AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎ ಡೇಟ್’ ಚಿತ್ರ ವಿಮರ್ಶೆ: ಪ್ರೀತಿಯಲ್ಲಿ ಮೋಸ ಹೋದವರಿಗೆ ಸಾಂತ್ವನ ಹೇಳುವ ಸಿನಿಮಾ

‘ಎ ಡೇಟ್’ ಚಿತ್ರ ವಿಮರ್ಶೆ: ಪ್ರೀತಿಯಲ್ಲಿ ಮೋಸ ಹೋದವರಿಗೆ ಸಾಂತ್ವನ ಹೇಳುವ ಸಿನಿಮಾ
A Date ReviewImage Credit source: Tv9 Kannada

ಎ ಡೇಟ್

UA
  • Time - 133 Minutes
  • Released - September 04, 2026
  • Language - Kannada
  • Genre - Drama, Romantic
Cast - ಸುಜನಿತ್ ಶೆಟ್ಟಿ, ಅಶ್ವಿನಿ ಶೆಣೈ.
Director - ವಿಮಲ್ ರಾಜ್ ನಾಗರಾಜ್
3
Critic's Rating
ಮದನ್​ ಕುಮಾರ್​
|

Updated on:Sep 04, 2026 | 7:06 PM

Share

ಹೊಸ ಪ್ರತಿಭೆಗಳು ಸಿನಿಮಾ ಮಾಡಿದರೆ ಅದರಲ್ಲಿ ಖಂಡಿತಾ ಹೊಸತನ ಇರುತ್ತದೆ. ಅದಕ್ಕೆ ‘ಎ ಡೇಟ್’ ಸಿನಿಮಾ ಲೇಟೆಸ್ಟ್ ಉದಾಹರಣೆ ಆಗಿದೆ. ವಿಮಲ್ ರಾಜ್ ನಾಗರಾಜ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸುಜನಿತ್ ಶೆಟ್ಟಿ, ಅಶ್ವಿನಿ ಶೆಣೈ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಸೆಪ್ಟೆಂಬರ್ 4ರಂದು ಬಿಡುಗಡೆ ಆಗಿರುವ ಈ ಸಿನಿಮಾ ಸರಳವಾಗಿದೆ. ಆದರೂ ಪ್ರೇಕ್ಷಕರನ್ನು ಕಾಡುವ ಗುಣವನ್ನು ಹೊಂದಿದೆ. ‘ಎ ಡೇಟ್’ ಸಿನಿಮಾದ ವಿಮರ್ಶೆ ಇಲ್ಲಿದೆ ಓದಿ..

ಈಗಿನ ಕಾಲದ ಸಂಬಂಧಗಳು ಬೇರೆ ಸ್ವರೂಪ ಪಡೆದುಕೊಂಡಿವೆ. ಬದಲಾದ ಕಾಲಘಟ್ಟದಲ್ಲಿ ಪ್ರೀತಿ-ಪ್ರೇಮದ ಅರ್ಥ ಕೂಡ ಬದಲಾಗಿದೆ. ಅದರ ನಡುವೆಯೂ ಶುದ್ಧವಾಗಿ ಪ್ರೀತಿಸುವ ಮಂದಿ ಕೂಡ ಇದ್ದಾರೆ. ಅಂಥ ಎರಡು ಹೃದಯಗಳ ಕಥೆಯನ್ನು ‘ಎ ಡೇಟ್’ ಸಿನಿಮಾದಲ್ಲಿ ತೋರಿಸಲಾಗಿದೆ. ಹೊಸ ತಲೆಮಾರಿನ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗುತ್ತದೆ. ಆದರೆ ತಾಳ್ಮೆಯಿಂದ ನೋಡಲು ಮನಸ್ಸು ಬೇಕು.

