Lovlina Borgohain: ಕಿರುಕುಳ ನೀಡಲಾಗುತ್ತಿದೆ: ಭಾರತದ ಬಾಕ್ಸರ್‌ ಲವ್ಲಿನಾ ಬೋರ್ಗೊಹೇನ್‌ ಶಾಕಿಂಗ್ ಟ್ವೀಟ್

ನನ್ನ ಕೋಚ್‌ಗಳು ಕ್ರೀಡಾ ಆಡಳಿತಗಾರರಿಂದ ನಿರಂತರ ಕಿರುಕುಳ ಎದುರಿಸುತ್ತಿದ್ದು, ಕಾಮನ್‌ವೆಲ್ತ್‌ ಕೂಟಕ್ಕೆ ಸರಿಯಾದ ತಯಾರಿ ನಡೆಸಲು ಸಾಧ್ಯವಾಗಿಲ್ಲ ಎಂದು ಲವ್ಲಿನಾ ಬೋರ್ಗೊಹೇನ್‌ ಟ್ವೀಟ್ ಮಾಡುವ ಮೂಲಕ ಆರೋಪ ಮಾಡಿದ್ದಾರೆ.

Lovlina Borgohain: ಕಿರುಕುಳ ನೀಡಲಾಗುತ್ತಿದೆ: ಭಾರತದ ಬಾಕ್ಸರ್‌ ಲವ್ಲಿನಾ ಬೋರ್ಗೊಹೇನ್‌ ಶಾಕಿಂಗ್ ಟ್ವೀಟ್
Lovlina Borgohain
Follow us
TV9 Web
| Updated By: Vinay Bhat

Updated on: Jul 26, 2022 | 7:37 AM

ಬಹುನಿರೀಕ್ಷಿತ ಕಾಮನ್​ವೆಲ್ತ್ ಗೇಮ್ಸ್‌ (Commonwealth Games) ಆರಂಭಕ್ಕೆ ಇನ್ನು ಎರಡೇ ದಿನ ಬಾಕಿಯಿದೆ. ಜುಲೈ 28 ರಂದು ಬರ್ಮಿಂಗ್‌ಹ್ಯಾಮ್​ನಲ್ಲಿ (Birmingham) ಹೊಸದಾಗಿ ನವೀಕರಿಸಿದ ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಆದರೆ, ಇದಕ್ಕೂ ಮುನ್ನ ಭಾರತದ ಖ್ಯಾತ ಬಾಕ್ಸರ್ ಲವ್ಲಿನಾ ಬೋರ್ಗೊಹೇನ್‌ (Lovlina Borgohain) ಮಾಡಿರುವ ಟ್ವೀಟ್‌ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ‘ನನ್ನ ಕೋಚ್‌ಗಳು ಕ್ರೀಡಾ ಆಡಳಿತಗಾರರಿಂದ ನಿರಂತರ ಕಿರುಕುಳ ಎದುರಿಸುತ್ತಿದ್ದು, ಕಾಮನ್‌ವೆಲ್ತ್‌ ಕೂಟಕ್ಕೆ ಸರಿಯಾದ ತಯಾರಿ ನಡೆಸಲು ಸಾಧ್ಯವಾಗಿಲ್ಲಎಂದು ಲವ್ಲಿನಾ ಬೋರ್ಗೊಹೇನ್‌ ಆರೋಪ ಮಾಡಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನೋವು ಹಂಚಿಕೊಂಡಿದ್ದಾರೆ.

