ಕಾರಿಗೆ ಅಡ್ಡ ಹಾಕಿದ ಒಂಟಿ ಸಲಗ, ಆನೆಯ ಒಂದೇ ಒಂದು ತಿವಿತಕ್ಕೆ ಮರ್ಸಿಡಿಸ್ ಬೆಂಝ್ ಜಖಂ: ದಂಪತಿ ಪಾರು
ಕೊಡಗಿನಲ್ಲಿ ಒಂಟಿ ಸಲಗ ಒಂದು ಕಾರಿನ ಮೇಲೆ ದಾಳಿ ಮಾಡಿದೆ. ತನ್ನ ಚೂಪಾದ ದಂತದಿಂದ ತಿವಿದು ಕಾರಿಗೆ ತಿವಿದಿದೆ. ಪರಿಣಾಮ ಐಷರಾಮಿ ಬೆಂಝ್ ಕಾರಿಗೆ ಮುಂಭಾಗಕ್ಕೆ ಹಾನಿಯಾಗಿದೆ. ಇನ್ನು ಆನೆ ತಿವಿತಕ್ಕೆ ಕಾರಿನ ಬಾನೆಟ್ ಮೇಲೆ ತೂತು ಬಿದ್ದಿದೆ. ಇನ್ನು ಕಾರಿನಲ್ಲಿದ್ದ ದಂಪತಿ ಕಾರುಬಿಟ್ಟು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.