬಸ್​ ಒಳಗಡೆ ಕೂಡ ಮಳೆಯಾದಂತಹ ಘಟನೆ ನಡೆದಿದೆ. ಇದು ನಿಮಗೆ ಆಶ್ಚರ್ಯವೆನಿಸಿದರು ಕೂಡ ಇಂದು ಕರ್ನಾಟಕದಲ್ಲಿ ನಡೆದಿರುವಂತಹ ಸತ್ಯ ಘಟನೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಐರಾವತ ಬಸ್​ ಒಳಗಡೆ ಮಳೆ (Rain) ನೀರು ಹೊಕ್ಕು ಪ್ರಯಾಣಿಕರು ಪರದಾಡಿದ್ದಾರೆ. ಮಳೆ ನೀರಿನಿಂದ ರಕ್ಷಣೆ ಪಡೆಯಲು ಇಬ್ಬರೂ ಮೂವರು ಪ್ರಯಾಣಿಕರು ಬಸ್​ ಒಳಗಡೆಯೇ ಛತ್ರಿ ತೆರೆದು ಕುಳಿತಿಕೊಂಡಿದ್ದಾರೆ. ಶಿವಮೊಗ್ಗ ಘಟಕದ ಬಸ್​ ಇದಾಗಿದ್ದು, ಬೆಂಗಳೂರಿಗೆ ಪ್ರಯಾಣಿಸುವಾಗ ಘಟನೆ ಸಂಭವಿಸಿದ್ದ ಸುಮಾರು 10 ರಿಂದ 15 ಕಡೆ ಐರಾವತ ಬಸ್​ ಸೋರುತ್ತಿದೆ. ಮಳೆ ನೀರು ಒಳ ಹೊಕ್ಕಿದ್ದು, ಬಸ್​ ತುಂಬಾ ನೀರು ತುಂಬಿಕೊಂಡಿದೆ. ಬಸ್​ ಪೂರ್ಣ ಪ್ರಯಾಣಿಕರು ತುಂಬಿದ್ದು, ಈಕಡೆ ಕುಳಿತುಕೊಳ್ಳೋಕು ಆಗದೆ, ನಿಂತುಕೊಳ್ಳೋಕು ಆಗದೆ ಚಳಿಯಿಂದ ಒದ್ದಾಡುತ್ತಿದ್ದಾರೆ. ಪ್ರಯಾಣಿಕರ ಲಗೇಜ್ ಸಂಪೂರ್ಣ ನೀರುಪಾಲಾಗಿವೆ. ಕೇವಲ ಪ್ರಯಾಣಿಕರಲ್ಲದೆ ಬಸ್​ ಸಿಬ್ಬಂದಿಗಳು ಮಳೆಯಿಂದಾಗಿ ತೊಂದರೆಗೆ ಸಿಲುಕಿದ್ದು, ಬಸ್​ ಡೈವರ್ ಕುಳಿತುಕೊಳ್ಳುವ ಜಾಗದಲ್ಲಿಯೂ ಮಳೆ ನೀರು ಸೋರುತ್ತಿದ್ದು, ಬಸ್​ ಓಡಿಸಲು ತೊಂದರೆ ಅನುಭವಿಸಿದ್ದಾರೆ.

ಈ ಸಮಸ್ಯೆ ಕುರಿತಾಗಿ ಪ್ರಯಾಣಿಕರಾದ ರಘು ಎಸ್.​ವಿ ಎನ್ನುವವರು ಮಾತನಾಡಿದ್ದು, ಬಸ್​ ಸಂಪೂರ್ಣವಾಗಿ ಸೋರುತ್ತಿದ್ದು, ಬಸ್​ ತುಂಬಾ ನೀರು ತುಂಬಿಕೊಂಡಿದೆ. ಬಸ್​ ಒಳಗಡೆಯೂ ಮಳೆಯಾಗುತ್ತಿದೆ. ನಾವು ಒದ್ದೆಯಾಗುವುದಲ್ಲದೇ ನಮ್ಮ ಲಗೇಜ್​ ಕೂಡ ಸಂಪೂರ್ಣವಾಗಿ ಒದ್ದೆಯಾಗಿವೆ. ಈ ಕುರಿತಾಗಿ ಬಸ್​ ಸಿಬ್ಬಂದಿಗಳಿಗೆ ಹೇಳಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಪರ್ಯಾಯವಾಗಿ ಬೇರೆ ಬಸ್​ ವ್ಯವಸ್ಥೆ ಕೂಡ ಮಾಡಿಲ್ಲ. ನಮ್ಮ ಹಣ ನಮಗೆ ವಾಪಸ್ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವತಃ ಬಸ್​ ಸಿಬ್ಬಂದಿಗಳು ಈ ಕುರಿತಾಗಿ ಸಾರಿಗೆ ನಿಗಮಕ್ಕೆ ತಿಳಿಸಿದರು ಕೂಡ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲವೆಂದು ಬಸ್​ ಡೈವರ್ ಮತ್ತು ಕಂಡಕ್ಟರ್​ ಹೇಳಿದ್ದಾರೆ. ನೆಮ್ಮದಿಯಾಗಿ ಕಣ್ಣು ಮುಚ್ಚಿ ಮಲಗಬೇಕಾದ ಪ್ರಯಾಣಿಕರು ಬಿಟ್ಟ ಕಣ್ಣು ಬಿಟ್ಟ ಹಾಗೆ ಊರು ಯಾವಾಗ ಬರುತ್ತದೋ ಎಂದು ಕಾದು ಕುಳಿತಿದ್ದಾರೆ.

ಇನ್ನೂ 5 ದಿನ ಭಾರೀ ಮಳೆ ಸಾಧ್ಯತೆ

ಕರ್ನಾಟಕದ ಉತ್ತರ ಒಳನಾಡಿನಲ್ಲಿ ಇನ್ನೂ 5 ದಿನ ಮಳೆ ಸುರಿಯುವ ಸಾಧ್ಯತೆಯಿದೆ. ಕರಾವಳಿಯಲ್ಲಿ ಮೇ 11, 12ರಂದು ಮಳೆಯಾಗುವ ನಿರೀಕ್ಷೆಯಿದೆ ಎಂದು ಟಿವಿ9ಗೆ ಹವಾಮಾನ ತಜ್ಞ ಪ್ರಸಾದ್‌ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು ರಾತ್ರಿ ಮತ್ತು‌ ನಾಳೆ ಮಳೆ ಇರಲಿದ್ದು, ನಾಳೆ ಹಗಲಿನ ವೇಳೆ ಮೋಡ ಕವಿದ ವಾತಾವರಣವಿರಲಿದೆ. ಕೆಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್ ಮುನ್ಸೂಚನೆ ನೀಡಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ಮಲೆನಾಡು, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲೂ ಮೇ 11ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಮತ್ತು ಉತ್ತರ ಒಳನಾಡಿನಲ್ಲಿ ಇಂದು ಗುಡುಗು ಸಹಿತ ಮಳೆಯಾಗುತ್ತಿದೆ.

ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡುವ ಚೆನೈ ಬೆಂಗಳೂರು ಬಸ್​ನಲ್ಲಿ ಮಳೆಯಿಂದಾಗಿ ನೀರು ತುಂಬಿಕೊಂಡಿದ್ದು,

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.    

Published On - 9:31 pm, Sun, 8 May 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?