ಭಾರತೀಯ ಬಾಕ್ಸಿಂಗ್ ತಂಡವು ಐರ್‌ಲ್ಯಾಂಡ್‌ನಲ್ಲಿ ತರಬೇತಿ ಪಡೆದ ನಂತರ ರವಿವಾರ ರಾತ್ರಿ ಗೇಮ್ಸ್ ವಿಲೇಜ್ ತಲುಪಿದೆ. ಆದರೆ, ಲವ್ಲಿನಾ ಅವರ ವೈಯಕ್ತಿಕ ಕೋಚ್ ಸಂಧ್ಯಾ ಗುರುಂಗ್ ಅವರು ಮಾನ್ಯತೆ ಪತ್ರ ಹೊಂದಿಲ್ಲದ ಕಾರಣ ಅವರಿಗೆ ಗೇಮ್ಸ್ ವಿಲೇಜ್‌ನೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಕಾಮನ್‌ವೆಲ್ತ್ ವೇಳೆ ತನ್ನ ವೈಯಕ್ತಿಕ ತರಬೇತುದಾರ ಅಮೆಯ್ ಕೋಲೆಕರ್ ತನ್ನೊಂದಿಗೆ ಇರಬೇಕೆಂದು ಲವ್ಲಿನಾ ಬಯಸಿದ್ದರು. ಆದರೆ ಅವರು ಕೋಚ್‌ಗಳ ಪಟ್ಟಿಯಲ್ಲಿರಲಿಲ್ಲ. ಈ ಕುರಿತು ಲವ್ಲಿನಾ ಟ್ವಿಟರ್ ಪೋಸ್ಟ್‌ನಲ್ಲಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Image
ಎರಡೇ ಪದದಲ್ಲಿ ಕೊಹ್ಲಿಯನ್ನು ಹೊಗಳಿ ಭಾರತೀಯರ ಹೃದಯ ಗೆದ್ದ ಪಾಕ್ ಕ್ರಿಕೆಟರ್ ಶೋಯೆಬ್ ಅಖ್ತರ್
Image
CWG 2022: ನೀರಜ್ ಅಥವಾ ಸಿಂಧು; ಕಾಮನ್‌ವೆಲ್ತ್‌ ಉದ್ಘಾಟನೆಯಲ್ಲಿ ಭಾರತದ ಧ್ವಜಧಾರಿ ಯಾರು?
Image
ನಾನು ಇನ್ನೂ ನಿರ್ಧರಿಸಿಲ್ಲ! ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ್ರಾ ಟೀಂ ಇಂಡಿಯಾ ಮಾಜಿ ನಾಯಕಿ ಮಿಥಾಲಿ ರಾಜ್?
Image
ತೆರೆ ಮೇಲೆ ಶೋಯೆಬ್ ಅಖ್ತರ್ ಜೀವನ ಚರಿತ್ರೆ; ನನ್ನ ಬಯೋಪಿಕ್​ಗೆ ಸಲ್ಮಾನ್ ಖಾನ್ ಸೂಕ್ತ ಎಂದ ಪಾಕ್ ಬೌಲರ್

ಬಾಕ್ಸಿಂಗ್ ಫೆಡರೇಶನ್‌ ನಲ್ಲಿ ಪ್ರಚಲಿತದಲ್ಲಿರುವ ರಾಜಕೀಯದ ಬಗ್ಗೆ ಅವರು ಜಾಲತಾಣದಲ್ಲಿ ಬರೆದಿದ್ದಾರೆ. ರಾಜಕೀಯವನ್ನು ಬದಿಗಿಟ್ಟು ದೇಶಕ್ಕಾಗಿ ಪದಕ ಗೆಲ್ಲುವತ್ತ ಗಮನ ಹರಿಸಬೇಕು ಎಂದು ಹೇಳಿದ್ದು, ಕಾಮನ್​​ವೆಲ್ತ್ ಕ್ರೀಡಾಕೂಟದಲ್ಲಿ ತನ್ನ ಈವೆಂಟ್​​ಗೆ ಕೇವಲ 8 ದಿನಗಳ ಮೊದಲು ತನ್ನ ತರಬೇತಿಯ ಮೇಲೆ ಪರಿಣಾಮ ಬೀರಿದೆ ಎಂದು ದೂರಿದ್ದಾರೆ.

ನನಗೆ ಕಿರುಕುಳ ನೀಡಲಾಗುತ್ತಿದೆ ಎಂಬುದನ್ನು ಬಹಳ ದುಃಖದಿಂದ ಬಹಿರಂಗಪಡಿಸಲು ಬಯಸುತ್ತೇನೆ. ನನಗೆ ಒಲಂಪಿಕ್ ಪದಕ ಗೆಲ್ಲಲು ಸಹಾಯ ಮಾಡಿದ ತರಬೇತುದಾರರನ್ನು ತೆಗೆದುಹಾಕಲಾಗಿದೆ. ಅದು ನನ್ನ ತರಬೇತಿ ಪ್ರಕ್ರಿಯೆಗೆ ಅಡ್ಡಿಯಾಗಿದೆ. ತರಬೇತುದಾರರಲ್ಲಿ ಒಬ್ಬರು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾದ ಸಂಧ್ಯಾ ಗುರುಂಗ್ಜಿ. ಇದೇ ರೀತಿಯ ಪರಿಸ್ಥಿತಿಯನ್ನು ಇಸ್ತಾಂಬುಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ಗಿಂತ ಮೊದಲು ಅನುಭವಿಸಿದ್ದೇನೆ. ಮುಂಬರುವ ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಲ್ಲಿ ಇದೇ ರೀತಿ ಏನಾದರೂ ಆಗಬಹುದೆಂಬ ಭಯ ನನ್ನನ್ನು ಕಾಡುತ್ತಿದೆ. ಈ ಎಲ್ಲದರ ನಡುವೆ ಗೇಮ್ಸ್‌ನತ್ತ ಹೇಗೆ ಗಮನಹರಿಸಬೇಕೆಂದು ನನಗೆ ಗೊತ್ತಾಗುತ್ತಿಲ್ಲ,” ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