AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೂಮಪಾನದಿಂದ ಶ್ವಾಸಕೋಶ ಮಾತ್ರವಲ್ಲ, ಮೂಳೆಗಳು ಬಲಹೀನವಾಗಿ ಫ್ರ್ಯಾಕ್ಚರ್ ಅಪಾಯ ಹೆಚ್ಚಾಗುತ್ತೆ!

ಧೂಮಪಾನವು ಶ್ವಾಸಕೋಶ ಮತ್ತು ಹೃದಯಕ್ಕೆ ಮಾತ್ರವಲ್ಲ, ಮೂಳೆಗಳಿಗೂ ಗಂಭೀರ ಹಾನಿ ಉಂಟುಮಾಡುತ್ತದೆ. ವಿಶೇಷವಾಗಿ ಆಸ್ಟಿಯೋಪೊರೋಸಿಸ್ ಅಪಾಯವಿರುವವರು, ವಯೋವೃದ್ಧರು ಹಾಗೂ ಮಹಿಳೆಯರು ಧೂಮಪಾನದಿಂದ ದೂರವಿರುವುದು ಅತ್ಯಗತ್ಯ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಧೂಮಪಾನದಿಂದ ದೂರವಿದ್ದರೆ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ಕುರಿತು ಡಾ. ಸುರೇಂದ್ರ ಕಾಮತ್ ಅವರು ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.

ಧೂಮಪಾನದಿಂದ ಶ್ವಾಸಕೋಶ ಮಾತ್ರವಲ್ಲ, ಮೂಳೆಗಳು ಬಲಹೀನವಾಗಿ ಫ್ರ್ಯಾಕ್ಚರ್ ಅಪಾಯ ಹೆಚ್ಚಾಗುತ್ತೆ!
Smoking And Bone HealthImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 24, 2026 | 10:02 PM

Share

ಮುಖ್ಯಾಂಶಗಳು

  • ಧೂಮಪಾನ ಮತ್ತು ಆಸ್ಟಿಯೋಪೊರೋಸಿಸ್ ನಡುವೆ ಇರುವ ಸಂಬಂಧ!
  • ಮೂಳೆ ಮುರಿತವಾದರೆ ಗುಣವಾಗುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಕ್ಕೆ ಕಾರಣ
  • ಮೂಳೆಗಳ ಸಾಮರ್ಥ್ಯ ಹೆಚ್ಚಿಸಲು ವೈದ್ಯರು ನೀಡಿರುವ ಸಿಂಪಲ್ ಸಲಹೆಗಳು

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಹೆಚ್ಚಿನವರು ಧೂಮಪಾನದಿಂದ ಹೃದಯ ಮತ್ತು ಶ್ವಾಸಕೋಶದ ಸಮಸ್ಯೆಗಳು ಮಾತ್ರ ಉಂಟಾಗುತ್ತವೆ ಎಂದು ಭಾವಿಸುತ್ತಾರೆ. ವಾಸ್ತವವಾಗಿ, ಧೂಮಪಾನವು ಮೂಳೆಗಳ ಆರೋಗ್ಯ (Bone Health) ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ. ದೀರ್ಘಕಾಲ ಧೂಮಪಾನ ಮಾಡುವವರಲ್ಲಿ ಆಸ್ಟಿಯೋಪೊರೋಸಿಸ್ (Osteoporosis), ಮೂಳೆ ಮುರಿತ (Fracture), ಮೂಳೆಗಳು ತಡವಾಗಿ ಜೋಡಣೆಯಾಗುವುದು (Delayed Bone Healing) ಮುಂತಾದ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪೆಡಿಕ್ ಸರ್ಜನ್ ಡಾ. ಸುರೇಂದ್ರ ಕಾಮತ್ ಅವರ ಪ್ರಕಾರ, ತಂಬಾಕು ಹೊಗೆಯಲ್ಲಿ 7,000ಕ್ಕೂ ಹೆಚ್ಚು ರಾಸಾಯನಿಕಗಳು ಇದ್ದು, ಅವುಗಳಲ್ಲಿ ಅನೇಕವು ದೇಹಕ್ಕೆ ವಿಷಕಾರಿಯಾಗಿವೆ. ಇವುಗಳು ಹೃದಯ, ಶ್ವಾಸಕೋಶ ಮತ್ತು ರಕ್ತನಾಳಗಳಷ್ಟೇ ಅಲ್ಲದೆ, ಮೂಳೆಗಳ ಬೆಳವಣಿಗೆ ಮತ್ತು ಬಲವನ್ನೂ ದುರ್ಬಲಗೊಳಿಸುತ್ತವೆ.

ಧೂಮಪಾನದಿಂದ ಮೂಳೆಗಳಿಗೆ ಹೇಗೆ ಹಾನಿಯಾಗುತ್ತದೆ?

ಧೂಮಪಾನವು ಮೂಳೆ ರಚನೆ ಮತ್ತು ಮೂಳೆ ಕ್ಷಯದ ನಡುವಿನ ಸಮತೋಲನವನ್ನು ಹಾಳು ಮಾಡುತ್ತದೆ. ಪರಿಣಾಮವಾಗಿ ಮೂಳೆ ಖನಿಜ ಸಾಂದ್ರತೆ (Bone Mineral Density – BMD) ಕಡಿಮೆಯಾಗುತ್ತದೆ ಮತ್ತು ಆಸ್ಟಿಯೋಪೊರೋಸಿಸ್ ಅಪಾಯ ಹೆಚ್ಚುತ್ತದೆ.

