Chennaveera Kanavi Death: ‘ಅರಿವೇ ಗುರು, ನುಡಿ ಜ್ಯೋತಿರ್ಲಿಂಗ, ದಯವೇ ಧರ್ಮದ ಮೂಲತರಂಗ’
Tribute to Chennaveera Kanavi : ‘ಸ್ಥಳೀಯತೆಯನ್ನು ಗೌರವಿಸಿ, ಪ್ರೀತಿಸಿ, ಹಲವು ದಿಕ್ಕಿನ ಗಾಳಿಯನ್ನು ಕಣವಿಯವರ ಕಾವ್ಯ ಸ್ವೀಕರಿಸಿದೆ. ಇದು ಅವರ ಅನುವಾದಿತ ಕಾವ್ಯದಲ್ಲಿಯೂ ಇದೆ. ಪ್ರಯೋಗಶೀಲ ಮತ್ತು ಚಿಂತನಶೀಲವನ್ನು ಕನ್ನಡದಲ್ಲಿ ಏಳು ದಶಕಗಳವರೆಗೆ ಮುನ್ನಡೆಸಿದ ಕಣವಿಯವರ ಕಾವ್ಯ ಕನ್ನಡ ಕಾವ್ಯದ ಬಳ್ಳಿಯೊಂದು ವಿಶಾಲವಾಗಿ ಹಲವು ಮರಗಳನ್ನು ತಬ್ಬಿನಿಂತಂತೆ ನಿಂತುಕೊಂಡಿದೆ.’ ಡಾ. ವಿಕ್ರಮ ವಿಸಾಜಿ
ಚೆನ್ನವೀರ ಕಣವಿ | Chennaveera Kanavi: ಕಣವಿಯವರ ಕವಿತೆಗಳಲ್ಲಿ ಸಂಭವಿಸುವ ಇನ್ನೊಂದು ಅಂಶವಿದೆ; ನೆಲಕುದುರಿ ಬಿದ್ದ ಹಣ್ಣೆಲೆಯನ್ನು ಮಣ್ಣು ಗೊಬ್ಬರ ಮಾಡಿ ತನ್ನೊಳಗೆ ರುಬ್ಬುವುದು -ಎಂದು ಹೇಳುವಾಗ ‘ರುಬ್ಬುವುದು’ ಎಂಬ ಪದ ಹಿಂಸೆಯ ದ್ಯೋತಕವಲ್ಲ. ಹೊಸ ಹುಟ್ಟನ್ನು ಪಡೆದುಕೊಳ್ಳುವುದರ ಸಂಕೇತ. ಹಾಗೆಯೇ ‘ಸೂಜಿಯ ಮೊನೆ’ ಎಂಬ ಶಬ್ದ ಕೂಡ. ಯಾವ ಶಬ್ದ ಮೇಲ್ನೋಟಕ್ಕೆ ಹಿಂಸೆಯನ್ನು ಸಂಕೇತಿಸಬಲ್ಲದೊ, ಅಂಥ ಶಬ್ದಕ್ಕೆ ಕಣವಿಯವರು ಜೀವನ ಮೌಲ್ಯಗಳ ಕವಚಧಾರಣೆ ಮಾಡಿದ್ದಾರೆ. ಶಬ್ದಕ್ಕಂಟಿದ ಹಿಂಸಾಮುಖವನ್ನು ಕಳಚುವ ಕ್ರಿಯೆ ಅವರ ಕವಿತೆಗಳಲ್ಲಿ ಮತ್ತೆಮತ್ತೆ ಕಂಡುಬರುವ ಸಂಗತಿ. ‘ಶಬ್ದ’ವಷ್ಟೇ ಅಲ್ಲ, ಜೀವನ ಕುರಿತ ಅವರ ಧೋರಣೆ ಕೂಡಾ ಇದೇ ಆಗಿದೆ. ನಾನು ಮೊದಲೇ ಹೇಳಿದಂತೆ, ಕಣವಿಯವರ ಕಾವ್ಯವ್ಯಕ್ತಿತ್ವ ಮೊದಲಿನಿಂದಲೂ ಬದುಕಿನ ಆಗುಹೋಗುಗಳನ್ನು ಮನುಷ್ಯ ಪ್ರಯತ್ನದ ಫಲವೆಂದು ನಂಬಿದೆ. ದುಡಿಯುವುದು, ಬೆಳೆಯುವುದು, ಮಾಗುವುದು ಇವೆಲ್ಲ ಸಾರ್ಥಕ ಬದುಕಿನ ಗುಟ್ಟುಗಳಾಗಿ ಅವರಿಗೆ ಕಂಡಿವೆ. ಈ ಅರ್ಥದಲ್ಲಿ ಕಣವಿಯವರು ಕೂಡ ಸಮಾಜವಾದಿ ಕವಿಗಳೆ. ಡಾ. ವಿಕ್ರಮ ವಿಸಾಜಿ, ಲೇಖಕ, ಅನುವಾದಕ
*
(ಭಾಗ 6)
ಕಣವಿಯವರ ಕಾವ್ಯವೆಂದರೆ ಮತ್ತೆ ನೆನಪಾಗುವುದು ಧಾರವಾಡದ ಮಳೆ, ಗುಡ್ಡ, ಕರ್ನಾಟಕ ಕಾಲೇಜು, ವಿದ್ಯಾವರ್ಧಕ ಸಂಘ ಹಾಗೂ ಸಾಹಿತ್ಯ ಬಳಗ. ತಾನು ನಿಂತ ನೆಲವನ್ನು, ಈ ನೆಲದ ಸಂಬಂಧ ಗಟ್ಟಿಗೊಳಿಸಿದ ಬಳಗವನ್ನು ಎದೆಗಪ್ಪಿ ಹಾಡುವ ಬಗೆ ಓದಿಯೇ ಅನುಭವಿಸಬೇಕು. ಮುಗ್ಧತೆ-ಚಿಂತನಶೀಲತೆ-ಆದ್ರ್ರತೆಗಳ ಕೂಡು ಲೋಕವಿದು. ಸಂಬಂಧಗಳ ವಿಶಾಲ ಲೋಕವೇ ಇಲ್ಲಿ ಹರಡಿದೆ. ಕರ್ನಾಟಕ ಕಾಲೇಜಿನ ಮಾಳಿಗೆಯ ಮೇಲೆ ನಿಂತು ನೋಡಿದ ನಿಸರ್ಗಾನುಭವವೆ ಇಲ್ಲಿ ದೀರ್ಘ ಕವಿತೆಯಾಗಿ ಹೊಮ್ಮಿದೆ. ಅದೊಂದು ಅಪೂರ್ವ ಪೇಂಟಿಂಗಿನಂತೆ ಕಂಗೊಳಿಸುತ್ತಿದೆ. ನಿಸರ್ಗದೃಶ್ಯದ ಚಿತ್ರಣವಿದು. ಕಲಾವಲಯದ ಹಲವು ಪ್ರಯೋಗಗಳನ್ನು ಕಣವಿಯವರು ತಮ್ಮ ಕಾವ್ಯದಲ್ಲಿ ಬಳಸುತಿದ್ದರೆ? ಭೂದೃಶ್ಯ ಚಿತ್ರಣ, ಭಾವ ಚಿತ್ರಣ, ಸಂಯೋಜಿತ ಚಿತ್ರಕಲೆ, ಅಮೂರ್ತ ಚಿತ್ರಕಲೆ, ವಾಸ್ತವವಾದಿ ಚಿತ್ರಕಲೆ, ಜನಪದ ಚಿತ್ರಕಲೆ, ಕ್ಯೂಬಿಸಂ, ಮಿನಿಯೇಚರ್ ಇವೆಲ್ಲವುಗಳಿಗೂ ಕಣವಿಯವರ ಕಾವ್ಯ ಜಗತ್ತಿನಿಂದ ನಿದರ್ಶನಗಳನ್ನು ಕೊಡಬಹುದು. ಚಿತ್ರಕ ಶಕ್ತಿ ಎಂದರೆ ಏನು? ಎಂದು ಅರ್ಥಮಾಡಿಕೊಳ್ಳುವವರು ಕಣವಿಯವರ ಕಾವ್ಯವನ್ನು ಗಮನಿಸಬೇಕು.
