ನದಿಯಾಗಿ ಬದಲಾಗುತ್ತಿದೆ ರೈತರ ನೂರಾರು ಎಕರೆ ಕೃಷಿ ಭೂಮಿ; ಇಂದು ಇದ್ದ ಜಮೀನು ನಾಳೆ ಇರುವುದೇ ಅನುಮಾನ
ನಮ್ಮ ಜಮೀನು 12 ಎಕರೆ ಆ ಪೈಕಿ 10 ಎಕರೆ ಜಮೀನು ನದಿಯ ಪಾಲಾಗಿದೆ. ಈವಾಗ ಕೇವಲ. 2 ಎಕರೆ ಜಮೀನು ಮಾತ್ರ ಉಳಿದುಕೊಂಡಿದೆ. ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಸಚಿವರು ಸೇರಿದಂತೆ ವಿರೋಧ ಪಕ್ಷದ ನಾಯಕರಿಗೆ ಮನವಿ ಮಾಡಿದರೂ ಒಂದು ಪೈಸೆ ಪರಿಹಾರ ಬಂದಿಲ್ಲಾ. ಹಾಗಾಗಿ ಈ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ರೈತ ಹಾಲಯ್ಯ ಟಿವಿ9 ಕನ್ನಡ ಡಿಜಿಟಲ್ ಮೂಲಕ ಆಗ್ರಹಿಸಿದ್ದಾರೆ.
ಗದಗ: ಸಿಂಗಟಾಲೂರ ಏತ ನೀರಾವರಿ ಯೋಜನೆಗೆ ಆ ಭಾಗದ ರೈತರ ಜಮೀನುಗಳು ವರ್ಷ ಕಳೆದಂತೆ ಕರಗುತ್ತಿವೆ. ಇಂದು ಇದ್ದ ಜಮೀನು ನಾಳೆ ನೋಡಲು ಸಹ ಸಿಗುತ್ತಿಲ್ಲ. ತುಂಗಭದ್ರಾ ನದಿಯ ಆರ್ಭಟಕ್ಕೆ ಜಮೀನು ಕೊರೆದು ನದಿ ಪಾಲಾಗುತ್ತಿದೆ. ರೈತರ ನೂರಾರು ಎಕರೆ ಜಮೀನು ತುಂಗೆಯ ಅಬ್ಬರಕ್ಕೆ ಕರಗುತ್ತಿದೆ. ವರ್ಷದಿಂದ ವರ್ಷಕ್ಕೆ ಎಕರೆಗಟ್ಟಲೇ ಜಮೀನು ಕರಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟು ಬೇಡಿಕೊಂಡರೂ ಪ್ರಯೋಜವಾಗಿಲ್ಲ. ಆದರೆ ಅದನ್ನೇ ನಂಬಿ ಕೃಷಿ ಮಾಡುವ ಅನ್ನದಾತರ ಬದುಕು ಮಾತ್ರ ಶೋಚನಿಯವಾಗಿದೆ.
ಕರಾವಳಿ ಪ್ರದೇಶದಲ್ಲಿ ಕಡಲ ಕೊರೆತಕ್ಕೆ ಭೂಮಿ ಸಮುದ್ರ ಪಾಲಾಗುತ್ತದೆ ಎಂಬುದನ್ನು ಕೇಳಿದ್ದೇವೆ. ಹಾಗೇ ಬಯಲುಸೀಮೆ ನಾಡಿನಲ್ಲಿ ಕೂಡಾ ಜಮೀನು ನದಿಯ ಪಾಲಾಗುತ್ತಿದೆ. ಹೌದು ತುಂಗಭದ್ರಾ ನದಿಯ ಆರ್ಭಟಕ್ಕೆ ನೂರಾರು ಎಕರೆ ಅನ್ನದಾರ ಜಮೀನುಗಳು ತುಂಗೆಯ ಪಾಲಾಗುತ್ತಿದೆ. ಅಂದಹಾಗೇ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ತುಂಗಭದ್ರಾ ನದಿ ತೀರದ ಹಮ್ಮಿಗಿ ಗ್ರಾಮದ ರೈತರ ನೂರಾರು ಎಕರೆ ಜಮೀನು ನಿತ್ಯ ಕೊಚ್ಚಿಕೊಂಡು ಹೋಗುತ್ತಿದೆ. ಸಿಂಗಟಾಲೂರು ಬ್ಯಾರೇಜ್ ನಿರ್ಮಾಣ ಮಾಡಿದ್ದರಿಂದ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಣೆ ಮಾಡಿ, ಈಗ ಗೇಟ್ ಗಳ ಮೂಲಕ ನೀರು ಹರಿ ಬಿಡಲಾಗುತ್ತದೆ. ಹೀಗೆ ಹರಿಬಿಟ್ಟ ನೀರು ನದಿ ತೀರದ ರೈತರ ಜಮೀನುಗಳನ್ನು ಕೊಚ್ಚಿಕೊಂಡು ಹೋಗುತ್ತಿವೆ. ಕಳೆದ 15 ರಿಂದ 20 ವರ್ಷಗಳಿಂದ ನಿರಂತರವಾಗಿ ಇಲ್ಲಿನ ರೈತರ ಜಮೀನು ನದಿಯಾಗಿ ಮಾರ್ಪಾಡುತ್ತಾ ಬಂದಿದ್ದು, ಉಳುಮೆ ಮಾಡುವ ರೈತರಿಗೆ ಜಮೀನು ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ನೂರಾರು ಎಕರೆ ಈಗಾಲೇ ಜಮೀನು ಪಾಲಾಗಿದ್ದು, ರೈತರು ಕಂಗಾಲಾಗಿದ್ದಾರೆ.