ಸಮಾಧಾನದಿಂದ ಸಾಗುವ ನಿರೂಪಣೆ:

2 ಗಂಟೆ 13 ನಿಮಿಷಗಳ ಅವಧಿಯ ‘ಎ ಡೇಟ್’ ಸಿನಿಮಾದಲ್ಲಿ ನಿರ್ದೇಶಕ ವಿಮಲ್ ರಾಜ್ ನಾಗರಾಜ್ ಅವರು ಯಾವುದೇ ಅವಸರ ಇಲ್ಲದೇ ಕಥೆ ಹೇಳಿದ್ದಾರೆ. ಮಾಮೂಲಿ ಕಮರ್ಷಿಯಲ್ ಸೂತ್ರಗಳನ್ನು ಪಾಲಿಸದೇ ತಮ್ಮದೇ ಆದ ಶೈಲಿಯಲ್ಲಿ ಅವರು ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಯಾವ ದೃಶ್ಯದಲ್ಲೂ ಕೂಡ ಗಡಿಬಿಡಿ ಕಾಣಿಸುವುದಿಲ್ಲ. ತುಂಬಾ ಸಮಾಧಾನದಿಂದ ಅವರು ಕಥೆಯನ್ನು ಪ್ರೇಕ್ಷಕರ ಮುಂದಿರಿಸುತ್ತಾ ಸಾಗಿದ್ದಾರೆ.

ಹೇಗಿದೆ ‘ಎ ಡೇಟ್’ ಸಿನಿಮಾದ ಕಥೆ?

ಉತ್ತರ ಭಾರತದ ಹುಡುಗಿಯೊಬ್ಬಳು ತಾತ್ಕಾಲಿಕ ಕೆಲಸದ ಸಲುವಾಗಿ ಬೆಂಗಳೂರಿಗೆ ಬರುತ್ತಾಳೆ. ಈಗಾಗಲೇ ಬ್ರೇಕಪ್ ನೋವು ಅನುಭವಿಸಿರುವ ಆಕೆಗೆ ಇಲ್ಲಿ ಅನಿರೀಕ್ಷಿತವಾಗಿ ಒಬ್ಬ ಹುಡುಗನ ಪರಿಚಯ ಆಗುತ್ತದೆ. ಒಂದು ದಿನದ ಡೇಟ್​ ಮಾಡಲು ಅವರಿಬ್ಬರು ಬೆಂಗಳೂರು ನಗರದಲ್ಲಿ ಸುತ್ತಾಡುತ್ತಾರೆ. ಈ ಪಯಣದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆಕೆ ತನ್ನ ಹಳೇ ಪ್ರೇಮದ ನೋವನ್ನು ಮರೆಯಲು ಪ್ರಯತ್ನಿಸುತ್ತಾಳೆ. ಹಾಗಾದರೆ ಆಕೆಗೆ ಹೊಸ ಪ್ರೀತಿ ಹುಟ್ಟುತ್ತಾ ಅಥವಾ ಇಲ್ಲವಾ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು.

ಒಂದು ದಿನದ ಕಹಾನಿ:

ಮುಂಜಾನೆಯಿಂದ ಆರಂಭವಾಗಿ ರಾತ್ರಿಯ ತನಕ ಸಾಗುವ ಒಂದು ದಿನದ ಕಹಾನಿಯನ್ನು ‘ಎ ಡೇಟ್’ ಸಿನಿಮಾದಲ್ಲಿ ತೋರಿಸಲಾಗಿದೆ. ಅಲ್ಲಲ್ಲಿ ಫ್ಲ್ಯಾಶ್‌ಬ್ಯಾಕ್ ದೃಶ್ಯಗಳು ಕೂಡ ಬರುತ್ತವೆ. ಒಂದು ದಿನದಲ್ಲಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಇರುವ ಹಾಗೆ, ಬೆಂಗಳೂರಿನ ಹವಾಮಾನ ಬದಲಾಗುವ ಹಾಗೆ ಈ ಕಥೆಯೊಳಗೆ ಕೂಡ ಭಾವನೆಗಳ ಏರಿಳಿತ ಇದೆ. ಅದನ್ನು ಫೀಲ್ ಮಾಡುವ ಪ್ರೇಕ್ಷಕರಿಗೆ ಈ ಸಿನಿಮಾ ವಿಶೇಷ ಎನಿಸುತ್ತದೆ.

