ಧ್ರುವ ಜೊತೆ ಅನುಪಮಾ ಪರಮೇಶ್ವರನ್ ಕಿಸ್ಸಿಂಗ್; ಲೀಕ್ ಆಯ್ತು ಇಂಟಿಮೇಟ್ ಫೋಟೋ
ಅನುಪಮಾ ಪರಮೇಶ್ವರನ್ ಮತ್ತು ಧ್ರುವ್ ವಿಕ್ರಮ್ ಅವರ ಒಂದು ಖಾಸಗಿ ಫೋಟೋ ಲೀಕ್ ಆಗಿದೆ. ಈ ಫೋಟೋದಲ್ಲಿ ಇಬ್ಬರೂ ಕಿಸ್ ಮಾಡುತ್ತಿರುವುದು ಕಾಣಿಸುತ್ತದೆ. ಇದು ಅಭಿಮಾನಿಗಳಿಂದ ಮಾಡಲ್ಪಟ್ಟ ಎಐ ಚಿತ್ರ ಅಥವಾ ಹೊಸ ಸಿನಿಮಾದ ಪ್ರಚಾರದ ಒಂದು ಭಾಗ ಎಂಬ ಊಹೆಗಳಿವೆ. ಅನುಪಮಾ ಅವರು ಇತ್ತೀಚೆಗೆ ಬೋಲ್ಡ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಅನುಪಮಾ ಪರಮೇಶ್ವರನ್ (Anupama Parameshwaran) ಅವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಅವರು ಸಿನಿಮಾಗಳನ್ನು ಮಾಡಿ ಸುದ್ದಿ ಆಗೋದು ಒಂದು ಕಡೆಯಾದರೆ ವೈಯಕ್ತಿಕ ಜೀವನದ ಕಾರಣಕ್ಕೂ ಅವರು ಆಗಾಗ ಚರ್ಚೆಗೆ ಆಗುತ್ತಾರೆ. ಈಗ ಅವರ ಹೊಸ ಫೋಟೋ ಒಂದು ಲೀಕ್ ಆಗಿದೆ. ಈ ಫೋಟೋದಲ್ಲಿ ಅನುಪಮಾ ಪರಮೇಶ್ವರನ್ ಅವರು ಯುವ ಹೀರೋ ಜೊತೆ ಕಿಸ್ ಮಾಡುತ್ತಿರುವುದಿದೆ. ಅಷ್ಟಕ್ಕೂ ಯಾರು ಇವರು? ಇವರ ವಯಸ್ಸು ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.
ಚಿಯಾನ್ ವಿಕ್ರಮ್ ಮಗ ಧ್ರುವ್ ವಿಕ್ರಮ್ ಜೊತೆ ಅನುಪಮಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅನುಪಮಾಗೆ 29 ವರ್ಷ ವಯಸ್ಸು. ಧ್ರುವಗೆ 27 ವರ್ಷ ವಯಸ್ಸು. ಇವರು ಕಿಸ್ ಮಾಡುತ್ತಿರುವ ಫೋಟೋ ಆನ್ಲೈನ್ನಲ್ಲಿ ಲೀಕ್ ಆಗಿದೆ. ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಒಂದರಲ್ಲಿ ‘ಬ್ಲ್ಯೂ ಮೂನ್’ ಎಂಬ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿತ್ತು. ಆ ಬಳಿಕ ಇದನ್ನು ಪ್ರೈವೇಟ್ ಮಾಡಲಾಗಿದೆ.
ಈ ಪ್ಲೇಲಿಸ್ಟ್ನ ಪ್ರಾಫೈಲ್ ಪಿಕ್ಚರ್ ತುಂಬಾನೇ ಇಂಟಿಮೇಟ್ ಆಗಿದೆ. ಧ್ರುವ್ ಹಾಗೂ ಅನುಪಮಾ ಫ್ರೆಂಚ್ ಕಿಸ್ ಮಾಡುತ್ತಿದ್ದಾರೆ. ಹಿಂಭಾಗದಲ್ಲಿ ಚಂದಿರ ಇದ್ದಾನೆ. ಈ ಪ್ಲೇಲಿಸ್ಟ್ನ ಸ್ಕ್ರೀನ್ಶಾಟ್ಗಳು ಎಲ್ಲ ಕಡೆಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ನಾನಾ ರೀತಿಯಲ್ಲಿ ಅರ್ಥೈಸಲಾಗುತ್ತಿದೆ.
‘ಇದು ಅಭಿಮಾನಿಗಳೇ ಮಾಡಿದ ಎಐ ಇಮೇಜ್’ ಎಂದು ಕೆಲವರು ಹೇಳಿದ್ದಾರೆ. ಅನೇಕರು ಇದನ್ನು ಪಬ್ಲಿಸಿಟಿ ಸ್ಟಂಟ್ ಎಂದು ಕರೆದಿದ್ದಾರೆ. ‘ಹೊಸ ಸಿನಿಮಾ ಪ್ರಚಾರಕ್ಕೆ ಈ ರೀತಿ ಮಾಡಿರಬಹುದು’ ಎಂದು ಕೆಲವರು ಹೇಳಿದ್ದಾರೆ. ‘ಒಳ್ಳೆಯ ಕಪಲ್’ ಎಂದು ಕೆಲವರು ಬರೆದುಕೊಂಡಿದ್ದಾರೆ.
Latest Buzz : Dhruv vikram & Anupama dating pics !#DhruvVikram #debata #dating #AnupamaParameswaran #anupamaparameshwaran #lovebirds pic.twitter.com/n0aBkiJ8Is
— Girls Clicks (@girlsclicks) April 13, 2025
ಅನುಪಮಾ ಹಾಗೂ ಧ್ರುವ್ ಅವರು ‘ಬಿಸೋನ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಾರಿ ಸೆಲ್ವರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಪಾ. ರಂಜಿತ್ ಇದನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಶೂಟ್ ಕೂಡ ಪೂರ್ಣಗೊಂಡಿದೆ. ಈ ಚಿತ್ರದಲ್ಲಿ ಬರೋ ದೃಶ್ಯ ಕೂಡ ಇದಾಗಿರಬಹುದು ಎಂಬುದು ಅನೇಕರ ಊಹೆ.
ಇದನ್ನೂ ಓದಿ: ತಮಿಳಿನ ಸ್ಟಾರ್ ನಟನ ಪುತ್ರನೊಡನೆ ಅನುಪಮಾ ಪರಮೇಶ್ವರನ್ ಡೇಟಿಂಗ್?
ಅನುಪಮಾ ಪರಮೇಶ್ವರನ್ ಅವರು ಮೊದಲು ಈ ರೀತಿಯ ಬೋಲ್ಡ್ ಪಾತ್ರಗಳ ವಿಚಾರದಲ್ಲಿ ಮಡಿವಂತಿಕೆ ಕಾಪಾಡಿಕೊಂಡು ಬಂದಿದ್ದರು. ಆದರೆ, ದಿನ ಕಳೆದಂತೆ ಅವರು ಮೈ ಚಳಿ ಬಿಟ್ಟು ನಟಿಸೋಕೆ ಆರಂಭಿಸಿದರು. ಈಗ ಬೋಲ್ಡ್ ಪಾತ್ರಗಳನ್ನು ಅವರು ಖುಷಿಯಿಂದ ಒಪ್ಪಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:45 am, Mon, 14 April 25