ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾಗೆ ಇವರೇ ಅಮೆರಿಕದ ಮುಂದಿನ ಅಧ್ಯಕ್ಷರಾಗಬೇಕಂತೆ!
ವಿಶ್ವದ ದೊಡ್ಡಣ್ಣ ಅಮೆರಿಕಾ, ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ನವೆಂಬರ್ನಲ್ಲಿ ಅಧ್ಯಕ್ಷೀಯ ಚುನಾವಣೆ ಎದುರಿಸಬೇಕಿದೆ. ಆದ್ರೆ ಮತ್ತೊಮ್ಮೆ ಅಧ್ಯಕ್ಷರಾಗಲು ಹವಣಿಸುತ್ತಿರುವ ವಿವಾದಿತ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಜಯಕ್ಕೆ ಅಡ್ಡಗಾಲು ಹಾಕುತ್ತಾ ಕೊರೊನಾ ಮೈ ಹೂನಾ ಎಂಬ ದೊಡ್ಡ ಕಂಟಕ ಎದುರಾಗಿದೆ. ಅಮೆರಿಕದ ಬೀದಿಬೀದಿಗಳಲ್ಲಿ ಹೆಣಗಳು ಉರುಳುತ್ತಿರುವುದು ನೋಡಿದರೆ ಅಸಲಿಗೆ, ನವೆಂಬರ್ ತಿಂಗಳಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುವುದು ಅನುಮಾನವಾಗಿದೆ. ಒಂದು ವೇಳೆ ನಡೆದಿದ್ದೇ ಆದ್ರೆ ಅಮೆರಿಕದ ಹಿಂದಿನ ಅಧ್ಯಕ್ಷ, ವರ್ಚಸ್ವೀ ನಾಯಕ ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್ಗೆ […]
ವಿಶ್ವದ ದೊಡ್ಡಣ್ಣ ಅಮೆರಿಕಾ, ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ನವೆಂಬರ್ನಲ್ಲಿ ಅಧ್ಯಕ್ಷೀಯ ಚುನಾವಣೆ ಎದುರಿಸಬೇಕಿದೆ. ಆದ್ರೆ ಮತ್ತೊಮ್ಮೆ ಅಧ್ಯಕ್ಷರಾಗಲು ಹವಣಿಸುತ್ತಿರುವ ವಿವಾದಿತ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಜಯಕ್ಕೆ ಅಡ್ಡಗಾಲು ಹಾಕುತ್ತಾ ಕೊರೊನಾ ಮೈ ಹೂನಾ ಎಂಬ ದೊಡ್ಡ ಕಂಟಕ ಎದುರಾಗಿದೆ. ಅಮೆರಿಕದ ಬೀದಿಬೀದಿಗಳಲ್ಲಿ ಹೆಣಗಳು ಉರುಳುತ್ತಿರುವುದು ನೋಡಿದರೆ ಅಸಲಿಗೆ, ನವೆಂಬರ್ ತಿಂಗಳಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುವುದು ಅನುಮಾನವಾಗಿದೆ.
ಒಂದು ವೇಳೆ ನಡೆದಿದ್ದೇ ಆದ್ರೆ ಅಮೆರಿಕದ ಹಿಂದಿನ ಅಧ್ಯಕ್ಷ, ವರ್ಚಸ್ವೀ ನಾಯಕ ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್ಗೆ ಸಖತ್ ಪೈಪೋಟಿ ನೀಡಲು ಸಿದ್ಧತೆ ನಡೆಸಿದ್ದಾರೆ. ಎರಡು ಬಾರಿ ಅಧ್ಯಕ್ಷರಾಗಿದ್ದ ಒಬಾಮಾ ಮತ್ತೆ ಅಧ್ಯಕ್ಷಗಾದಿಯತ್ತ ಸುಳಿಯುವುದಿಲ್ಲವಾದರೂ ತಮ್ಮ ಆತ್ಮೀಯನ ಮೂಲಕ ಟ್ರಂಪ್ಗೆ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಅವರು ಬೇರೆ ಯಾರೂ ಅಲ್ಲ. ಈ ಹಿಂದೆ ತಮ್ಮ ಆಡಳಿತಾವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬಿಡೆನ್! ಡೆಮಾಕ್ರೆಟ್ಗಳು ಮತ್ತೆ ಶ್ವೇತಭವನದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವುದನ್ನು ನೋಡಬಯಸಿರುವ ಒಬಾಮಾ, ಶತಾಯಗತಾಯ ತಮ್ಮ ಆತ್ಮೀಯ ಜೋ ಗೆಲುವಿಗೆ ಪಣ ತೊಟ್ಟಿರುವುದಾಗಿ ನಿನ್ನೆ ಅಧಿಕೃತವಾಗಿ ಘೋಷಿಸಿದ್ದಾರೆ.