ಇದನ್ನೂ ಓದಿ: ಆರಂಭದಿಂದ ಅಂತ್ಯದ ತನಕ ಆ್ಯಕ್ಷನ್ ಅಬ್ಬರದ ‘ಟಾಕ್ಸಿಕ್’

ನೊಂದ ಮನಸ್ಸಿಗೆ ಸಾಂತ್ವನ:

ಪ್ರೀತಿ-ಪ್ರೇಮದಲ್ಲಿ ನೊಂದವರ ಸಂಖ್ಯೆಗೇನೂ ಕೊರತೆ ಇಲ್ಲ. ಅಂಥವರಿಗೆ ‘ಎ ಡೇಟ್’ ಚಿತ್ರದಲ್ಲಿ ಒಂದು ಬಗೆಯ ಸಾಂತ್ವನ ಇದೆ. ಒಳ್ಳೆಯ ಉದ್ದೇಶದಿಂದ ಪ್ರೀತಿಸಿದ್ದರೂ ಕೂಡ ಕೊನೆಯಲ್ಲಿ ಮೋಸಹೋದವರಿಗೆ ಈ ಸಿನಿಮಾ ಹೆಚ್ಚು ಕನೆಕ್ಟ್ ಆಗುತ್ತದೆ. ಕಥೆಯ ಆರಂಭದಲ್ಲಿ ಇದೊಂದು ಸಿಂಪಲ್ ಡೇಟಿಂಗ್ ಎನಿಸಿದರೂ ಕ್ಲೈಮ್ಯಾಕ್ಸ್ ವೇಳೆಗೆ ಪ್ರಭುದ್ಧತೆ ಕಾಣಿಸುತ್ತದೆ. ನೋಡುಗರನ್ನು ಕೊಂಚ ಎಮೋಷನಲ್ ಕೂಡ ಆಗಿಸುತ್ತದೆ. ಅಲ್ಲಲ್ಲಿ ತಿಳಿಯಾದ ಹಾಸ್ಯ ಕೂಡ ಇದೆ.

ಎರಡೇ ಪಾತ್ರಗಳ ಸಿನಿಮಾ:

‘ಎ ಡೇಟ್’ ಸಿನಿಮಾದಲ್ಲಿ ಮುಖ್ಯವಾಗಿ ಇರುವುದು ಎರಡೇ ಪಾತ್ರಗಳು. ಇನ್ನುಳಿದವು ತೀರಾ ಚಿಕ್ಕ ಪಾತ್ರಗಳು. ಪ್ರಮುಖವಾದ ಎರಡೇ ಪಾತ್ರಗಳು ಸಿನಿಮಾದುದ್ದಕ್ಕೂ ಕಾಣಿಸಿಕೊಳ್ಳುತ್ತವೆ. ಅದು ಈ ಚಿತ್ರದ ಪ್ಲಸ್ ಮತ್ತು ಮೈನಸ್ ಎರಡೂ ಹೌದು. ಎರಡೇ ಪಾತ್ರಗಳ ಕಾರಣದಿಂದ ಅಲ್ಲಲ್ಲಿ ಸ್ವಲ್ವ ಏಕತಾನತೆ ಕಾಡುತ್ತದೆ. ಅದರ ನಡುವೆಯೂ ಕಥೆಯನ್ನು ಎಷ್ಟು ಸಾಧ್ಯವೋ ಅಷ್ಟು ಆಸಕ್ತಿದಾಯಕವಾಗಿ ಕಟ್ಟಿಕೊಡಲಾಗಿದೆ. ಹೊಸ ತಲೆಮಾರಿಗೆ ಇಷ್ಟ ಆಗುವಂತೆ ರ‍್ಯಾಪ್ ಶೈಲಿಯ ಸಂಗೀತ ಕೂಡ ಈ ಸಿನಿಮಾದಲ್ಲಿದೆ. ಚಿತ್ರದ ಅವಧಿಯನ್ನು ಸ್ವಲ್ಪವಾದರೂ ತಗ್ಗಿಸುವ ಕಡೆಗೆ ನಿರ್ದೇಶಕರು ಗಮನ ಹರಿಸಬಹುದಿತ್ತು ಎನಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:05 pm, Fri, 4 September 26

