ಪ್ರಾದೇಶಿಕ ಪಕ್ಷವನ್ನ ಅಧಿಕಾರಕ್ಕೆ ತಂದು ಕೊನೆ ಉಸಿರು ಬೀಡಬೇಕೆಂಬುದೇ ನನ್ನ ಹಠ -ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ

ಪ್ರಾದೇಶಿಕ ಪಕ್ಷವನ್ನ ಅಧಿಕಾರಕ್ಕೆ ತಂದು ಕೊನೆ ಉಸಿರು ಬೀಡಬೇಕೆಂಬುದೇ ನನ್ನ ಹಠ -ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ
ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ

ನನ್ನ ಜೀವನದ ಕೊನೆ ಆಸೆ ಏನು ಗೊತ್ತಾ? ಒಂದು ಪ್ರಾದೇಶಿಕ ಪಕ್ಷವನ್ನ ಉಳಿಸಿ, ಅಧಿಕಾರಕ್ಕೆ ತರಬೇಕು. ಅಧಿಕಾರಕ್ಕೆ ತಂದು ಕೊನೆ ಉಸಿರು ಬೀಡಬೇಕೆಂಬುದೇ ನನ್ನ ಹಠ ಎಂದು ಹೆಚ್.ಡಿ. ದೇವೇಗೌಡ ಭಾವುಕರಾಗಿದ್ದಾರೆ.

TV9kannada Web Team

| Edited By: Ayesha Banu

May 09, 2022 | 8:43 PM

ಚಿಕ್ಕಮಗಳೂರು: ಜೆಡಿಎಸ್ ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕೆಂಬುದೇ ನನ್ನ ಹಠ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. ದೇವೇಗೌಡರಿಗೆ 90 ವರ್ಷ ವಯಸ್ಸಾಗಿದೆ ಎಂದು ಯಾರೋ ಹೇಳಿದ್ರು. ಆದ್ರೆ ನನಗೆ ಇನ್ನೂ 90 ಮುಟ್ಟೇ ಇಲ್ಲ. ನನ್ನ ಜೀವನದ ಕೊನೆ ಆಸೆ ಏನು ಗೊತ್ತಾ? ಒಂದು ಪ್ರಾದೇಶಿಕ ಪಕ್ಷವನ್ನ ಉಳಿಸಿ, ಅಧಿಕಾರಕ್ಕೆ ತರಬೇಕು. ಅಧಿಕಾರಕ್ಕೆ ತಂದು ಕೊನೆ ಉಸಿರು ಬೀಡಬೇಕೆಂಬುದೇ ನನ್ನ ಹಠ ಎಂದು ಹೆಚ್.ಡಿ. ದೇವೇಗೌಡ ಭಾವುಕರಾಗಿದ್ದಾರೆ.

ಜೆಡಿಎಸ್ ಪಕ್ಷವನ್ನ ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕೆಂಬುದೇ ನನ್ನ ಹಠ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮತ್ತೊಮ್ಮೆ ಪಕ್ಷವನ್ನ ಅಧಿಕಾರಕ್ಕೆ ತರುವ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ. ಅವರಿಂದು ಪಕ್ಷದ ಜನತಾ ಜಲಧಾರೆ ಹಾಗೂ ಪಕ್ಷದ ಕಾರ್ಯಕರ್ತರ ಸಭೆಗೆ ಆಗಮಿಸಿದ್ದರು. ನಗರದ ಎ.ಐ.ಟಿ. ವೃತ್ತದ ಬಳಿಯ ಒಕ್ಕಲಿಗರ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಮಾತನಾಡಿದ ದೇವೇಗೌಡರು, ಯಾರೋ ನನಗೆ 90 ವರ್ಷವಾಗಿದೆ ಎಂದು ಹೇಳಿದರು. ನನಗೆ 90 ಇನ್ನೂ ಮುಟ್ಟೇ ಇಲ್ಲ ಎಂದು ತನ್ನ ವಯಸ್ಸಿನ ಬಗ್ಗೆ ಕಾಮೆಂಟ್ ಮಾಡಿದವರಿಗೆ ಟಾಂಗ್ ಕೊಟ್ಟಿದ್ದಾರೆ. ಒಂದು ಪ್ರಾದೇಶಿಕ ಪಕ್ಷವನ್ನ ಉಳಿಸಿ ಅಧಿಕಾರಕ್ಕೆ ತರಬೇಕು. ಅದೇ ನನ್ನ ಕೊನೆ ಆಸೆ. ಪ್ರಾದೇಶಿಕ ಪಕ್ಷವನ್ನ ಅಧಿಕಾರಕ್ಕೆ ತಂದು ನನ್ನ ಕೊನೆ ಉಸಿರು ಬಿಡಬೇಕೆಂಬುದು ನನ್ನ ಹಠ ಎಂದು ಪಕ್ಷವನ್ನ ಮತ್ತೊಮ್ಮೆ ಅಧಿಕಾರಕ್ಕೆ ತರಲು ಪಣ ತೊಟ್ಟಿರುವುದಾಗಿ ಹೇಳಿದರು.