ಭಾಗ 4 : Chennaveera Kanavi Death: ಕಾವ್ಯಕುಶಲಿ ಚೆನ್ನವೀರ ಕಣವಿಯವರಿಗೆ ಸುನೀತಗಳೆಂದರೆ ಇಷ್ಟಾರ್ಥ ಸಿದ್ಧಿಯಂತೆ
ನಾಡು ನುಡಿಯ ಕುರಿತು ಕನ್ನಡದ ಅತ್ಯುತ್ತಮ ಕಾವ್ಯವನ್ನು ಹೆಕ್ಕುವಾಗ ಕಣವಿಯವರ ಕವಿತೆಗಳನ್ನು ಬಿಡಲು ಸಾಧ್ಯವಿಲ್ಲ. ‘ವಿಶ್ವಭಾರತಿಗೆ ಕನ್ನಡದಾರತಿ’ ಕವಿತೆ ಕುವೆಂಪು ಅವರಿಗೂ ಅತ್ಯಂತ ಪ್ರಿಯವಾದ ಕವಿತೆ. ಕನ್ನಡ ಪರಂಪರೆಯ ಅಂತಃಸತ್ವ, ಮಾನವೀಯ ಮುಖಗಳನ್ನು ಮುನ್ನೆಲೆಗೆ ತಂದ ಕವಿತೆ. ಕನ್ನಡ ಸಂಸ್ಕøತಿಯ ವಿಶಾಲ ಅಂತಃಕರಣದ ಕೆಲ ಮಾದರಿಗಳನ್ನು ದರ್ಶಿಸಿದೆ. ವಿಶ್ವಭಾರತಿಗೆ ಕನ್ನಡವು ತನ್ನ ಯಾವ ಮೌಲ್ಯಗಳಿಂದ ಆರತಿ ಬೆಳಗಬೇಕು? ಎಂಬುದನ್ನು ಹೊಸ ಲಯದಲ್ಲಿ ಕಾವ್ಯ ಕಲ್ಪಿಸಿದೆ.
ಅರಿವೇ ಗುರು, ನುಡಿ ಜ್ಯೋತಿರ್ಲಿಂಗ, ದಯವೇ ಧರ್ಮದ ಮೂಲತರಂಗ: ವಿಶ್ವಭಾರತಿಗೆ ಕನ್ನಡದಾರತಿ! ಮೊಳಗಲಿ ಮಂಗಲ ಜಯಭೇರಿ!
ಸ್ಥಳೀಯತೆಯನ್ನು ಗೌರವಿಸಿ, ಪ್ರೀತಿಸಿ, ಹಲವು ದಿಕ್ಕಿನ ಗಾಳಿಯನ್ನು ಕಣವಿಯವರ ಕಾವ್ಯ ಸ್ವೀಕರಿಸಿದೆ. ಅವರು ಮಾಡಿರುವ ಕಾವ್ಯದ ಅನುವಾದಗಳಲ್ಲೂ ಇದಿದೆ. ಕಾಲದಿಂದ ಕಾಲಕ್ಕೆ ಅವರ ಕಾವ್ಯದ ಸಂವೇದನೆ ಹಿಗ್ಗುತ್ತಾ ಹೋಗಿದ್ದರಲ್ಲೂ ಮೇಲಿನ ಗುಣವಿದೆ. ಪ್ರಯೋಗಶೀಲತೆ ಮತ್ತು ಚಿಂತನಶೀಲತೆಗಳನ್ನು ಕನ್ನಡದಲ್ಲಿ ಏಳು ದಶಕಗಳವರೆಗೆ ಮುನ್ನಡೆಸಿದ ಕಣವಿಯವರ ಕಾವ್ಯ ಕನ್ನಡ ಕಾವ್ಯದ ಬಳ್ಳಿಯೊಂದು ವಿಶಾಲವಾಗಿ ಹಲವು ಮರಗಳನ್ನು ತಬ್ಬಿನಿಂತಂತೆ ನಿಂತುಕೊಂಡಿದೆ.
(ಮುಗಿಯಿತು)
ಭಾಗ 5 : Chennaveera Kanavi Death: ‘ಹೂವುಹಣ್ಣೂ ಗಿಡದ ಎಡೆಬಿಡದ ಕಾಣಿಕೆ, ಸಾವೂನೋವೂ ನಮ್ಮ ದಿನದ ಹೊಂದಾಣಿಕೆ’
ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/chennaveera-kanavi-and-his-literary-work
Published On - 1:31 pm, Wed, 16 February 22