ಯೂನಿಯನ್ ಆ್ಯಕ್ಟಿವ್ ಮೊಮೆಂಟಮ್ ಫಂಡ್ ಎನ್ಎಫ್ಒ; ಡಿ. 12ಕ್ಕೆ ಮುಕ್ತಾಯ
Union Active Momentum Fund: ನವೆಂಬರ್ 28ಕ್ಕೆ ಆರಂಭವಾದ ಯೂನಿಯನ್ ಆ್ಯಕ್ಟಿವ್ ಮೊಮೆಂಟಮ್ ಫಂಡ್ನ ಎನ್ಎಫ್ಒ ಡಿಸೆಂಬರ್ 12ಕ್ಕೆ ಮುಕ್ತಾಯವಾಗುತ್ತದೆ. ಯೂನಿಯನ್ ಬ್ಯಾಂಕ್ ಮತ್ತು ಜಪಾನ್ನ ಡಾಯಿಚಿ ಹೋಲ್ಡಿಂಗ್ಸ್ ಜಂಟಿಯಾಗಿ ನಿರ್ವಹಿಸುವ ಯೂನಿಯನ್ ಮ್ಯುಚುಲ್ ಫಂಡ್ನ ಹೊಸ ಫಂಡ್ ಆಫರ್ ಇದು. ಬೆಳವಣಿಗೆಯ ಮೊಮೆಂಟಮ್ ಇರುವ ಷೇರುಗಳಲ್ಲಿ ನಿಯಮ ಆಧಾರಿತ ವ್ಯವಸ್ಥೆ ಮೂಲಕ ಹೂಡಿಕೆ ಮಾಡುತ್ತದೆ ಎಂದು ಸ್ಕೀಮ್ನಲ್ಲಿ.
ನವದೆಹಲಿ, ಡಿಸೆಂಬರ್ 8: ಯೂನಿಯನ್ ಮ್ಯೂಚುವಲ್ ಫಂಡ್ಸ್ ಸಂಸ್ಥೆಯ ಯೂನಿಯಲ್ ಆ್ಯಕ್ಟಿವ್ ಮೊಮೆಂಟಮ್ ಫಂಡ್ನ ಎನ್ಎಫ್ಒ ಸದ್ಯ ಚಾಲನೆಯಲ್ಲಿದೆ. ನವೆಂಬರ್ 28ಕ್ಕೆ ಸಬ್ಸ್ಕ್ರಿಪ್ಷನ್ಗೆ ತೆರೆದುಕೊಂಡಿರುವ ಈ ನ್ಯೂ ಫಂಡ್ ಆಫರ್ ಡಿಸೆಂಬರ್ 12, ಗುರುವಾರಕ್ಕೆ ಅಂತ್ಯಗೊಳ್ಳುತ್ತಿದೆ. ಯೂನಿಯನ್ ಬ್ಯಾಂಕ್ ಮತ್ತು ಜಪಾನ್ ಮೂಲದ ಡಾಯಿಚಿ ಹೋಲ್ಡಿಂಗ್ಸ್ ಸಂಸ್ಥೆ ಜಂಟಿಯಾಗಿ ನಿರ್ವಹಿಸುವ ಯೂನಿಯನ್ ಮ್ಯೂಚುವಲ್ ಫಂಡ್ನ ಈ ಯೂನಿಯನ್ ಆ್ಯಕ್ಟಿವ್ ಮೊಮೆಂಟಮ್ ಫಂಡ್ ಒಂದು ಓಪನ್ ಎಂಡೆಡ್ ಈಕ್ವಿಟಿ ಸ್ಕೀಮ್ ಆಗಿದೆ.
ಮೊಮೆಂಟಮ್ ಫಂಡ್ಗಳು ಸಾಮಾನ್ಯವಾಗಿ ಅಭಿವೃದ್ಧಿಯ ಟ್ರೆಂಡ್ ಇರುವಂತಹ ಷೇರುಗಳಲ್ಲಿ ಹೂಡಿಕೆ ಹೊಂದಿರುತ್ತವೆ. ಯೂನಿಯನ್ ಮ್ಯುಚುವಲ್ ಫಂಡ್ ಸಂಸ್ಥೆ ಷೇರುಗಳನ್ನು ಆಯ್ದುಕೊಳ್ಳಲು ವಿಶೇಷವಾದ ಕ್ವಾಂಟಿಟೇಟಿವ್ ಮಾಡಲ್ ತಂತ್ರ ಅನುಸರಿಸುತ್ತದೆ. 15ಕ್ಕೂ ಹೆಚ್ಚು ವರ್ಷಗಳ ಹಿಂದಿನಿಂದಲೂ ಷೇರಿನ ಬೆಲೆ ಏರಿಳಿತಗಳು, ಲಾಭದ ಏರಿಳಿತಗಳು, ರಿಲೇಟಿವ್ ಸ್ಟ್ರೆಂತ್, ಲಿಕ್ವಿಡಿಟಿ ಇತ್ಯಾದಿ ಅನೇಕ ಅಂಶಗಳನ್ನು ಈ ಮಾಡಲ್ನಲ್ಲಿ ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬರುತ್ತಿದೆ ಇಪಿಎಫ್ಒ 3.0: ನಿಮ್ಮ ಪಿಎಫ್ ಖಾತೆಗೆ ಇಷ್ಟಬಂದಷ್ಟು ಹಣ ಸೇರಿಸಿ; ಎಟಿಎಂನಲ್ಲೇ ವಿತ್ಡ್ರಾ ಮಾಡಿ