ಓರ್ವ ರಾಜಕೀಯ ಪಕ್ಷದ ಮುಖಂಡನಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಎಲ್ಲಿ ತಪ್ಪುತ್ತಿದ್ದೇವೆ, ಪಕ್ಷವನ್ನ ಉಳಿಸಿಕೊಳ್ಳಲು ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನನ್ನ ಮನದಲ್ಲಿ ತುಂಬಾ ಆತಂಕ ಇದೆ, ನನ್ನ ಜೀವನದಲ್ಲಿ ಕೇವಲ ನೀರಾವರಿ ಯೋಜನೆಗಳಿಗಾಗಿ ಹೋರಾಟ ಮಾಡಿಲ್ಲ, ನನ್ನ ಜೀವನೇ ಹೋರಾಟ ಎಂದರು. ಈ ದೇಶವನ್ನ ಹಿಂದೂ ರಾಷ್ಟ್ರ ಮಾಡಬೇಕು ಅಂತಾರೆ. ನಾನೇನು ಹಿಂದೂ ಅಲ್ವಾ. ನಾನು ನನ್ನ ಮನೆಯಲ್ಲಿ ದಿನಕ್ಕೆ ಎರಡು ಗಂಟೆ ಪ್ರಾರ್ಥನೆ ಮಾಡುತ್ತೇನೆ ಎಂದರು. ಸಭೆಯಲ್ಲಿ ನಾನು ನಿಂತುಕೊಂಡೆ ಮಾತನಾಡುತ್ತೇನೆ ಎಂದು ಹೇಳಿದೆ, ಆದರೆ, ಎಸ್.ಎಲ್. ಭೋಜೇಗೌಡರು ಕೂತು ಮಾತನಾಡಿ ಎಂದರು. ಅದಕ್ಕೆ ಕೂತು ಮಾತನಾಡುತ್ತಿದ್ದೇನೆ. ಕೂತು-ನಿಂತು ಹೇಗೆ ಮಾತನಾಡಿದರು ಒಂದೇ ಎಂದು ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಕರುಣಾನಿಧಿಯವರ ಉದಾಹರಣೆ ಕೊಟ್ಟರು.

ಕರುಣಾನಿಧಿಯವರು ಮೂರು ಚುನಾವಣೆಯನ್ನ ವೀಲ್ ಚೇರ್ ಮೇಲೆ ಕೂತು ಮಾಡಿದ್ದರು. ಸಿಎಂ ಕೂಡ ಆಗಿದ್ದರು, ಸೋತರು. ಒಂದು ಪ್ರಾದೇಶಿಕ ಪಕ್ಷವನ್ನ ಬಲವಾಗಿ ಕಟ್ಟಿ ಬೆಳೆಸಿದರು. ಬಳಿಕ ಲಕ್ಷಾಂತರ ಕಾರ್ಯಕರ್ತರು ಅವರ ಪಾರ್ಥೀವ ಶರೀರವನ್ನ ಕಳಿಸಿಕೊಟ್ಟರು. ಕಾರ್ಯಕರ್ತರು ಮೂರು ದಿನ ಕ್ಯೂ ನಿಂತಿದ್ದರು. ಈ ಪಕ್ಷವನ್ನ ಬಲವಾಗಿ ಕಟ್ಟಿ ಬೆಳೆಸಿದವರು ಇಂದು ತೀರಿಹೋಗಿದ್ದಾರೆ ಎಂದು ತಮ್ಮ ಜೀವನದ ಹೋರಾಟವನ್ನು ಎಳೆ ಎಳೆಯಾಗಿ ತಿಳಿಸುತ್ತಾ ಮಾರ್ಮಿಕವಾಗಿ ನುಡಿದರು. ಈ ಹಿಂದೆ ದೇವೇಗೌಡ ಮುಖ್ಯಮಂತ್ರಿ ಆಗಲು ಚಿಕ್ಕಮಗಳೂರು ಜಿಲ್ಲೆ, ನಾಲ್ಕು ಶಾಸಕರನ್ನ ಗೆದ್ದು ಕೊಟ್ಟಿತ್ತು. ಭೋಜೇಗೌಡ, ನಾರಾಯಣ ಗೌಡ, ಲಕ್ಷ್ಮಯ್ಯ, ತಿಪ್ಪಯ್ಯ ಸೇರಿದಂತೆ ನಾಲ್ವರು ಗೆದ್ದಿದ್ದರು. ಅಂತಹ ದಿನವನ್ನ ನಾನು ನೋಡಲಿಲ್ಲ. ಜೆಡಿಎಸ್ ಭದ್ರಕೋಟೆಯಾಗಿ ಪಕ್ಷವನ್ನ ಬೆಳೆಸಿಕೊಂಡು ಬಂದು ಇಂದು ಸ್ವಲ್ಪ ಮಟ್ಟಿಗೆ ನನ್ನ ಮನದಲ್ಲಿ ನೋವಿದೆ ಎಂದರು.

ಚಿಕ್ಕಮಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada