ಮತಾಂತರವಾಯ್ತು ಅಡ್ಡಿ.. ಮೃತ ನಾರಾಯಣಾಚಾರ್ ಪುತ್ರಿಯರಿಂದ ಸರ್ಕಾರದ ಚೆಕ್ ವಾಪಸ್
ಕೊಡಗು: ಜಿಲ್ಲೆಯ ತಲಕಾವೇರಿಯಲ್ಲಿ ಸಂಭವಿಸಿದ ಬ್ರಹ್ಮಗಿರಿ ಬೆಟ್ಟಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ನೀಡಿದ ಪರಿಹಾರದ ಚೆಕ್ ಇದೀಗ ಗೊಂದಲಕ್ಕೆ ಕಾರಣವಾಗಿದೆ. ಮೃತ ನಾರಾಯಣಾಚಾರ್ ಪುತ್ರಿಯರ ಹೆಸರು ಬದಲಾಗಿರುವ ಹಿನ್ನೆಲೆಯಲ್ಲಿ ಹಣ ಪಡೆಯಲಾಗದೆ ಅವರಿಬ್ಬರು ಸರ್ಕಾರದ ಚೆಕ್ ಹಿಂದಿರುಗಿಸಿದರು. ಮೃತ ನಾರಾಯಣಾಚಾರ್ ಪುತ್ರಿಯರು ಅನ್ಯಧರ್ಮಕ್ಕೆ ಮತಾಂತರಗೊಂಡಿರುವ ಹಿನ್ನೆಲೆಯಲ್ಲಿ ತಮ್ಮ ಹೆಸರುಗಳನ್ನು ಬದಲಿಸಿಕೊಂಡಿದ್ದಾರೆ. ಶಾರದಾ ಆಚಾರ್ ಮತ್ತು ನಮಿತಾ ಆಚಾರ್ ಎಂಬ ಮೂಲ ಹೆಸರಗಳಿದ್ದವರು ನಮಿತಾ ನಜೇರತ್ ಹಾಗೂ ಶೆನೋನ್ ಫರ್ನಾಂಡೀಸ್ ಎಂದು ಪರಿವರ್ತನೆ ಮಾಡಿಕೊಂಡಿದ್ದಾರೆ. ಆದರೆ, ಪರಿಹಾರದ […]

ಕೊಡಗು: ಜಿಲ್ಲೆಯ ತಲಕಾವೇರಿಯಲ್ಲಿ ಸಂಭವಿಸಿದ ಬ್ರಹ್ಮಗಿರಿ ಬೆಟ್ಟಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ನೀಡಿದ ಪರಿಹಾರದ ಚೆಕ್ ಇದೀಗ ಗೊಂದಲಕ್ಕೆ ಕಾರಣವಾಗಿದೆ. ಮೃತ ನಾರಾಯಣಾಚಾರ್ ಪುತ್ರಿಯರ ಹೆಸರು ಬದಲಾಗಿರುವ ಹಿನ್ನೆಲೆಯಲ್ಲಿ ಹಣ ಪಡೆಯಲಾಗದೆ ಅವರಿಬ್ಬರು ಸರ್ಕಾರದ ಚೆಕ್ ಹಿಂದಿರುಗಿಸಿದರು.
ಮೃತ ನಾರಾಯಣಾಚಾರ್ ಪುತ್ರಿಯರು ಅನ್ಯಧರ್ಮಕ್ಕೆ ಮತಾಂತರಗೊಂಡಿರುವ ಹಿನ್ನೆಲೆಯಲ್ಲಿ ತಮ್ಮ ಹೆಸರುಗಳನ್ನು ಬದಲಿಸಿಕೊಂಡಿದ್ದಾರೆ. ಶಾರದಾ ಆಚಾರ್ ಮತ್ತು ನಮಿತಾ ಆಚಾರ್ ಎಂಬ ಮೂಲ ಹೆಸರಗಳಿದ್ದವರು ನಮಿತಾ ನಜೇರತ್ ಹಾಗೂ ಶೆನೋನ್ ಫರ್ನಾಂಡೀಸ್ ಎಂದು ಪರಿವರ್ತನೆ ಮಾಡಿಕೊಂಡಿದ್ದಾರೆ. ಆದರೆ, ಪರಿಹಾರದ ಚೆಕ್ಗಳಲ್ಲಿ ಇವರ ಮೂಲ ಹೆಸರು ನಮೂದಿಸಲಾಗಿತ್ತು. ಹಾಗಾಗಿ, ತಮ್ಮ ಮೃತ ತಂದೆಯ ಪರಿಹಾರದ ಚೆಕ್ನ ಡ್ರಾ ಮಾಡಲು ಹೆಸರು ಬದಲಾವಣೆ ಅಡ್ಡಿಯಾದ ಹಿನ್ನೆಲೆಯಲ್ಲಿ ಚೆಕ್ಗಳನ್ನು ಸರ್ಕಾರಕ್ಕೆ ವಾಪಸ್ ಮಾಡಿದ್ದಾರೆ.
ಆದ್ದರಿಂದ ಜಿಲ್ಲಾಡಳಿತವು ಪುತ್ರಿಯರಿಬ್ಬರಿಗೂ ನಾಮ ಪರಿವರ್ತನೆಯ ಸೂಕ್ತ ದಾಖಲೆಗಳನ್ನು ನೀಡಲು ಸೂಚಿಸಿದ್ದಾರೆ. ಕಳೆದ ಆಗಸ್ಟ್ 15ರಂದು ಮೃತ ನಾರಾಯಣಾಚಾರ್ ಪುತ್ರಿಯರಿಗೆ ಸಚಿವ ವಿ. ಸೋಮಣ್ಣ ಪರಿಹಾರದ ಚೆಕ್ಗಳನ್ನು ನೀಡಿದ್ದರು. ಇದಲ್ಲದೆ, ನಾರಾಯಣಾಚಾರ್ ಜೊತೆ ಮೃತರಾದ ಅವರ ಸಹೋದರ ಆನಂದತೀರ್ಥರ ಪರಿಹಾರದ ಚೆಕ್ನ ಅವರ ಸಹೋದರಿಗೆ ವಿತರಣೆ ಮಾಡಿದ್ದರು.
ಆಗ ಪುತ್ರಿಯರಿಬ್ಬರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ, ಆನಂದ ತೀರ್ಥರ ಚೆಕ್ನ ಮಡಿಕೇರಿ ತಹಶೀಲ್ದಾರ್ ಮಹೇಶ್ ತಡೆಹಿಡಿದಿದ್ದರು.




