ಏರ್​ಟೆಲ್​ನಿಂದ ಹೊಸ 99 ರೂಗೆ ಅನ್​ಲಿಮಿಟೆಡ್ 5ಜಿ ಡಾಟಾ ಪ್ಲಾನ್; ವೊಡಾಫೋನ್, ಜಿಯೋ ಪ್ಲಾನ್​ಗಳನ್ನೂ ತಿಳಿದಿರಿ

|

Updated on: Aug 16, 2023 | 11:37 AM

Airtel Recharge Plan: ಏರ್ಟೆಲ್​ನ ಹೊಸ 99 ರೂ ರೀಚಾರ್ಜ್ ಪ್ಲಾನ್​ನಲ್ಲಿ ಅನ್​ಲಿಮಿಟೆಡ್ 5ಜಿ ಡಾಟಾ ಸಿಗುತ್ತದೆ. ಇದು ಆ್ಯಡ್ ಆನ್ ಪ್ಯಾಕ್ ಆಗಿದ್ದು ಈಗಾಗಲೇ ಸಕ್ರಿಯ ಪ್ಲಾನ್ ಹೊಂದಿರುವವರಿಗೆ ಹೆಚ್ಚುವರಿ ಬಳಕೆಗೆ ಇದು ಲಭ್ಯ ಇರುತ್ತದೆ.

ಏರ್​ಟೆಲ್​ನಿಂದ ಹೊಸ 99 ರೂಗೆ ಅನ್​ಲಿಮಿಟೆಡ್ 5ಜಿ ಡಾಟಾ ಪ್ಲಾನ್; ವೊಡಾಫೋನ್, ಜಿಯೋ ಪ್ಲಾನ್​ಗಳನ್ನೂ ತಿಳಿದಿರಿ
ಭಾರ್ತಿ ಏರ್ಟೆಲ್
Follow us on

ಭಾರ್ತಿ ಏರ್ಟೆಲ್ ಸಂಸ್ಥೆ (Bharti Airtel) ಇತ್ತೀಚಿನ ಕೆಲ ತಿಂಗಳುಗಳಿಂದ ರೀಚಾರ್ಜ್ ಪ್ಲಾನ್​ಗಳನ್ನು ಪರಿಷ್ಕರಿಸಿದೆ. ಇದೇ ಹಾದಿಯಲ್ಲಿ 99 ರೂ ಅನ್​ಲಿಮಿಟೆಡ್ ಡಾಟಾ ಪ್ಲಾನ್ (Unlimited Data Plan) ಬಿಡುಗಡೆ ಮಾಡಿದೆ. ವರ್ಷದ ಹಿಂದಿನವರೆಗೂ 99 ರೂ ಪ್ಲಾನ್ ಅನ್ನು ಏರ್​ಟೆಲ್ ಹೊಂದಿತ್ತಾದರೂ ಅದನ್ನು ಹಿಂಪಡೆಯಲಾಗಿತ್ತು. ಇದೀಗ ಮತ್ತೆ 99 ರೂ ಪ್ಲಾನ್ ಬಂದಿದೆ. ಆದರೆ, ಹಿಂದೆ ಇದ್ದ 99 ರೂ ಪ್ಲಾನ್ ಅಲ್ಲ. ಈಗ ಅನ್​ಲಿಮಿಟೆಡ್ ಡಾಟಾ ಪ್ಯಾಕ್ ಒದಗಿಸಲಾಗಿದೆ.

ಅನ್​ಲಿಮಿಟೆಡ್ ಎಂದರೆ ಎಷ್ಟು? 99 ರೂ ಪ್ಲಾನ್ ಹೇಗೆ ವರ್ಕೌಟ್ ಆಗುತ್ತೆ?

99 ರೂ ರೀಚಾರ್ಜ್ ಪ್ಲಾನ್ ಅಲ್ಲ. ಇದರ ವ್ಯಾಲಿಡಿಟಿ ಅವಧಿ ಒಂದು ದಿನ ಮಾತ್ರ. ಆ್ಯಡ್ ಆನ್ ಆಗಿ ಈ ಪ್ಲಾನ್ ಬಳಸಬಹುದು. ಈಗಾಗಲೇ ಬೇರೆ ಆಕ್ಟಿವ್ ಪ್ಲಾನ್​ಗಳನ್ನು ಹೊಂದಿದ್ದು ನಿತ್ಯದ ಡಾಟಾ ಮಿತಿ ಮುಗಿದಿದ್ದಾಗ 99 ರೂ ರೀಚಾರ್ಜ್ ಮಾಡಿಸಿದರೆ ಡಾಟಾ ಬಳಕೆ ಮುಂದುವರಿಸಬಹುದು.

