‘ಅನ್ಸ್ಟಾಪೆಬಲ್ ವಿತ್ ಎನ್​ಬಿಕೆ’ಗೆ ಅತಿಥಿಯಾಗಿ ಬರ್ತಿದಾರೆ ಸ್ಟಾರ್ ಹೀರೋ

ನಂದಮೂರಿ ಬಾಲಕೃಷ್ಣ ನಡೆಸಿಕೊಡುವ ಅನ್​ಸ್ಟಾಪೆಬಲ್ ವಿತ್ ಎನ್​ಬಿಕೆ ಟಾಕ್ ಶೋ ತೆಲುಗಿನ ನಂಬರ್ 1 ಟಾಕ್ ಶೋ ಆಗಿದೆ. ಯಾವ ಟಿವಿ ಸಂದರ್ಶನಗಳಿಗೂ ಸಿಗದ ದೊಡ್ಡ ದೊಡ್ಡ ಸ್ಟಾರ್ ನಟ-ನಟಿಯರು ಈ ಶೋಗೆ ಅತಿಥಿಗಳಾಗಿ ಬರುತ್ತಾರೆ. ಈ ಬಾರಿ ಟಾಲಿವುಡ್​ನ ದೊಡ್ಡ ಸ್ಟಾರ್ ನಟ ಅನ್​ಸ್ಟಾಪೆಬಲ್ ವಿತ್ ಎನ್​ಬಿಕೆಗೆ ಅತಿಥಿಯಾಗಿ ಬರುತ್ತಿದ್ದಾರೆ.

‘ಅನ್ಸ್ಟಾಪೆಬಲ್ ವಿತ್ ಎನ್​ಬಿಕೆ’ಗೆ ಅತಿಥಿಯಾಗಿ ಬರ್ತಿದಾರೆ ಸ್ಟಾರ್ ಹೀರೋ
Follow us
| Updated By: ಮಂಜುನಾಥ ಸಿ.

Updated on: Nov 07, 2024 | 6:41 PM

‘ಅನ್ಸ್ಟಾಪೆಬಲ್ ವಿತ್ ಎನ್​ಬಿಕೆ’ ಇದು ಖ್ಯಾತ ಶೋಗಳಲ್ಲಿ ಒಂದು. ನಟ, ಶಾಸಕ ನಂದಮೂರಿ ಬಾಲಕೃಷ್ಣ ಅವರು ಇದನ್ನು ಹೋಸ್ಟ್ ಮಾಡುತ್ತಾರೆ. ಅವರ ಹೋಸ್ಟಿಂಗ್ ಸ್ಕಿಲ್ಗೆ ಎಲ್ಲರೂ ಫಿದಾ ಆಗಿದ್ದಾರೆ. ಇದು ಬೇರೆಯದೇ ರೀತಿಯಲ್ಲಿ ಇರುತ್ತದೆ. ಬಾಲಯ್ಯ ಅವರು ಸಿನಿಮಾಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಿನಿಮಾಗಳು ಮಾಸ್ ಆಗಿ ಇರುತ್ತವೆ. ಅದೇ ರೀತಿ, ಈ ಶೋನಲ್ಲೂ ಅವರು ಮಾಸ್ ಅವತಾರ ತೋರಿಸುತ್ತಾರೆ. ಈಗ ಈ ಶೋಗೆ ಖ್ಯಾತ ನಟನ ಎಂಟ್ರಿ ಆಗಿದೆ.

