AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sania Mirza: ಕಣ್ಣೀರಿನೊಂದಿಗೆ ಗ್ರ್ಯಾಂಡ್ ಸ್ಲಾಮ್​ಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ

Sania Mirza- Rohan Bopanna: ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ 2017 ರಲ್ಲಿ ಫ್ರೆಂಚ್ ಓಪನ್‌ನ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು. ಇನ್ನು 2009 ರಲ್ಲಿ ಮಹೇಶ್ ಭೂಪತಿಯೊಂದಿಗೆ ಸಾನಿಯಾ ಈ ಪ್ರಶಸ್ತಿಯನ್ನು ಜಯಿಸಿದ್ದರು.

Sania Mirza: ಕಣ್ಣೀರಿನೊಂದಿಗೆ ಗ್ರ್ಯಾಂಡ್ ಸ್ಲಾಮ್​ಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ
Sania Mirza
TV9 Web
| Edited By: |

Updated on: Jan 27, 2023 | 3:04 PM

Share

Australian Open 2023: ಭಾರತದ ಟೆನಿಸ್ ತಾರೆಗಳಾದ ಸಾನಿಯಾ ಮಿರ್ಜಾ (Sania Mirza) ಮತ್ತು ರೋಹನ್ ಬೋಪಣ್ಣ (Rohan Bopanna) ಜೋಡಿ ಆಸ್ಟ್ರೇಲಿಯನ್ ಓಪನ್ 2023 ರ ಮಿಶ್ರ ಡಬಲ್ಸ್ ಫೈನಲ್​ನಲ್ಲಿ ಪರಾಜಯಗೊಂಡಿದ್ದಾರೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಅಂತಿಮ ಹಣಾಹಣಿಯಲ್ಲಿ ಲೂಯಿಸಾ ಸ್ಟೆಫಾನಿ- ರಾಫೆಲ್ ಮ್ಯಾಟೋಸ್ ಜೋಡಿ ವಿರುದ್ಧ ಸಾನಿಯಾ-ಬೋಪಣ್ಣ 6-7, 2-6 ನೇರ ಸೆಟ್​ಗಳಿಂದ ಸೋಲನುಭವಿಸಿದರು. ಈ ಸೋಲಿನೊಂದಿಗೆ ಸಾನಿಯಾ ಮಿರ್ಜಾ ಕಣ್ಣೀರಿನೊಂದಿಗೆ ಗ್ರ್ಯಾಂಡ್​ ಸ್ಲಾಮ್​ಗೆ ವಿದಾಯ ಹೇಳಿದ್ದಾರೆ.

ಈ ಟೂರ್ನಿ ಆರಂಭಕ್ಕೂ ಮುನ್ನವೇ ಅವರು ನಿವೃತ್ತಿ ಘೋಷಿಸಿದ್ದರು. ಅದರಂತೆ ಕೊನೆಯ ಗ್ರ್ಯಾಂಡ್ ಸ್ಲಾಮ್​ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸಾನಿಯಾ ಮಿಶ್ರ ಡಬಲ್ಸ್​ನಲ್ಲಿ ಫೈನಲ್ ಪ್ರವೇಶಿಸಿದ್ದರು. ಹೀಗಾಗಿಯೇ ಆಸ್ಟ್ರೇಲಿಯನ್ ಗ್ರ್ಯಾಂಡ್​ ಸ್ಲಾಮ್ ಗೆಲುವಿನೊಂದಿಗೆ ವೃತ್ತಿ ಬದುಕಿನ ಮಹತ್ವದ ಟೂರ್ನಿಗೆ ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದರು.

ಆದರೆ ಲೂಯಿಸಾ ಸ್ಟೆಫಾನಿ- ರಾಫೆಲ್ ಮ್ಯಾಟೋಸ್ ಜೊತೆಯಾಟದ ಮುಂದೆ ರೋಹನ್ ಬೋಪಣ್ಣ-ಸಾನಿಯಾ ಜೋಡಿ ಎಲ್ಲಾ ಹಂತದಲ್ಲೂ ಮಂಕಾಗಿದ್ದರು. ಪರಿಣಾಮ ನೇರ ಸೆಟ್​ಗಳಿಂದ ಸೋಲುಣಿಸಿ ಲೂಯಿಸಾ ಸ್ಟೆಫಾನಿ- ರಾಫೆಲ್ ಮ್ಯಾಟೋಸ್ ಜೋಡಿ ಪ್ರಶಸ್ತಿಗೆ ಮುತ್ತಿಕ್ಕಿತು.

