AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂ.5, 6, 7ರಲ್ಲಿ ಯಾರು ಬೇಕಾದರೂ ಆಡಬಹುದು: ರಾಹುಲ್ ಕ್ರಮಾಂಕದ ಬಗ್ಗೆ ಗಿಲ್ ಸ್ಪಷ್ಟನೆ

ಕೆಎಲ್ ರಾಹುಲ್​ಗೆ ಭಾರತ ತಂಡದಲ್ಲಿ ನಿರ್ದಿಷ್ಟ ಬ್ಯಾಟಿಂಗ್ ಕ್ರಮಾಂಕವಿಲ್ಲ. ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ರಾಹುಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಬಳಸಿಕೊಳ್ಳುವುದಾಗಿ ನಾಯಕ ಗಿಲ್ ಹೇಳಿದ್ದಾರೆ. ಐದು, ಆರು, ಏಳನೇ ಕ್ರಮಾಂಕಗಳು ಬದಲಾವಣೆಗೆ ಮುಕ್ತ. ಅಲ್ಲದೆ, ನ್ಯೂಜಿಲೆಂಡ್ ಸರಣಿಗೆ ಎತ್ತರದ ವೇಗದ ಬೌಲರ್‌ಗಳ ಆಯ್ಕೆ ಹಿಂದೆ, ಚೆಂಡು ಹಳೆಯದಾದಾಗ ವೇಗ ಮತ್ತು ಬೌನ್ಸ್‌ನಿಂದ ಬ್ಯಾಟರ್‌ಗಳಿಗೆ ಸವಾಲು ಹಾಕುವ ಉದ್ದೇಶವಿದೆ ಎಂದು ಗಿಲ್ ಸ್ಪಷ್ಟಪಡಿಸಿದ್ದಾರೆ.

ನಂ.5, 6, 7ರಲ್ಲಿ ಯಾರು ಬೇಕಾದರೂ ಆಡಬಹುದು: ರಾಹುಲ್ ಕ್ರಮಾಂಕದ ಬಗ್ಗೆ ಗಿಲ್ ಸ್ಪಷ್ಟನೆ
ಕೆಎಲ್ ರಾಹುಲ್, ಶುಭ್​ಮನ್ ಗಿಲ್
ಪೃಥ್ವಿಶಂಕರ
|

Updated on: Nov 03, 2026 | 5:09 PM

Share

ಕನ್ನಡಿಗ ಕೆಎಲ್ ರಾಹುಲ್​ಗೆ ಏಕದಿನ ಹಾಗೂ ಟೆಸ್ಟ್ ತಂಡಗಳಲ್ಲಿ ಅವಕಾಶ ಸಿಗುತ್ತಿವೆಯಾದರೂ ಅವರಿಗೆ ಅಂತ ಒಂದು ನಿರ್ದೀಷ್ಟ ಕ್ರಮಾಂಕವಿಲ್ಲ. ಈ ಮೊದಲು ಆರಂಭಿಕನಾಗಿ, ಆ ನಂತರ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ರಾಹುಲ್​ ಅವರನ್ನು ಸಂದರ್ಭಕ್ಕನುಸಾರವಾಗಿ ಕಣಕ್ಕಿಳಿಸಲಾಗುತ್ತಿದೆ. ಇದು ಪ್ರದರ್ಶನದ ಮೇಲೆ ಪರಿಣಾಮ ಬೀರುವುದರ ಹೊರತಾಗಿಯೂ ರಾಹುಲ್, ಆಡಳಿತ ಮಂಡಳಿ ನೀಡುವ ಕ್ರಮಾಂಕದಲ್ಲಿ ಕಣಕ್ಕಿಳಿದು ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸುತ್ತಿದ್ದಾರೆ. ಇದೀಗ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ನಾಯಕ ಗಿಲ್, ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನಿಗದಿತ ಸ್ಥಾನ ನೀಡುವ ಉದ್ದೇಶವಿಲ್ಲ