‘ಅನ್ಸ್ಟಾಪೆಬಲ್ ವಿತ್ ಎನ್​ಬಿಕೆ’ ನಾಲ್ಕನೇ ಸೀಸನ್ ಆರಂಭಿಸಿದೆ. ಈಗಾಗಲೇ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಸೂರ್ಯ, ದುಲ್ಕರ್ ಸಲ್ಮಾನ್ ಈ ಸೀಸನ್ನ ಅತಿಥಿಗಳಾಗಿ ಬಂದು ಹೋಗಿದ್ದಾರೆ. ಈಗ ಅಲ್ಲು ಅರ್ಜುನ್ ಅವರು ಅತಿಥಿಯಾಗಿ ಶೋಗೆ ಬರಲಿದ್ದಾರೆ. ಅಲ್ಲು ಅರ್ಜುನ್ ಅವರು ಕೆಲ ದಿನಗಳ ಹಿಂದೆ ಶೋಗಾಗಿ ಶೂಟ್​ನಲ್ಲಿ ಭಾಗಿ ಆಗಿದ್ದರು. ಈ ಮೊದಲು ‘ಅನ್ಸ್ಟಾಪೆಬಲ್ ವಿತ್ ಎನ್ಬಿಕೆ’ ಶೋಗೆ ಬಂದಿದ್ದರು. ಅಹಾದಲ್ಲಿ ಈ ಶೋ ಪ್ರಸಾರ ಕಾಣುತ್ತಿದೆ. ಅಹಾ ಒಟಿಟಿಯಲ್ಲಿ ಅತಿ ಹೆಚ್ಚು ವೀಕ್ಷಣೆ ಕಾಣುವ ಶೋಗಳಲ್ಲಿ ಇದು ಕೂಡ ಒಂದು ಅನ್ನೋದು ವಿಶೇಷ.

ಇದನ್ನೂ ಓದಿ:

ಅಲ್ಲು ಅರ್ಜುನ್ ಅವರು ‘ಅನ್ಸ್ಟಾಪೆಬಲ್ ವಿತ್ ಎನ್​ಬಿಕೆ’ ಶೋನಲ್ಲಿ ‘ಪುಷ್ಪ 2’ ಚಿತ್ರದ ಪ್ರಮೋಷನ್ ಮಾಡಲಿದ್ದಾರೆ. ಈ ಸಿನಿಮಾ ರಿಲೀಸ್ಗೆ ಬಾಕಿ ಇರೋದು ಇನ್ನು ಕೆಲವೇ ದಿನಗಳು ಮಾತ್ರ. ಹೀಗಾಗಿ, ಈ ಸಿನಿಮಾದ ಪ್ರಚಾರಕ್ಕೆ ಅಲ್ಲು ಅರ್ಜುನ್ ಅವರು ಹೆಚ್ಚು ಒತ್ತು ಕೊಡಬೇಕಿದೆ. ಈ ಮೂಲಕ ಹೆಚ್ಚು ಜನರಿಗೆ ಅವರು ಸಿನಿಮಾನ ರೀಚ್ ಮಾಡಿಸಬೇಕಿದೆ. ಅಲ್ಲು ಅರ್ಜುನ್ ಹಾಗೂ ಬಾಲಯ್ಯ ಅವರನ್ನು ಒಂದೇ ವೇದಿಕೆ ಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಶೋನ ಟೀಸರ್ ಕೂಡ ಶೀಘ್ರವೇ ರಿಲೀಸ್ ಆಗುವ ಸಾಧ್ಯತೆ ಇದೆ. ಇದರಲ್ಲಿ ಯಾವೆಲ್ಲ ವಿಚಾರಗಳು ಚರ್ಚೆ ಆಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

