Bhuvneshwar Kumar: ಕೆಕೆಆರ್ ವಿರುದ್ಧ ಭುವನೇಶ್ವರ್ ಕುಮಾರ್ ಆಡದಿರಲು ಕಾರಣ ಬಹಿರಂಗ: ಇಲ್ಲಿದೆ ಮಾಹಿತಿ
RCB vs KKR: ಐಪಿಎಲ್ 2025ರ ಮೊದಲ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಅನ್ನೇ ಕಣಕ್ಕಿಳಿಸಿದೆ. ಆದರೆ, ಬೌಲಿರ್ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಮೊದಲ ಪಂದ್ಯದಿಂದ ಹೊರಗುಳಿದರು. ಸ್ಟಾರ್ ಬೌಲರ್ ಭುವಿ ಮಹತ್ವದ ಪಂದ್ಯದಿಂದ ಹೊರಗುಳಿಯಲು ಏನು ಕಾರಣ?, ಈ ಕುರಿತ ಮಾಹಿತಿ ಇಲ್ಲಿದೆ ಓದಿ.

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ಆಗುತ್ತಿದೆ. ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಅನ್ನೇ ಕಣಕ್ಕಿಳಿಸಿದೆ. ಆದರೆ, ಸ್ಟಾರ್ ಬೌಲಿರ್ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಮೊದಲ ಪಂದ್ಯದಿಂದ ಹೊರಗುಳಿದರು.
ಟಾಸ್ ಪ್ರಕ್ರಿಯೆ ವೇಳೆ ನಾಯಕ ರಜತ್ ಪಾಟಿದರ್ ಅವರು ಭುವನೇಶ್ವರ್ ಕುಮಾರ್ ಆಡುವುದಿಲ್ಲ ಎಂಬ ಮಾಹಿತಿ ನೀಡಿದರು. “ನಾವು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದೇವೆ. ಪಿಚ್ ತುಂಬಾ ಕಠಿಣವಾಗಿ ಕಾಣುತ್ತಿದೆ. ನಾವು ಇಬ್ಬರು ಸ್ಪಿನ್ನರ್ಗಳು ಮತ್ತು ಮೂವರು ವೇಗಿಗಳೊಂದಿಗೆ ಆಡುತ್ತೇವೆ. ಆರ್ಸಿಬಿಯನ್ನು ಮುನ್ನಡೆಸುವುದು ಅದ್ಭುತ ಅವಕಾಶ ಮತ್ತು ಶ್ರೇಷ್ಠ ಆಟಗಾರರಿಂದ ಕಲಿಯಲು ಇದೊಂದು ಉತ್ತಮ ಅವಕಾಶ. ಕಳೆದ 10-15 ದಿನಗಳಿಂದ ನಾವು ಸರಿಯಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ” ಎಂದು ಹೇಳಿದರು.
ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಭುವನೇಶ್ವರ್ ಕುಮಾರ್ ಆಡದಿರಲು ಕಾರಣ ಬಹಿರಂಗ ಪಡಿಸಿದೆ. “ನಾವು ಇಬ್ಬರು ಸ್ಪಿನ್ನರ್ಗಳು ಮತ್ತು ಮೂವರು ವೇಗಿಗಳೊಂದಿಗೆ ಆಡುತ್ತೇವೆ. ಸಾಲ್ಟ್, ಲಿಯಾಮ್, ಟಿಮ್ ಮತ್ತು ಹ್ಯಾಜಲ್ವುಡ್ ವಿದೇಶಿ ಕೋಟಾವನ್ನು ತುಂಬುತ್ತಾರೆ! ದುರದೃಷ್ಟವಶಾತ್, ಭುವಿ ಸಣ್ಣ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಅವರು ಶೀಘ್ರದಲ್ಲೇ ಹಿಂತಿರುಗಲಿದ್ದಾರೆ” ಎಂದು ಆರ್ಸಿಬಿ X ನಲ್ಲಿ ಪೋಸ್ಟ್ ಮಾಡಿದೆ.
ಆರ್ಸಿಬಿ ಮಾಡಿರುವ ಟ್ವೀಟ್:
Captaincy debut – RaPa has already kicked things off on a winning note! 🪙
We’ll be chasing first in the season opener! 🤩
Team News – we go with 2 spinners and 3 pacers. Salt, Liam, Tim and Hazlewood fill the overseas quota! 📰
Unfortunately Bhuvi misses out due to a minor… pic.twitter.com/9QMCK5ezY3
— Royal Challengers Bengaluru (@RCBTweets) March 22, 2025
ಭುವನೇಶ್ವರ್ ಕುಮಾರ್ ಅವರ ಅನುಪಸ್ಥಿತಿಯಲ್ಲಿ, ಆರ್ಸಿಬಿ ಜೋಶ್ ಹ್ಯಾಜಲ್ವುಡ್, ರಿಶಿಕ್ ಸಲಾಂ ದಾರ್ ಮತ್ತು ಯಶ್ ದಯಾಳ್ ಅವರನ್ನು ವೇಗದ ಆಯ್ಕೆಗಳಾಗಿ ಆಯ್ಕೆ ಮಾಡಿತು. ಉಳಿದಂತೆ ಓಪನರ್ಗಳಾಗಿ ವಿರಾಟ್ ಕೊಹ್ಲಿ ಜೊತೆ ಫಿಲ್ ಸಾಲ್ಟ್ ಕಣಕ್ಕಿಳಿಯಲಿದ್ದಾರೆ. ಕಳೆದ ಸೀಸನ್ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ನಾಯಕನ ಪಟ್ಟ ಅಲಂಕರಿಸಿರುವ ರಜತ್ ಪಾಟಿದರ್ ಥ್ರೀ ಡೌನ್ ಆಗಿ ಬರಲಿದ್ದಾರೆ.
KKR vs RCB, IPL 2025: ಟಾಸ್ ಗೆದ್ದ ಆರ್ಸಿಬಿ: ಬಲಿಷ್ಠ ಪ್ಲೇಯಿಂಗ್ XI ಕಣಕ್ಕಿಳಿಸಿದ ರಜತ್ ಪಡೆ
ವಿದೇಶಿ ಸ್ಪೋಟಕ ಬ್ಯಾಟರ್ ಲಿಯಾಮ್ ಲಿವಿಂಗ್ಸ್ಟೋನ್ 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇವರು ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. ವಿಕೆಟ್ ಕೀಪರ್ ಜವಾಬ್ದಾರಿ ಜಿತೇಶ್ ಶರ್ಮಾ ಅವರಿಗೆ ನೀಡಲಾಗಿದೆ. ಆಲ್ರೌಂಡರ್ಗಳಾದ ಟಿಮ್ ಡೇವಿಡ್ ಮತ್ತು ಕೃನಾಲ್ ಪಾಂಡ್ಯ ನಂತರದ ಸ್ಥಾನದಲ್ಲಿ ಬರಲಿದ್ದಾರೆ. ಇವರು ಫಿನಿಶಿಂಗ್ ಜವಾಬ್ದಾರಿ ಕೂಡ ನಿಭಾಯಿಸಬೇಕಿದೆ.
ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ ಇಲ್ಲಿದೆ:
ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜೋಶ್ ಹ್ಯಾಜಲ್ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ, ರಿಶಿಕ್ ದಾರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:09 pm, Sat, 22 March 25