ತಮ್ಮ ಆಡಳಿತಾವಧಿಯಲ್ಲಿ ಯುವ ಅಮೆರಿಕನ್ನರಿಗೆ ಮೋಡಿ ಮಾಡಿದ್ದ ಒಬಾಮಾ, ಈ ಬಾರಿ ಅದೇ ಯುವಜನತೆಯನ್ನು ನೆಚ್ಚಿಕೊಂಡಿದ್ದಾರೆ. ಇದೇ ವೇಳೆ, ಟ್ರಂಪ್ ಆಡಳಿತ ವೈಖರಿ ಬಗ್ಗೆ ಇದೇ ಯುವಜನತೆ ಬೇಸತ್ತಿರುವುದು ಒಬಾಮಾಗೆ ಆಶಾದಾಯಕವಾಗಿದೆ. ಇದನ್ನು ಚೆನ್ನಾಗಿ ಅರಿತಿರುವ ಒಬಾಮಾ ನೇರವಾಗಿ ಆ ವಿಷಯಗಳನ್ನೇ, ಅಂದರೆ corruption, carelessness, self-dealing, disinformation, ignorance and just plain meanness of the Trump tenure ಪ್ರಸ್ತಾಪಿಸಿದ್ದಾರೆ.
ಹಾಗಂತ ಒಬಾಮಾ ಇದನ್ನೇ ನಂಬಿಕೊಂಡಿಲ್ಲ. ಈ ಹಿಂದೆ ತಮ್ಮ ಆಡಳಿತದಲ್ಲಿ ಉಪಾಧ್ಯಕ್ಷರಾಗಿ ಜೋ ಬಿಡೆನ್ ಮಾಡಿದ್ದ ಕೆಲಸವನ್ನು ಕಣ್ಣಾರೆ ಕಂಡಿದ್ದರು. ಆ ಗುಣವಿಶೇಷತೆಗಳೇ ತಮ್ಮ ನಂಬಿಕಸ್ಥ ಜೋ ಬಿಡೆನ್ ಕೈಹಿಡಿಯಲಿವೆ ಎಂಬ ಆತ್ಮವಿಶ್ವಾಸ ಒಬಾಮಾದ್ದಾಗಿದೆ. ಈ ಬಗ್ಗೆ ನಿನ್ನೆ ವಿಡಿಯೋ ಸಂದೇಶವೊಂದನ್ನ ಬಿಡುಗಡೆ ಮಾಡಿರುವ ಒಬಾಮಾ, ಸುಶಿಕ್ಷಿತ ಕುಟುಂಬದಿಂದ ಬಂದಿರುವ ಜೋ ಬಿಡೆನ್ ಮುಂದಿನ ಅಧ್ಯಕ್ಷನಾಗಲು ಎಲ್ಲ ಅರ್ಹತೆ ಹೊಂದಿದ್ದಾರೆ. ಆತನನ್ನೇ ಆಯ್ಕೆ ಮಾಡಿಕೊಳ್ಳಿ. ಇದರಿಂದ ದೇಶಕ್ಕೂ ಒಳಿತಾಗಲಿದೆ ಎಂದು ಮತದಾರರಿಗೆ ಕರೆ ನೀಡಿದ್ದಾರೆ.