ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ದೀಪಾವಳಿ ಸೆಲೆಬ್ರೇಷನ್; ಧ್ವನಿಯಲ್ಲೇ ಸಿಕ್ಕಿಬಿದ್ರು
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಿಶ್ಚಿತಾರ್ಥದ ವದಂತಿಗಳು ಹರಿದಾಡುತ್ತಿವೆ. ಇತ್ತೀಚೆಗೆ ರಶ್ಮಿಕಾ, ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿದ್ದು, ಇದು ಅವರ ಸಂಬಂಧಕ್ಕೆ ಮತ್ತಷ್ಟು ಇಂಬು ನೀಡಿದೆ. 'ಗೀತ ಗೋವಿಂದಂ' ನಂತರ ಆಪ್ತರಾದ ಈ ಜೋಡಿ ಫೆಬ್ರವರಿಯಲ್ಲಿ ಮದುವೆಯಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗೆ ಎಂಗೇಜ್ಮೆಂಟ್ ಮಾಡಿಕೊಂಡ ಸುದ್ದಿ ಹರಿದಾಡಿದೆ. ಆದರೆ. ಈ ವಿಚಾರವನ್ನು ಈ ಜೋಡಿ ಒಪ್ಪಿಕೊಂಡಿಲ್ಲ. ರಶ್ಮಿಕಾ ಮಂದಣ್ಣ ಅವರು ಇತ್ತೀಚಿನ ದಿನಗಳಲ್ಲಿ ಹಬ್ಬಗಳನ್ನು ವಿಜಯ್ ದೇವರಕೊಂಡ ಅವರ ಮನೆಯಲ್ಲೇ ಆಚರಿಸುತ್ತಿದ್ದಾರೆ. ಈಗ ಅವರು ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಸೆಲೆಬ್ರೇಟ್ ಮಾಡಿದ್ದಾರೆ. ರಶ್ಮಿಕಾ ಧ್ವನಿಯಲ್ಲಿ ಇದು ಸ್ಪಷ್ಟವಾಗಿದೆ.
ರಶ್ಮಿಕಾ ಮಂದಣ್ಣ ಆಗಿನ್ನೂ ಕನ್ನಡದಲ್ಲೇ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಆಗಲೇ ಅವರಿಗೆ ‘ಗೀತ ಗೋವಿಂದಂ’ ಸಿನಿಮಾದಲ್ಲಿ ನಟಿಸೋ ಸಿಕ್ಕಿತು. ರಶ್ಮಿಕಾ ಮಂದಣ್ಣ ಅವರು ಈ ಚಿತ್ರದಲ್ಲಿ ನಾಯಕಿ ಪಾತ್ರ ಮಾಡಿದರು. ವಿಜಯ್ ದೇವರಕೊಂಡ ಈ ಚಿತ್ರಕ್ಕೆ ಹೀರೋ. ಆ ಸಮಯದಲ್ಲೇ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದು ಬಿತ್ತು. ಅಲ್ಲಿಂದ ವಿಜಯ್ ಹಾಗೂ ರಶ್ಮಿಕಾ ಆಪ್ತರಾಗುತ್ತಾ ಬಂದರು.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿ ಆಗಿದೆ. ಇಬ್ಬರೂ ಫೆಬ್ರವರಿಯಲ್ಲಿ ಅದ್ದೂರಿಯಾಗಿ ವಿವಾಹ ಆಗುವ ಉದ್ದೇಶ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ವಿಜಯ್ ಮನೆಯಲ್ಲಿ ಅವರು ಖುಷಿ ಖುಷಿಯಿಂದ ದೀಪಾವಳಿ ಆಚರಿಸಿದ್ದಾರೆ.
View this post on Instagram
ವಿಜಯ್ ದೇವರಕೊಂಡ ಅವರು ದೀಪಾವಳಿಯ ಸಂಭ್ರಮದಿಂದ ಆಚರಿಸಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿಜಯ್ ಪಟಾಕಿ ಸಿಡಿಸುತ್ತಿರುವುದು ಇದೆ. ಈ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಅವರ ಧ್ವನಿ ಕೂಡ ಕೇಳಿಸಿದೆ. ಹೀಗಾಗಿ ರಶ್ಮಿಕಾ ಅವರು ವಿಜಯ್ ಮನೆಯಲ್ಲಿ ದೀಪಾವಳಿ ಆಚರಿಸಿರೋದು ಸ್ಪಷ್ಟವಾಗಿದೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ಗೆದ್ದು ಬೀಗಿದ ನಟಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ನಟನೆಯ, ‘ಥಾಮಾ’ ಸಿನಿಮಾ ಹಿಂದಿಯಲ್ಲಿ ರಿಲೀಸ್ ಆಗಿದೆ. ಈ ಚಿತ್ರ ಮೊದಲ ದಿನವೇ 24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಮೂಲಕ ಅವರು ಗೆದ್ದು ಬೀಗಿದ್ದಾರೆ. ಈ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈ ಚಿತ್ರದಿಂದ ರಶ್ಮಿಕಾ ಮಂದಣ್ಣ ಅವರು ಮತ್ತೊಂದು ಗೆಲುವು ಕಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