ನಮ್ಮ ಜಮೀನು 12 ಎಕರೆ ಆ ಪೈಕಿ 10 ಎಕರೆ ಜಮೀನು ನದಿಯ ಪಾಲಾಗಿದೆ. ಈವಾಗ ಕೇವಲ. 2 ಎಕರೆ ಜಮೀನು ಮಾತ್ರ ಉಳಿದುಕೊಂಡಿದೆ. ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಸಚಿವರು ಸೇರಿದಂತೆ ವಿರೋಧ ಪಕ್ಷದ ನಾಯಕರಿಗೆ ಮನವಿ ಮಾಡಿದರೂ ಒಂದು ಪೈಸೆ ಪರಿಹಾರ ಬಂದಿಲ್ಲ. ಹಾಗಾಗಿ ಈ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ರೈತ ಹಾಲಯ್ಯ ಟಿವಿ9 ಕನ್ನಡ ಡಿಜಿಟಲ್ ಮೂಲಕ ಆಗ್ರಹಿಸಿದ್ದಾರೆ.
ಈ ಭಾಗದ ರೈತರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ತುಂಗಭದ್ರಾ ನದಿಯ ನೀರಿನಿಂದ ಭತ್ತವನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಆದ್ರೆ ರಭಸವಾಗಿ ಹರಿಯುವ ತುಂಗಭದ್ರಾ ನದಿಯಿಂದ ಈ ಭಾಗದ ನೂರಾರು ರೈತರ ಜಮೀನು ನದಿಯ ಪಾಲಾಗುತ್ತಿದೆ. ಬ್ಯಾರೇಜ್ನಿಂದ ಹೆಚ್ಚಿನ ಪ್ರಮಾಣದ ನೀರು ಬಿಟ್ಟಾಗ ಫಲವತ್ತಾದ ಜಮೀನು ಕೊಚ್ಚಿಕೊಂಡು ಹೋಗಿ ನದಿಯಾಗುತ್ತಿದೆ. ಈ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಕಳೆದ 20 ವರ್ಷಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಈ ಕಡೇ ಸರ್ಕಾರ ತಿರುಗಿ ಕೂಡಾ ನೋಡ್ತಾಯಿಲ್ಲಾ. ಹೀಗೆ ಮುಂದುವರಿದರೆ ನಮ್ಮ ಜಮೀನು ನದಿಯ ಪಾಲಾಗುತ್ತವೆ. ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳು, ಸರ್ಕಾರ ಸರ್ವೆ ಕಾರ್ಯ ಮಾಡಿ ತಡೆಗೋಡೆ ನಿರ್ಮಾಣ ಮಾಡಬೇಕು ಅಂತಾ ರೈತ ನಾಗೇಶ್ ಒತ್ತಾಯ ಮಾಡಿದ್ದಾರೆ.
ವರ್ಷದಿಂದ ವರ್ಷಕ್ಕೆ ಅನ್ನದಾತರ ಜಮೀನು ನದಿಯ ಪಾಲಾಗುತ್ತಿದೆ. ಆದ್ರೆ ಈ ಕುರಿತು ಮನವಿ ಹೋರಾಟ ಮಾಡಿದ್ರು ನೀರಾವರಿ ಇಲಾಖೆ ಮಾತ್ರ ಮೌನ ವಹಿಸಿದೆ. ಇನಾದ್ರು ಜಿಲ್ಲಾಡಳಿತ ಹಾಗೂ ಸರ್ಕಾರ ಈ ರೈತರ ಜಮೀನು ರಕ್ಷಣೆ ಮಾಡಬೇಕು. ಇಲ್ಲವಾದರೆ ಮುಂದೆ ಉಳಿಮೆ ಮಾಡಲು ಜಮೀನೇ ಇಲ್ಲದಂತಹ ಸ್ಥಿತಿ ಅನ್ನದಾತರಿಗೆ ನಿರ್ಮಾಣವಾಗಲಿದೆ.
ವಿಶೇಷ ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ ಇದನ್ನೂ ಓದಿ:
ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ಗದಗದ ಇಬ್ಬರು ಮಾಜಿ ಶಾಸಕರು
ಗದಗ: ಎರಡು ಎಕರೆ ಜಮೀನಿನಲ್ಲಿ ಭರ್ಜರಿ ಗುಲಾಬಿ ಹೂವು ಬೆಳೆದ ಉಪನ್ಯಾಸಕ; ಲಕ್ಷ ಲಕ್ಷ ರೂಪಾಯಿ ಸಂಪಾದನೆ
(Gadag Singatalur water project makes loss Hundreds of acres of farmland for farmers)