ಆರೋಗ್ಯ ಇಲಾಖೆ ಸಿಬ್ಬಂದಿ ಎಡವಟ್ಟು: ಬೆಳಗ್ಗೆ ಪಾಸಿಟಿವ್, ಸಂಜೆ No ಪಾಸಿಟಿವ್
ಧಾರವಾಡ: ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮಹಾ ಎಡವಟ್ಟು ಮಾಡಿದ್ದಾರೆ. ಇವರ ತಪ್ಪಿನಿಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕಂಗಾಲಾಗಿದ್ದಾರೆ. ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಕರೆ ಮಾಡಿ ಸಂಜೆ ವೇಳೆಗೆ ಪಾಸಿಟಿವ್ ಇಲ್ಲವೆಂದು ಮೆಸೇಜ್ ಹಾಕಿದ್ದಾರೆ. ಯಾವುದು ಸರಿ, ಯಾವುದು ತಪ್ಪು.. ಮುಂದೇನು ಎಂಬ ಚಿಂತೆಯಲ್ಲಿ ವ್ಯಕ್ತಿ ಗೊಂದಲಕ್ಕೀಡಾಗಿದ್ದಾರೆ. ತನ್ನ ಸ್ನೇಹಿತನಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತನಗೂ ಸೋಂಕು ತಗುಲಿರಬಹುದು ಎಂಬ ಶಂಕೆಯಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಜುಲೈ 13ರಂದು ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದರು. ನಂತರ […]

ಧಾರವಾಡ: ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮಹಾ ಎಡವಟ್ಟು ಮಾಡಿದ್ದಾರೆ. ಇವರ ತಪ್ಪಿನಿಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕಂಗಾಲಾಗಿದ್ದಾರೆ. ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಕರೆ ಮಾಡಿ ಸಂಜೆ ವೇಳೆಗೆ ಪಾಸಿಟಿವ್ ಇಲ್ಲವೆಂದು ಮೆಸೇಜ್ ಹಾಕಿದ್ದಾರೆ. ಯಾವುದು ಸರಿ, ಯಾವುದು ತಪ್ಪು.. ಮುಂದೇನು ಎಂಬ ಚಿಂತೆಯಲ್ಲಿ ವ್ಯಕ್ತಿ ಗೊಂದಲಕ್ಕೀಡಾಗಿದ್ದಾರೆ.
ತನ್ನ ಸ್ನೇಹಿತನಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತನಗೂ ಸೋಂಕು ತಗುಲಿರಬಹುದು ಎಂಬ ಶಂಕೆಯಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಜುಲೈ 13ರಂದು ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದರು. ನಂತರ ಜುಲೈ 17ಕ್ಕೆ ಕೆಎಸ್‌ಆರ್‌ಟಿಸಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗೆ ಕರೆ ಮಾಡಿದ ಸಿಬ್ಬಂದಿ ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ ಆಂಬ್ಯುಲೆನ್ಸ್ ಬರುತ್ತೆ ಮನೆ ವಿಳಾಸ ಕೊಡಿ ಎಂದು ಹೇಳಿದ್ದಾರೆ.
ಆದ್ರೆ ಸಂಜೆ ಕೊರೊನಾ ನೆಗೆಟಿವ್ ಎಂದು ಮೊಬೈಲ್‌ಗೆ ಮೆಸೇಜ್ ಹಾಕಿದ್ದಾರೆ. ಇದರಿಂದ ತನಗೆ ಸೋಂಕು ಇದೆಯಾ, ಇಲ್ಲವಾ ಎಂಬ ಗೊಂದಲದಲ್ಲೇ KSRTC ಸಿಬ್ಬಂದಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಎಡವಟ್ಟಿನಿಂದ ವ್ಯಕ್ತಿಗೆ ಮಂಡೆ ಬಿಸಿಯಾಗಿದೆ. ಸಿಬ್ಬಂದಿ ಬೇಜವಾಬ್ದಾರಿತನಕ್ಕೆ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 1:31 pm, Sun, 19 July 20