ಇಲ್ಲಿ ಅನ್​ಲಿಮಿಟೆಡ್ ಡಾಟಾ ಎಂದು ಹೇಳಲಾಗಿದ್ದರೂ 30ಜಿಬಿವರೆಗೂ ಡಾಟಾವನ್ನು ಬಳಸಬಹುದು. ಆ ಹೆಚ್ಚುವರಿ 30 ಜಿಬಿ ಡಾಟಾ ಬಳಕೆ ಮುಗಿದ ಬಳಿಕ ಡಾಟಾ ಸ್ಪೀಡ್ 64ಕೆಬಿಪಿಎಸ್​ಗೆ ಇಳಿಯುತ್ತದೆ.

ಇದನ್ನೂ ಓದಿ: ಸ್ಟಾರ್ಟಪ್​ಗೆ ಪೂರಕ ವಾತಾವರಣ; ಜಾಗತಿಕ ರ‍್ಯಾಂಕಿಂಗ್​ನಲ್ಲಿ ಬೆಂಗಳೂರಿಗೆ 8ನೇ ಸ್ಥಾನ

ವೊಡಾಫೋನ್ ಐಡಿಯಾದಿಂದಲೂ ಭರ್ಜರಿ ಪ್ಲಾನ್ ಆಫರ್

ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ ಸ್ವಾತಂತ್ರ್ಯೋತ್ಸವ ನಿಮಿತ್ತ ಭರ್ಜರಿ ಕೊಡುಗೆಗಳನ್ನು ಕೊಟ್ಟಿದೆ. 199 ರೂ ಹಾಗೂ ಅದಕ್ಕಿಂತಲೂ ಹೆಚ್ಚು ಮೌಲ್ಯದ ರೀಚಾರ್ಜ್​ಗಳಿಗೆ 50ಜಿಬಿಯಷ್ಟು ಹೆಚ್ಚುವರಿ ಡೇಟಾ ಒದಗಿಸುತ್ತದೆ.

ವೊಡಾಫೋನ್ ಐಡಿಯಾ ಕೆಲ ರೀಚಾರ್ಜ್ ಪ್ಲಾನ್​ಗಳಿಗೆ ಕ್ಯಾಷ್​ಬ್ಯಾಕ್ ಆಫರ್ ಕೂಡ ಕೊಟ್ಟಿರುವುದು ವಿಶೇಷ. 1,449 ರೂ ಹಾಗೂ 3,099 ರೂ ರೀಚಾರ್ಜ್ ಪ್ಯಾಕ್ ಪಡೆದರೆ ಕ್ರಮವಾಗಿ 50 ರೂ ಹಾಗೂ 75 ರೂ ತತ್​ಕ್ಷಣದ ರಿಯಾಯಿತಿ ಪಡೆಯಬಹುದು. ಈ ಆಫರ್​ಗಳು ಆಗಸ್ಟ್ 18ರವರೆಗೂ ಇರುತ್ತದೆ.

ಇದನ್ನೂ ಓದಿ: DBT Savings: ನೇರವಾಗಿ ಅಕೌಂಟ್​ಗೆ ಹಣ ವರ್ಗಾವಣೆ ಮಾಡುವುದರಿಂದ ಕೇಂದ್ರ ಸರ್ಕಾರಕ್ಕೆ ಉಳಿತಾಯವಾದ ಹಣವೆಷ್ಟು ಗೊತ್ತಾ?

ಜಿಯೋದಿಂದಲೂ ಸ್ವಾತಂತ್ರ್ಯೋತ್ಸವದ ಆಫರ್ ಇತ್ತು…

ರಿಲಾಯನ್ಸ್ ಜಿಯೋ ಆಗಸ್ಟ್ 15ರಂದು ತನ್ನ 2,999 ರೂ ವಾರ್ಷಿಕ ರೀಚಾರ್ಜ್ ಪ್ಲಾನ್​ನಲ್ಲಿ ಕೆಲ ಆಫರ್ ಒದಗಿಸಿತ್ತು. ದಿನಕ್ಕೆ 2.5 ಜಿಬಿ ಡಾಟಾ, ಅನ್​ಲಿಮಿಟೆಡ್ ಕರೆ, ದಿನಕ್ಕೆ 100 ಎಸ್ಸೆಮ್ಮೆಸ್ ಇತ್ಯಾದಿ ಸೌಲಭ್ಯಗಳು ಈ ವಾರ್ಷಿಕ್ ಪ್ಯಾಕ್​ನಲ್ಲಿ ಒಳಗೊಳ್ಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