ಇದನ್ನೂ ಓದಿ
Image
IPLನ ಒಂದು ಪಂದ್ಯಕ್ಕೆ 107 ಕೋಟಿ ರೂ: PSL ನ 1 ಪಂದ್ಯಕ್ಕೆ ಎಷ್ಟು ಗೊತ್ತಾ?
Image
ಟೀಮ್ ಇಂಡಿಯಾ ಪರ ಅತೀ ಹೆಚ್ಚು ಬಾರಿ 150 ಕ್ಕೂ ಅಧಿಕ ರನ್ ಬಾರಿಸಿದ್ದು ಯಾರು ಗೊತ್ತಾ?
Image
Team India: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
Image
Virat Kohli: ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಸಚಿನ್ ದಾಖಲೆ ಉಡೀಸ್

ಇದಕ್ಕೂ ಮುನ್ನ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ 2017 ರಲ್ಲಿ ಫ್ರೆಂಚ್ ಓಪನ್‌ನ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು. ಇನ್ನು 2009 ರಲ್ಲಿ ಮಹೇಶ್ ಭೂಪತಿಯೊಂದಿಗೆ ಸಾನಿಯಾ ಈ ಪ್ರಶಸ್ತಿಯನ್ನು ಜಯಿಸಿದ್ದರು. ಹಾಗೆಯೇ ಇದುವರೆಗೆ 7 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿರುವ ಸಾನಿಯಾ ಮಿರ್ಜಾ ಕೊನೆಯ ಮಹತ್ವದ ಟೂರ್ನಿಯ ಫೈನಲ್​ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಎಡವಿದರು.

ಸದ್ಯ ಗ್ರ್ಯಾಂಡ್​ ಸ್ಲಾಮ್​ಗೆ ಕಣ್ಣೀರಿನ ವಿದಾಯ ಹೇಳಿರುವ ಸಾನಿಯಾ ಮತ್ತೊಂದು ಟೂರ್ನಿಯಲ್ಲಿ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಫೆಬ್ರವರಿ 19 ರಂದು ಪ್ರಾರಂಭವಾಗುವ WTA 1000 ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನ ನಂತರ ಅವರು ವೃತ್ತಿ ಬದುಕಿ ವಿದಾಯ ಹೇಳಲಿದ್ದಾರೆ.

ಲೂಯಿಸಾ ಸ್ಟೆಫಾನಿ- ರಾಫೆಲ್ ಮ್ಯಾಟೋಸ್ (ವಿನ್ನರ್ಸ್​) _ ಸಾನಿಯಾ ಮಿರ್ಜಾ-ರೋಹನ್ ಬೋಪಣ್ಣ (ರನ್ನರ್ಸ್​)

ಭಾವುಕರಾದ ಸಾನಿಯಾ ಮಿರ್ಜಾ:

ಆಸ್ಟ್ರೇಲಿಯಾ ಓಪನ್​ ಗ್ರ್ಯಾಂಡ್​ ಸ್ಲಾಮ್​ನಲ್ಲಿ ವಿದಾಯ ಭಾಷಣ ಮಾಡಿದ ಸಾನಿಯಾ ಮಿರ್ಜಾ ಮಾತಿನ ನಡುವೆ ಭಾವುಕರಾಗಿ ಕಣ್ಣೀರು ಹಾಕಿದರು. ನಾನು ವೃತ್ತಿಪರ ಟೆನಿಸ್ ಜೀವನ ಆರಂಭಿಸಿದ್ದು ಮೆಲ್ಬೋರ್ನ್​ ಅಂಗಳದಲ್ಲಿ. 2005 ರಲ್ಲಿ 18 ವರ್ಷದವಳಿದ್ದಾಗ ಸೆರೆನಾ ವಿಲಿಯಮ್ಸ್ ವಿರುದ್ಧ ಆಡಿದ ಅತ್ಯಂತ ವಿಶೇಷ ಸ್ಮರಣೀಯ. ನಾನು ಆ ಪಂದ್ಯವನ್ನು ಕಳೆದುಕೊಂಡಿದ್ದರೂ ಸಹ, ಅತ್ಯುತ್ತಮ ಪ್ರದರ್ಶನ ನೀಡಿದ್ದೆ. ಇದರ ನಡುವೆ ಹಲವು ಬಾರಿ ಇಲ್ಲಿ ಅನೇಕ ಫೈನಲ್​ಗಳನ್ನು ಆಡಿದ್ದೇನೆ. ಇವೆಲ್ಲವೂ ನನ್ನ ಜೀವನದ ಅತ್ಯುತ್ತಮ ಘಳಿಗೆಯಾಗಿದೆ. ಹೀಗಾಗಿಯೇ ನನ್ನ ಗ್ರ್ಯಾಂಡ್​ ಸ್ಲಾಮ್​ ಕೆರಿಯರ್ ಅನ್ನು ಅಂತ್ಯಗೊಳಿಸಲು ಆಸ್ಟ್ರೇಲಿಯಾ ಓಪನ್​ಗಿಂತ ಉತ್ತಮ ವೇದಿಕೆ ಮತ್ತೊಂದಿಲ್ಲ ಎಂದೆನಿಸಿತು. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಸಾನಿಯಾ ತಿಳಿಸಿದರು.

Follow Us
ತುಂಗಭದ್ರಾದಿಂದ ಕದ್ದುಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಬಂದ್
ತುಂಗಭದ್ರಾದಿಂದ ಕದ್ದುಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಬಂದ್
ರಾಹುಲ್ ಗಾಂಧಿಯ ಪ್ರತಿಕೃತಿ ದಹನದ ವೇಳೆ ಬಿಜೆಪಿ ಶಾಸಕಿಗೆ ಗಾಯ
ರಾಹುಲ್ ಗಾಂಧಿಯ ಪ್ರತಿಕೃತಿ ದಹನದ ವೇಳೆ ಬಿಜೆಪಿ ಶಾಸಕಿಗೆ ಗಾಯ
ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ
ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ
ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ, ವಿತಂಡ ವಾದ ಮುಂದುವರೆಸಿದ ಚೇತನ್
ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ, ವಿತಂಡ ವಾದ ಮುಂದುವರೆಸಿದ ಚೇತನ್
ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, SSLC ಫಲಿತಾಂಶ ಏರಿಕೆ ಆಗಿದ್ಹೇಗೆ? ವಿಶ್ವನಾಥ್
ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, SSLC ಫಲಿತಾಂಶ ಏರಿಕೆ ಆಗಿದ್ಹೇಗೆ? ವಿಶ್ವನಾಥ್
ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು
ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು
3 ತಿಂಗಳ ಕಂದನನ್ನ ತನ್ನದೇ ಮಗು ಎಂಬಂತೆ ಅಪ್ಪಿಕೊಂಡು ಮುದ್ದಾಡಿದ ಮಂಗ
3 ತಿಂಗಳ ಕಂದನನ್ನ ತನ್ನದೇ ಮಗು ಎಂಬಂತೆ ಅಪ್ಪಿಕೊಂಡು ಮುದ್ದಾಡಿದ ಮಂಗ
ಪಂದ್ಯ ಶ್ರೇಷ್ಠ ಕಿಂಗ್ ಕೊಹ್ಲಿಗೆ ಟಿವಿ, ಮೊಬೈಲ್ ಗಿಫ್ಟ್
ಪಂದ್ಯ ಶ್ರೇಷ್ಠ ಕಿಂಗ್ ಕೊಹ್ಲಿಗೆ ಟಿವಿ, ಮೊಬೈಲ್ ಗಿಫ್ಟ್
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ
ತೆಲಂಗಾಣದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕವಿತಾ!
ತೆಲಂಗಾಣದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕವಿತಾ!