AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಬಾಲಕನ ಅಪಹರಣ, ಕೊಲೆ ಕೇಸ್; ತನಿಖೆ ವೇಳೆ ಭಾಸ್ಕರ್‌ನ ಮಾಸ್ಟರ್ ಪ್ಲಾನ್ ಬಯಲು!

ಬೆಂಗಳೂರಿನ ಚಿಕ್ಕಜಾಲದಲ್ಲಿ ಆನ್‌ಲೈನ್ ಗೇಮಿಂಗ್ ಸಾಲ ತೀರಿಸಲು ಯುಕೆ ರಿಟರ್ನ್ ಎಂ.ಟೆಕ್ ಪದವೀಧರ ಭಾಸ್ಕರ್ ರೆಡ್ಡಿ ನೆರೆಮನೆಯ ಬಾಲಕ ಪ್ರಜ್ವಲ್‌ನನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿದ್ದಾನೆ. ಕೊಲೆಗೂ ಮುನ್ನ ಬಾಲಕನ ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆಯಿಡಲು ಸಂಚು ರೂಪಿಸಿದ್ದು ತನಿಖೆಯಲ್ಲಿ ಬಯಲಾಗಿದೆ.

ಬೆಂಗಳೂರು: ಬಾಲಕನ ಅಪಹರಣ, ಕೊಲೆ ಕೇಸ್; ತನಿಖೆ ವೇಳೆ ಭಾಸ್ಕರ್‌ನ ಮಾಸ್ಟರ್ ಪ್ಲಾನ್ ಬಯಲು!
ತನಿಖೆ ವೇಳೆ ಭಾಸ್ಕರ್‌ನ ಮಾಸ್ಟರ್ ಪ್ಲಾನ್ ಬಯಲು!
ಶಿವಪ್ರಸಾದ್​ ಬಿ.
| Edited By: |

Updated on: Sep 29, 2026 | 8:35 AM

Share

ಮುಖ್ಯಾಂಶಗಳು

  • ಲಂಡನ್ ರಿಟರ್ನ್ ಯುವಕನಿಂದ ಆನ್‌ಲೈನ್ ಜೂಜಿಗಾಗಿ ನೆರೆಮನೆಯ ಬಾಲಕನ ಕ್ರೂರ ಕೊಲೆ.
  • ಅಪಹರಣಕ್ಕೂ ಮುನ್ನವೇ ಬಾಲಕನ ವಿಡಿಯೋ ಮಾಡಿ ಕೊಲೆಗೈದ ಆರೋಪಿ ಭಾಸ್ಕರ್.
  • ನಕಲಿ ಸಿಮ್ ಬಳಸಿ ಹಣಕ್ಕೆ ಬೇಡಿಕೆಯಿಡಲು ಯತ್ನಿಸಿದ ಆರೋಪಿಗಳು ಬಂಧನ.

ಬೆಂಗಳೂರು, ಸೆಪ್ಟೆಂಬರ್ 29: ಕೆಲದಿನಗಳ ಹಿಂದೆ ಯುಕೆ ಇಂದ ಎಂ.ಟೆಕ್ ಮುಗಿಸಿಕೊಂಡು ಬಂದಿದ್ದ ಉನ್ನತ ಶಿಕ್ಷಣ ಪಡೆದ ವಾಕಾ ಭಾಸ್ಕರ್ ರೆಡ್ಡಿ ಎಂಬ ಯುವಕನೊಬ್ಬ ಹಣದ ಆಸೆಗೆ ಬಿದ್ದು ನೆರೆಮನೆಯ ಬಾಲಕನನ್ನೇ ಅಪಹರಿಸಿ ಹತ್ಯೆ ಮಾಡಿರುವ ಕ್ರೂರ ಘಟನೆ ನಡೆದಿತ್ತು. ಈ ಪ್ರಕರಣ ಸಂಬಂಧ ಆರೋಪಿಗಳಾದ ವಾಕಾ ಭಾಸ್ಕರ್ ರೆಡ್ಡಿ ಹಾಗೂ ಕೊಂಡಲರೆಡ್ಡಿಯನ್ನು ಬಂಧಿಸಿರುವ ಚಿಕ್ಕಜಾಲ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ತನಿಖೆ ವೇಳೆ ಭಾಸ್ಕರ್‌ನ ಮಾಸ್ಟರ್ ಪ್ಲಾನ್ ಬಯಲಾಗಿದೆ.

