AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಕೇಸ್: ಗುಂಡಿ ಅಗೆದಾಗ ಅದು ಸಿಕ್ತು ಇದು ಸಿಕ್ತು ಎನ್ನುತ್ತಿದ್ದ ವಕೀಲಗೆ ಸಂಕಷ್ಟ

ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂದು ಸುಳ್ಳು ಮಾಹಿತಿ ಹಬ್ಬಿಸಿದ್ದ ವಕೀಲ ಮಂಜುನಾಥ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ರಘುರಾಮ ಶೆಟ್ಟಿ ಅವರ ದೂರಿನ ಮೇರೆಗೆ ಈ ಎಫ್ಐಆರ್ ದಾಖಲಾಗಿದ್ದು, ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವಕೀಲ ಮಂಜುನಾಥ್ ಜುಲೈ 30 ರಂದು ಮಾಧ್ಯಮ ಪ್ರಕಟಣೆಯ ಮೂಲಕ ಈ ಸುಳ್ಳು ಮಾಹಿತಿ ಹಬ್ಬಿಸಿದ್ದರು.

ಧರ್ಮಸ್ಥಳ ಕೇಸ್: ಗುಂಡಿ ಅಗೆದಾಗ ಅದು ಸಿಕ್ತು ಇದು ಸಿಕ್ತು ಎನ್ನುತ್ತಿದ್ದ ವಕೀಲಗೆ ಸಂಕಷ್ಟ
ಮಾಧ್ಯಮ ಪ್ರಕಟಣೆ, ಎಸ್​ಐಟಿ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: ವಿವೇಕ ಬಿರಾದಾರ|

Updated on:Aug 22, 2025 | 9:49 PM

Share

ಮಂಗಳೂರು, ಆಗಸ್ಟ್​ 22: ಧರ್ಮಸ್ಥಳದಲ್ಲಿ (Dharmasthala) ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ವಿಚಾರವಾಗಿ ಸುಳ್ಳು ಮಾಹಿತಿ ನೀಡಿದ್ದ ವಕೀಲ ಮಂಜುನಾಥ್ ವಿರುದ್ಧ ಬೆಳ್ತಂಗಡಿ ಪೊಲೀಸ್​ ಠಾಣೆಯಲ್ಲಿ (Belthangady Police) ಎಫ್ಐಆರ್‌ ದಾಖಲಾಗಿದೆ. ಧರ್ಮಸ್ಥಳ ನಿವಾಸಿ ರಘುರಾಮ ಶೆಟ್ಟಿ ನೀಡಿದ ದೂರು ಆಧರಿಸಿ ಎಫ್​ಐಆರ್ ದಾಖಲಾಗಿದೆ. ಧರ್ಮಸ್ಥಳದಲ್ಲಿ ಯಥೇಚ್ಛವಾಗಿ ಹೆಣ ಹೂತಿದ್ದಾಗಿ ವಕೀಲ ಮಂಜುನಾಥ್​ ಜುಲೈ 30 ರಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದರು.

ವಕೀಲ ಮಂಜುನಾಥ್​ ಹೇಳಿದ್ದೇನು?

ಪಾಯಿಂಟ್ ನಂಬರ್ 1ರಲ್ಲಿ 2 ಹೆಣ, ಪಾಯಿಂಟ್ ನಂ 2, 3ರಲ್ಲಿ ತಲಾ 2 ಹೆಣ‌, ಪಾಯಿಂಟ್ ನಂಬರ್‌ 4 ಮತ್ತು 5ರಲ್ಲಿ ತಲಾ 6 ಹೆಣ,  ಪಾಯಿಂಟ್ ನಂಬರ್​ 6, 7ರಲ್ಲಿ ತಲಾ 8 ಹೆಣ, ಪಾಯಿಂಟ್​ ನಂಬರ್ 9ರಲ್ಲಿ 6-7 ಹೆಣ, ಪಾಯಿಂಟ್ ನಂಬರ್ 10ರಲ್ಲಿ 3, 11ರಲ್ಲಿ 9 ಹೆಣ,. ಪಾಯಿಂಟ್ ನಂಬರ್​ ​12ರಲ್ಲಿ 4-5 ಹೆಣ ಪಾಯಿಂಟ್ ನಂ 13ರಲ್ಲಿ ಯಥೇಚ್ಛವಾಗಿ ಹೆಣ ಹೂತಿದ್ದಾಗಿ ವಕೀಲ ಮಂಜುನಾಥ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದನು. ಈ ಸಂಬಂಧ ರಘುರಾಮ ಶೆಟ್ಟಿ ಅವರು ಬೆಳ್ತಂಗಡಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಆಧರಿಸಿ, ಬಿಎನ್​ಎಸ್​ ಕಾಯ್ದೆ 353(1)ಬಿ, 353(2)ರ ಅಡಿ ಎಫ್ಐಆರ್‌ ದಾಖಲಾಗಿದೆ.

ಇದನ್ನೂ ಓದಿ: ಯೂಟ್ಯೂಬರ್‌ ಬಂಧನಕ್ಕೆ ಬಲೆ ಬೀಸಿದ ಪೊಲೀಸರು, ಸಿನಿಮೀಯ ರೀತಿಯಲ್ಲಿ ಸಮೀರ್ ಪರಾರಿ

ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ಅನಾಮಿಕನ ವಿಚಾರಣೆ

ಉತ್ಖನನ ಕಾರ್ಯ ಸದ್ಯಕ್ಕೆ ಸ್ಥಗಿತಗೊಂಡಿದೆ. ಶೋಧ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆದರೆ, ಎಸ್ಐಟಿ ತನಿಖೆ ನಿಂತಿಲ್ಲ. ಅನಾಮಿಕ ದೂರುದಾರನನ್ನು ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಮತ್ತೊಬ್ಬ ದೂರುದಾರ ಜಯಂತ್ ಕೂಡಾ ಎಸ್ಐಟಿ ಕಚೇರಿಗೆ ಬಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:48 pm, Fri, 22 August 25

Follow Us
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