ಹ್ಯಾಪಿ ಬರ್ತ್ ಡೇ MSD
ನವದೆಹಲಿ, ಆಗಸ್ಟ್ 20: ರಿಲಾಯನ್ಸ್ ಜಿಯೋ ಸಂಸ್ಥೆ ತನ್ನ ಎರಡು ಪ್ರೀಪೇಡ್ ಪ್ಲಾನ್ನಲ್ಲಿ ಉಚಿತ ನೆಟ್ಫ್ಲಿಕ್ಸ್ ಚಂದಾದಾರಿಕೆ ಸೇವೆ (Netflix subscription) ಒದಗಿಸುತ್ತಿದೆ. 1,099 ರೂ ಮತ್ತು 1,499 ರೂ ಪ್ಲಾನ್ನಲ್ಲಿ ಜಿಯೋ ಬಳಕೆದಾರರು 84 ದಿನಗಳ ಕಾಲ ನೆಟ್ಫ್ಲಿಕ್ಸ್ ಸಬ್ಸ್ಕ್ರಿಪ್ಷನ್ ಅನ್ನು ಉಚಿತವಾಗಿ ಕೊಡುತ್ತಿದೆ. ಅತ್ಯಂತ ಜನಪ್ರಿಯ ಎಂಟರ್ಟೈನ್ಮೆಂಟ್ ಒಟಿಟಿಯಾದ ನೆಟ್ಫ್ಲಿಕ್ಸ್ನ ಸಬ್ಸ್ಕ್ರಿಪ್ಷನ್ ಅನ್ನು ಪ್ರೀಪೇಯ್ಡ್ ಗ್ರಾಹಕರಿಗೆ ಒದಗಿಸುತ್ತಿರುವುದು ಇದೇ ಮೊದಲು. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಇದ್ದ ಈ ಸೌಲಭ್ಯ ಪ್ರೀಪೇಯ್ಡ್ ಗ್ರಾಹಕರಿಗೂ ಸಿಕ್ಕಿದೆ. ಈ ನೆಟ್ಫ್ಲಿಕ್ಸ್ ಆಫರ್ ಮೇಲೆ ತಿಳಿಸಿದ ಎರಡು ಪ್ಲಾನ್ಗಳಿಂದ ಮಾತ್ರ ಸಿಗುತ್ತಿದೆ. ಅ ಎರಡೂ ಪ್ಲಾನ್ಗಳು 84 ದಿನಗಳ ವ್ಯಾಲಿಡಿಟಿ ಪೀರಿಯಡ್ ಹೊಂದಿವೆ. ನೆಟ್ಫ್ಲಿಕ್ಸ್ನ ಮಾಸಿಕ ಸಬ್ಸ್ಕ್ರಿಪ್ಷನ್ 149 ರೂ ಇದೆ.
ರಿಲಾಯನ್ಸ್ ಜಿಯೋದ 1,099 ರೂಗಳ ಪ್ರೀಪೇಯ್ಡ್ ಪ್ಲಾನ್ 84 ದಿನಗಳ ಅವಧಿಯದ್ದಾಗಿದ್ದು ಅನ್ಲಿಮಿಟೆಡ್ 5ಜಿ ಡಾಟಾ ಮತ್ತು ವಾಯ್ಸ್ ಕಾಲ್ ಆಫರ್ ಮಾಡುತ್ತದೆ. ದಿನಕ್ಕೆ 2ಜಿಬಿಯಷ್ಟು ಡಾಟಾ ಬಳಕೆಯ ಅವಕಾಶ ಇರುತ್ತದೆ. ಜೊತೆಗೆ ತಿಂಗಳಿಗೆ 149 ರೂ ಮೌಲ್ಯದ ನೆಟ್ಫ್ಲಿಕ್ಸ್ ಸಬ್ಸ್ಕ್ರಿಪ್ಷನ್ ಒದಗಿಸುತ್ತದೆ.
