ಕರುನಾಡಲ್ಲಿ ಕಿರಾತಕ ಕೊರೊನಾ ಅಟ್ಟಹಾಸ, ಸಾವಿನ ಸಂಖ್ಯೆ 12ಕ್ಕೇರಿಕೆ
ಕೊರೊನಾ ಅನ್ನೋ ಹೆಮ್ಮಾರಿ ಕರುನಾಡನ್ನು ತನ್ನ ಕೈಯಲ್ಲಿ ಹಿಡಿದು ಗಿರಗಿರ ತಿರುಗಿಸುತ್ತಿದೆ. ರುದ್ರ ನರ್ತನ ಮಾಡುತ್ತಾ ಕನ್ನಡಿಗರ ಜೀವವನ್ನ, ಜೀವನವನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ನಂಬರ್ಸ್ ಕರ್ನಾಟಕದಲ್ಲಿ ಏರುತ್ತಲೇ ಇದೆ ಹೊರತು ಇಳಿಯವ ಲಕ್ಷಣಗಳು ಕಾಣುತ್ತಿಲ್ಲ. ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಎರಡಕ್ಕಿಯಲ್ಲಿ ಏರುತ್ತಿದ್ದು, ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. 12 ಜನರನ್ನು ಬಲಿ ಪಡೆದು 279 ಜನರ ದೇಹ ಸೇರಿದ ಕ್ರೂರಿ! ಹೌದು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 279ಕ್ಕೆ ಏರಿಕೆಯಾಗಿದ್ದು, […]
ಕೊರೊನಾ ಅನ್ನೋ ಹೆಮ್ಮಾರಿ ಕರುನಾಡನ್ನು ತನ್ನ ಕೈಯಲ್ಲಿ ಹಿಡಿದು ಗಿರಗಿರ ತಿರುಗಿಸುತ್ತಿದೆ. ರುದ್ರ ನರ್ತನ ಮಾಡುತ್ತಾ ಕನ್ನಡಿಗರ ಜೀವವನ್ನ, ಜೀವನವನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ನಂಬರ್ಸ್ ಕರ್ನಾಟಕದಲ್ಲಿ ಏರುತ್ತಲೇ ಇದೆ ಹೊರತು ಇಳಿಯವ ಲಕ್ಷಣಗಳು ಕಾಣುತ್ತಿಲ್ಲ. ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಎರಡಕ್ಕಿಯಲ್ಲಿ ಏರುತ್ತಿದ್ದು, ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ.
12 ಜನರನ್ನು ಬಲಿ ಪಡೆದು 279 ಜನರ ದೇಹ ಸೇರಿದ ಕ್ರೂರಿ! ಹೌದು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 279ಕ್ಕೆ ಏರಿಕೆಯಾಗಿದ್ದು, 300ರ ಗಡಿ ತಲುಪಲು ಕಾದು ಕುಳಿತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕೊರೊನಾಕ್ಕೆ ಕಳೆದು 3-4 ದಿನಗಳಿಂದ ರಾಜ್ಯದಲ್ಲಿ ದಿನಕ್ಕೆ ಎರಡರಂತೆ ಹೆಣ ಬೀಳುತ್ತಿದೆ. ಇಲ್ಲಿಯ ತನಕ ರಾಜ್ಯದಲ್ಲಿ 12ಜನ ಕೊರೊನಾಕ್ಕೆ ಬಲಿಯಾಗಿದ್ದು, ರಾಜ್ಯದ ಜನರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಹಾಗಿದ್ರೆ ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಜನ ಕೊರೊನಾ ಸೋಂಕಿತರಿದ್ದಾರೆ, ಎಷ್ಟೇ ಜನ ಬಲಿಯಾಗಿದ್ದಾೆ ಅನ್ನೋದನ್ನ ಡಿಟೇಲ್ ಆಗಿ ನೋಡೋದಾದ್ರೆ.
ಒಟ್ನಲ್ಲಿ ಕೊರೊನಾ ರಾಜ್ಯದಲ್ಲಿ 300 ಗಡಿ ದಾಟೋಕೆ ಹಾತೋರಿಯುತ್ತಿದ್ದು, ರಾಜ್ಯದ ಜನ ಈ ಬಗ್ಗೆ ಆದಷ್ಟು ಎಚ್ಚರವಹಿಸಬೇಕಿದೆ. ಕರುನಾಡಿನಲ್ಲಿ ಕ್ರೂರಿ 300ರ ಗಡಿ ದಾಟದಿರಲಿ ಅನ್ನೋದೆ ನಮ್ಮ ನಿಮ್ಮೆಲ್ಲರ ಆಶಯ.
Published On - 6:34 am, Thu, 16 April 20