ತಂಡದಲ್ಲಿ ಐದನೇ, ಆರನೇ ಹಾಗೂ ಏಳನೇ ಕ್ರಮಾಂಕದ ಬ್ಯಾಟರ್‌ಗಳಿಗೆ ನಿಗದಿತ ಸ್ಥಾನ ನೀಡುವ ಉದ್ದೇಶವಿಲ್ಲ. ಪಂದ್ಯದ ಪರಿಸ್ಥಿತಿ ಹಾಗೂ ಎಷ್ಟು ಓವರ್‌ಗಳು ಬಾಕಿ ಇವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಬ್ಯಾಟಿಂಗ್ ಕ್ರಮಾಂಕ ನಿರ್ಧರಿಸಲಾಗುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಅವರನ್ನು ವಿಭಿನ್ನ ಸ್ಥಾನಗಳಲ್ಲಿ ಆಡಿಸಲಾಗುತ್ತಿದೆ. ಪಂದ್ಯದ ಅಗತ್ಯಕ್ಕೆ ಅನುಗುಣವಾಗಿ ಅವರ ಅನುಭವ ಹಾಗೂ ಬ್ಯಾಟಿಂಗ್ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ತಂಡದ ಮ್ಯಾನೇಜ್‌ಮೆಂಟ್‌ನ ಉದ್ದೇಶವಾಗಿದೆ. ಎಡಗೈ ಬ್ಯಾಟರ್ ಅಗತ್ಯವಿದ್ದರೆ ಅಕ್ಷರ್ ಪಟೇಲ್ ಅವರನ್ನೂ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಸಬಹುದು. ಇದರ ಜೊತೆಗೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿದರೆ ಕೆಳ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗಲಿದೆ. ಇದರಿಂದ ತಂಡದ ಬ್ಯಾಟಿಂಗ್ ಡೆಪ್ತ್ ಕೂಡ ಹೆಚ್ಚಾಗಲಿದೆ ಎಂದು ಗಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ಮುನ್ನಾದಿನ ಮಂಗಳವಾರ ಆಕ್ಲೆಂಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಿಲ್, ‘ನಮ್ಮ ತಂಡದಲ್ಲಿ ಐದು, ಆರು ಮತ್ತು ಏಳನೇ ಕ್ರಮಾಂಕಗಳು ಬದಲಾವಣೆಗೆ ಮುಕ್ತವಾಗಿವೆ. ಮೊದಲ ನಾಲ್ಕು ಕ್ರಮಾಂಕಗಳು ಬಹುತೇಕ ಖಚಿತವಾಗಿವೆ. ಅಲ್ಲಿರುವ ನಾಲ್ವರೂ ಬಲಗೈ ಬ್ಯಾಟರ್‌ಗಳು. ಹೀಗಾಗಿ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಐದನೇ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ ಬೇಕೆಂದು ಅನಿಸಿದರೆ ಅಕ್ಷರ್ ಪಟೇಲ್ ಅವರನ್ನು ಕಳುಹಿಸಬಹುದು. ಅದೇ ರೀತಿ, ತಂಡಕ್ಕೆ ಉತ್ತಮ ಅಡಿಪಾಯ ಸಿಕ್ಕಿದ್ದು, ಕೆಎಲ್ ರಾಹುಲ್ ಸೂಕ್ತ ಬ್ಯಾಟರ್ ಎಂದು ಅನಿಸಿದರೆ ಅವರನ್ನು ಕಣಕ್ಕಿಳಿಸುತ್ತೇವೆ.

ನನ್ನ ಪ್ರಕಾರ ಐದು, ಆರು ಮತ್ತು ಏಳನೇ ಕ್ರಮಾಂಕಗಳಲ್ಲಿ ಯಾರು ಆಡಬೇಕು ಎಂಬುದನ್ನು ನಿರ್ಧರಿಸುವಾಗ ನಿಗದಿತ ಬ್ಯಾಟಿಂಗ್ ಸ್ಥಾನಕ್ಕಿಂತ ಉಳಿದಿರುವ ಓವರ್‌ಗಳು ಹಾಗೂ ಪಂದ್ಯದ ಪರಿಸ್ಥಿತಿಗೆ ಹೆಚ್ಚು ಮಹತ್ವ ನೀಡುತ್ತೇವೆ. ನಮ್ಮ ಅಗ್ರ ಕ್ರಮಾಂಕ ಮತ್ತು ಮಧ್ಯಮ ಕ್ರಮಾಂಕದ ಪ್ರದರ್ಶನದ ಬಗ್ಗೆ ನಮಗೆ ಸಂತೋಷವಿದೆ’ ಎಂದು ಗಿಲ್ ತಿಳಿಸಿದ್ದಾರೆ.

10000 ರನ್​ಗಳ ಸರದಾರ ಕನ್ನಡಿಗ ಕೆಎಲ್ ರಾಹುಲ್..!

ಎತ್ತರದ ವೇಗಿಗಳಿಗೆ ಭಾರತ ತಂಡದಲ್ಲಿ ಆದ್ಯತೆ ಯಾಕೆ?