‘ಪುಷ್ಪ 2’ ಚಿತ್ರದ ವಿಚಾರಕ್ಕೆ ಬರೋದಾದರೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ನಟಿಸಿದ್ದಾರೆ. ಸುಕುಮಾರ್ ನಿರ್ದೇಶನ ಇರುವ ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ರಸ್ತೆಯಲ್ಲಿ 10 ವರ್ಷದ ಬಾಲಕನಿಂದ ಯುವತಿಗೆ ಕಿರುಕುಳ
ಬೆಂಗಳೂರಿನ ರಸ್ತೆಯಲ್ಲಿ 10 ವರ್ಷದ ಬಾಲಕನಿಂದ ಯುವತಿಗೆ ಕಿರುಕುಳ
ಅನ್ನಪೂರ್ಣ ಗೆದ್ದರೆ ಮಾತ್ರ ಸಂಡೂರಿನ ಅಭಿವೃದ್ಧಿ ಸಾಧ್ಯ: ಸಿದ್ದರಾಮಯ್ಯ
ಅನ್ನಪೂರ್ಣ ಗೆದ್ದರೆ ಮಾತ್ರ ಸಂಡೂರಿನ ಅಭಿವೃದ್ಧಿ ಸಾಧ್ಯ: ಸಿದ್ದರಾಮಯ್ಯ
ಆನ್​ಲೈನ್​ನಲ್ಲಿ ಬಿಬಿಎಂಪಿ ಇ ಖಾತಾ ಪಡೆಯವುದು ಹೇಗೆ? ಇಲ್ಲಿದೆ ಸರಳ ಮಾರ್ಗ !
ಆನ್​ಲೈನ್​ನಲ್ಲಿ ಬಿಬಿಎಂಪಿ ಇ ಖಾತಾ ಪಡೆಯವುದು ಹೇಗೆ? ಇಲ್ಲಿದೆ ಸರಳ ಮಾರ್ಗ !
ಚನ್ನಪಟ್ಟಣ ಪ್ರಚಾರದ ಬಗ್ಗೆ ಮತ್ತೊಮ್ಮೆ ಮೌನವಹಿಸಿ ಬೆನ್ನುಹಾಕಿದ ದೇವೇಗೌಡ
ಚನ್ನಪಟ್ಟಣ ಪ್ರಚಾರದ ಬಗ್ಗೆ ಮತ್ತೊಮ್ಮೆ ಮೌನವಹಿಸಿ ಬೆನ್ನುಹಾಕಿದ ದೇವೇಗೌಡ
ಜಾತಿಗಳ ಆಧಾರದಲ್ಲಿ ಹಿಂದೂಗಳಿಗೆ ದೇವರುಗಳಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್
ಜಾತಿಗಳ ಆಧಾರದಲ್ಲಿ ಹಿಂದೂಗಳಿಗೆ ದೇವರುಗಳಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್
ಶಿವಕುಮಾರ್​ರನ್ನು ಇಂಪ್ರೆಸ್ ಮಾಡುವ ಪ್ರಯತ್ನದಲ್ಲಿ ವಿಫಲನಾದ ಪಕ್ಷದ ಮುಖಂಡ!
ಶಿವಕುಮಾರ್​ರನ್ನು ಇಂಪ್ರೆಸ್ ಮಾಡುವ ಪ್ರಯತ್ನದಲ್ಲಿ ವಿಫಲನಾದ ಪಕ್ಷದ ಮುಖಂಡ!
ತುಮಕೂರಲ್ಲಿ ಅಮಾನವೀಯ ಘಟನೆ: ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ
ತುಮಕೂರಲ್ಲಿ ಅಮಾನವೀಯ ಘಟನೆ: ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ
ಪುಟ್ಟರಾಜು ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ಎಲ್ಲ ಗೊತ್ತಾಗುತ್ತದೆ: ಬಾಲಕೃಷ್ಣ
ಪುಟ್ಟರಾಜು ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ಎಲ್ಲ ಗೊತ್ತಾಗುತ್ತದೆ: ಬಾಲಕೃಷ್ಣ
ಜಿಲ್ಲಾಧಿಕಾರಿ ಮುಡಾ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ಮೊದಲ ಸಭೆ ಇದು: ಜಿಟಿಡಿ
ಜಿಲ್ಲಾಧಿಕಾರಿ ಮುಡಾ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ಮೊದಲ ಸಭೆ ಇದು: ಜಿಟಿಡಿ
ಸಿಎಂ ಶೆಡ್ಯೂಲ್​ನಲ್ಲಿ 10 ಗಂಟೆ ಲೋಕಾಯುಕ್ತ 12 ಕ್ಕೆ ಚನ್ನಪಟ್ಟಣ ಅಂತಿತ್ತು!
ಸಿಎಂ ಶೆಡ್ಯೂಲ್​ನಲ್ಲಿ 10 ಗಂಟೆ ಲೋಕಾಯುಕ್ತ 12 ಕ್ಕೆ ಚನ್ನಪಟ್ಟಣ ಅಂತಿತ್ತು!