ಮೆಟ್ರೋ ರೈಲು ಬರುತ್ತಿರುವಾಗಲೇ ಟ್ರ್ಯಾಕ್ಗೆ ಇಳಿದ ವ್ಯಕ್ತಿ: ನೇರಳೆ ಮಾರ್ಗದಲ್ಲಿ ಸಂಚಾರ ವಿಳಂಬ
ಬೆಂಗಳೂರಿನ ವಿಜಯನಗರ ಮೆಟ್ರೋ ನಿಲ್ದಾಣದ ನೇರಳೆ ಮಾರ್ಗದಲ್ಲಿ ಮಂಗಳವಾರ ಆತಂಕಕಾರಿ ಘಟನೆಯೊಂದು ನಡೆದಿದೆ. ಮೆಟ್ರೋ ರೈಲು ಬರುವಾಗ ಓರ್ವ ವ್ಯಕ್ತಿ ಟ್ರ್ಯಾಕ್ಗೆ ಇಳಿದಿದ್ದಾರೆ. ಇದರಿಂದ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವಿಳಂಬವಾಗಿದೆ. ಸದ್ಯ ಪ್ರಯಾಣಿಕರಿಗೆ ಉಂಟಾಗಿರುವ ಅನಾನುಕೂಲಕ್ಕೆ ಬಿಎಂಆರ್ಸಿಎಲ್ ವಿಷಾದ ವ್ಯಕ್ತಪಡಿಸಿದೆ.

ಬೆಂಗಳೂರು, ನವೆಂಬರ್ 10: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ವ್ಯಕ್ತಿ ಓರ್ವ ಟ್ರ್ಯಾಕ್ಗೆ ಇಳಿದ ಘಟನೆ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಮಧ್ಯಾಹ್ನ 1.41ರ ಸುಮಾರಿಗೆ ಮೆಟ್ರೋ ರೈಲು ಬರುವಾಗ ವ್ಯಕ್ತಿ ಟ್ರ್ಯಾಕ್ಗೆ ಇಳಿದಿದ್ದಾನೆ. ಇದರಿಂದ ಮೆಟ್ರೋ ನೇರಳೆ ಮಾರ್ಗದ ಸಂಚಾರದಲ್ಲಿ ವಿಳಂಬವಾಗಿದೆ. ಘಟನೆ ಹಿನ್ನೆಲೆ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮೆಟ್ರೋ ಟ್ರ್ಯಾಕ್ಗೆ ಇಳಿದ ವ್ಯಕ್ತಿ
ಈ ಕುರಿತಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ‘ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಮಧ್ಯಾಹ್ನ 1:41ರ ಸುಮಾರಿಗೆ ರೈಲಿನ ಮುಂಭಾಗದ ಟ್ರ್ಯಾಕ್ಗೆ ವ್ಯಕ್ತಿಯೊಬ್ಬರು ಇಳಿದಿದ್ದಾರೆ. ಇದರಿಂದ ನೇರಳೆ ಮಾರ್ಗದಲ್ಲಿ ರೈಲು ಸೇವೆಗಳಲ್ಲಿ ವಿಳಂಬವಾಗುವ ನಿರೀಕ್ಷೆಯಿದೆ. ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು. ಪ್ರಯಾಣಿಕರಿಗೆ ಉಂಟಾಗಿರುವ ಅನಾನುಕೂಲಕ್ಕಾಗಿ ವಿಷಾದಿಸುತ್ತೇವೆ’ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ನಮ್ಮ ಮೆಟ್ರೋ ಟ್ವೀಟ್
SERVICE ADVISORY – PURPLE LINE
At 1:41 PM, a person entered the track in front of a train at Vijayanagar Metro Station. Train services on the Purple Line are expected to experience delays. Further details will be shared shortly. The inconvenience caused is regretted.
— ನಮ್ಮ ಮೆಟ್ರೋ (@OfficialBMRCL) November 10, 2026
ಮತ್ತಷ್ಟು ಮಾಹಿತಿ ಅಪ್ಡೇಟ್ ಆಗಲಿದೆ
