‘ಎಮ್ಮೆ ಬದಲು ಐದಾರು ಎಕರೆ ಜಮೀನು ಕೊಟ್ಟಿದ್ದರೆ’: ಮಾವನ ಬಳಿ ಅರ್ಷದ ನದೀಮ್ ಬೇಡಿಕೆ; ವಿಡಿಯೋ ನೋಡಿ

Arshad Nadeem: ಅಲ್ಲಿನ ಸಂಪ್ರದಾಯದ ಪ್ರಕಾರ, ಎಮ್ಮೆಯನ್ನು ಉಡುಗೊರೆಯನ್ನಾಗಿ ನೀಡುವುದು ಪದ್ಧತಿಯಾಗಿದೆ. ಹೀಗಾಗಿ ಅರ್ಷದ್ ಅವರಿಗೆ ಅವರ ಮಾವ ಎಮ್ಮೆಯನ್ನು ಉಡುಗೊರೆಯನ್ನಾಗಿ ನೀಡಿದ್ದರು. ಆದರೆ ಇದೀಗ ಅರ್ಷದ್ ನದೀಮ್ ತನ್ನ ಪತ್ನಿಯೊಂದಿಗೆ ಪಾಕಿಸ್ತಾನಿ ಪತ್ರಕರ್ತರಿಗೆ ನೀಡಿರುವ ಸಂದರ್ಶನದ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ತಮ್ಮ ಮಾವ ನೀಡಿರುವ ಉಡುಗೊರೆಯ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ.

‘ಎಮ್ಮೆ ಬದಲು ಐದಾರು ಎಕರೆ ಜಮೀನು ಕೊಟ್ಟಿದ್ದರೆ’: ಮಾವನ ಬಳಿ ಅರ್ಷದ ನದೀಮ್ ಬೇಡಿಕೆ; ವಿಡಿಯೋ ನೋಡಿ
ಅರ್ಷದ್ ನದೀಮ್
Follow us
ಪೃಥ್ವಿಶಂಕರ
|

Updated on: Aug 16, 2024 | 9:25 PM

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 92.97 ಮೀಟರ್‌ ದೂರ ಜಾವೆಲಿನ್‌ ಎಸೆದು ಚಿನ್ನದ ಪದಕ ಗೆದ್ದಿದ್ದ ಅರ್ಷದ್‌ ನದೀಮ್‌ ಇದೀಗ ಪಾಕಿಸ್ತಾನದಲ್ಲಿ ಸ್ಟಾರ್‌ ಎನಿಸಿಕೊಂಡಿದ್ದಾರೆ. ಪಾಕಿಸ್ತಾನದ ಪ್ರತಿಯೊಂದು ಮಾಧ್ಯಮಗಳು ಕೂಡ ಅರ್ಷದ್ ಅವರನ್ನು ಸಂದರ್ಶಿಸಲು ನಾ ಮುಂದೆ ತಾ ಮುಂದೆ ಎಂಬಂತೆ ಪೈಪೋಟಿಗೆ ಬಿದ್ದಿವೆ. ಇದಕ್ಕೆ ಕಾರಣವೂ ಇದ್ದು, ಅಧಿಕ ಸವಲತ್ತುಗಳಿಲ್ಲದೆ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ನದೀಮ್ ಪಾಕಿಸ್ತಾನದ ಅದೇಷ್ಟೋ ವರ್ಷಗಳ ಪದಕದ ಬರವನ್ನು ನೀಗಿಸಿದರು. ಹೀಗಾಗಿ ನದೀಮ್ ಮೇಲೆ ಪಾಕಿಸ್ತಾನದಲ್ಲಿ ಬಹುಮಾನಗಳ ಮಳೆಯೇ ಹರಿಯುತ್ತಿದೆ. ಅದರಲ್ಲಿ ಎಲ್ಲರಿಗೂ ಕುತೂಹಲ ಮೂಡಿಸಿದ ಬಹುಮಾನವೆಂದರೆ, ನದೀಮ್ ಅವರ ಮಾವ ನದೀಮ್ ಅವರಿಗೆ ಒಂದು ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದು. ತಮ್ಮ ಮಾವನವರಿಂದ ಎಮ್ಮೆಯನ್ನು ಉಡುಗೊರೆಯಾಗಿ ಪಡೆದಿದ್ದ ನದೀಮ್ ಇದೀಗ ಸಂದರ್ಶನವೊಂದರಲ್ಲಿ ಆ ಉಡುಗೊರೆಯ ಬಗ್ಗೆ ತಮ್ಮ ಮಾವನರನ್ನು ವ್ಯಂಗ್ಯ ಮಾಡಿದ್ದಾರೆ.