ಮೂಳೆ ರಚನೆ ಕಡಿಮೆಯಾಗುತ್ತದೆ: ನಿಕೋಟಿನ್ (Nicotine) ಎಂಬ ರಾಸಾಯನಿಕವು ಹೊಸ ಮೂಳೆಗಳನ್ನು ರಚನೆ ಆಸ್ಟಿಯೋಬ್ಲಾಸ್ಟ್ (Osteoblast) ಕೋಶಗಳ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ. ಇದರಿಂದ ಹೊಸ ಮೂಳೆಗಳ ಬೆಳವಣಿಗೆ ನಿಧಾನವಾಗುತ್ತದೆ.

ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಕಡಿಮೆಯಾಗುತ್ತದೆ: ಧೂಮಪಾನ ಮಾಡುವವರಲ್ಲಿ ದೇಹವು ಆಹಾರದಿಂದ ಕ್ಯಾಲ್ಸಿಯಂ ಅನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಮೂಳೆಗಳು ಕ್ರಮೇಣ ದುರ್ಬಲ ಅಥವಾ ಬಲಹೀನಗೊಳ್ಳುತ್ತವೆ.

ಹಾರ್ಮೋನ್ ಅಸಮತೋಲನ: ಮಹಿಳೆಯರಲ್ಲಿ ಈಸ್ಟ್ರೋಜನ್ ಹಾರ್ಮೋನ್ ಮಟ್ಟವು ಬೇಗ ಕಡಿಮೆಯಾಗುವುದರಿಂದ ಮೆನೋಪಾಸ್ ನಂತರ ಆಸ್ಟಿಯೋಪೊರೋಸಿಸ್ ಅಪಾಯ ಹೆಚ್ಚುತ್ತದೆ. ಪುರುಷರಲ್ಲಿಯೂ ಟೆಸ್ಟೋಸ್ಟೆರೋನ್ ಮಟ್ಟದ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ: ಪ್ರಾಡಕ್ಟ್ ಲೇಬಲ್ ಓದದೆಯೇ ಖರೀದಿಸುವ ಅಭ್ಯಾಸವಿದ್ದರೆ ಹಿಡನ್ ಶುಗರ್ ಹೆಚ್ಚಾಗಬಹುದು ಎಚ್ಚರ!

ಆಕ್ಸಿಡೇಟಿವ್ ಒತ್ತಡ ಹೆಚ್ಚಾಗುತ್ತದೆ: ಧೂಮಪಾನದಿಂದ ಫ್ರೀ ರಾಡಿಕಲ್‌ಗಳು ಹೆಚ್ಚಾಗಿ ಉತ್ಪತ್ತಿಯಾಗಿ ಮೂಳೆ ಕೋಶಗಳಿಗೆ ಹಾನಿ ಉಂಟುಮಾಡುತ್ತವೆ.

ರಕ್ತ ಪೂರೈಕೆ ಕಡಿಮೆಯಾಗುತ್ತದೆ: ಧೂಮಪಾನವು ರಕ್ತನಾಳಗಳನ್ನು ಕಿರಿದಾಗಿಸುವುದರಿಂದ ಮೂಳೆಗಳಿಗೆ ಅಗತ್ಯವಾದ ಆಮ್ಲಜನಕ ಮತ್ತು ಪೋಷಕಾಂಶಗಳು ಸಮರ್ಪಕವಾಗಿ ತಲುಪುವುದಿಲ್ಲ.

ಮೂಳೆ ಮುರಿತವಾದರೆ ಗುಣವಾಗುವುದಕ್ಕೆ ಏಕೆ ಸಮಯ ತೆಗೆದುಕೊಳ್ಳುತ್ತದೆ?

ನಿಕೋಟಿನ್ ಹೊಸ ರಕ್ತನಾಳಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದರ ಪರಿಣಾಮವಾಗಿ:

  • ಮೂಳೆಗಳು ನಿಧಾನವಾಗಿ ಜೋಡಣೆಯಾಗುತ್ತವೆ.
  • ಗಾಯ ಗುಣಮುಖವಾಗಲು ಹೆಚ್ಚು ಸಮಯ ಬೇಕಾಗುತ್ತದೆ.
  • ಸೋಂಕಿನ ಅಪಾಯ ಹೆಚ್ಚಾಗುತ್ತದೆ.
  • ಶಸ್ತ್ರಚಿಕಿತ್ಸೆಯ ನಂತರ ಚೇತರಿಕೆ ವಿಳಂಬವಾಗಬಹುದು.

ಮೂಳೆಗಳ ಸಾಮರ್ಥ್ಯ ಹೆಚ್ಚಿಸಲು ಏನು ಮಾಡಬೇಕು?

  • ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಿ.
  • ಕ್ಯಾಲ್ಸಿಯಂ ಸಮೃದ್ಧ ಆಹಾರ ಸೇವಿಸಿ.
  • ವಿಟಮಿನ್ ಡಿ ಕೊರತೆಯಾಗದಂತೆ ನೋಡಿಕೊಳ್ಳಿ.
  • ಪ್ರತಿದಿನ 30– 45 ನಿಮಿಷ ವ್ಯಾಯಾಮ ಮಾಡಿ.
  • ವಾಕಿಂಗ್, ಜಾಗಿಂಗ್, ತೂಕ ಎತ್ತುವ ವ್ಯಾಯಾಮ (Weight-bearing Exercise) ಮಾಡಿ.
  • ಮದ್ಯಪಾನವನ್ನು ಮಿತಿಗೊಳಿಸಿ.
  • ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us