ಮುರುಘಾಶರಣರ ಪೋಕ್ಸೋ ಪ್ರಕರಣ: 4ನೇ ಆರೋಪಿ ಪರಮಶಿವಯ್ಯ ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ಪೊಲೀಸರು
ಪೋಕ್ಸೋ ಪ್ರಕರಣದ 4ನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. DySP ಕಚೇರಿಯಲ್ಲಿ 4ನೇ ಆರೋಪಿ ಪರಮಶಿವಯ್ಯ ವಿಚಾರಣೆ ನಡೆಸಿ ನಂತರ ಜಡ್ಜ್ ಮುಂದೆ ಹಾಜರು ಪಡಿಸಲಾಗುತ್ತೆ.
ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಮುರುಘಾಶರಣರ ವಿರುದ್ಧ ಪೋಕ್ಸೋ ಪ್ರಕರಣ ಸಂಬಂಧ ಈ ಪೋಕ್ಸೋ ಪ್ರಕರಣದ 4ನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. DySP ಕಚೇರಿಯಲ್ಲಿ 4ನೇ ಆರೋಪಿ ಪರಮಶಿವಯ್ಯ ವಿಚಾರಣೆ ನಡೆಸಿ ನಂತರ ಜಡ್ಜ್ ಮುಂದೆ ಹಾಜರು ಪಡಿಸಲಾಗುತ್ತೆ. ಈ ವೇಳೆ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.
ಅ. 27ರಂದು ಸ್ವಾಮೀಜಿ ವಿರುದ್ಧ 694 ಪುಟಗಳ ಆರೋಪಪಟ್ಟಿಯನ್ನು (POCSO Chargesheet) ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದೂರು ದಾಖಲಾಗಿ 2 ತಿಂಗಳಾದ ನಂತರ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ತನಿಖೆಯೂ ಚುರುಕುಗೊಂಡಿದೆ.ಶಿವಮೂರ್ತಿ ಮುರುಘಾ ಶರಣರು ಮಠದಲ್ಲಿ ಬಳಸುತ್ತಿದ್ದ ಕಚೇರಿ ಹಾಗೂ ವಿಶ್ರಾಂತಿ ಕೊಠಡಿಗಳಿಗೆ ಅ.28ರಂದು ಪೊಲೀಸರು ಭೇಟಿ ನೀಡಿ ಮಹಜರು ಮಾಡಿದರು. ಎರಡೂ ಕೊಠಡಿಗಳ ಕೀಲಿಯನ್ನು ಬಸವಪ್ರಭು ಸ್ವಾಮೀಜಿ ಪೊಲೀಸರಿಗೆ ಕೊಟ್ಟು, ತನಿಖೆಗೆ ಸಹಕರಿಸಿದರು. ಶಿವಮೂರ್ತಿ ಶರಣರ ವಿರುದ್ಧ ಆಗಸ್ಟ್ 26ರಂದು ಮೊದಲ ಪೋಕ್ಸೋ ಪ್ರಕರಣ ಮೈಸೂರಿನ ನಜರ್ಬಾದ್ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣವನ್ನು ಆ 27ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಸೆ 1ರಂದು ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿದ್ದರು. ಪ್ರಸ್ತುತ ಸ್ವಾಮೀಜಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದನ್ನೂ ಓದಿ: ಬಂಡೆಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ವಿಡಿಯೋ ಚಾಟ್ನಲ್ಲಿದ್ದ ಮಹಿಳೆಯ ಫೋಟೊ ಬಹಿರಂಗ, ತನಿಖೆ ಚುರುಕು
ಬಸವಲಿಂಗಶ್ರೀ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದ ಸ್ವಾಮೀಜಿ ಪರಾರಿ
ಇನ್ನು ಮತ್ತೊಂದೆಡೆ ರಾಮನಗರದ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಸವಲಿಂಗಶ್ರೀ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದ ಸ್ವಾಮೀಜಿ ಪರಾರಿಯಾಗಿದ್ದಾರೆ. ಕಳೆದ 2 ದಿನಗಳಿಂದ ಮಠದಿಂದ ಸ್ವಾಮೀಜಿ ನಾಪತ್ತೆಯಾಗಿದ್ದಾರೆ. ಮತ್ತೊಂದೆಡೆ ಸ್ವಾಮೀಜಿ ಇಂದು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ‘ಕ್ಲಾಸ್ ಪ್ಲೇಯರ್’..! ಕೊಹ್ಲಿಯನ್ನು ಹೊಗಳಿದ ಬಿಸಿಸಿಐ ನೂತನ ಅಧ್ಯಕ್ಷ ಕನ್ನಡಿಗ ರೋಜರ್ ಬಿನ್ನಿ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:52 pm, Sat, 29 October 22