ವಾಸ್ತವವಾಗಿ ಅಲ್ಲಿನ ಸಂಪ್ರದಾಯದ ಪ್ರಕಾರ, ಎಮ್ಮೆಯನ್ನು ಉಡುಗೊರೆಯನ್ನಾಗಿ ನೀಡುವುದು ಪದ್ಧತಿಯಾಗಿದೆ. ಹೀಗಾಗಿ ಅರ್ಷದ್ ಅವರಿಗೆ ಅವರ ಮಾವ ಎಮ್ಮೆಯನ್ನು ಉಡುಗೊರೆಯನ್ನಾಗಿ ನೀಡಿದ್ದರು. ಆದರೆ ಇದೀಗ ಅರ್ಷದ್ ನದೀಮ್ ತನ್ನ ಪತ್ನಿಯೊಂದಿಗೆ ಪಾಕಿಸ್ತಾನಿ ಪತ್ರಕರ್ತರಿಗೆ ನೀಡಿರುವ ಸಂದರ್ಶನದ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ತಮ್ಮ ಮಾವ ನೀಡಿರುವ ಉಡುಗೊರೆಯ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ.

5 ಎಕರೆ ಜಮೀನು ಕೇಳಿದ ಅರ್ಷದ್!

ವಾಸ್ತವವಾಗಿ ಪಾಕಿಸ್ತಾನದ ಪತ್ರಕರ್ತರೊಬ್ಬರು ಉಡುಗೊರೆಯಾಗಿ ಪಡೆದ ಎಮ್ಮೆ ಬಗ್ಗೆ ಅರ್ಷದ್ ಬಳಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ತಮಾಷೆಯಾಗಿ ಉತ್ತರಿಸಿರುವ ನದೀಮ್, ಎಮ್ಮೆ ಬದಲು 5-6 ಎಕರೆ ಜಮೀನು ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದಿದ್ದಾರೆ. ದೇವರ ದಯೆಯಿಂದ ನಮ್ಮ ಮಾವನವರು ಉಳ್ಳವರಾಗಿದ್ದು, ಎಮ್ಮೆಯ ಬದಲು ಜಮೀನನ್ನು ಉಡುಗೊರೆಯನ್ನಾಗಿ ನೀಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ತಮ್ಮ ಮಾವನವರನ್ನು ಗೇಲಿ ಮಾಡಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಹಳ್ಳಿಯಲ್ಲಿಯೇ ವಾಸ

ಅರ್ಷದ್ ನದೀಮ್ ಅವರ ಮಾವ ಮುಹಮ್ಮದ್ ನವಾಜ್ ಅವರಿಗೆ ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿದ್ದಾರೆ. ಇದು ಅವರ ಸಮುದಾಯದ ಹಳೆಯ ಸಂಪ್ರದಾಯವಾಗಿರುವುದರಿಂದ ಅರ್ಷದ್‌ಗೆ ಎಮ್ಮೆಯನ್ನು ಉಡುಗೊರೆಯನ್ನಾಗಿ ನೀಡಿರುವುದಾಗಿ ಮಾವ ಮುಹಮ್ಮದ್ ನವಾಜ್ ಹೇಳಿಕೊಂಡಿದ್ದಾರೆ. ಇನ್ನು ಜಾವೆಲಿನ್ ಥ್ರೋನಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಯಶಸ್ಸಿನ ಹೊರತಾಗಿಯೂ, ನದೀಮ್ ತನ್ನ ಪೋಷಕರು ಮತ್ತು ಸಹೋದರರೊಂದಿಗೆ ಪಂಜಾಬ್‌ನ ಖನೇವಾಲ್‌ನಲ್ಲಿಯೇ ವಾಸಿಸುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