ಯೂನಿಯನ್ ಮ್ಯೂಚುವಲ್ ಫಂಡ್ನ ಹೇಳಿಕೆ ಪ್ರಕಾರ ಯೂನಿಯನ್ ಆ್ಯಕ್ಟಿವ್ ಮೊಮೆಂಟಮ್ ಫಂಡ್ ನಿಯಮ ಆಧಾರಿತ ತಂತ್ರದ ಮೂಲಕ ಮೊಮೆಂಟಮ್ ಇರುವ ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ. ಹೂಡಿಕೆ ನಿರ್ಣಯಗಳಲ್ಲಿ ಭಾವನಾತ್ಮಕ ಅಂಶಗಳ ಪ್ರಭಾವ ಇರುವುದಿಲ್ಲ. ಬಹಳ ಶಿಸ್ತುಬದ್ಧವಾಗಿ ಎಂಟ್ರಿ ಮತ್ತು ಎಕ್ಸಿಟ್ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ರೂಲ್ ಬೇಸ್ಡ್ ಇನ್ವೆಸ್ಟ್ಮೆಂಟ್ ತಂತ್ರಕ್ಕೆ ಬದ್ಧರಾಗುವುದರಿಂದ ಹೂಡಿಕೆಗೆ ಹೆಚ್ಚು ರಿಟರ್ನ್ ಪಡೆಯಲು ಸಾಧ್ಯವಾಗುತ್ತದೆ ಎಂಬುದು ಫಂಡ್ ಸಂಸ್ಥೆಯ ಅನಿಸಿಕೆ.
ಏನಿದು ನ್ಯೂ ಫಂಡ್ ಆಫರ್?
ಯಾವುದೇ ಮ್ಯೂಚುವಲ್ ಫಂಡ್ ಸಂಸ್ಥೆ ಅಥವಾ ಎಎಂಸಿಗಳು ಹೊಸ ಫಂಡ್ ಅನ್ನು ಆರಂಭಿಸಿದಾಗ ಎನ್ಎಫ್ಒ ಆಫರ್ ಮಾಡುತ್ತವೆ. ಷೇರುಗಳಿಗೆ ಐಪಿಒ ಇದ್ದಂತೆ ಮ್ಯೂಚುವಲ್ ಫಂಡ್ಗೆ ಎನ್ಎಫ್ಒ ಇರುತ್ತದೆ. ಈ ಫಂಡ್ಗೆ ಆರಂಭಿಕ ಬಂಡವಾಳವು ಎನ್ಎಫ್ಒ ಮೂಲಕ ಸಿಗುತ್ತದೆ. ಎನ್ಎಫ್ಒನಲ್ಲಿ ಮ್ಯೂಚುವಲ್ ಫಂಡ್ನ ಒಂದು ಯೂನಿಟ್ನ ದರ ಸಾಮಾನ್ಯವಾಗಿ 10 ರೂ ಇರುತ್ತದೆ.
ಇದನ್ನೂ ಓದಿ: ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿಗೂ ಯುಪಿಐ ಕ್ರೆಡಿಟ್ ಲೈನ್ ಅವಕಾಶ ವಿಸ್ತರಣೆ; ಎಸ್ಎಫ್ಬಿಗಳಿಗೆ ಒಳ್ಳೆಯ ಲಾಭದ ನಿರೀಕ್ಷೆ
ಎನ್ಎಫ್ಒನಲ್ಲಿ ಮೂರು ವಿಧಗಳಿದ್ದು, ಓಪನ್ ಎಂಡೆಡ್, ಕ್ಲೋಸ್ ಎಂಡೆಡ್ ಮತ್ತ ಹೈಬ್ರಿಡ್ ಮಾಡಲ್ ಇರುತ್ತದೆ. ಓಪನ್ ಎಂಡೆಡ್ ಎನ್ಎಫ್ಒನಲ್ಲಿ ಬಂಡವಾಳ ಸಂಗ್ರಹಿಸಿದ ಬಳಿಕ ಮತ್ತೆ ಅದು ಸಾರ್ವಜನಿಕ ಸಬ್ಸ್ಕ್ರಿಪ್ಷನ್ಗೆ ಲಭ್ಯ ಇರುತ್ತದೆ. ಹೆಚ್ಚಿನ ಮ್ಯೂಚುವಲ್ ಫಂಡ್ಗಳು ಓಪನ್ ಎಂಡೆಡ್ ಸ್ಕೀಮ್ ಆಗಿರುತ್ತವೆ.
ಕ್ಲೋಸ್ ಎಂಡೆಡ್ ಎಂದರೆ ಎನ್ಎಫ್ಒದಲ್ಲಿ ಬಂದ ಹೂಡಿಕೆಯೇ ಅಂತಿಮ. ಅದಾದ ಬಳಿಕ ಹೊಸ ಹೂಡಿಕೆಗಳನ್ನು ಫಂಡ್ ಪಡೆಯುವುದಿಲ್ಲ. ಆದರೆ, ಈಗಾಗಲೇ ಸಬ್ಸ್ಕ್ರೈಬ್ ಆಗಿರುವವರು ತಮ್ಮ ಪಾಲಿನ ಎನ್ಎವಿಗಳನ್ನು ಷೇರು ಮಾರುಕಟ್ಟೆಯಲ್ಲಿ ಟ್ರೇಡ್ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