ಗದಗದಲ್ಲಿ ನೀರಿಗಾಗಿ ಪ್ರತಿಭಟನೆ; ಕೊಡ ಹಿಡಿದು ತಮಟೆ ಶಬ್ದಕ್ಕೆ ಸ್ಟೆಪ್ ಹಾಕಿದ ಅಜ್ಜಿ
ಮಳೆ ಕೊರತೆಯಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬರಗಾಲದ ಕರಿಛಾಯೆ ಆವರಿಸಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಕೆಲವೆಡೆ ಹನಿ ನೀರಿಗೂ ಪರದಾಡುವ ಸ್ಥಿತಿ ಎದುರಾಗಿದೆ. ಟ್ಯಾಂಕರ್ ನೀರು ಖರೀದಿಸಲಾಗುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಈ ನಡುವೆ ಗದಗದಲ್ಲಿ ನಡೆದ ನೀರಿಗಾಗಿ ಪ್ರತಿಭಟನೆಯಲ್ಲಿ ಅಜ್ಜಿಯೊಬ್ಬರು ಖಾಲಿ ಕೊಡ ಹಿಡಿದುಕೊಂಡು ತಮಟೆ ಶಬ್ದಕ್ಕೆ ಸಖತ್ ಸ್ಪೆಪ್ ಹಾಕಿ ಗಮನ ಸೆಳೆದಿದ್ದಾರೆ.
ಗದಗ, ಮಾ.26: ಮಳೆ ಕೊರತೆಯಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬರಗಾಲದ ಕರಿಛಾಯೆ ಆವರಿಸಿದ್ದು, ಕುಡಿಯುವ ನೀರಿಗಾಗಿ (Water Crisis) ಹಾಹಾಕಾರ ಎದ್ದಿದೆ. ಹನಿ ನೀರಿಗೂ ಪರದಾಡುವ ಸ್ಥಿತಿ ಎದುರಾಗಿದೆ. ಟ್ಯಾಂಕರ್ ನೀರು ಖರೀದಿಸುತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ. ಈ ನಡುವೆ ಗದಗದಲ್ಲಿ (Gadag) ನಡೆದ ನೀರಿಗಾಗಿ ಪ್ರತಿಭಟನೆಯಲ್ಲಿ ಅಜ್ಜಿಯೊಬ್ಬರು ನೀರಿನ ಕೊಡ ಹಿಡಿದುಕೊಂಡು ತಮಟೆ ಶಬ್ದಕ್ಕೆ ಸಖತ್ ಸ್ಪೆಪ್ ಹಾಕಿ ಗಮನ ಸೆಳೆದಿದ್ದಾರೆ.
ಸಮರ್ಪಕವಾಗಿ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಗದಗದ ಕೆಲವೆಡೆ ಜನರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನೀರಿನ ಕೊರತೆ ಹಾಗೂ ನೀರನ್ನು ಒದಗಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಹಿಳೆಯರು ಕೂಡ ಭಾಗಿಯಾಗಿದ್ದರು.
ಇದನ್ನೂ ಓದಿ: Bangalore Water Crisis: ನೀರಿನ ಬಿಕ್ಕಟ್ಟಿನ ಕಾರಣ ವರ್ಕ್ ಫ್ರಂ ಹೋಮ್ಗೆ ಐಟಿ ಉದ್ಯೋಗಿಗಳ ಬೇಡಿಕೆ, ತಜ್ಞರ ಸಲಹೆಯೂ ಅದೇ!
ರಸ್ತೆ ತಡೆ ಪ್ರತಿಭಟನೆ ವೇಳೆ ವೃದ್ಧೆಯೊಬ್ಬರು ತಮಟೆ ಶಬ್ದಕ್ಕೆ ಕುಣಿದಾಡಿ ಗಮನ ಸೆಳೆದಿದ್ದಾರೆ. ಅಲ್ಲದೆ, ನೀರು ಕೊಡಿ ಎಂದು ಕೈ ಸನ್ನೆ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ ಪ್ರತಿಭಟನಾಕಾರರ ಸೂಚನೆ ಮೇರೆಗೆ ಈ ವೃದ್ಧೆ ಮತ್ತು ಮತ್ತೊಬ್ಬ ಮಹಿಳೆ ಸೇರಿಕೊಂಡು ಬಾಯಿಬಾಯಿ ಬಡಿದುಕೊಂಡಿದ್ದಾರೆ.
ನೀರಿಗಾಗಿ ಪ್ರತಿಭಟನೆ ವೇಳೆ ತಮಟೆ ಶಬ್ದಕ್ಕೆ ಕುಣಿದ ಅಜ್ಜಿ
Karnataka’s Gadag: Group of people staged a protest by blocking the road due to inadequate water supply. The protesters expressed outrage over the insufficient water availability, highlighting the urgent need for fluoridated water in the area. pic.twitter.com/OYiVe2qUOd
— IANS (@ians_india) March 26, 2024
ಇಡೀ ರಾಜ್ಯದಲ್ಲಿ ಬರಗಾಲ ಆವರಿಸಿದೆ. ಕೇಂದ್ರ-ಬಿಜೆಪಿ ಸರ್ಕಾರದ ನಡುವೆ ಬರ ಪರಿಹಾರದ ಜಟಾಜಟಿ ನಡೆಯುತ್ತಿದೆ. ಸರ್ಕಾರಗಳ ನಡುವಿನ ಕೆಸರೆರಚಾಟದಿಂದಾಗಿ ಜನರು ನೀರಿಗಾಗಿ ಪರದಾಡುವಂತಾಗಿದೆ. ದುಬಾರಿ ಬೆಲೆ ತೆತ್ತು ಟ್ಯಾಂಕರ್ ನೀರು ಖರೀದಿಸುತ್ತಿದ್ದಾರೆ. ರೈತರು ಬೆಳೆ ನಾಶದ ಭೀತಿ ಎದುರಿಸುತ್ತಿದ್ದಾರೆ. ಟ್ಯಾಂಕರ್ಗಳ ಮೂಲಕ ನೀರು ಖರೀದಿಸಿ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿಗೂ ನೀರಿನ ಸಮಸ್ಯೆ ತಟ್ಟಿದೆ. ಕೆಲವೆಡೆ ಬೋರ್ವೆಲ್ಗಳಲ್ಲಿ ನೀರು ಬತ್ತಿ ಹೋಗಿದೆ. ಹೀಗಾಗಿ ಜಲಮಂಡಳಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದೆ. ಕುಡಿಯುವ ನೀರನ್ನು ಅನ್ಯ ಕಾರ್ಯಗಳಿಕೆ ಮಾಡದಂತೆ ಆದೇಶಿಸಿದೆ. ನಿಯಮ ಉಲ್ಲಂಘಿಸಿದರೆ ಭಾರೀ ಮೊತ್ತದ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