ಕಿಡ್ನ್ಯಾಪ್‌ಗೂ ಮುನ್ನವೇ ವಿಡಿಯೋ ರೆಕಾರ್ಡ್

ವಿಚಾರಣೆ ವೇಳೆ ಆರೋಪಿ ಭಾಸ್ಕರ್ ಕೊಲೆಯ ಹಿಂದಿನ ಸಂಚಿನ ಬಗ್ಗೆ ಸಂಪೂರ್ಣವಾಗಿ ಬಾಯಿ ಬಿಟ್ಟಿದ್ದಾನೆ. ಆರೋಪಿ ಹೇಳಿರುವಂತೆ, ಅಪಹರಣಕ್ಕೂ ಮುನ್ನವೇ ಬಾಲಕ ಪ್ರಜ್ವಲ್‌ನಿಂದ ಎರಡು ಪ್ರತ್ಯೇಕ ವಿಡಿಯೋಗಳನ್ನು ರೆಕಾರ್ಡ್ ಮಾಡಿಸಲಾಗಿತ್ತು. ಒಂದರಲ್ಲಿ ಬಾಲಕ ರೋದಿಸುತ್ತಿರುವ ದೃಶ್ಯವಿದ್ದರೆ, ಮತ್ತೊಂದರಲ್ಲಿ “ನನ್ನನ್ನು ಕಿಡ್ನ್ಯಾಪ್ ಮಾಡಿದ್ದಾರೆ, ಹಣ ಕೊಟ್ಟು ಕಾಪಾಡಿ” ಎಂದು ಬಾಲಕನಿಂದ ಹೇಳಿಸಲಾಗಿತ್ತು. ವಿಡಿಯೋ ರೆಕಾರ್ಡ್ ಮಾಡಿದ ತಕ್ಷಣವೇ ಭಾಸ್ಕರ್ ಮತ್ತು ಕೊಂಡಲರೆಡ್ಡಿ ಸೇರಿ ಬಾಲಕನನ್ನು ಹತ್ಯೆ ಮಾಡಿದ್ದರು.

ಶವವನ್ನು ಬಿಸಾಡಿ ಬಂದಿದ್ದ ಆರೋಪಿ ಭಾಸ್ಕರ್, ತಾನೂ ಪ್ರಜ್ವಲ್​ಗಾಗಿ ಹುಡುಕಾಟ ನಡೆಸುವವನಂತೆ ನಟಿಸಿದ್ದ. ಪೊಲೀಸರಿಗೆ ಸುಳಿವು ಸಿಗದಂತೆ ಯಾವುದೇ ದಾಖಲೆಗಳಿಲ್ಲದೆ ಮೆಜೆಸ್ಟಿಕ್‌ನಲ್ಲಿ ನಕಲಿ ಸಿಮ್ ಕಾರ್ಡ್ ಪಡೆದು, ಅದರ ಮೂಲಕ ಈ ವಿಡಿಯೋಗಳನ್ನು ಪೋಷಕರಿಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಡಲು ಸ್ಕೆಚ್ ಹಾಕಲಾಗಿತ್ತು.

LIVE TV

ಆನ್‌ಲೈನ್ ಗೇಮಿಂಗ್ ಚಟ ಹಾಗೂ ಸಾಲದ ಸುಳಿ

ಯುಕೆ ಇಂದ ಎಂ.ಟೆಕ್ ಮುಗಿಸಿಕೊಂಡು ಬಂದಿದ್ದ ಉನ್ನತ ಶಿಕ್ಷಣ ಪಡೆದ ವಾಕಾ ಭಾಸ್ಕರ್ ರೆಡ್ಡಿ ಎಂಬ ಯುವಕ, ಇತ್ತೀಚೆಗೆ ಆನ್‌ಲೈನ್ ಗೇಮಿಂಗ್ ಹಾಗೂ ಬೆಟ್ಟಿಂಗ್ ಚಟಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಈ ಸಾಲವನ್ನು ತೀರಿಸಲು ಹಾಗೂ ಸುಲಭವಾಗಿ ಹಣ ಸಂಪಾದಿಸಲು ಯೋಜಿಸಿದ ಆತ, ತನಗೆ ಪರಿಚಯವಿದ್ದ ನೆರೆಮನೆಯ ಬಾಲಕನನ್ನೇ ಟಾರ್ಗೆಟ್ ಮಾಡಿದ್ದ. ಘಟನೆಯ ದಿನ ಬಾಲಕನಿಗೆ ಆಮಿಷ ಒಡ್ಡಿ ಕರೆದೊಯ್ದ ಆರೋಪಿ, ತಕ್ಷಣವೇ ಆತನನ್ನು ಹತ್ಯೆ ಮಾಡಿದ್ದಾನೆ. ಬಾಲಕ ಜೀವಂತವಾಗಿದ್ದರೆ ತಾನು ಸಿಕ್ಕಿಬೀಳುತ್ತೇನೆ ಎಂಬ ಭಯದಿಂದ ಮೊದಲೇ ಕೊಲೆ ಮಾಡಿ, ಆ ನಂತರ ಬಾಲಕನ ಕುಟುಂಬಸ್ಥರಿಗೆ ಕರೆ ಮಾಡಿ ಭಾರಿ ಮೊತ್ತದ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಶಿವಪ್ರಸಾದ್​ ಬಿ.
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!