AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಗತಿಪರ ಶಾಸಕರೆಂದೇ ಖ್ಯಾತಿ ಪಡೆದಿದ್ದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಹೃದಯಾಘಾತದಿಂದ ವಿಧಿವಶ

ಸಿಪಿಐಎಂ ಪಕ್ಷದಿಂದ ಎರಡು ಭಾರಿ ಶಾಸಕರಾಗಿದ್ದ ಶ್ರೀರಾಮರೆಡ್ಡಿ ಪ್ರಗತಿಪರ ಶಾಸಕರೆಂದೇ ಖ್ಯಾತಿಯಾಗಿದ್ದರು. ಇತ್ತೀಚೆಗೆ CPIM ಪಕ್ಷ ತೊರೆದು ತಮ್ಮದೆ ಪ್ರಜಾ ಸಂಘರ್ಷ ಸಮಿತಿ ಸ್ಥಾಪನೆ ಮಾಡಿದ್ರು.

ಪ್ರಗತಿಪರ ಶಾಸಕರೆಂದೇ ಖ್ಯಾತಿ ಪಡೆದಿದ್ದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಹೃದಯಾಘಾತದಿಂದ ವಿಧಿವಶ
ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ
TV9 Web
| Edited By: |

Updated on:Apr 15, 2022 | 1:21 PM

Share

ಚಿಕ್ಕಬಳ್ಳಾಪುರ: ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ(67) ವಿಧಿವಶರಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮನೆಯಲ್ಲಿ ಬೆಳಗ್ಗೆ 6.45ಕ್ಕೆ ಹೃದಯಾಘಾತದಿಂದ ಕುಸಿದುಬಿದ್ದು ಜಿ.ವಿ.ಶ್ರೀರಾಮರೆಡ್ಡಿ ನಿಧನರಾಗಿದ್ದಾರೆ. ತಕ್ಷಣವೇ ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಶ್ರೀರಾಮರೆಡ್ಡಿ ನಿಧನರಾಗಿರುವ ಬಗ್ಗೆ ಬೆಳಗ್ಗೆ 7.28ಕ್ಕೆ ವೈದ್ಯರು ಮಾಹಿತಿ ನೀಡಿದ್ದಾರೆ.

ಸಿಪಿಐಎಂ ಪಕ್ಷದಿಂದ ಎರಡು ಭಾರಿ ಶಾಸಕರಾಗಿದ್ದ ಶ್ರೀರಾಮರೆಡ್ಡಿ ಪ್ರಗತಿಪರ ಶಾಸಕರೆಂದೇ ಖ್ಯಾತಿಯಾಗಿದ್ದರು. ಇತ್ತೀಚೆಗೆ CPIM ಪಕ್ಷ ತೊರೆದು ತಮ್ಮದೆ ಪ್ರಜಾ ಸಂಘರ್ಷ ಸಮಿತಿ ಸ್ಥಾಪನೆ ಮಾಡಿದ್ರು. ಸಾಮಾಜಿಕ ಹೋರಾಟ ಆರಂಭಿಸಿದ್ದರು. ಸಮಾಜದ ಸುಧಾರಣೆಗಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ರು. ಜಿ.ವಿ.ಎಸ್ ನಿಧನದಿಂದ ಅಪಾರ ಬೆಂಬಲಿಗರಲ್ಲಿ ದುಃಖ ಮಡುಗಟ್ಟಿದೆ. ಆಸ್ಪತ್ರೆ ಬಳಿ ಬೆಂಬಲಿಗರು ಜಮಾಹಿಸುತ್ತಿದ್ದಾರೆ.

ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ವಿಧಿವಶ ಹಿನ್ನಲೆ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸ್ಪೀಕರ್ ಕೆ.ಆರ್ ರಮೇಶಕುಮಾರ್ ಪಾರ್ಥಿವ ಶರೀರ ದರ್ಶನ ಪಡೆದಿದ್ದಾರೆ. ಬಾಗೇಪಲ್ಲಿ ಪಟ್ಟಣಕ್ಕೆ ಆಗಮಿಸಿ ಪಾರ್ಥಿವ ಶರೀರದ ದರ್ಶನ ಮಾಡಿದ್ದಾರೆ. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಬಡವರ ಪರ ಸಮಾಜದ ಪರ ಇದ್ದ ಧ್ವನಿಯೊಂದು ನಿಂತು ಹೋಗಿದೆ. ನನಗೆ ಒಳ್ಳೆಯ ಸ್ನೇಹಿತರಾಗಿದ್ರು. ಎರಡು ಭಾರಿ ನನ್ನ ಜೊತೆ ಶಾಸಕರು ಆಗಿದ್ದರು. ಯಾರ ಹಂಗು ಇಲ್ಲದೆ ಬಡವರ ಪರ ಧ್ವನಿಯಾಗಿದ್ರು. ಎಲ್ಲಾ ಮಾರಾಟದ ವ್ಯವಸ್ಥೆ ಹಣದ ದುನಿಯಾದಲ್ಲಿ ಶ್ರೀರಾಮ್ ರೆಡ್ಡಿ ವಿಭಿನ್ನವಾಗಿದ್ರು. ಬಡವರ ಪರ ಮಾತನಾಡಲು ಯಾರು ಇದ್ದಾರೆ? ಅನ್ಯಾಯದ ಪರ ಜನರೇ ಮಾತನಾಡಲ್ಲ. ಈಗ ಶ್ರೀರಾಮ್ ರೆಡ್ಡಿ ಧ್ವನಿ ನಿಲ್ಲಿಸಿದ್ದಾರೆ ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: SRH vs KKR, IPL 2022: ಗೆಲುವಿನ ಓಟ ಮುಂದುವರೆಸುತ್ತಾ ಹೈದರಾಬಾದ್?: ಕೆಕೆಆರ್​ಗಿಂದು ಮತ್ತೊಂದು ಸವಾಲು

Good Friday 2022: ಗುಡ್ ಫ್ರೈಡೆಯ ಇತಿಹಾಸ ಹಾಗೂ ಮಹತ್ವವೇನು? ಕ್ರಿಶ್ಚಿಯನ್ನರಿಗೆ ಇದು ಏಕೆ ಪವಿತ್ರ? ಇಲ್ಲಿದೆ ಮಾಹಿತಿ

Published On - 8:33 am, Fri, 15 April 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?