ಸೆಕ್ಸ್ ಸ್ಕ್ಯಾಂಡಲ್ನಲ್ಲಿ ಸಿಲುಕಿ ತೊಂದರೆಗೆ ಒಳಗಾದ ಹೀರೋಯಿನ್ಗಳು ಇವರೇ..
ಭಾರತದಲ್ಲಿ ಹಲವು ಹೀರೋಯಿನ್ಗಳು ಇದ್ದಾರೆ. ಕೆಲವರಿಗೆ ನಟನೆ ಕೈ ಹಿಡಿದಿದೆ. ಆದರೆ, ಶೆರ್ಲಿನ್ ಚೋಪ್ರಾ ಮೊದಲಾದವರು ವೇಶ್ಯಾವಾಟಿಕೆಗೆ ಇಳಿದು ಸಂಕಷ್ಟ ಅನುಭವಿಸಿದ್ದಾರೆ. ಸಾಕಷ್ಟು ಮಂದಿ ಈ ರೀತಿಯ ತೊಂದರೆ ಅನುಭವಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಚಿತ್ರರಂಗಕ್ಕೂ, ಸೆಲೆಬ್ರಿಟಿಗಳಿಗೂ ವಿವಾದ ಹೊಸದಲ್ಲ. ಅನೇಕ ಸೆಲೆಬ್ರಿಟಿಗಳು ನಾನಾ ಕಾರಣಕ್ಕೆ ಹಲವು ವಿವಾದ ಮಾಡಿಕೊಂಡಿದ್ದಿದೆ. ಕೆಲವರು ಹೀರೋಯಿನ್ಗಳು ಚಿತ್ರರಂಗದಲ್ಲಿ ಗೆಲುವು ಸಿಗದೇ ಅಡ್ಡ ದಾರಿ ಹಿಡಿದಿದ್ದಾರೆ. ಅವರಿಗೆ ಹಣವೇನೋ ಸಿಕ್ಕಿರಬಹುದು, ಆದರೆ ಹೆಸರು ಹಾಳಾಗಿದೆ. ಆ ಸಾಲಿನಲ್ಲಿ ಭಾರತದ ಹಲವು ಹೀರೋಯಿನ್ಗಳು ಇದ್ದಾರೆ. ಶೆರ್ಲಿನ್ ಚೋಪ್ರಾ (Sherlyn Chopra) ಮೊದಲಾದವರು ಈ ಲಿಸ್ಟ್ನಲ್ಲಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಶೆರ್ಲಿನ್ ಚೋಪ್ರಾ
ಶೆರ್ಲಿನ್ ಚೋಪ್ರಾ ಅವರು ಹಲವು ಬೋಲ್ಡ್ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಅವರು ಕೆಲವು ವರ್ಷಗಳ ಹಿಂದೆ ಒಂದು ಶಾಕಿಂಗ್ ಹೇಳಿಕೆ ನೀಡಿದ್ದರು. ಅವರು ಆರ್ಥಿಕ ತೊಂದರೆಯಿಂದ ವೇಶ್ಯಾವಾಟಿಕೆಯ ಜಾಲದಲ್ಲಿ ಸಿಲುಕಿದ್ದರಂತೆ. ಹಣಕ್ಕಾಗಿ ಅವರು ಇಷ್ಟು ಕೀಳು ಮಟ್ಟಕ್ಕೆ ಇಳಿದಿದ್ದರು.
ಸೈರಾ ಭಾನು
ನಟಿ ಸೈರಾ ಭಾನು ಅವರು ದಕ್ಷಿಣದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು 2010ರಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಈ ಘಟನೆ ಅವರಿಗೆ ಸಾಕಷ್ಟು ಅವಮಾನ ತಂದಿತ್ತು. ಆದರೆ, ತಮ್ಮ ತಪ್ಪಿಲ್ಲ ಎಂದು ಹೇಳಿದ್ದರು.