Follow Us
ಬೆಂಗಳೂರಿಗರೇ ಎಚ್ಚರ: ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಪುನರಾರಂಭ!
ಬೆಂಗಳೂರಿಗರೇ ಎಚ್ಚರ: ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಪುನರಾರಂಭ!
‘ಮೈಮೇಲೆ ಪ್ರಜ್ಞೆ ಇರಬೇಕು’: ಮಗ ಮಾಡಿದ ಕೃತ್ಯದ ಬಗ್ಗೆ ವಿಜಯ್ ಸಿಟ್ಟು
‘ಮೈಮೇಲೆ ಪ್ರಜ್ಞೆ ಇರಬೇಕು’: ಮಗ ಮಾಡಿದ ಕೃತ್ಯದ ಬಗ್ಗೆ ವಿಜಯ್ ಸಿಟ್ಟು
ಕೆಪಿಎಸ್​​ಸಿ ಹಗರಣ: ಆರೋಪಿ ಬಸವರಾಜ ಬಗ್ಗೆ ಸ್ಫೋಟ ಅಂಶ ಬಿಚ್ಚಿಟ್ಟ ಖಂಡ್ರೆ
ಕೆಪಿಎಸ್​​ಸಿ ಹಗರಣ: ಆರೋಪಿ ಬಸವರಾಜ ಬಗ್ಗೆ ಸ್ಫೋಟ ಅಂಶ ಬಿಚ್ಚಿಟ್ಟ ಖಂಡ್ರೆ
ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
ಜಗದೊದ್ಧಾರನ ಆಡಿಸಿದಳೆಶೋದೆ ಕೀರ್ತನೆ ಹುಟ್ಟಿದ ತಾಣದಲ್ಲಿ ಜನ್ಮಾಷ್ಟಮಿಸಂಭ್ರಮ
ಜಗದೊದ್ಧಾರನ ಆಡಿಸಿದಳೆಶೋದೆ ಕೀರ್ತನೆ ಹುಟ್ಟಿದ ತಾಣದಲ್ಲಿ ಜನ್ಮಾಷ್ಟಮಿಸಂಭ್ರಮ
ಸದ್ದಿಲ್ಲದೆ ತಮಿಳುನಾಡಿಗೆ ಹರಿಯುತ್ತಿದೆ ಕಾವೇರಿ ನೀರು!
ಸದ್ದಿಲ್ಲದೆ ತಮಿಳುನಾಡಿಗೆ ಹರಿಯುತ್ತಿದೆ ಕಾವೇರಿ ನೀರು!
ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿಕೆಶಿ
ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿಕೆಶಿ
ನಿರುದ್ಯೋಗಿ ಯುವಕ ಯುವತಿಯರೇ ಟಾರ್ಗೆಟ್: ಈತನ ಮೊಬೈಲ್​​​ನಲ್ಲಿ ಶಾಕಿಂಗ್ ಅಂಶ
ನಿರುದ್ಯೋಗಿ ಯುವಕ ಯುವತಿಯರೇ ಟಾರ್ಗೆಟ್: ಈತನ ಮೊಬೈಲ್​​​ನಲ್ಲಿ ಶಾಕಿಂಗ್ ಅಂಶ
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!