1,499 ರೂಗಳ ಜಿಯೋ ಪ್ರೀಪೇಯ್ಡ್ ಪ್ಲಾನ್ನಲ್ಲಿ ಮಾಸಿಕ 199 ರೂಗಳ ನೆಟ್ಫ್ಲಿಕ್ಸ್ ಸಬ್ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ. 84 ದಿನಗಳ ವ್ಯಾಲಿಡಿಟಿ ಇದ್ದು ದಿನಕ್ಕೆ 3ಜಿಬಿಯಷ್ಟು ಡಾಟಾ ಒದಗಿಸುತ್ತದೆ.
ಇದನ್ನೂ ಓದಿ: Family Business: ಮುಂದಿನ ಪೀಳಿಗೆ ನಾಯಕ ಸುದರ್ಶನ್ ವೇಣು, ಉದಯೋನ್ಮುಖ ಮಹಿಳಾ ಉದ್ಯಮಿ ರೋಷನಿ ನಾದರ್ಗೆ ಪ್ರಶಸ್ತಿ
ನೆಟ್ಫ್ಲಿಕ್ಸ್ ಮತ್ತು ರಿಲಾಯನ್ಸ್ ಜಿಯೋ ಮಧ್ಯೆ ವ್ಯಾವಹಾರಿಕ ಹೊಂದಾಣಿಕೆ ಆಗಿದ್ದರಿಂದ ಜಿಯೋ ಪ್ರೀಪೇಡ್ ಪ್ಲಾನ್ನಲ್ಲಿ ನೆಟ್ಫ್ಲಿಕ್ಸ್ ಚಂದಾದಾರಿಕೆಯನ್ನು ಉಚಿತವಾಗಿ ಕೊಡಲಾಗುತ್ತಿದೆ.
‘ನಮ್ಮ ಬಳಕೆದಾರರಿಗೆ ವಿಶ್ವದರ್ಜೆಯ ಸೇವೆಗಳನ್ನು ಕೊಡಲು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಪ್ರೀಪೇಡ್ ಪ್ಲಾನ್ನಲ್ಲಿ ನೆಟ್ಫ್ಲಿಕ್ಸ್ ಆಫರ್ ಮಾಡಿದ್ದೇವೆ’ ಎಂದು ಜಿಯೋ ಪ್ಲಾಟ್ಫಾರ್ಮ್ಸ್ ಲಿ ಸಂಸ್ಥೆಯ ಸಿಇಒ ಕಿರಣ್ ಥಾಮಸ್ ಹೇಳಿದ್ದಾರೆ.
ಇದನ್ನೂ ಓದಿ: 3 ವರ್ಷಗಳಿಂದ ಮಲ್ಟಿಬ್ಯಾಗರ್ ಆದ ಬಜಾಬ್ ಫೈನಾನ್ಸ್; ಷೇರುಮೌಲ್ಯದ ಜೊತೆಗೆ ಠೇವಣಿಗಳೂ ಅಗಾಧ ಬೆಳವಣಿಗೆ
‘ಹಲವು ವರ್ಷಗಳಲ್ಲಿ ನಾವು ಭಾರತದ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಹಲವು ಸ್ಥಳೀಯ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳು ಹಾಗೂ ಚಲನಚಿತ್ರಗಳನ್ನು ನಿರ್ಮಿಸಿದ್ದೇವೆ… ಜಿಯೋದೊಂದಿಗೆ ನಮ್ಮ ಹೊಂದಾಣಿಕೆಯಿಂದಾಗಿ ಹೆಚ್ಚಿನ ಗ್ರಾಹಕರಿಗೆ ನಮ್ಮ ಕಾರ್ಯಕ್ರಮಗಳು ತಲುಪಲು ಸಾಧ್ಯವಾಗುತ್ತದೆ’ ಎಂದು ನೆಟ್ಫ್ಲಿಕ್ಸ್ನ ಟೋನಿ ಝಮೆಕೋವಸ್ಕಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:11 pm, Sun, 20 August 23