ಶ್ವೇತಾ ಬಸು
‘ಮಕ್ಡೀ’ ಸಿನಿಮಾ ನಾಯಕಿ ಶ್ವೇತಾ ಬಸು ಪ್ರಸಾದ್ ಸೆಕ್ಸ್ ರಾಕೆಟ್ನಲ್ಲಿ ಸಿಲುಕಿದ್ದರು. ಅವರು ವೇಶ್ಯಾವಾಟಿಕೆ ಮಾಡುತ್ತಿದ್ದರು ಎಂದು ಪೊಲೀಸರು ಅರೆಸ್ಟ್ ಮಾಡಿದ್ದರು. ಈ ಪ್ರಕರಣದಲ್ಲಿ ತಾವು ಸಂತ್ರಸ್ತೆ ಎಂದು ಅವರು ಹೇಳಿಕೊಂಡಿದ್ದರು.
ಭುವನೇಶ್ವರಿ
ಐಟಂ ಸಾಂಗ್ ಮೂಲಕ ಭುವನೇಶ್ವರಿ ಅವರು ಹೆಸರು ಮಾಡಿದ್ದಾರೆ. ಅವರು ಬಿ-ಗ್ರೇಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಚೆನ್ನೈನಲ್ಲಿ ಅರೆಸ್ಟ್ ಆಗಿದ್ದರು. ಸೆಕ್ಸ್ ರಾಕೆಟ್ನಲ್ಲಿ ಸಿಲುಕಿದ್ದರು ಎನ್ನಲಾಗಿದೆ.
ಐಷ್ ಅನ್ಸಾರಿ
ನಟಿ ಐಷ್ ಅನ್ಸಾರಿ ಅವರು 2011ರಲ್ಲಿ ಅರೆಸ್ಟ್ ಆಗಿದ್ದರು. ಜೋದ್ಪುರ್ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದರು. ವೇಶ್ಯಾವಾಟಿಕೆ ಜಾಲದಲ್ಲಿ ಅವರ ಹೆಸರು ಕೇಳಿ ಬಂದಿತ್ತು.
ನೀತು ಅಗರ್ವಾಲ್
ನೀತು ಅಗರ್ವಾಲ್ ಅವರು ಅವರು ಆಂಧ್ರ ಪ್ರದೇಶದಲ್ಲಿ ಅರೆಸ್ಟ್ ಆಗಿದ್ದರು. ಹಾಗಂತ ಇವರು ಯಾವುದೋ ಸೆಕ್ಸ್ ರಾಕೆಟ್ನಲ್ಲಿ ಸಿಲುಕಿರಲಿಲ್ಲ. ಸ್ಮಗ್ಲಿಂಗ್ ಮಾಡುತ್ತಿದ್ದರು ಎಂಬ ಆರೋಪ ಅವರ ಮೇಲೆ ಇದೆ.
ದಿವ್ಯಾ
ಪರಭಾಷೆಯ ನಟಿ ದಿವ್ಯಾ ಎಂಬುವವರು ಅರೆಸ್ಟ್ ಆಗಿದ್ದರು. ಇವರು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಬಿಸ್ನೆಸ್ಮೆನ್ ಹಾಗೂ ಕ್ರಿಕೆಟರ್ಗಳ ಜೊತೆ ಇವರು ಸಂಬಂಧ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಮಿಶ್ತಿ ಮುಖರ್ಜೀ
ನಟಿ ಮಿಶ್ತೀ ಮುಖರ್ಜಿ ಅವರು ಪೊಲೀಸರ ಬಳಿ ಸಿಕ್ಕಿ ಬಿದ್ದಿದರು. ಅವರ ಮನೆಯಲ್ಲಿ 25 ಸಾವಿರ ಸೆಕ್ಸ್ ಸಿಡಿ ಹಾಗೂ 2 ಲಕ್ಷ ರೂಪಾಯಿ ಹಣ ಸಿಕ್ಕಿತ್ತು.
ಇದನ್ನೂ ಓದಿ: BBK 10: ಸುದೀಪ್ ಎದುರಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ; ಹೆಚ್ಚಾಗಿದೆ ಕಾವು
ಕ್ಯಾರೋಲಿನ್
ತಮಿಳು ನಟಿ ಕ್ಯಾರೋಲಿನ್ ಅವರು 5 ಸ್ಟಾರ್ ಹೋಟೆಲ್ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಅವರು ಉದ್ಯಮಿ ಜೊತೆ ಇದ್ದರು ಎನ್ನಲಾಗಿದೆ. ಪೊಲೀಸರು ಬರುವಾಗ ಅವರ ದೇಹದ ಮೇಲೆ ಬಟ್ಟೆ ಇರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:45 am, Sat, 2 December 23



