ಕೋಡಿಹಳ್ಳಿ ಚಂದ್ರಶೇಖರ್ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಆಡಿಯೋ ಇವೆ; ರೈತ ಸಂಘದ ಕಾರ್ಯಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ ಗಂಭೀರ ಆರೋಪ
ಕೋಡಿಹಳ್ಳಿ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯ ರೈತ ಸಂಘದ ಕಾರ್ಯಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ, ನನ್ನ ಬಳಿ ಕೋಡಿಹಳ್ಳಿ ಚಂದ್ರಶೇಖರ್ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕೆಲ ಆಡಿಯೋ ಇವೆ ಅಂತ ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗ: ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekar) ವಿರುದ್ಧ ಕೆಲ ರೈತ ಮುಖಂಡರು ತಿರುಗಿ ಬಿದ್ದಿದ್ದಾರೆ. ಕೋಡಿಹಳ್ಳಿ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯ ರೈತ ಸಂಘದ ಕಾರ್ಯಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ (Eechaghatta Siddhaveerappa), ನನ್ನ ಬಳಿ ಕೋಡಿಹಳ್ಳಿ ಚಂದ್ರಶೇಖರ್ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕೆಲ ಆಡಿಯೋ ಇವೆ ಅಂತ ಹೇಳಿಕೆ ನೀಡಿದ್ದಾರೆ. ನೆರವು ಕೇಳಿದ್ದ ವಿಧವಾ ಮಹಿಳೆಯ ಆಸ್ತಿ ಲಪಟಾಯಿಸಿದ್ದರು. ವೈಟ್ ಫೀಲ್ಡ್ನಲ್ಲಿ ಆಸ್ತಿ ಲಪಟಾಯಿಸಿ ಭೀತಿ ಸೃಷ್ಟಿಸಿದ್ದರು ಅಂತ ಗಂಭೀರ ಆರೋಪ ಮಾಡುತ್ತಿದ್ದಾರೆ.
ಆ ಕೇಸ್ನಲ್ಲಿ ಅಗ್ನಿ ಶ್ರೀಧರ್ ಮಧ್ಯಸ್ಥಿಕೆಯಲ್ಲಿ 16 ಲಕ್ಷ ಪಡೆದಿದ್ದಾರೆ. ಅದೇ ಆಘಾತದಿಂದ ವಿಧವಾ ಮಹಿಳೆ ಅಸುನೀಗಿದ್ದಾರೆ. ಕೆ.ಆರ್.ಮಾರುಕಟ್ಟೆ ವರ್ತಕರ ಪರ ಹೋರಾಟ ನಡೆಸಿದ್ದೆವು. ವರ್ತಕರಿಂದ ಪ್ರತಿ ತಿಂಗಳು 60 ಸಾವಿರ ಪಡೆಯುತ್ತಿದ್ದಾರೆ. ಹೋರಾಟದ ಹೆಸರಿನಲ್ಲಿ ಹಣ ದೋಚುವ ದಂಧೆ ನಡೆಸುತ್ತಿದ್ದಾರೆ. ಕೋಡಿಹಳ್ಳಿ ರೈತ ಸಂಘದ ರಾಜ್ಯಧ್ಯಕ್ಷ ಸ್ಥಾನಕ್ಕೆ ಯೋಗ್ಯರಲ್ಲ ಅಂತ ಈಚಘಟ್ಟ ಸಿದ್ಧವೀರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ನೀರಾ ಸಹಕಾರಿ ಸಂಘದ ಹೆಸರಿನಲ್ಲಿ ಶೇರ್ ಹಣ ಕಟ್ಟಿಸಿಕೊಂಡು ರೈತರಿಗೆ ಮೋಸ ಮಾಡಿದ್ದಾರೆ. ವಿಶ್ವ ವಿಖ್ಯಾತಿಯ ರೈತ ಸಂಘ, ಪ್ರೊ.ನಂಜುಂಡಸ್ವಾಮಿಗೆ ಚ್ಯುತಿ ಆಗಿದೆ. ಕಡು ಭ್ರಷ್ಟ ಕೋಡಿಹಳ್ಳಿಗೆ ರೈತ ಸಂಘದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಲು ಯೋಗ್ಯರಲ್ಲ. ಕೂಡಲೇ ರಾಜ್ಯಾಧ್ಯಕ್ಷ ಸ್ಥಾನ ತೆರವು ಮಾಡಬೇಕು. ನಿಸ್ವಾರ್ಥ ಸೇವೆ ಮಾಡಲು ನಾವು ತಯಾರಾಗಿದ್ದೇವೆ ಅಂತ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ ಹೇಳಿದ್ದಾರೆ.
ಇದನ್ನೂ ಓದಿ
ಬಿಜೆಪಿಗೆ ಹೋಗುವಂತೆ ನಮಗೆ ಸಿದ್ದರಾಮಯ್ಯ ಹೇಳಿರಲಿಲ್ಲ; ಕುಮಾರಸ್ವಾಮಿಗೆ ಎಸ್.ಟಿ. ಸೋಮಶೇಖರ್ ತಿರುಗೇಟು
ಈ 4 ರಾಶಿಯ ಮಕ್ಕಳು ಚತುರರು, ಇವರಿಗೆ ಉತ್ತಮ ಮಾರ್ಗದರ್ಶನ ದೊರೆತರೆ ಇವರ ಭವಿಷ್ಯ ಉತ್ತಮವಾಗಿ ಇರುತ್ತದೆ!
Published On - 10:32 am, Thu, 14 October 21