ನವೆಂಬರ್ 4ರಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಐದು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಗೆ ಭಾರತ ಯುವ ವೇಗದ ಬೌಲರ್‌ಗಳನ್ನು ಒಳಗೊಂಡ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ. ಎತ್ತರದ ವೇಗದ ಬೌಲರ್‌ಗಳಿಗೆ ಆದ್ಯತೆ ನೀಡುತ್ತಿರುವುದರ ಹಿಂದಿನ ಕಾರಣವನ್ನೂ ಗಿಲ್ ವಿವರಿಸಿದ್ದಾರೆ. ಚೆಂಡು ಹಳೆಯದಾದಂತೆ ಸ್ವಿಂಗ್ ಮತ್ತು ಸೀಮ್ ಚಲನೆ ಕಡಿಮೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಬೌನ್ಸ್ ಹಾಗೂ ವೇಗದ ಮೂಲಕ ಬ್ಯಾಟರ್‌ಗಳಿಗೆ ಸವಾಲು ಹಾಕಬಲ್ಲ ಬೌಲರ್‌ಗಳು ತಂಡಕ್ಕೆ ಅಗತ್ಯ ಎಂದು ಅವರು ಹೇಳಿದ್ದಾರೆ.

‘ಚೆಂಡು ಹಳೆಯದಾದಾಗ ಸೀಮ್ ಅಥವಾ ಸ್ವಿಂಗ್ ಚಲನೆ ಹೆಚ್ಚಾಗಿ ಸಿಗುವುದಿಲ್ಲ. ಆಗ ಬ್ಯಾಟರ್‌ಗಳಿಗೆ ರನ್ ಗಳಿಸುವುದನ್ನು ಕಷ್ಟಕರವಾಗಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ. ಇದಕ್ಕಾಗಿ ಪಿಚ್‌ನಿಂದ ಸಿಗುವ ನೆರವು ಅಥವಾ ವೇಗ ಮತ್ತು ಬೌನ್ಸ್ ಬಳಸಿಕೊಂಡು ಬ್ಯಾಟರ್‌ಗಳಿಗೆ ಸವಾಲು ಹಾಕಬಹುದು. ಎದುರಾಳಿ ತಂಡದ ರನ್ ಗಳಿಕೆಗೆ ಕಡಿವಾಣ ಹಾಕುವ ಜೊತೆಗೆ ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಪಡೆಯಲು ಉತ್ತಮ ಅವಕಾಶ ಸೃಷ್ಟಿಸಬಲ್ಲ ಬೌಲರ್‌ಗಳನ್ನು ಗುರುತಿಸುವುದು ನಮ್ಮ ಉದ್ದೇಶ. ಈ ಯೋಜನೆಯ ಹಿಂದಿರುವ ಪ್ರಮುಖ ಆಲೋಚನೆ ಇದೇ’ ಎಂದು ಅವರು ವಿವರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು
ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು
ಸಿಸಿಬಿ ವಿಚಾರಣೆಗ ಹಾಜರಾದ ಹೆಚ್​​ಡಿಕೆ ಪಿಆರ್​​ಒ ಪ್ರಜ್ವಲ್ ಪ್ರಸಾದ್
ಸಿಸಿಬಿ ವಿಚಾರಣೆಗ ಹಾಜರಾದ ಹೆಚ್​​ಡಿಕೆ ಪಿಆರ್​​ಒ ಪ್ರಜ್ವಲ್ ಪ್ರಸಾದ್
ಗಣವೇಷ ಧರಿಸಿ RSS ಪಥಸಂಚಲನದಲ್ಲಿ ಭಾಗಿಯಾದ ಮುಸ್ಲಿಂ ಮುಖಂಡ
ಗಣವೇಷ ಧರಿಸಿ RSS ಪಥಸಂಚಲನದಲ್ಲಿ ಭಾಗಿಯಾದ ಮುಸ್ಲಿಂ ಮುಖಂಡ
ಕೋಲಾರದಲ್ಲಿ ಬಿಜೆಪಿಯಿಂದ ‘ಪ್ರಜಾಪ್ರಭುತ್ವ ಉಳಿಸಿ’ ಮಹಾ ಪಾದಯಾತ್ರೆ
ಕೋಲಾರದಲ್ಲಿ ಬಿಜೆಪಿಯಿಂದ ‘ಪ್ರಜಾಪ್ರಭುತ್ವ ಉಳಿಸಿ’ ಮಹಾ ಪಾದಯಾತ್ರೆ
ಗೆಳತಿ ಜೊತೆ ಬಂದು ಹಾಸನಾಂಬೆ ದರ್ಶನ ಪಡೆದ ಮುಸ್ಲಿಂ ಮಹಿಳೆ!
ಗೆಳತಿ ಜೊತೆ ಬಂದು ಹಾಸನಾಂಬೆ ದರ್ಶನ ಪಡೆದ ಮುಸ್ಲಿಂ ಮಹಿಳೆ!
ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಕಾಂಗ್ರೆಸ್​​ ಕ್ಷಮೆ ಕೇಳಿದ ವಿಜಯೇಂದ್ರ
ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಕಾಂಗ್ರೆಸ್​​ ಕ್ಷಮೆ ಕೇಳಿದ ವಿಜಯೇಂದ್ರ